ಲೈಸೆನ್ಸ್, ವಾಹನ ಚಾಲನಾ ತರಬೇತಿ ಇನ್ನು ದುಬಾರಿ: ಶುಲ್ಕ ಹೆಚ್ಚಳ ಜನವರಿ 1ರಿಂದಲೇ ಜಾರಿ, ಇಲ್ಲಿದೆ ಪರಿಷ್ಕೃತ ಪಟ್ಟಿ
ಚಾಲನಾ ತರಬೇತಿಯ ಪರಿಷ್ಕೃತ ಶುಲ್ಕ 2024ರ ಜನವರಿ 1ರಿಂದಲೇ ಜಾರಿಗೆ ಬರಲಿದೆ. ಸಾರಿಗೆ ಇಲಾಖೆ ಪರಿಷ್ಕೃತ ದರ ಪಟ್ಟಿಯನ್ನ ಪ್ರಕಟಿಸಿದೆ. ಹೊಸ ವರ್ಷಕ್ಕೆ ಡ್ರೈವಿಂಗ್ ಕಲಿತು ಲೈಸೆನ್ಸ್ ಪಡ್ಕೋಳ್ಳೋಣ ಅಂತಿದ್ದವರಿಗೆ ಸಾರಿಗೆ ಇಲಾಖೆ ದರ ಏರಿಕೆಯ ಶಾಕ್ ಕೊಟ್ಟಿದೆ.
ಬೆಂಗಳೂರು, ಡಿಸೆಂಬರ್ 15: ವಾಹನ ಚಾಲನಾ ತರಬೇತಿ ಶುಲ್ಕವನ್ನು (Driving School fee) ರಾಜ್ಯ ಸರ್ಕಾರ ಪರಿಷ್ಕರಣೆ ಮಾಡಿದ್ದು, ಡ್ರೈವಿಂಗ್ ಸ್ಕೂಲ್ ಮಾಲೀಕರ ಒಂದು ದಶಕದ ಬೇಡಿಕೆಯನ್ನು ಈಡೇರಿಸಿದೆ. ಇದರೊಂದಿಗೆ 10 ವರ್ಷಗಳ ನಂತರ ಇದೇ ಮೊದಲ ಬಾರಿಗೆ ವಾಹನ ಚಾಲನಾ ತರಬೇತಿ ಶುಲ್ಕ ಏರಿಕೆ ಮಾಡಿದಂತಾಗಿದ್ದು, ಲೈಸೆನ್ಸ್ (Driving Licence) ಪಡೆಯುವುದೂ ದುಬಾರಿಯಾಗಲಿದೆ.
ಕಾರುಗಳ ಬೆಲೆ ಗಗನಕ್ಕೆ ಏರಿದೆ, ಸಾರಿಗೆ ಇಲಾಖೆ ಕೂಡ ದರ ಹೆಚ್ಚಳ ಮಾಡಿದೆ, ಮಕ್ಕಳ ಸ್ಕೂಲ್ ಬಾಡಿಗೆ ಕಟ್ಟಲು ಆಗ್ತಿಲ್ಲ, ಕೆಲಸಗಾರರಿಗೆ ಸಂಬಳ ಕೊಡಲು ಆಗ್ತಿಲ್ಲ, ಎಂದು ರಾಜ್ಯ ಸಾರಿಗೆ ಇಲಾಖೆಯ ಮುಂದೆ ಡ್ರೈವಿಂಗ್ ಸ್ಕೂಲ್ ಮಾಲೀಕರು ನೋವು ತೊಡಿಕೊಂಡಿದ್ದರು. ಇದೀಗ ಸಾರಿಗೆ ಇಲಾಖೆ ಅವರಿಗೆ ಶುಭ ಸುದ್ದಿ ನೀಡಿದೆ.
