ಆನ್​ಲೈನ್​ ಬೆಟ್ಟಿಂಗ್​, ಗ್ಯಾಂಬ್ಲಿಂಗ್​ಗೆ ಕಡಿವಾಣ ಹಾಕಲು ಮುಂದಾದ ಸರ್ಕಾರ: ಬರಲಿದೆ ಹೊಸ ಕಾನೂನು

ಕರ್ನಾಟಕ ಸರ್ಕಾರವು ಆನ್‌ಲೈನ್ ಬೆಟ್ಟಿಂಗ್ ಮತ್ತು ಜೂಜಿಗೆ ಕಡಿವಾಣ ಹಾಕಲು ಹೊಸ ಮಸೂದೆಯನ್ನು ರೂಪಿಸಿದೆ. ಈ ಮಸೂದೆಯು ಅದೃಷ್ಟ ಆಧಾರಿತ ಆಟಗಳನ್ನು ನಿಷೇಧಿಸುತ್ತದೆ ಆದರೆ ಕೌಶಲ್ಯ ಆಧಾರಿತ ಆಟಗಳಿಗೆ ಅವಕಾಶ ನೀಡುತ್ತದೆ. ಬೆಟ್ಟಿಂಗ್‌ನಲ್ಲಿ ತೊಡಗುವವರಿಗೆ 3 ವರ್ಷ ಜೈಲು ಮತ್ತು 1 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಪ್ರಸ್ತಾವಿತ ಮಸೂದೆ ಅಡಿ ಕರ್ನಾಟಕ ಆನ್‌ಲೈನ್ ಬೆಟ್ಟಿಂಗ್ ಮತ್ತು ಗೇಮಿಂಗ್ ಪ್ರಾಧಿಕಾರ ರಚನೆಯಾಗಲಿದೆ.

ಆನ್​ಲೈನ್​ ಬೆಟ್ಟಿಂಗ್​, ಗ್ಯಾಂಬ್ಲಿಂಗ್​ಗೆ ಕಡಿವಾಣ ಹಾಕಲು ಮುಂದಾದ ಸರ್ಕಾರ: ಬರಲಿದೆ ಹೊಸ ಕಾನೂನು
ಸಾಂದರ್ಭಿಕ ಚಿತ್ರ
Edited By:

Updated on: Jul 07, 2025 | 10:02 AM

ಬೆಂಗಳೂರು, ಜುಲೈ 07: ಆನ್​ಲೈನ್​ ಬೆಟ್ಟಿಂಗ್​ (Online Betting) ಹಾಗೂ ಗ್ಯಾಂಬ್ಲಿಂಗ್ (Gambling)​ ಅದೆಷ್ಟೋ ಜನರ ಬದುಕನ್ನು ಕಸಿದುಕೊಂಡಿದೆ. ಅದೆಷ್ಟೋ ಮಂದಿ ಆನ್​ಲೈನ್​ ಬೆಟ್ಟಿಂಗ್​ ಆಟಕ್ಕೆ ಸಿಲುಕಿ ಕೋಟ್ಯಾಂತರ ರೂ. ಸಾಲ ಮಾಡಿ ಕೊನೆಗೆ ಆತ್ಮಹತ್ಯೆಗೆ ಮೊರೆ ಹೋಗಿದ್ದಾರೆ. ಈ ಆನ್​ಲೈನ್​ ಬೆಟ್ಟಿಂಗ್​ ಹಾಗೂ ಗ್ಯಾಂಬ್ಲಿಂಗ್​ಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ (Karnataka Government) ಹೊಸ ಮಸೂದೆ ರೂಪಿಸಿದೆ. ಕರ್ನಾಟಕ ಪೊಲೀಸ್ (ತಿದ್ದುಪಡಿ) ಮಸೂದೆ 2025 ಕರಡು ಸಿದ್ದಪಡಿಸಿರುವ ರಾಜ್ಯ ಸರ್ಕಾರ ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲು ಮುಂದಾಗಿದೆ.

