Karnataka Dams Water Level: ರಾಜ್ಯದ 9 ಜಿಲ್ಲೆಗಳಲ್ಲಿ ಭಾರೀ ಮಳೆ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ
Karnataka Reservoir Water Level | ಇಂದು ಮತ್ತು ನಾಳೆ ಮಲೆನಾಡು, ಕರಾವಳಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಕೊಡಗು, ಕೋಲಾರ, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಹೀಗಿದೆ...
Karnataka Rain: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಬೆಂಗಳೂರು, ಚಿಕ್ಕಬಳ್ಳಾಪುರ, ಹಾಸನ, ಕೋಲಾರ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸೆ. 5ರವರೆಗೂ ಭಾರೀ ಮಳೆಯಾಗಲಿದ್ದು, ಇನ್ನೆರಡು ದಿನ ಹಳದಿ ಅಲರ್ಟ್ ಘೋಷಿಸಲಾಗಿದೆ. ಕಳೆದ ತಿಂಗಳು ಮಳೆ ಕಡಿಮೆಯಾಗಿದ್ದರಿಂದ ರಾಜ್ಯದ ಬಹುತೇಕ ಡ್ಯಾಂಗಳ ನೀರಿನ ಮಟ್ಟ (Reservoir Water Level) ಇಳಿಮುಖವಾಗಿದೆ. ಆದರೂ ಘಟಪ್ರಭಾ, ಆಲಮಟ್ಟಿ ಡ್ಯಾಂಗಳು ಭರ್ತಿಯಾಗಿದ್ದು, ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ (Karnataka Dam Water Level) ಎಷ್ಟಿದೆ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಕೆಆರ್ಎಸ್ ಜಲಾಶಯ (KRS Dam) ಗರಿಷ್ಠ ನೀರಿನ ಮಟ್ಟ- 38.04 ಮೀಟರ್ ಇಂದಿನ ನೀರಿನ ಮಟ್ಟ- 39.90 ಟಿಎಂಸಿ ಗರಿಷ್ಠ ಸಾಮರ್ಥ್ಯ- 49.45 ಟಿಎಂಸಿ ಇಂದಿನ ಒಳಹರಿವು- 5169 ಕ್ಯೂಸೆಕ್ಸ್ ಇಂದಿನ ಹೊರಹರಿವು- 9715 ಕ್ಯೂಸೆಕ್ಸ್
ವರಾಹಿ ಜಲಾಶಯ (Varahi Dam) ಗರಿಷ್ಠ ಮಟ್ಟ- 594.36 ಮೀಟರ್ ಒಟ್ಟು ಸಾಮರ್ಥ್ಯ – 31.10 ಟಿಎಂಸಿ ಇಂದಿನ ನೀರಿನ ಮಟ್ಟ- 16.91 ಟಿಎಂಸಿ ಇಂದಿನ ಒಳಹರಿವು- 1683 ಕ್ಯೂಸೆಕ್ಸ್ ಇಂದಿನ ಹೊರಹರಿವು- 425 ಕ್ಯೂಸೆಕ್ಸ್
ಹಾರಂಗಿ ಜಲಾಶಯ (Harangi Dam) ಗರಿಷ್ಠ ಮಟ್ಟ-871.42 ಮೀಟರ್ ಒಟ್ಟು ಸಾಮರ್ಥ್ಯ – 8.50 ಟಿಎಂಸಿ ಇಂದಿನ ನೀರಿನ ಮಟ್ಟ- 8.16 ಟಿಎಂಸಿ ಇಂದಿನ ಒಳಹರಿವು- 3320 ಕ್ಯೂಸೆಕ್ಸ್ ಇಂದಿನ ಹೊರಹರಿವು- 1600 ಕ್ಯೂಸೆಕ್ಸ್
ಹೇಮಾವತಿ ಜಲಾಶಯ (Hemavathi Dam) ಗರಿಷ್ಠ ಮಟ್ಟ- 890.58 ಮೀಟರ್ ಒಟ್ಟು ಸಾಮರ್ಥ್ಯ – 37.10 ಟಿಎಂಸಿ ಇಂದಿನ ನೀರಿನ ಮಟ್ಟ- 32.40 ಟಿಎಂಸಿ ಇಂದಿನ ಒಳಹರಿವು- 2642 ಕ್ಯೂಸೆಕ್ಸ್ ಇಂದಿನ ಹೊರಹರಿವು- 5160 ಕ್ಯೂಸೆಕ್ಸ್
ಕಬಿನಿ ಜಲಾಶಯ (Kabini Dam) ಗರಿಷ್ಠ ನೀರಿನ ಮಟ್ಟ- 696.13 ಮೀಟರ್ ಒಟ್ಟು ಸಾಮರ್ಥ್ಯ – 19.52 ಟಿಎಂಸಿ ಇಂದಿನ ನೀರಿನ ಮಟ್ಟ- 17.61 ಟಿಎಂಸಿ ಇಂದಿನ ಒಳಹರಿವು- 6240 ಕ್ಯೂಸೆಕ್ಸ್ ಇಂದಿನ ಹೊರಹರಿವು- 6750 ಕ್ಯೂಸೆಕ್ಸ್
