AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಷ್ಟ್ರೀಯ, ರಾಜ್ಯ ಹೆದ್ದಾರಿಯ 40 ಮೀ.‌ ಅಂತರದಲ್ಲಿ ಕಟ್ಟಡ ನಿರ್ಮಿಸುವಂತಿಲ್ಲ: ಸರ್ಕಾರದ ಸುತ್ತೋಲೆ ಎತ್ತಿಹಿಡಿದ ಕೋರ್ಟ್

Highways: ಸರ್ಕಾರ ಬಹಳ ಹಿಂದೆಯೇ ಈ ಬಗ್ಗೆ ಸುತ್ತೋಲೆ ಹೊರಡಿಸಿತ್ತು. ಕಟ್ಟಡ ರಹಿತ ವಲಯವಾಗಿ ಅಂತರ ಕಾಯ್ದುಕೊಳ್ಳಬೇಕು ಎಂದು ತಿಳಿಸಿತ್ತು. 1999 ರಲ್ಲಿ ಹೈಕೋರ್ಟ್ ವಿಭಾಗೀಯ ಪೀಠ ಈ ಬಗ್ಗೆ ಆದೇಶಿಸಿತ್ತು.

ರಾಷ್ಟ್ರೀಯ, ರಾಜ್ಯ ಹೆದ್ದಾರಿಯ 40 ಮೀ.‌ ಅಂತರದಲ್ಲಿ ಕಟ್ಟಡ ನಿರ್ಮಿಸುವಂತಿಲ್ಲ: ಸರ್ಕಾರದ ಸುತ್ತೋಲೆ ಎತ್ತಿಹಿಡಿದ ಕೋರ್ಟ್
ಕರ್ನಾಟಕ ಹೈಕೋರ್ಟ್
TV9 Web
| Updated By: ganapathi bhat|

Updated on:Aug 25, 2021 | 11:01 PM

Share

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಯಿಂದ 40 ಮೀಟರ್ ಅಂತರದಲ್ಲಿ ಕಟ್ಟಡ ನಿರ್ಮಿಸುವಂತಿಲ್ಲ ಎಂದು ಹೈಕೋರ್ಟ್ ವಿಭಾಗೀಯ ಪೀಠದಿಂದ ಆದೇಶ ಹೊರಡಿಸಲಾಗಿದೆ. ಅದರಂತೆ, ಸರ್ಕಾರದ ಸುತ್ತೋಲೆಯನ್ನು ಹೈಕೋರ್ಟ್ ಎತ್ತಿಹಿಡಿದಿದೆ. ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಯ 40 ಮೀಟರ್ ಒಳಗೆ ಯಾವುದೇ ಕಟ್ಟಡ ನಿರ್ಮಿಸುವಂತಿಲ್ಲ. ಅಂದರೆ, ಹೆದ್ದಾರಿಯ ಮಧ್ಯಭಾಗದಿಂದ 40 ಮೀಟರ್ ಅಂತರದಲ್ಲಿ ಕಟ್ಟಡ ನಿರ್ಮಾಣ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ.

ಜಿಲ್ಲಾ ಹೆದ್ದಾರಿಯ 25 ಮೀಟರ್ ಒಳಗೆ ಕಟ್ಟಡ ನಿರ್ಮಿಸುವಂತಿಲ್ಲ ಎಂದೂ ಇಲ್ಲಿ ಹೇಳಲಾಗಿದೆ. ಸರ್ಕಾರ ಬಹಳ ಹಿಂದೆಯೇ ಈ ಬಗ್ಗೆ ಸುತ್ತೋಲೆ ಹೊರಡಿಸಿತ್ತು. ಕಟ್ಟಡ ರಹಿತ ವಲಯವಾಗಿ ಅಂತರ ಕಾಯ್ದುಕೊಳ್ಳಬೇಕು ಎಂದು ತಿಳಿಸಿತ್ತು. 1999 ರಲ್ಲಿ ಹೈಕೋರ್ಟ್ ವಿಭಾಗೀಯ ಪೀಠ ಈ ಬಗ್ಗೆ ಆದೇಶಿಸಿತ್ತು.