ರಾಜ್ಯದಲ್ಲಿ ಬೆಲೆ ಏರಿಕೆ ತಾಂಡವವಾಡ್ತಿದೆ. ದಿನವೂ ಒಂದಿಲ್ಲೊಂದರ ಬೆಲೆ ಹೆಚ್ಚಾಗ್ತಿದ್ದು ಜನ ಬೇಸತ್ತು ಹೋಗಿದ್ದಾರೆ. ಇದೀಗ ವಾಹನ ಚಾಲನಾ ತರಬೇತಿ ಶುಲ್ಕವೂ ಹೆಚ್ಚಳವಾಗಿದ್ದು ಸಾರಿಗೆ ಇಲಾಖೆ ಪರಿಷ್ಕೃತ ದರ ಪಟ್ಟಿ ಬಿಡುಗಡೆ ಮಾಡಿದೆ.
ಜನವರಿ 1ರಿಂದಲೇ ಜಾರಿ
ಚಾಲನಾ ತರಬೇತಿಯ ಪರಿಷ್ಕೃತ ಶುಲ್ಕ 2024ರ ಜನವರಿ 1ರಿಂದಲೇ ಜಾರಿಗೆ ಬರಲಿದೆ. ಸಾರಿಗೆ ಇಲಾಖೆ ಪರಿಷ್ಕೃತ ದರ ಪಟ್ಟಿಯನ್ನ ಪ್ರಕಟಿಸಿದೆ. ಹೊಸ ವರ್ಷಕ್ಕೆ ಡ್ರೈವಿಂಗ್ ಕಲಿತು ಲೈಸೆನ್ಸ್ ಪಡ್ಕೋಳ್ಳೋಣ ಅಂತಿದ್ದವರಿಗೆ ಸಾರಿಗೆ ಇಲಾಖೆ ದರ ಏರಿಕೆಯ ಶಾಕ್ ಕೊಟ್ಟಿದೆ.
ಕಳೆದ ಹತ್ತು ವರ್ಷದಿಂದ ವಾಹನ ಚಾಲನ ತರಬೇತಿ ಶುಲ್ಕ ಪರಿಷ್ಕರಣೆ ಮಾಡಿರಲಿಲ್ಲ. ಹೀಗಾಗಿ ಪೆಟ್ರೋಲ್ ಡೀಸೆಲ್, ವಾಹನ ನಿರ್ವಹಣೆ ವೆಚ್ಚಗಳು ಹೆಚ್ಚಳವಾಗಿರೋ ಹಿನ್ನೆಲೆಯಲ್ಲಿ ರಾಜ್ಯ ಮೋಟಾರ್ ವಾಹನ ತರಬೇತಿ ಶಾಲೆಗಳ ಒಕ್ಕೂಟ ಶುಲ್ಕ ಪರಿಷ್ಕರಣೆ ಮಾಡುವಂತೆ ಬೇಡಿಕೆ ಸಲ್ಲಿಸಿತ್ತು. ಇದು ಬಹುದಿನಗಳಿಂದ ನನೆಗುದಿಗೆ ಬಿದ್ದಿತ್ತು. ಈ ಹಿನ್ನೆಲೆಯಲ್ಕಿ ಸಾರಿಗೆ ಸಚಿವರ ಸೂಚನೆ ಮೇರೆಗೆ ಶುಲ್ಕ ಪರಿಷ್ಕರಣೆ ಮಾಡಲಾಗಿದೆ.
ಪರಿಷ್ಕೃತ ದರ ಪಟ್ಟಿ ಹೀಗಿದೆ
ಮೋಟಾರ್ ಸೈಕಲ್ ಈ ಹಿಂದೆ 2,200 ರೂ. ಇದ್ದುದನ್ನು ಈಗ 3,000 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಆಟೋರಿಕ್ಷಾಗಳ ಚಾಲನಾ ತರಬೇತಿಗೆ 3000 ರೂ. ಇದ್ದುದನ್ನು 4000 ರೂ.ಗೆ ಹೆಚ್ಚಿಸಲಾಗಿದೆ. ಲಘು ಮೋಟಾರ್ಗಳಿಗೆ 4000 ರೂ. ಇದ್ದುದನ್ನು 7000 ರೂ.ಹೆ ಏರಿಕೆ ಮಾಡಲಾಗಿದೆ. ಸಾರಿಗೆ ವಾಹನಗಳ ತರಬೇತಿ ದರವನ್ನು 6000 ರೂ.ನಿಂದ 9000 ರೂ.ಗೆ ಪರಿಷ್ಕರಿಸಲಾಗಿದೆ.
