Veerendra Patil’s Wife Passes Away: ಮಾಜಿ ಸಿಎಂ ವೀರೇಂದ್ರ ಪಾಟೀಲ್ ಪತ್ನಿ ಶಾರದಾ ಪಾಟೀಲ್ ನಿಧನ
Veerendra Patil's wife Passes Away: ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿ. ವೀರೇಂದ್ರ ಪಾಟೀಲರ ಪತ್ನಿ ಶಾರದಾ ಪಾಟೀಲ್(93) ಅವರು ಇಂದು(ಸೆ.26) ವಿಧಿವಶರಾಗಿದ್ದಾರೆ. ಬೆಂಗಳೂರಿನ ಸದಾಶಿವನಗರದ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಬೆಂಗಳೂರು/ಕಲಬುರಗಿ (ಸೆಪ್ಟೆಂಬರ್ 26): ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿವಂಗತ ವೀರೇಂದ್ರ ಪಾಟೀಲರ (Veerendra Patil) ಪತ್ನಿ ಶಾರದಾ ಪಾಟೀಲ್ (sharda patil) ಅವರು ಇಂದು(ಸೆ.26) ವಿಧಿವಶರಾಗಿದ್ದಾರೆ. ಬೆಂಗಳೂರಿನ (Bengaluru) ಸದಾಶಿವನಗರದ ತಮ್ಮ ಸ್ವಗೃಹದಲ್ಲಿ ಶಾರದಾ ಪಾಟೀಲ್(93) ನಿಧನರಾಗಿದ್ದಾರೆ. . ಮಾಜಿ ಶಾಸಕ ಕೈಲಾಸನಾಥ್ ಪಾಟೀಲ ಮತ್ತು ಇಬ್ಬರು ಪುತ್ರಿಯರನ್ನು ಅವರು ಅಗಲಿದ್ದಾರೆ. ಇನ್ನು ಶಾರದಾ ಪಾಟೀಲ್ ಅವರ ಪಾರ್ಥಿವ ಶರೀರವನ್ನು ಕಲಬುರಗಿ ಜಿಲ್ಲೆಯ ಚಿಂಚೋಳಿಗೆ ತಗೆದುಕೊಂಡು ಹೋಗಲಾಗುತ್ತದೆ. ಬಳಿಕ ನಾಳೆ(ಸೆಪ್ಟೆಂಬರ್ 27) ವೀರೇಂದ್ರ ಪಾಟೀಲ್ ಅವರ ಸಮಾಧಿ ಪಕ್ಕದಲ್ಲಿಯೇ ಶಾರದಾ ಪಾಟೀಲ್ ಅಂತ್ಯಕ್ರಿಯೆ ನಡೆಯಲಿದೆ ಎಂದು ಪುತ್ರ ಕೈಲಾಸನಾಥ ಪಾಟೀಲ್ ಮಾಹಿತಿ ನೀಡಿದ್ದಾರೆ.
Published On - 11:03 am, Tue, 26 September 23