ನಿಗಮ ಮಂಡಳಿ ನಿರ್ದೇಶಕರು, ಸದಸ್ಯರ 2ನೇ ಪಟ್ಟಿ ರಿಲೀಸ್: ಯಾರಿಗೆಲ್ಲಾ ಅವಕಾಶ? ಇಲ್ಲಿದೆ ಲಿಸ್ಟ್

ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರವು ಮೊದಲ ಪಟ್ಟಿಯಲ್ಲಿ 60 ಪ್ರಮುಖ ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳಿಗೆ 428 ಮಂದಿಯನ್ನು ಸದಸ್ಯರನ್ನಾಗಿ ನೇಮಿಸಿ ಅಧಿಕೃತ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ಇದೀಗ ಬಿಡುಗಡೆ ಮಾಡಿದ್ದು, ಇದರಲ್ಲಿ 81 ಮಂದಿ ನೇಮಕ ಮಾಡಲಾಗಿದೆ. 2ನೇ ಪಟ್ಟಿಯಲ್ಲಿ ಯಾರಿಗೆಲ್ಲಾ ಅವಕಾಶ? ಸಿಕ್ಕಿದೆ ಎನ್ನುವ ವಿವರ ಇಲ್ಲಿದೆ.

ನಿಗಮ ಮಂಡಳಿ ನಿರ್ದೇಶಕರು, ಸದಸ್ಯರ 2ನೇ ಪಟ್ಟಿ ರಿಲೀಸ್: ಯಾರಿಗೆಲ್ಲಾ ಅವಕಾಶ? ಇಲ್ಲಿದೆ ಲಿಸ್ಟ್
ವಿಧಾನಸೌಧ
Image Credit source: Getty Images
Edited By:

Updated on: Nov 19, 2026 | 8:23 PM

ಬೆಂಗಳೂರು, (ನವೆಂಬರ್ 19): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ತೀವ್ರ ಕುತೂಹಲ ಕೆರಳಿಸಿದ್ದ ಹಾಗೂ ಕಾರ್ಯಕರ್ತರು ಕಾತರದಿಂದ ಕಾಯುತ್ತಿದ್ದ ನಿಗಮ-ಮಂಡಳಿಗಳ ನೇಮಕಾತಿ ನಡೆದಿದ್ದು, ಈಗಾಗಲೇ ಮೊದಲ ಪಟ್ಟಿಯಲ್ಲಿ ಬರೋಬ್ಬರಿ 428 ಮಂದಿಯನ್ನು ನೇಮಕ ಮಾಡಲಾಗಿದೆ. ಇದರ ಬೆನ್ನಲ್ಲೇ ಇದೀಗ ಕರ್ನಾಟಕ ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳಿಗೆ ನಿರ್ದೇಶಕರು, ಸದಸ್ಯರ 2ನೇ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. 2ನೇ ಪಟ್ಟಿಯಲ್ಲಿ ಒಟ್ಟು 81 ನಿರ್ದೇಶಕರು, ಸದಸ್ಯರನ್ನ ನೇಮಕ ಮಾಡಿ ಸಿಎಂ ಡಿಕೆ ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.

ಕರ್ನಾಟಕ ಸರ್ಕಾರದ ಅಧೀನದ ವಿವಿಧ ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳ ಆಡಳಿತ ಸುಧಾರಣೆಗಾಗಿ 81 ನೂತನ ನಿರ್ದೇಶಕರು ಹಾಗೂ ಸದಸ್ಯರನ್ನು ನೇಮಕ ಮಾಡಲಾಗಿದೆ. ಸಾರಿಗೆ, ಇಂಧನ, ಅರಣ್ಯ, ಕೃಷಿ ಸೇರಿದಂತೆ ಹಲವು ಪ್ರಮುಖ ನಿಗಮಗಳಿಗೆ ರಾಜ್ಯದ ವಿವಿಧ ಜಿಲ್ಲೆಗಳ ಮುಖಂಡರು ಮತ್ತು ಕಾರ್ಯಕರ್ತರಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸಲಾಗಿದೆ.

Loading...

