ರೋಗಿಗಳ ಬಳಿ ಹಣ ಸುಲಿಗೆ ಮಾಡುತ್ತಿದ್ದ ಖಾಸಗಿ ಆಸ್ಪತ್ರೆಗಳಿಗೆ ಶಾಕ್, ಆಸ್ಪತ್ರೆ ಹೊರಗೆ ದರ ಪಟ್ಟಿ ಅಳವಡಿಸಲು ಆದೇಶ
ಕೊರೊನಾ ಬಳಿಕ ಜನರು ಆರೋಗ್ಯದ ಬಗ್ಗೆ ಹೆಚ್ಚು ಜಾಗೃತರಾಗಿದ್ದಾರೆ. ಯಾವುದೇ ಸಮಸ್ಯೆ ಅಂದ್ರೂ ಹಾಸ್ಪೆಟಲ್ ಮೊರೆ ಹೋಗ್ತೀದ್ದಾರೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಆಸ್ಪತ್ರೆಗಳು ಚಿಕಿತ್ಸಾ ವೆಚ್ಚ ಸೇರಿದಂತೆ ಇತರೆ ಚಿಕಿತ್ಸಾ ವೆಚ್ಚಗಳನ್ನ ಏರಿಕೆ ಮಾಡಿ ಸುಲಿಗೆಗೆ ಮುಂದಾಗಿದ್ವು. ಇತಂಹ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ಶಾಕ್ ಕೊಟ್ಟಿದೆ.
ಬೆಂಗಳೂರು, ನ.12: ಜನ ಖಾಸಗಿ ಆಸ್ಪತ್ರೆಗೆ ಕಾಲಿಟ್ರೆ ಸಾಕು, ಕುಳಿತ್ರು, ನಿಂತ್ರುರು ಬಿಲ್. ಅಕ್ಷಸಹಃ ಸುಲಿಗೆಗೆ ಮುಂದಾಗಿವೆ ಖಾಸಗಿ ಆಸ್ಪತ್ರೆಗಳು. ಜ್ವರ, ಕೆಮ್ಮು, ನೆಗಡಿ ಅಂತಾ ಹೋದ್ರು ಸಾವಿರಾರು ರೂಪಾಯಿ ಬಿಲ್ ಮಾಡ್ತಾರೆ. ಇದು ಜನರ ಪರದಾಟಕ್ಕೆ ಕಾರಣವಾಗ್ತೀವೆ. ಹೀಗಾಗಿ ಖಾಸಗಿ ಆಸ್ಪತ್ರೆಗಳ (Private Hospitals) ಸುಲಿಗೆಗೆ ಬ್ರೇಕ್ ಹಾಕಲು ಆರೋಗ್ಯ ಇಲಾಖೆ ಮುಂದಾಗಿದೆ. ಕೆಪಿಎಂಇ ಮುಖಾಂತರ ಅಂಗೀಕೃತವಾದ ಆಸ್ಪತ್ರೆಗಳು ಚಿಕಿತ್ಸಾ ದರ ಪಟ್ಟಿಯನ್ನ ಆಸ್ಪತ್ರೆಯ ಅವರಣದಲ್ಲಿ ಹಾಗೂ ಹೊರ ಭಾಗದಲ್ಲಿ ಅಳವಡಿಸಬೇಕು. ಯಾವ ಯಾವ ಚಿಕಿತ್ಸೆಗಳಿಗೆ ದರ ಎಷ್ಟು ಎಂಬ ದರ ನಿಗದಿಯ ಪಟ್ಟಿಯನ್ನ ಅಳವಡಿಸಬೇಕು ಎಂದು ಆರೋಗ್ಯ ಇಲಾಖೆ (Karnataka Health Department) ಆದೇಶ ಮಾಡಿದೆ.
ಹೌದು, ಕೆಪಿಎಂಇ ಮುಖಾಂತರ ಅಂಗೀಕೃತವಾದ ಖಾಸಗಿ ಆಸ್ಪತ್ರೆಗಳು ಚಿಕಿತ್ಸಾ ದರ ಪಟ್ಟಿ ಬೋರ್ಡ್ ಗಳನ್ನ ಆಸ್ಪತ್ರೆಗಳು ಹೊರಗೆ ಅಳವಡಿಸುವಂತೆ ಆರೋಗ್ಯ ಸಚಿವರು ಎಚ್ಚರಿಕೆ ನೀಡಿದ್ದಾರೆ. ಈಗಾಗಲೆ ಯಾವೆಲ್ಲ ಚಿಕಿತ್ಸೆಗೆ ಏನು ದರ ಅಂತಾ ನಿಗದಿ ಮಾಡಿರುವ ಪಟ್ಟಿಯನ್ನ ಆಸ್ಪತ್ರೆಯ ಅವರಣದಲ್ಲಿ ಸಾರ್ವಜನಿಕರಿಗೆ ತೊರುವ ರೀತಿಯಲ್ಲಿ ಹಾಕಬೇಕು ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ಆಸ್ಪತ್ರೆಗಳ ಹೊರ ಭಾಗದಲ್ಲಿ ದರ ಪಟ್ಟಿ ಅಳವಡಿಸಬೇಕು. ಇಲ್ಲದಿದ್ದರೆ ದರ ಪಟ್ಟಿ ಅಳವಡಿಸದ ಆಸ್ಪತ್ರೆಗಳ ಲೈಸೆನ್ಸ್ ರದ್ದು ಮಾಡುವ ಬಗ್ಗೆ ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ. ಈ ಮೂಲಕ ಖಾಸಗಿ ಆಸ್ಪತ್ರೆಗಳಿಗೆ ಶಾಕ್ ಕೊಟ್ಟಿದೆ.
ಇದನ್ನೂ ಓದಿ: ಮನೆ ಮನೆಗೆ ಬರಲಿದೆ ಔಷಧ ಪೆಟ್ಟಿಗೆ; 30 ವರ್ಷ ಮೇಲ್ಪಟ್ಟವರಿಗೆ ಗೃಹ ಆರೋಗ್ಯ ಯೋಜನೆ ಜಾರಿಗೆ ಸಿದ್ಧತೆ
ಒಟ್ನಲ್ಲಿ ಖಾಸಗಿ ಆಸ್ಪತ್ರೆ ಅಂದ್ರೆ ಜನ ಒಂದು ಕ್ಷಣ ಬೆಚ್ಚಿಬೀಳ್ತಾರೆ. ಟ್ರೀಟ್ಮೆಂಟ್ ಅಂತಾ ಹೋದ್ರೆ ಸಾಕು ಲಕ್ಷ ಲಕ್ಷ ಸುಲಿಗೆ ಮಾಡ್ತೀದ್ದು. ಹೀಗಾಗಿ ಆರೋಗ್ಯ ಇಲಾಖೆ ಸುಲಿಗೆಗೆ ಮುಂದಾದ ಖಾಸಗಿ ಆಸ್ಪತ್ರೆಗಳಿಗೆ ಶಾಕ್ ನೀಡಲು ಮುಂದಾಗಿದ್ದು ಚಿಕಿತ್ಸಾ ದರ ಪಟ್ಟಿ ಅಳವಡಿಸುವಂತೆ ಹೇಳಿದೆ. ಆದರೆ ಇದು ಎಷ್ಟರ ಮಟ್ಟಿಗೆ ಜಾರಿ ಯಾಗುತ್ತೆ ಅಂತಾ ಕಾದು ನೋಡಬೇಕಿದೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