ಹೊಸ ಮಸೂದೆ ಪ್ರಕಾರ ರಾಜ್ಯ ಸರ್ಕಾರ ಕರ್ನಾಟಕ ಆನ್​ಲೈನ್ ಬೆಟ್ಟಿಂಗ್ ಮತ್ತು ಗೇಮಿಂಗ್ ಪ್ರಾಧಿಕಾರ ರಚನೆ ಮಾಡಲು ತೀರ್ಮಾನಿಸಿದೆ. ಈ ಪ್ರಾಧಿಕಾರ ಹೊಸ ಕಾನೂನಿನಂತೆ ನಿಯಮಗಳ ಜಾರಿ, ಅನುಪಾಲನೆ, ಆನ್​ಲೈನ್​ ಗೇಮಿಂಗ್​ ಹಾಗೂ ಗ್ಯಾಂಬ್ಲಿಂಗ್​ ನಿಯಂತ್ರಣ, ನಿಗಾ ಇಡಲಿದೆ. ಪ್ರಾಧಿಕಾರ ದೃಢೀಕರಿಸಿದ ಕೇವಲ ಕೌಶಲ್ಯ ಆಟಗಳಿಗೆ ಮಾತ್ರ ಅನುಮತಿ ನೀಡಲಾಗುತ್ತದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೊಂದು ಚೀಟಿ ಪಂಗನಾಮ: ಬರೋಬ್ಬರಿ 40 ಕೋಟಿ ರೂ.ನೊಂದಿಗೆ ದಂಪತಿ ಎಸ್ಕೇಪ್‌

ಇದನ್ನೂ ಓದಿ
ಹುಡುಗಿ ವಿಚಾರಕ್ಕೆ ಯುವಕನ ಬಟ್ಟೆ ಬಿಚ್ಚಿ, ಮರ್ಮಾಂಗ ತುಳಿದು ಹಲ್ಲೆ
ಪತ್ನಿಯ ಕುತ್ತಿಗೆ, ಮುಖಕ್ಕೆ 20 ಕ್ಕೂ ಹೆಚ್ಚು ಬಾರಿ ಇರಿದು ಕೊಂದ ಪತಿ
ಶಿವಮೊಗ್ಗದಲ್ಲಿ ಹಿಂದೂ ದೇವರಿಗೆ ಅಪಮಾನ: ಇಬ್ಬರು ಕಿಡಿಗೇಡಿಗಳು ಅಂದರ್
ಗೆಳತಿಯ ಪತಿಯನ್ನು ಕೊಲೆ ಮಾಡಿದ ಶಾಲಾ ವಾಹನ ಚಾಲಕ? ಅನೈತಿಕ ಸಂಬಂಧ ಶಂಕೆ

ಈ ಪ್ರಸ್ತಾವಿತ ಕಾನೂನು ಪ್ರಕಾರ ಅದೃಷ್ಟದ ಆಟ (ಲಕ್ ಗೇಮ್​) ಅಂದರೆ ಯಾವುದೇ ಆಟ, ಸ್ಪರ್ಧೆ ಅಥವಾ ಕ್ರಿಯೆಯ ಫಲಿತಾಂಶಗಳು ಅದೃಷ್ಟದಿಂದ ಅವಲಂಬಿತವಾಗಿರುವ ಆನ್​ಲೈನ್​ ಗ್ಯಾಂಬ್ಲಿಂಗ್​, ಬೆಟ್ಟಿಂಗ್ ಚಟುವಟಿಕೆಗಳಿಗೆ ನಿಷೇಧವಿದೆ. ಇನ್ನು, ಗೇಮ್​ ಆಫ್​ ಸ್ಕಿಲ್ ಹೊಂದಿರುವ ಆನ್​ಲೈನ್​ ಗೇಮಿಂಗ್​ಗೆ ವಿನಾಯತಿ ನೀಡಲಾಗಿದೆ.

ಶಿಕ್ಷ, ದಂಡ

ಹೊಸ ಕಾಯ್ದೆಯಡಿ ಬೆಟ್ಟಿಂಗ್ ನಡೆಸುವವರಿಗೆ ಮೂರು ವರ್ಷ ಜೈಲುಶಿಕ್ಷೆ ಜೊತೆಗೆ 1 ಲಕ್ಷ ರೂ. ದಂಡ ವಿಧಸಲಾಗುತ್ತದೆ. ಬೆಟ್ಟಿಂಗ್ ಪ್ರೋತ್ಸಾಹಿಸುವವರಿಗೆ 6 ತಿಂಗಳ ಕಾಲ ಜೈಲುಶಿಕ್ಷೆ ಜೊತೆಗೆ 10 ಸಾವಿರ ರೂ. ವಿಧಿಸಲಾಗುತ್ತದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