ಮಳೆಯಿಂದ ಕರ್ನಾಟಕದಲ್ಲಿ ಅಪಾರ ಬೆಳೆ ಹಾನಿ; ಕೇಂದ್ರದಿಂದ 900 ಕೋಟಿ ರೂ. ಪರಿಹಾರಕ್ಕೆ ಮನವಿಗೆ ರಾಜ್ಯ ಸರ್ಕಾರ ನಿರ್ಧಾರ
ನವೆಂಬರ್ 30ರೊಳಗೆ ವರದಿ ನೀಡಲು ಸೂಚನೆ ನೀಡಿದ್ದೇವೆ. ವರದಿ ಬಂದ 10 ದಿನದೊಳಗೆ ರೈತರಿಗೆ ಪರಿಹಾರ ನೀಡಲಾಗುವುದು ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಬೆಂಗಳೂರು: ಮುಂದಿನ 2-3 ದಿನಗಳಲ್ಲಿ ಕರ್ನಾಟಕದ ಮಳೆ ಹಾನಿ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ನೀಡಲಾಗುವುದು. ಎನ್ಡಿಆರ್ಎಫ್ ನಿಧಿಯಡಿ 900 ಕೋಟಿ ರೂ. ಪರಿಹಾರಕ್ಕೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಎರಡು ಅಥವಾ ಮೂರು ದಿನಗಳಲ್ಲಿ ಕೇಂದ್ರ ಸರ್ಕಾರಕ್ಕೆ ರಾಜ್ಯದ ನಷ್ಟದ ಅಂದಾಜು ವರದಿಯನ್ನು ಸಲ್ಲಿಸಲಾಗುವುದು. 900 ಕೋಟಿ ರೂ.ನಷ್ಟು ಎಸ್ಡಿಆರ್ಎಫ್ ನಿಧಿಯಡಿ ಪರಿಹಾರ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಮಳೆಯಿಂದ ಮನೆಗಳು ಕುಸಿದಿದ್ದರೆ ತಕ್ಷಣವೇ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ನವೆಂಬರ್ 26ರಂದು ಮತ್ತೊಂದು ಸೈಕ್ಲೋನ್ ಅಪ್ಪಳಿಸಲಿದೆ. ಚೆನ್ನೈಗೆ ಅಪ್ಪಳಿಸುವ ಸೈಕ್ಲೋನ್ ರಾಜ್ಯದ ಮೇಲೆ ಪ್ರಭಾವ ಬೀರಲಿದೆ. ಮೈಸೂರು ಭಾಗ, ಉಡುಪಿವರೆಗೂ ಸೈಕ್ಲೋನ್ ಅಪ್ಪಳಿಸುತ್ತದೆ. ಹೀಗಾಗಿ ನ.26ರಿಂದ 28ರವರೆಗೆ ಮುನ್ನೆಚ್ಚರಿಕೆ ಅಗತ್ಯವಾಗಿದೆ. ಮುಂಜಾಗ್ರತಾ ಕ್ರಮ ವಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬಿಬಿಎಂಪಿ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ. ವಿಧಾನಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆಗಿದೆ. ಹೀಗಾಗಿ ಡಿಸಿಗಳು ಸೈಕ್ಲೋನ್ ಕಡೆ ಗಮನ ನೀಡಬೇಕು. ಕಾಫಿ ಸೇರಿದಂತೆ ಎಲ್ಲ ಬೆಳೆಗಳಿಗೂ ಪರಿಹಾರ ನೀಡಲಾಗುತ್ತದೆ ಎಂದು ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಮಳೆ ನೀರು ಮನೆಗೆ ನುಗ್ಗಿದವರಿಗೂ ಪರಿಹಾರ ವಿತರಣೆ ಮಾಡಲಾಗುವುದು. ಸಿಎಂ ಸಹ ಪರಿಹಾರದ ವಿಚಾರವಾಗಿ ಸಭೆ ಮಾಡಿದ್ದಾರೆ. ರೈತರ ಬೆಳೆ ಹಾನಿಗೆ ಪರಿಹಾರ ನೀಡಲು ಸೂಚಿಸಿದ್ದಾರೆ. ಮನೆ ಬಿದ್ದವರಿಗೆ ತಕ್ಷಣ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಳೆ ನೀರು ಮನೆಗೆ ನುಗ್ಗಿದವರಿಗೂ ಪರಿಹಾರ ವಿತರಣೆ ಮಾಡಲಾಗ್ತಿದೆ. 900 ಕೋಟಿ ನಷ್ಟದ ಅಂದಾಜು ಕೇಂದ್ರಕ್ಕೆ ಕಳಿಸಲಾಗುತ್ತದೆ. ಎನ್ಡಿಆರ್ಎಫ್ ಹಣವನ್ನು 3 ಪಟ್ಟು ಹೆಚ್ಚಿಸುವಂತೆ ಸಲಹೆ ನೀಡಲಾಗಿದೆ. ಮುಖ್ಯಮಂತ್ರಿಗಳೂ ಪರಿಹಾರದ ವಿಚಾರವಾಗಿ ಸಭೆ ಮಾಡಿದ್ದಾರೆ. ರೈತರಿಗೆ ಬೆಳೆ ಪರಿಹಾರ ಬೇಗ ಸಿಗುವಂತೆ ಸೂಚನೆ ನೀಡಲಾಗಿದೆ ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ.
