AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ZyCov-D Vaccine: ಭಾರತಕ್ಕೆ ಮತ್ತೊಂದು ಕೊವಿಡ್ ಲಸಿಕೆ ಲಭ್ಯ; ಝಿಕೊವ್-ಡಿ ತುರ್ತು ಬಳಕೆಗೆ ಅನುಮತಿ

Zydus Cadila: ಮೂರು ಡೋಸ್‌ನ ಝಿಕೊವಿ-ಡಿ ಕೊರೊನಾ ಲಸಿಕೆಯನ್ನು ಅಹಮದಾಬಾದ್ ಮೂಲದ ಝಿಡಸ್ ಕ್ಯಾಡಿಲಾ ಕಂಪನಿ ತಯಾರಿಸಿದೆ.

ZyCov-D Vaccine: ಭಾರತಕ್ಕೆ ಮತ್ತೊಂದು ಕೊವಿಡ್ ಲಸಿಕೆ ಲಭ್ಯ; ಝಿಕೊವ್-ಡಿ ತುರ್ತು ಬಳಕೆಗೆ ಅನುಮತಿ
ಲಸಿಕೆ ಸಾಂಕೇತಿಕ ಚಿತ್ರ
TV9 Web
| Updated By: ಸುಷ್ಮಾ ಚಕ್ರೆ|

Updated on:Aug 20, 2021 | 5:33 PM

Share

ನವದೆಹಲಿ: ಭಾರತದಲ್ಲಿ ಈಗಾಗಲೇ 5 ಕೊವಿಡ್ ಲಸಿಕೆಗಳನ್ನು ನೀಡಲಾಗುತ್ತಿದೆ. ಇದೀಗ 6ನೇ ಲಸಿಕೆ ಕೂಡ ಲಭ್ಯವಾಗಿದ್ದು, ಝಿಡಸ್ ಕ್ಯಾಡಿಲಾ ಕಂಪನಿ ಅಭಿವೃದ್ಧಿಪಡಿಸಿರುವ ಝಿಕೊವ್-ಡಿ ಲಸಿಕೆಯನ್ನು ಭಾರತದಲ್ಲಿ ತುರ್ತು ಬಳಕೆ ಮಾಡಲು ಒಪ್ಪಿಗೆ ಸಿಕ್ಕಿದೆ. ಮೂರು ಡೋಸ್‌ನ ಝಿಕೊವ್-ಡಿ ಕೊರೊನಾ ಲಸಿಕೆಯನ್ನು ಅಹಮದಾಬಾದ್ ಮೂಲದ ಝಿಡಸ್ ಕ್ಯಾಡಿಲಾ ಕಂಪನಿ ತಯಾರಿಸಿದೆ. ಕಳೆದ ತಿಂಗಳಷ್ಟೇ ಜಾನ್ಸನ್ ಆ್ಯಂಡ್ ಜಾನ್ಸನ್ ಸಂಸ್ಥೆಯ ಸಿಂಗಲ್ ಡೋಸ್ ಕೊವಿಡ್ ಲಸಿಕೆಗೆ ಭಾರತದಲ್ಲಿ ಅನುಮತಿ ಸಿಕ್ಕಿತ್ತು. ಅದರ ಬೆನ್ನಲ್ಲೇ ಭಾರತದಲ್ಲೇ ಅಭಿವೃದ್ಧಿಪಡಿಸಲಾದ ಝಿಕೋವ್-ಡಿ ಲಸಿಕೆ ಬಳಕೆಗೆ ಅನುಮತಿ ಸಿಕ್ಕಿದೆ.

3 ಡೋಸ್​ಗಳ ಈ ಝಿಕೊವ್-ಡಿ ಲಸಿಕೆಯ ಕುರಿತು ಹೆಚ್ಚುವರಿ ದಾಖಲೆಗಳನ್ನು ಸಲ್ಲಿಕೆ ಮಾಡುವಂತೆ ಸಮಿತಿಯು ಸೂಚಿಸಿದೆ. ಜುಲೈ 1ರಂದು ಅಹಮದಾಬಾದ್​ನ ಔಷಧ ತಯಾರಿಕಾ ಸಂಸ್ಥೆಯಾದ ಕ್ಯಾಡಿಲಾ ಹೆಲ್ತ್​​ಕೇರ್ ಲಿಮಿಟೆಡ್ ಝಿಕೊವ್-ಡಿ ಲಸಿಕೆಯ ಬಳಕೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿತ್ತು. ಈ ಲಸಿಕೆ 12ರಿಂದ 18 ವರ್ಷದೊಳಗಿನ ಮಕ್ಕಳಿಗೂ ಅತ್ಯಂತ ಸುರಕ್ಷಿತವಾಗಿದೆ ಎಂದು ಸಂಸ್ಥೆ ಹೇಳಿದೆ.