ಮುಂಬರುವ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯ ದೃಷ್ಟಿಯಿಂದ
ಆಡಳಿತಾತ್ಮಕ ಕಾರ್ಯಚಟುವಟಿಕೆಗಳನ್ನು ಚುರುಕುಗೊಳಿಸಲು ಮತ್ತು ಸಾರ್ವಜನಿಕರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸಲು ವಿವಿಧ ನಿಗಮ ಮಂಡಳಿಗೆ ನಿರ್ದೇಶಕರು ಮತ್ತು ಸದಸ್ಯರನ್ನು ನೇಮಕ ಮಾಡಲಾಗಿದೆ.

ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ

ಭಾರ್ತಿ ಎನ್.ಕೆ(ಬೆಂಗಳೂರು), ಬಿ.ಎಂ. ಅಶೋಕ್(ಚಿತ್ರದುರ್ಗ), ಸ್ವಪ್ನ ಶೆಟ್ಟಿ (ಬೆಂಗಳೂರು), ರಮೇಶ್ ಮಡಿವಾಳರ್ (ಹಾವೇರಿ), ಶಿವಕುಮಾರ್ (ರಾಮನಗರ), ಪೂರ್ಣಚಂದ್ರ ಕೀಕರ್ (ಚೇತನ್ ಕೀಕರ್) (ರಾಮನಗರ).

ಹುಬ್ಬಳ್ಳಿ-ಧಾರವಾಡ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ)

ಶೇಖರ್ ರಾಮಗೌಡ ಬೆಳ್ಮರ್ (ಉತ್ತರ ಕನ್ನಡ), ಮೊಹಮ್ಮದ್ ಆರಿಫ್ ಮುಜಾವರ್ (ಹು-ಧಾ), ಶಶಿಧರ್ ಚಿಕ್ಕೋಡಿ, ಪವನ್ ಕೆ. ರಾಥೋಡ್(ಬೆಳಗಾವಿ), ಪ್ರಕಾಶ್ ಎಲ್. ಪಾಟೀಲ್(ಹಾವೇರಿ),

ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ

ಪ್ರೇಮವ್ವ ಜಗದೀಶ್ ಲಮಾಣಿ (ಬಾಗಲಕೋಟೆ),

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ

ಗೌಡಪ್ಪಗೌಡ ಆಂದೋಲಾ (ಕಲಬುರಗಿ), ಪ್ರವೀಣ್ ಹರವಾಳ (ಕಲಬುರಗಿ), ಕೃಷ್ಣಪ್ಪ (ಕೊಪ್ಪಳ), ಎಸ್. ಅಮರೇಶ್ (ರಾಯಚೂರು),

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ

ಸುರೇಶ್ ಬಾಬು ಜಿ. (ಸುಭಾಷ್) (ತುಮಕೂರು), ಎನ್.ಪಿ. ಹೇಮಂತ್ ಕುಮಾರ್ ( ಬೆಂಗಳೂರು ಗ್ರಾಮಾಂತರ).

ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ

ಕಲಂದರ್ ಖಾನ್ ಕೆ.ಆರ್. (ದಾವಣಗೆರೆ), ದರ್ಶನ್ ಹೆಚ್.ಡಿ. (ತುಮಕೂರು), ಕೃಷ್ಣಪ್ಪ ಮುನಿ ಬಂಡ್ಯಪ್ಪ (ಬೆಂಗಳೂರು), ಶಶಿಧರ್ ಪೂಜಾರ್, ಅಮೃತ್ ಗೌಡ ಎಂ. (ಬೆಂಗಳೂರು), ಎಸ್. ಯೋಗೇಶ್ ಉಪ್ಪಾರ(ಮೈಸೂರು), ನಾಗೇಶ್ ಕೆ.ಆರ್.(ಬೆಂಗಳೂರು ಗ್ರಾಮಾಂತರ).

ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಗಮ

ಭವ್ಯ ಕೆ.ಆರ್.(ಬೆಂಗಳೂರು), ಶೇಖರಪ್ಪ ಮಂಕಟ್ಟಿ(ಹಾವೇರಿ), ಎನ್.ಜಿ. ಸಂಜು ಪಾಟೀಲ್ (ಸಂಜಯ್ ಪಾಟೀಲ್)(ದಾವಣಗೆರೆ),

ಪ್ರಸನ್ನ ಗಾಂವ್ಕರ್​

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More
Loading...
Unable to load recommendations.
Follow Us