ಲಿಂಗನಮಕ್ಕಿ ಜಲಾಶಯ (Linganamakki Dam) ಗರಿಷ್ಠ ಮಟ್ಟ- 554.4 ಮೀಟರ್ ಒಟ್ಟು ಸಾಮರ್ಥ್ಯ – 151.75 ಟಿಎಂಸಿ ಇಂದಿನ ನೀರಿನ ಮಟ್ಟ- 131.43 ಟಿಎಂಸಿ ಇಂದಿನ ಒಳಹರಿವು- 6724 ಕ್ಯೂಸೆಕ್ಸ್ ಇಂದಿನ ಹೊರಹರಿವು- 5417 ಕ್ಯೂಸೆಕ್ಸ್
ಸೂಪಾ ಜಲಾಶಯ (Supa Dam) ಗರಿಷ್ಠ ನೀರಿನ ಮಟ್ಟ- 564.00 ಮೀಟರ್ ಒಟ್ಟು ಸಾಮರ್ಥ್ಯ: 145.33 ಟಿಎಂಸಿ ಇಂದಿನ ನೀರಿನ ಮಟ್ಟ- 108.35 ಟಿಎಂಸಿ ಇಂದಿನ ಒಳಹರಿವು- 2558 ಕ್ಯೂಸೆಕ್ಸ್ ಇಂದಿನ ಹೊರಹರಿವು- 1700 ಕ್ಯೂಸೆಕ್ಸ್
ತುಂಗಾಭದ್ರಾ ಜಲಾಶಯ (Tungabhadra Dam) ಗರಿಷ್ಠ ನೀರಿನ ಮಟ್ಟ-497.71 ಮೀಟರ್ ಒಟ್ಟು ಸಾಮರ್ಥ್ಯ- 100.86 ಟಿಎಂಸಿ ಇಂದಿನ ನೀರಿನ ಮಟ್ಟ- 99.20 ಟಿಎಂಸಿ ಇಂದಿನ ಒಳಹರಿವು- 18,757 ಕ್ಯೂಸೆಕ್ಸ್ ಇಂದಿನ ಹೊರಹರಿವು- 10,743 ಕ್ಯೂಸೆಕ್ಸ್
ಭದ್ರಾ ಜಲಾಶಯ (Bhadra Dam) ಗರಿಷ್ಠ ನೀರಿನ ಮಟ್ಟ- 657.73 ಮೀಟರ್ ಒಟ್ಟು ಸಾಮರ್ಥ್ಯ – 71.54 ಟಿಎಂಸಿ ಇಂದಿನ ನೀರಿನ ಮಟ್ಟ- 70.70 ಟಿಎಂಸಿ ಇಂದಿನ ಒಳಹರಿವು- 5677 ಕ್ಯೂಸೆಕ್ಸ್ ಇಂದಿನ ಹೊರಹರಿವು- 3246 ಕ್ಯೂಸೆಕ್ಸ್
ಮಲಪ್ರಭಾ ಜಲಾಶಯ (Malaprabha Dam) ಗರಿಷ್ಠ ನೀರಿನ ಮಟ್ಟ- 633.80 ಮೀಟರ್ ಒಟ್ಟು ಸಾಮರ್ಥ್ಯ – 37.73 ಟಿಎಂಸಿ ಇಂದಿನ ನೀರಿನ ಮಟ್ಟ- 36.41 ಟಿಎಂಸಿ ಇಂದಿನ ಒಳಹರಿವು- 3278 ಕ್ಯೂಸೆಕ್ಸ್ ಇಂದಿನ ಹೊರಹರಿವು- 894 ಕ್ಯೂಸೆಕ್ಸ್
ಘಟಪ್ರಭಾ ಜಲಾಶಯ (Ghataprabha Dam) ಗರಿಷ್ಠ ಮಟ್ಟ- 662.94 ಮೀಟರ್ ಒಟ್ಟು ಸಾಮರ್ಥ್ಯ – 51.00 ಟಿಎಂಸಿ ಇಂದಿನ ನೀರಿನ ಮಟ್ಟ- 51.00 ಟಿಎಂಸಿ ಇಂದಿನ ಒಳಹರಿವು- 1184 ಕ್ಯೂಸೆಕ್ಸ್ ಇಂದಿನ ಹೊರಹರಿವು- 1184 ಕ್ಯೂಸೆಕ್ಸ್
ಆಲಮಟ್ಟಿ ಜಲಾಶಯ (Alamatti Dam) ಗರಿಷ್ಠ ಮಟ್ಟ- 519.60 ಮೀಟರ್ ಒಟ್ಟು ಸಾಮರ್ಥ್ಯ – 123.08 ಟಿಎಂಸಿ ಇಂದಿನ ನೀರಿನ ಮಟ್ಟ- 123.08 ಟಿಎಂಸಿ ಇಂದಿನ ಒಳಹರಿವು- 6140 ಕ್ಯೂಸೆಕ್ಸ್ ಇಂದಿನ ಹೊರಹರಿವು- 6140 ಕ್ಯೂಸೆಕ್ಸ್
ಇಂದು ಮತ್ತು ನಾಳೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಹಾಸನ, ಕೊಡಗು, ಕೋಲಾರ, ರಾಮನಗರ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಸೆ. 3ರಿಂದ 5ರವರೆಗೂ ಮಳೆಯ ಅಬ್ಬರ ಹೆಚ್ಚಾಗಲಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇನ್ನೆರಡು ದಿನ ಗುಡುಗು ಸಹಿತ ಮಳೆಯಾಗಲಿದೆ.
ಇದನ್ನೂ ಓದಿ: Karnataka Weather Today: ಮಲೆನಾಡು, ಕರಾವಳಿಯಲ್ಲಿ ಸೆ. 2ರವರೆಗೂ ಭಾರೀ ಮಳೆ; ಕೆಲವೆಡೆ ಆರೆಂಜ್ ಅಲರ್ಟ್ ಘೋಷಣೆ
(Karnataka Dams Water Level Today on September 1 Karnataka Rain Updates Karnataka Reservoir Water Level)