AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SSLC ಫಲಿತಾಂಶ ಸುಧಾರಣೆ ಮಾಡುವ ಶಿಕ್ಷಕರಿಗೆ ಬಂಪರ್ ಗಿಫ್ಟ್ ಘೋಷಿಸಿದ ಸರ್ಕಾರ

ಎಸ್​ಎಸ್​​ಎಲ್​​ಸಿ ಫಲಿತಾಂಶ ಕುಸಿತವಾಗುತ್ತಿದೆ. ಇದರಿಂದ ಸರ್ಕಾರ ಮೇಲೇತ್ತಲು ಹೊಸ ತಂತ್ರರೂಪಿಸಿದೆ. 2025-26 ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಈ ವರ್ಷ 75% ಫಲಿತಾಂಶ ಸಾಧಿಸುವ ಟಾರ್ಗೇಟ್ ಸಿಎಂ ಸಿದ್ಧರಾಮಯ್ಯ ನೀಡಿದ್ದಾರೆ. ಈ ನಡುವೆ ಸರ್ಕಾರದ ಇತರೆ ಕೆಲಸಗಳ ನಡುವೆ ಫಲಿತಾಶಂ ಸುಧಾರಣೆ ಶಿಕ್ಷಕರಿಗೆ ಜಾಲೆಂಜ್ ಎದುರಾಗಿದ್ದು, ಈಗ ಸರ್ಕಾರ ಫಲಿತಾಂಶ ಸುಧಾರಣೆ ಮಾಡುವ ಶಿಕ್ಷಕರಿಗೆ ಗಿಫ್ಟ್ ನೀಡಲು ಮುಂದಾಗಿದೆ.

SSLC ಫಲಿತಾಂಶ ಸುಧಾರಣೆ ಮಾಡುವ ಶಿಕ್ಷಕರಿಗೆ ಬಂಪರ್ ಗಿಫ್ಟ್  ಘೋಷಿಸಿದ ಸರ್ಕಾರ
ಪ್ರಾತಿನಿಧಿಕ ಚಿತ್ರ
Vinay Kashappanavar
| Edited By: |

Updated on: Dec 27, 2025 | 9:16 PM

Share

ಬೆಂಗಳೂರು, ಡಿಸೆಂಬರ್ 27): ಈಗಾಗಲೇ ಸರ್ಕಾರ  ಶಿಕ್ಷಕರನ್ನ (Teachers)  ಸಮೀಕ್ಷೆಗೆ ಬಳಕೆ ಮಾಡಿ ಶಾಲೆಗಳಿಗೆ ರಜೆ ನೀಡಿ ಮಕ್ಕಳ ಕಲಿಕಾ ದಿನದ ಅವಧಿ ಕಡಿಮೆಯಾಗುವಂತೆ ಮಾಡಿದೆ. ಈ ನಡುವೆ. ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರನ್ನ BLO ಕೆಲಸಕ್ಕೆ ಬಳಕೆ ಮಾಡಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ, ಈ ವರ್ಷ ಎಸ್​​ಎಸ್​ಎಲ್​​ಸಿ​ ಪರೀಕ್ಷೆಯಲ್ಲಿ (SSLC Exams) ​  75% ಫಲಿತಾಶಂಶ ಸಾಧಿಸುವ ಗುರಿ ನೀಡಿದ್ದಾರೆ. ಈ ಹಿನ್ನಲೆ SSLC ಫಲಿತಾಂಶ ಸುಧಾರಣೆಗೆ ಶಿಕ್ಷಣ ಇಲಾಖೆ ಹೊಸ ಪ್ಲಾನ್ ಮಾಡಿದ್ದು, ಫಲಿತಾಂಶ ಸುಧಾರಣೆಗೆ ಪ್ರೌಢಶಾಲಾ ಶಿಕ್ಷಕರಿಗೆ ಬಂಫರ್ ಆಫರ್ ನೀಡಿದೆ. 10ನೇ ತರಗತಿ ವಾರ್ಷಿಕ ಪರೀಕ್ಷೆ ಫಲಿತಾಂಶ ಸುಧಾರಿಸುವ ಶಿಕ್ಷಕರಿಗೆ ಹೆಚ್ಚುವರಿ ಒಂದು ಸಾವಿರ ಪ್ರೋತ್ಸಾಹಧನ ನೀಡಲು ಮುಂದಾಗಿದೆ. ಈ ಮೂಲಕ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಲು ಸರ್ಕಾರಿ ಶಾಲೆಗಳು ಮುಂದಾಗಿದ್ದು, SSLC ಫಲಿತಾಂಶ ಸುಧಾರಣೆಗೆ ಸರ್ಕಾರಿ ಶಾಲೆಗಳಿಂದ ಸರ್ಕಸ್ ನಡೆದಿದೆ. ಮುಂಜಾನೆ ಹಾಗೂ ಸಂಜೆ ಸ್ಪೆಷಲ್ ಕ್ಲಾಸ್ ಮಾಡಲು ಶಿಕ್ಷಕರು ಮುಂದಾಗಿದ್ದಾರೆ.