ವರದಿ ಬಂದ 10 ದಿನದೊಳಗೆ ರೈತರಿಗೆ ಪರಿಹಾರ ವಿತರಣೆ ಮಾಡಲಾಗುವುದು. ರೈತರ ಖಾತೆಗೆ ನೇರವಾಗಿ ಹಣ ಜಮೆ ಮಾಡಲಾಗುವುದು. ಜಿಲ್ಲಾಧಿಕಾರಿಗಳ ಖಾತೆಯಲ್ಲಿ 680 ಕೋಟಿ ಹಣ ಇದೆ. ರಾಜ್ಯದಲ್ಲಿ ಈ ಬಾರಿ ಮಳೆ ಪ್ರವಾಹದಿಂದ ಅಪಾರ ಹಾನಿಯಾಗಿದೆ. ಬೆಳೆ ಹಾನಿ ಹೆಚ್ಚಿನ ಪ್ರಮಾಣದಲ್ಲಿ ಆಗಿದೆ. ಸುಮಾರು 5 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿರುವ ಅಂದಾಜಿದೆ. 1 ಲಕ್ಷ ಹೆಕ್ಟೇರ್ನಷ್ಟು ವಾಣಿಜ್ಯ ಬೆಳೆ ಹಾನಿಯಾಗಿದೆ. ಈ ಬಗ್ಗೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ತಕ್ಷಣ ನಷ್ಟದ ಅಂದಾಜು ಮಾಡಲು ಸೂಚನೆ ನೀಡಲಾಗಿದೆ. ನವೆಂಬರ್ 30ರೊಳಗೆ ವರದಿ ನೀಡಲು ಸೂಚನೆ ನೀಡಿದ್ದೇವೆ. ವರದಿ ಬಂದ 10 ದಿನದೊಳಗೆ ರೈತರಿಗೆ ಪರಿಹಾರ ನೀಡಲಾಗುವುದು. ರೈತರ ಖಾತೆಗೆ ನೇರ ಜಮೆ ಮಾಡಲಾಗುವುದು. ಮನೆ ಬಿದ್ದ ಎರಡು ದಿನದಲ್ಲಿ ಪರಿಹಾರ ನೀಡಬೇಕು. ಹಾನಿಗೊಳಗಾದ ಮನೆಗಳವರಿಗೆ 24 ಗಂಟೆಯೊಳಗೆ ಪರಿಹಾರ ನೀಡಬೇಕು ಎಂದು ಸಚಿವ ಆರ್. ಅಶೋಕ್ ಡಿಸಿಗಳಿಗೆ ಪತ್ರ ಬರೆದು ಸೂಚಿಸಿದ್ದಾರೆ.
ಸಾವಳಗಿ ಗ್ರಾಮದ ಸುತ್ತಮುತ್ತ 1,500 ಎಕರೆಗೂ ಹೆಚ್ಚು ಪ್ರದೇಶದಲ್ಲಿದ್ದ ದ್ರಾಕ್ಷಿ ನಾಶವಾಗಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ದ್ರಾಕ್ಷಿ ಬೆಳೆ ನಾಶವಾಗಿದೆ. ಅದಕ್ಕೆ ಸೂಕ್ತ ಪರಿಹಾರ ನೀಡುವಂತೆ ದ್ರಾಕ್ಷಿ ಬೆಳೆಗಾರರು ಆಗ್ರಹಿಸಿದ್ದಾರೆ. ಅಕಾಲಿಕ ಮಳೆಗೆ ದ್ರಾಕ್ಷಿ ಬೆಳೆಹಾನಿಯಾಗಿದೆ. ಮಳೆಗೆ ಹೂ ಉದುರಿ, ಹೂಗಳು ಕೊಳೆತು ನೆಲಕ್ಕೆ ಬಿದ್ದು ಬೆಳೆ ನಾಶವಾಗಿರುವುದರಿಂದ ರೈತರು ಸಂಕಷ್ಟದಲ್ಲಿದ್ದಾರೆ.
ಸಾವಳಗಿ ಗ್ರಾಮದ ಭೀಮಪ್ಪ ಹಳಿಂಗಳಿ ಎಂಬುವವರ ನಾಲ್ಕು ಎಕರೆ ದ್ರಾಕ್ಷಿ ತೋಟ ನಾಶವಾಗಿದೆ. ಸಾವಳಗಿ ಭಾಗದ 1,500ಕ್ಕೂ ಹೆಚ್ಚು ಎಕರೆ ದ್ರಾಕ್ಷಿ ತೋಟದ ಹೂ ಉದುರಿ ನಾಶವಾಗಿದೆ. ಎಕರೆಗೆ ಎರಡೂವರೆ ಲಕ್ಷ ರೂ. ಖರ್ಚು ಮಾಡಿ ದ್ರಾಕ್ಷಿ ಬೆಳೆದ ರೈತರು ಇದೀಗ ಮಳೆ ಬಿದ್ದ ಪರಿಣಾಮ ಲಕ್ಷಾಂತರ ರೂ. ಹಾನಿಯಾಗಿ ತೊಂದರೆಗೀಡಾಗಿದ್ದಾರೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಸಾವಳಗಿಯಲ್ಲಿ ಸೂಕ್ತ ಪರಿಹಾರಕ್ಕಾಗಿ ದ್ರಾಕ್ಷಿ ಬೆಳೆಗಾರ ರೈತರು ಆಗ್ರಹ ಮಾಡಿದ್ದಾರೆ.
ಇದನ್ನೂ ಓದಿ: Karnataka Rain: ಬೆಂಗಳೂರು, ಕರಾವಳಿ ಸೇರಿ ಹಲವೆಡೆ ನ. 28ರವರೆಗೂ ವ್ಯಾಪಕ ಮಳೆ; ಮತ್ತೊಂದು ಚಂಡಮಾರುತದ ಭೀತಿ
Published On - 3:44 pm, Thu, 25 November 21