AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರದಿಂದ 7,093 ಕೋಟಿ ರೂ ಬೆಗ್ಗರ್ ಸೆಸ್ ಸಂಗ್ರಹ: ಆದ್ರೂ ಭಿಕ್ಷಾಟನೆ ಮುಂದುವರಿಕೆಗೆ ಹೈಕೋರ್ಟ್ ಕಳವಳ!

ಕಳೆದ 4 ವರ್ಷಗಳಲ್ಲಿ 7093 ಕೋಟಿ ರೂ. ಬೆಗ್ಗರ್ ಸೆಸ್ ಸಂಗ್ರಹಿಸಿದ್ದರೂ ರಸ್ತೆಗಳಲ್ಲಿ ಮಕ್ಕಳ ಭಿಕ್ಷಾಟನೆ ಮುಂದುವರಿದಿರುವುದು ಕರ್ನಾಟಕ ಹೈಕೋರ್ಟ್‌ಗೆ ಕಳವಳ ತಂದಿದೆ. ಲೆಟ್ಜ್ ಕಿಟ್ ಫೌಂಡೇಶನ್ ಪಿಐಎಲ್ ವಿಚಾರಣೆ ವೇಳೆ, ಖರ್ಚಾದ 3453 ಕೋಟಿ ರೂ ಮತ್ತು ಉಳಿದ 3639 ಕೋಟಿ ರೂ ಹಣದ ಬಗ್ಗೆ ಹೈಕೋರ್ಟ್ ಸರ್ಕಾರದಿಂದ ಸ್ಪಷ್ಟನೆ ಕೇಳಿದೆ.

ಸರ್ಕಾರದಿಂದ 7,093 ಕೋಟಿ ರೂ ಬೆಗ್ಗರ್ ಸೆಸ್ ಸಂಗ್ರಹ: ಆದ್ರೂ ಭಿಕ್ಷಾಟನೆ ಮುಂದುವರಿಕೆಗೆ ಹೈಕೋರ್ಟ್ ಕಳವಳ!
Karnataka High Court
Ramesha M
| Edited By: |

Updated on:Oct 27, 2025 | 8:50 PM

Share

ಬೆಂಗಳೂರು, ಅಕ್ಟೋಬರ್​ 27: ರಾಜ್ಯ ಸರ್ಕಾರ ಕಳೆದ 4 ವರ್ಷಗಳಿಂದ 7,093 ಕೋಟಿ ರೂ. ಬೆಗ್ಗರ್ ಸೆಸ್ ಸಂಗ್ರಹಿಸಿದೆ. ಆದರೂ ರಸ್ತೆಗಳಲ್ಲಿ ಮಕ್ಕಳ ಭಿಕ್ಷಾಟನೆ (Begging) ಮುಂದುವರೆದಿದ್ದು, ಇದು ಏನೋ ಸರಿಯಿಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ಕರ್ನಾಟಕ ಹೈಕೋರ್ಟ್ (High Court) ಕಳವಳ ವ್ಯಕ್ತಪಡಿಸಿದೆ. ಹೀಗಾಗಿ ಖರ್ಚಾದ ಹಣ ಹಾಗೂ ಬಾಕಿ ಹಣದ ಲೆಕ್ಕ ಕೇಳಿರುವ ಹೈಕೋರ್ಟ್, 8 ವಾರಗಳಲ್ಲಿ ವರದಿ ಸಲ್ಲಿಸಲು ಸರ್ಕಾರ ಮತ್ತು ಕೆಎಸ್ಎ‌ಲ್‌ಎಸ್‌ಎಗೆ ಸೂಚನೆ ನೀಡಿದೆ.

ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ ಪೂಣಚ್ಚ ಅವರಿದ್ದ ವಿಭಾಗೀಯ ಪೀಠವು ಲೆಟ್ಜ್ ಕಿಟ್ ಫೌಂಡೇಶನ್ ಸಲ್ಲಿಸಿದ್ದ ಪಿಐಎಲ್ ಅರ್ಜಿ ವಿಚಾರಣೆ ಮಾಡಲಾಯಿತು. ಅರ್ಜಿದಾರರ ಪರ ಹಿರಿಯ ವಕೀಲ ಪುತ್ತಿಗೆ ಆರ್.ರಮೇಶ್ ವಾದ ಮಂಡಿಸಿದರು.

