AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದ್ಯುತ್ ಟ್ರಾನ್ಸ್​ಫಾರ್ಮರ್ ಹಾಳಾದರೆ 24 ಗಂಟೆಯಲ್ಲಿ ಬದಲಿಸಬೇಕು: ಇಂಧನ ಸಚಿವ ಸುನೀಲ್ ಕುಮಾರ್

ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಹಾಕುವ ವ್ಯವಸ್ಥೆ ಕಡಿಮೆ ಮಾಡಲು ತೀರ್ಮಾನಿಸಲಾಗಿದೆ. ಕಲಾವಿದರ ಡಾಟಾ 100 ದಿನಗಳಲ್ಲಿ ಸಂಗ್ರಹಿಸಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು.

ವಿದ್ಯುತ್ ಟ್ರಾನ್ಸ್​ಫಾರ್ಮರ್ ಹಾಳಾದರೆ 24 ಗಂಟೆಯಲ್ಲಿ ಬದಲಿಸಬೇಕು: ಇಂಧನ ಸಚಿವ ಸುನೀಲ್ ಕುಮಾರ್
ಇಂಧನ ಸಚಿವ ಸುನಿಲ್ ಕುಮಾರ್
TV9 Web
| Edited By: |

Updated on:Sep 07, 2021 | 3:02 PM

Share

ಬೆಂಗಳೂರು: ರಾಜ್ಯದ ಎಲ್ಲ ವಿಭಾಗಗಳಲ್ಲಿ ‘ಟ್ರಾನ್ಸ್‌ಫಾರ್ಮರ್ ಬ್ಯಾಂಕ್’ ನಿರ್ಮಿಸುವ ಚಿಂತನೆಯಿದೆ. ಟಿಸಿ ಹಾಳಾದರೆ 24 ಗಂಟೆಯಲ್ಲಿ ಬದಲಾಯಿಸಬೇಕು. ಗ್ರಾಮ ಪಂಚಾಯತ್ ಮಟ್ಟದಲ್ಲಿ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡುವಾಗ ಬೆಳಕು ಯೋಜನೆಯಡಿ ಸ್ಥಳೀಯ ಸಂಸ್ಥೆಗಳ NOC ಅಗತ್ಯವಿಲ್ಲ ಎಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಕಚೇರಿಯಲ್ಲಿ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ತಿಳಿಸಿದರು. ಲೈನ್‌ಮ್ಯಾನ್, ಜೆಇ ನೇಮಕದ ಬಗ್ಗೆ ಬೇಡಿಕೆ ಇದೆ. ಸರ್ಕಾರಿ ಕಚೇರಿಗಳಲ್ಲಿ ವಿದ್ಯುತ್ ಬಾಕಿ ಬಿಲ್ ಜಾಸ್ತಿಯಿದೆ. ಇದರಿಂದ ಸರ್ಕಾರಕ್ಕೆ ಹೊರೆಯಾಗಲಿದೆ. ಎಲೆಕ್ಟ್ರಿಕ್ ರೀಚಾರ್ಜ್ ಸೆಂಟರ್ ತೆರೆಯಲು ತೀರ್ಮಾನಿಸಲಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ತೆರೆಯುವುದಕ್ಕೆ ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು. ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಹಾಕುವ ವ್ಯವಸ್ಥೆ ಕಡಿಮೆ ಮಾಡಲು ತೀರ್ಮಾನಿಸಲಾಗಿದೆ. ಕಲಾವಿದರ ಮಾಹಿತಿಯನ್ನು  100 ದಿನಗಳಲ್ಲಿ ಸಂಗ್ರಹಿಸಲು ತೀರ್ಮಾನಿಸಲಾಗುವುದು.  ಇಲಾಖೆ ವತಿಯಿಂದ ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಕೊಡುಗೆ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ನಡೆಸಲಾಗುವುದು. ಎಲ್ಲಾ ಸರ್ಕಾರಿ ಕಚೇರಿಗಳಿಗೆ ಪ್ರೀಪೇಯ್ಡ್ ಮೀಟರ್ ಅಳವಡಿಸಲಾಗುವುದು ಎಂದು ಅವರು ವಿವರಿಸಿದರು.

ಇದನ್ನೂ ಓದಿ:  

ವ್ಯಕ್ತಿಗತ ಟೀಕೆ ವಿಚಾರದಲ್ಲಿ ಯಾರೂ ಎಲ್ಲೆ ಮೀರಬಾರದು, ಈ ವಿಚಾರದಲ್ಲಿ ನಾನು ಎಚ್ಚರಿಕೆಯಿಂದ ಇದ್ದೇನೆ: ಸಚಿವ ಸುನೀಲ್ ಕುಮಾರ್

ನಾಡಗೀತೆ ಅವಧಿ ಸೀಮಿತಗೊಳಿಸುವ ವಿಚಾರಕ್ಕೆ ತಾರ್ಕಿಕ ಅಂತ್ಯ ನೀಡುತ್ತೇವೆ: ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್

(Karnataka Electricity Minister Sunil Kumar says If TC spoils should be replaced in 24 hours)

Published On - 2:44 pm, Tue, 7 September 21