ಈ ಮೊದಲು ಅಮೆರಿಕ ಮೂಲದ ಖ್ಯಾತ ಔಷಧ ತಯಾರಿಕಾ ಸಂಸ್ಥೆ ಜಾನ್ಸನ್ ಆ್ಯಂಡ್ ಜಾನ್ಸನ್ ಸಂಸ್ಥೆ ತನ್ನ ಸಿಂಗಲ್ ಡೋಸ್ ಕೊವಿಡ್ ಲಸಿಕೆಯ ತುರ್ತು ಬಳಕೆಗೆ ಭಾರತ ಸರ್ಕಾರಕ್ಕೆ ಅರ್ಜಿ ಸಲ್ಲಿಕೆ ಮಾಡಿತ್ತು. ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಯ ಸಿಂಗಲ್ ಡೋಸ್​ ಲಸಿಕೆಯ ತುರ್ತು ಬಳಕೆಗೆ ಅನುಮತಿ ಸಿಕ್ಕಿತ್ತು. ಭಾರತದಲ್ಲಿ ಈಗಾಗಲೇ ಕೊವ್ಯಾಕ್ಸಿನ್, ಕೋವಿಶೀಲ್ಡ್, ಸ್ಪುಟ್ನಿಕ್-ವಿ, ಮಾಡೆರ್ನಾ, ಜಾನ್ಸನ್ ಆ್ಯಂಡ್ ಜಾನ್ಸನ್ ಲಸಿಕೆಗಳ ಬಳಕೆಗೆ ಅನುಮತಿ ಸಿಕ್ಕಿದೆ. ಇದರ ಜೊತೆಗೆ ಝಿಕೊವ್-ಡಿ ಮೂರು ಡೋಸ್ ಲಸಿಕೆಯ ತುರ್ತು ಬಳಕೆಗೂ ಅನುಮತಿ ಸಿಗುವ ಮೂಲಕ ಭಾರತದಲ್ಲಿರುವ ಕೊವಿಡ್ ಲಸಿಕೆಗಳ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.

ಈವರೆಗೆ ಭಾರತದಲ್ಲಿ 42 ಕೋಟಿಗೂ ಹೆಚ್ಚು ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಈ ವರ್ಷದ ಅಂತ್ಯದ ವೇಳೆಗೆ ದೇಶದ ಎಲ್ಲ ವಯಸ್ಕರಿಗೆ ಕೊರೋನಾ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಪ್ರತಿದಿನವೂ ಸುಮಾರು 1 ಕೋಟಿ ಲಸಿಕೆ ನೀಡಬೇಕಾಗಿದೆ. ಮಕ್ಕಳಿಗಾಗಿ ತಯಾರಿಸಿದ ಫೈಝರ್ ಲಸಿಕೆಗೆ ಈಗಾಗಲೇ ಅಮೆರಿಕದಲ್ಲಿ ಅನುಮೋದನೆ ಸಿಕ್ಕಿದೆ. ಮೂರನೇ ಅಲೆ ಆರಂಭವಾಗುವುದರೊಳಗೆ ಮಕ್ಕಳಿಗೂ ಕೋವಿಡ್ ಲಸಿಕೆ ಹಾಕಿಸುವ ಯೋಚನೆ ಕೇಂದ್ರ ಸರ್ಕಾರದ್ದಾಗಿದೆ. ಈಗಾಗಲೇ ಹಲವು ಕಂಪನಿಗಳು ಮಕ್ಕಳಿಗೆ ಕೋವಿಡ್‌ ಲಸಿಕೆಯನ್ನು ಅಭಿವೃದ್ಧಿಪಡಿಸುವಲ್ಲಿ ನಿರತವಾಗಿವೆ. ಭಾರತ್ ಬಯೋಟೆಕ್​ನ ಕೋವ್ಯಾಕ್ಸಿನ್ ಮತ್ತು ಝಿಡಸ್ ಕ್ಯಾಡಿಲಾ ಮಕ್ಕಳ ಕೋವಿಡ್ ಲಸಿಕೆಯ ಬಗ್ಗೆ ಪ್ರಯೋಗಗಳನ್ನು ನಡೆಸುತ್ತಿವೆ.

ಇದನ್ನೂ ಓದಿ: Covid Vaccination: ಮುಂದಿನ ತಿಂಗಳು ಮಕ್ಕಳಿಗೂ ಕೋವಿಡ್ ಲಸಿಕೆ ಲಭ್ಯ; ಕೇಂದ್ರ ಸರ್ಕಾರ ಮಾಹಿತಿ

Covid Vaccine: ಡಿಸೆಂಬರ್ ವೇಳೆಗೆ ಭಾರತದಲ್ಲಿ 12 ಕೋಟಿ ಕೊವಿಶೀಲ್ಡ್ ಹಾಗೂ 5.8 ಕೋಟಿ ಡೋಸ್ ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆ

(Covid Vaccine: Zydus Cadilas 3 Dose Coronavirus Vaccine ZyCov-D Gets Approval in India)

Published On - 5:25 pm, Fri, 20 August 21