ಇದನ್ನೂ ಓದಿ: ಪ್ರಚೋದನಕಾರಿ ಭಾಷಣ ಆರೋಪ: RSS ಪ್ರಮುಖ ಕಲ್ಲಡ್ಕ ಪ್ರಭಾಕರ್​ ಭಟ್​ಗೆ ಕೋರ್ಟ್​ ರಿಲೀಫ್​

ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಸಲ್ಲಿಸಿದ ಅಫಿಡವಿಟ್​ ಪ್ರಕಾರ ರಾಜ್ಯ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಅಂದರೆ 2021-22 ರಿಂದ 2024-25 ರವರೆಗೆ ಒಟ್ಟು 7093.50 ಕೋಟಿ ರೂ. ಭಿಕ್ಷಾಟನಾ ಸೆಸ್ ಸಂಗ್ರಹಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.

7,093 ಕೋಟಿ ಸೆಸ್​ನಲ್ಲಿ 3,453 ಕೋಟಿ ರೂ. ಖರ್ಚು ಮಾಡಲಾಗಿದೆ. ಸ್ಥಳೀಯ ಸಂಸ್ಥೆಗಳು 3,639 ಕೋಟಿ ರೂ ವರ್ಗಾಯಿಸಬೇಕಿದೆ ಎಂದು ಸರ್ಕಾರದ ಪ್ರಮಾಣಪತ್ರದಲ್ಲಿದೆ. ಸಾವಿರಾರು ಕೋಟಿ ರೂ ಹಣ ಖರ್ಚಾದರೂ ಮಕ್ಕಳ ಭಿಕ್ಷಾಟನೆ ನಿಂತಿಲ್ಲ ಎಂದು ವಕೀಲ ಪುತ್ತಿಗೆ ಆರ್.ರಮೇಶ್ ವಾದಿಸಿದ್ದಾರೆ.

ಕೋಟ್ಯಂತರ ರೂಪಾಯಿಗಳನ್ನು ದೋಚಲಾಗಿದೆ ವಕೀಲ ಪುತ್ತಿಗೆ ಆರ್.ರಮೇಶ್​ ಆರೋಪಕ್ಕೆ ಉತ್ತರಿಸಿದ ಸರ್ಕಾರದ ಪರ ವಕೀಲರು, ಸ್ಥಳೀಯ ಸಂಸ್ಥೆಗಳು ಮೊತ್ತವನ್ನು ಪಾವತಿಸಬೇಕಿದೆ. ನಾವು ಅವರಿಗೆ ನೋಟೀಸ್​ ನೀಡಿದ್ದೇವೆ. ಮತ್ತಷ್ಟು ಹಣವನ್ನು ಮಕ್ಕಳ ಕಲ್ಯಾಣ ಇಲಾಖೆಗೆ ವರ್ಗಾಯಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಚುನಾಯಿತ ಸದಸ್ಯರ ಅಧಿಕಾರಾವಧಿ ಮುಗಿಯುವವರೆಗೆ ಆಡಳಿತಾಧಿಕಾರಿ ನೇಮಕ ಬೇಡ: ಹೈಕೋರ್ಟ್

ಸದ್ಯ ಮಕ್ಕಳ ಭಿಕ್ಷಾಟನೆ ಮುಂದುವರೆದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ಖರ್ಚಾದ ಹಣ ಹಾಗೂ ಬಾಕಿ ಹಣದ ಲೆಕ್ಕ ಕೇಳಿದೆ. ಅಂಕಿ ಅಂಶ ಸಂಗ್ರಹಿಸಲು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸಹಕರಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:25 pm, Mon, 27 October 25

Follow Us
Ramesha M
Ramesha M
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಡ್ರ್ಯಾಗನ್’ ಟೀಸರ್: ಚಿತ್ರಮಂದಿರದಲ್ಲಿ ಸಂಭ್ರಮಿಸಿದ ಪ್ರಶಾಂತ್ ನೀಲ್ ಪತ್ನಿ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
‘ಧುರಂಧರ್’ ಸಿನಿಮಾಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಏನು: ವಿಡಿಯೋ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್