ನಿಗದಿಗಿಂತ ಹೆಚ್ಚು ಶುಲ್ಕ ಪಡೆದರೆ ಕಠಿಣ ಕ್ರಮ
ಕೆಲವು ವಾಹನ ಚಾಲನಾ ತರಬೇತಿ ಶಾಲೆಗಳು ನಿಗದಿತ ದರಕ್ಕಿಂತ ಹೆಚ್ಚಿನ ಶುಲ್ಕವನ್ನು ವಸೂಲಿ ಮಾಡುತ್ತಿದ್ದು, ಅಂತಹ ಚಾಲನಾ ತರಬೇತಿ ಶಾಲೆಗಳ ಮೇಲೆ ಕ್ರಮ ಜರುಗಿಸಲು ಸಾರಿಗೆ ಇಲಾಖೆ ಮುಂದಾಗಿದೆ. ಪರಿಷ್ಕೃತ ದರ ಪಟ್ಟಿಗಿಂತ ಹೆಚ್ಚಿನ ಶುಲ್ಕ ಪಡೆಯುವುದು ಕಂಡು ಬಂದಲ್ಲಿ ಅಂತಹ ಚಾಲನಾ ತರಬೇತಿ ಶಾಲೆಗಳ ಮೇಲೆ ಕಠಿಣ ಕ್ರಮ ಜರಿಗಿಸಿಸುವುದರ ಜೊತೆಗೆ ಯಾವುದೇ ಪರವಾನಿಗೆ ಪಡೆಯದೇ ನಡೆಸುತ್ತಿರುವ ಅನಧಿಕೃತ ವಾಹನ ತರಬೇತಿ ಶಾಲೆಗಳ ಪತ್ತೆಗೂ ಇಲಾಖೆ ಮುಂದಾಗಿದೆ.
ಶುಲ್ಕ ಹೆಚ್ಚಳದ ಬಗ್ಗೆ ಸಂತಸ ವ್ಯಕ್ತಪಡಿಸಿದ ವಾಹನ ತರಬೇತಿ ಶಾಲಾ ಮಾಲೀಕರ ಸಂಘದ ಖಜಾಂಚಿ ಗೋಪಾಲ್, ನಾವು ಇನ್ನೂ ಹೆಚ್ಚಿಗೆ ಮಾಡಲು ಮನವಿ ಮಾಡಿದ್ದೆವು ಸದ್ಯ ಇಷ್ಟು ಮಾಡಿದ್ದಾರೆ ಎಲ್ಲಾ ಬೆಲೆಗಳು ಗಗನಕ್ಕೆ ಏರಿಕೆ ಆಗಿವೆ. ಹಳೆಯ ದರದಲ್ಲಿ ಸ್ಕೂಲ್ ನಡೆಸುವುದು ಕಷ್ಟ ಗ್ರಾಹಕರು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಕೊರತೆ: ಬಡ ರೋಗಿಗಳ ಪರದಾಟ
ಜನವರಿ ಆರಂಭದಿಂದಲೇ ಡ್ರೈವಿಂಗ್ ಸ್ಕೂಲ್ಗಳ ಶುಲ್ಕ ಹೆಚ್ಚಳವಾಗಲಿದ್ದು ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನರಿಗೆ ಇದು ಇನ್ನಷ್ಟು ಹೊರಯಾಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:11 am, Fri, 15 December 23