11 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿದ ರಾಜ್ಯ ಸರ್ಕಾರ
ರಾಜ್ಯ ಸರ್ಕಾರ 11 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.
ಬೆಂಗಳೂರು: ರಾಜ್ಯ ಸರ್ಕಾರ ಆಡಳಿತದಲ್ಲಿ ಮೇಜರ್ ಸರ್ಜರಿ ಮಾಡಿದ್ದು 11 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಸಂಚಾರ ವಿಭಾಗದ ಮುಖ್ಯಸ್ಥರಾಗಿ ಅಬ್ದುಲ್ ಸಲೀಂ ವರ್ಗಾವಣೆ ಮಾಡಲಾಗಿದೆ. ಉಮೇಶ್ ಕುಮಾರ್ ಅವರನ್ನು ಆಡಳಿತ ವಿಭಾಗದ ಎಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ದಿವ್ಯಾಜ್ಯೋತಿ ರಾಯ್ ಅವರನ್ನು ಮಾನವ ಹಕ್ಕುಗಳ ಆಯೋಗ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ
ವರ್ಗಾವಣೆಗೊಂಡ ಅಧಿಕಾರಿಗಳು
- ರಮಣ ಗುಪ್ತ-ಡಿಐಜಿ ಮತ್ತು ಜಂಟಿ ಆಯುಕ್ತರು, ಗುಪ್ತಚರ, ಬೆಂಗಳೂರು
- ಬಿ.ಎಸ್.ಲೋಕೇಶ್ ಕುಮಾರ್-ಡಿಐಜಿ, ಬಳ್ಳಾರಿ ವಿಭಾಗ
- ಡಾ.ಚಂದ್ರಗುಪ್ತ-ಡಿಐಜಿ, ಪಶ್ಚಿಮ ವಲಯ ಮಂಗಳೂರು
- ಡಾ.ಶರಣಪ್ಪ-ಜಂಟಿ ಪೊಲೀಸ್ ಆಯುಕ್ತ, ಅಪರಾಧ ವಿಭಾಗ, ಬೆಂಗಳೂರು
- ಎಂ.ಎನ್.ಅನುಚೇತ್-ಜಂಟಿ ಪೊಲೀಸ್ ಆಯುಕ್ತ, ಸಂಚಾರ
- ರವಿ ಡಿ.ಚನ್ನಣ್ಣನವರ್-ಎಂಡಿ, ಕಿಯೋನಿಕ್ಸ್
- ಬಿ.ರಮೇಶ್-ಮೈಸೂರು ಪೊಲೀಸ್ ಆಯುಕ್ತ
ಕೆಕೆಆರ್ ಡಿಬಿ ಕಾರ್ಯದರ್ಶಿಯಾಗಿ ಐಎಎಸ್ ಅಧಿಕಾರಿ ಅನಿರುದ್ಧ ಶ್ರವಣ್ ನೇಮಕ
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿಯಾಗಿ ಐಎಎಸ್ ಅಧಿಕಾರಿ ಅನಿರುದ್ಧ್ ಶ್ರವಣ್ ನೇಮಕಗೊಂಡಿದ್ದಾರೆ. ಅನಿರುದ್ಧ್ ಶ್ರವಣ್ ವಿಜಯನಗರ ಡಿಸಿ ಹುದ್ದೆಯಿಂದ ವರ್ಗಾವಣೆಯಾಗಿ ಸ್ಥಳ ನಿಯೋಜನೆ ಕಾಯುತ್ತಿದ್ದರು.
Published On - 6:23 pm, Mon, 14 November 22