ಪ್ರತಿವರ್ಷ ಎಸ್ಎಸ್ಎಲ್ ಸಿ ಫಲಿತಾಂಶದಲ್ಲಿ ಖಾಸಗಿ ವಲಯದ ಶಾಲೆಗಳಿಂದ ಉತ್ತಮ ಫಲಿತಾಂಶ ಹಿನ್ನಲೆ ಹಾಗೂ ಕಳೆದ ವರ್ಷ SSLC ಫಲಿತಾಂಶ ಕುಸಿತದಿಂದ ಸಿಎಂ ಗರಂ ಆಗಿದ್ದರು. ಹೀಗಾಗಿ ಈ ಬಾರಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸೇರಿದಂತೆ ಶಿಕ್ಷಣ ಇಲಾಖೆಗೆ ಟಾರ್ಗೆಟ್ ನೀಡಿದ್ದು, ಪ್ರಸಕ್ತ ವರ್ಷ 75% ಫಲಿತಾಂಶ ಸಾಧಿಸುವ ಗುರಿ ನೀಡಿರುವ ಹಿನ್ನಲೆ ಎಸ್ಎಸ್ಎಲ್ ಸಿ ಮಕ್ಕಳಿಗೆ ಸ್ಪೆಷಲ್ ಕ್ಲಾಸ್ ಮಾಡಲು ಮುಂದಾಗಿದ್ದಾರೆ. ಹೀಗಾಗಿ ಸರ್ಕಾರಿ ಪ್ರೌಢಶಾಲಾ ಶಿಕ್ಷಕರಿಗೆ ಹೆಚ್ಚುವರಿಯಾಗಿ ಒಂದು ಸಾವಿರ ರೂಪಾಯಿಯನ್ನು ನೀಡಲು ಸರ್ಕಾರ ಪ್ಲ್ಯಾನ್ ಮಾಡಿದೆ.

ಇದನ್ನೂ ಓದಿ: SSLC, 2nd PUC Exam 2026 TimeTable: ಎಸ್​ಎಸ್​ಎಲ್​​ಸಿ, ಪಿಯು ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ

ಕಳೆದೊಂದು ತಿಂಗಳಲ್ಲಿ ಕಂಪ್ಲೀಟ್ ಪಠ್ಯ ಕವರ್ ಮಾಡಿ ಜನವರಿ-ಫೆಬ್ರವರಿಯಲ್ಲಿ ಪರೀಕ್ಷೆಗಳು ಹಾಗೂ ಮಾರ್ಚ್ ತಿಂಗಳಲ್ಲಿ ಅಂತಿಮ ಪರೀಕ್ಷೆಗೆ ತಯಾರಿ ಶುರು ಮಾಡಿದ್ದಾರೆ. ಆದರೆ ಈ ಬಾರಿ ಹಲವು ರಜೆಗಳ ಕಾರಣ ಇನ್ನೆರಡು ತಿಂಗಳಲ್ಲಿ ಪಠ್ಯಕ್ರಮ ಮುಗಿಸುವುದು ಸವಾಲಾಗಿದೆ. ಇದರಿಂದ ಹೆಚ್ಚುವರಿ ಕ್ಲಾಸ್ ಶುರು ಮಾಡಿದ್ದು ಮಕ್ಕಳನ್ನ ತಯಾರು ಮಾಡುವ ಹೊಣೆ ಶಿಕ್ಷಕರಿಗೆ ನೀಡಿದ್ದಾರೆ. ರಜಾ ದಿನಗಳಲ್ಲಿ ತರಗತಿಗಳನ್ನ ನಡೆಸಿ ಪಠ್ಯ ಕಂಪ್ಲೀಟ್ ಮಾಡಿ ಫಲಿತಾಂಶ ಸುಧಾರಿಸಲು ಶಿಕ್ಷಕರಿಗೆ ಹೆಚ್ಚುವರಿ ಪ್ರೊತ್ಸಾಹಧನ ನೀಡಲು ಇಲಾಖೆ ಮುಂದಾಗಿದೆ

ಒಟ್ಟಿನಲ್ಲಿ ಮಕ್ಕಳು ಮತ್ತು ಶಿಕ್ಷಕರನ್ನು ಪ್ರೋತ್ಸಾಹಿಸಲು ಸರ್ಕಾರ ಮುಂದಾಗಿದ್ದು, ನಿಗದಿತ ಶಾಲಾ ಅವಧಿ ಮುಗಿದ ಬಳಿಕ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ಆಯಾ ಶಾಲೆಗಳ ಶಿಕ್ಷಕರು ವಿಶೇಷ ತರಗತಿಗಳನ್ನು ಕೈಗೊಳ್ಳಬೇಕಿದೆ. ಈ ವೇಳೆ ವಿದ್ಯಾರ್ಥಿಗಳ ಬರವಣಿಗೆ ಕೌಶಲ್ಯ, ಪಾಠಗಳ ಪುನರಾವರ್ತನೆ ಮೂಲಕ ಅವರನ್ನು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುವಂತೆ ಮಾಡಬೇಕಿದೆ. ಇದಕ್ಕೆ ಶಿಕ್ಷಕರಿಗೆ ಪ್ರೋತ್ಸಾಹಧನದ ಪ್ಲಾನ್ ಮಾಡಿದ್ದು, ಇದು ಎಷ್ಟರ ಮಟ್ಟಿಗೆ ಪ್ರಗತಿ ಕಾಣುತ್ತೆ ಎಂದು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