ಉಡುಪಿ ಜಿಲ್ಲೆಯ ಕಾಪುವಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಟ್ಟಡ ನಿರ್ಮಾಣ ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿತ್ತು. ಬಳಿಕ, 60 ದಿನಗಳಲ್ಲಿ ಅತಿಕ್ರಮಿತ ಕಟ್ಟಡ ತೆರವಿಗೆ ಆದೇಶ ಹೊರಡಿಸಲಾಗಿತ್ತು. 4 ಪ್ರತಿವಾದಿಗಳ ಅತಿಕ್ರಮಿತ ಕಟ್ಟಡ ತೆರವಿಗೆ ಹೈಕೋರ್ಟ್ ಆದೇಶ ನೀಡಿತ್ತು. ಕಟ್ಟಡ‌ ನಿರ್ಮಾಣಕ್ಕೆ ಅನುಮತಿ ನೀಡಿದ ಬಗ್ಗೆಯೂ ವಿಚಾರಣೆ ನಡೆಸಲಾಗಿತ್ತು. 15 ದಿನಗಳಲ್ಲಿ ಸತ್ಯ ಶೋಧನೆ ನಡೆಸಿ ಕ್ರಮ ಕೈಗೊಳ್ಳಲು ಸೂಚನೆ ಕೊಡಲಾಗಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚನೆ ನೀಡಲಾಗಿದ್ದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ಬಿಲ್ಡಿಂಗ್ ಲೈನ್ ಕಾಯ್ದುಕೊಳ್ಳಲು ಹೈಕೋರ್ಟ್ ಸೂಚನೆ ಕೊಟ್ಟಿದೆ.

ಧಾರವಾಡ: 2.50 ಕೋಟಿ ಚೆಕ್ ವಂಚನೆ ಪ್ರಕರಣ; ಜಾಮೀನು ವಜಾ ಬೇರೆಯವರ ಚೆಕ್ ಮೂಲಕ ಹಣ ಡ್ರಾ ಮಾಡಲು ಯತ್ನ ಮಾಡಿದ ಪ್ರಕರಣದಲ್ಲಿ ಸಿಕ್ಕಿ ಬಿದ್ದವರ ಜಾಮೀನು ಅರ್ಜಿ ತಿರಸ್ಕಾರಗೊಂಡಿದೆ. ಕಳೆದ ವಾರ ಧಾರವಾಡದಲ್ಲಿ ನಡೆದಿದ್ದ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಜಾಮೀನು ಅರ್ಜಿ ತಿರಸ್ಕಾರವಾಗಿದೆ. HDFC ಬ್ಯಾಂಕ್‌ನಲ್ಲಿ 2.50 ಕೋಟಿ ಹಣ ಡ್ರಾಗೆ ಯತ್ನ ಮಾಡಲಾಗಿತ್ತು. ಹಣ ಡ್ರಾ ಮಾಡಿಸುವುದಕ್ಕೆ ಬಂದಿದ್ದಾಗ ವಂಚಕ ಸಿಕ್ಕಿಬಿದ್ದಿದ್ದ. ಹೆಚ್​ಡಿಎಫ್​ಸಿ ಬ್ಯಾಂಕ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ, ಬ್ಯಾಂಕ್‌ನಲ್ಲಿ ಯುವರಾಜ್ ಬಿರಾದಾರ್ ಬಂಧಿಸಲಾಗಿತ್ತು. ಉಳಿದ 8 ಜನರನ್ನು ಧಾರವಾಡ ಪೊಲೀಸರು ಬಂಧಿಸಿದ್ದರು.

ಪಂಜಾಬ್ ಮೂಲದ ಕಂಪನಿಯೊಂದಕ್ಕೆ ಸೇರಿದ್ದ ಚೆಕ್​ನ್ನು ಕಂಪನಿಯವರು ಕಳೆದುಕೊಂಡಿದ್ದರು. 2.50 ಕೋಟಿ ಚೆಕ್ ಕಳೆದುಕೊಂಡಿದ್ದರು. ಅದೇ ಚೆಕ್ ಬಳಸಿ ಹಣ ಡ್ರಾ ಮಾಡಲು ಯತ್ನಿಸಿದ್ದರು. ಆ ವೇಳೆ ಸಿಕ್ಕಿಬಿದ್ದಿದ್ದರು. ಬಂಧನ ಬಳಿಕ ವಂಚಕರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಅವರ ಜಾಮೀನು ಅರ್ಜಿಯನ್ನು ಜೆಎಂಎಫ್​ಸಿ ಕೋರ್ಟ್​ ತಿರಸ್ಕರಿಸಿದೆ. ಧಾರವಾಡದ 2ನೇ ಜೆಎಂಎಫ್‌ಸಿ ನ್ಯಾಯಾಲಯ ತೀರ್ಪು ನೀಡಿದೆ.

ಇದನ್ನೂ ಓದಿ: ಕೋಳಿ ಫಾರಂ​ಗೆ ಅಕ್ರಮ ವಿದ್ಯುತ್ ಸಂಪರ್ಕ; 1 ವರ್ಷ ಜೈಲು, 2.94 ಲಕ್ಷ ರೂಪಾಯಿ ದಂಡ ವಿಧಿಸಿದ ಕೋರ್ಟ್

Pegasus row ‘ನೀವು ಕಾಯಬೇಕು ಎಂದು ನಾವು ನಿರೀಕ್ಷಿಸುತ್ತೇವೆ’: ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸುಪ್ರೀಂಕೋರ್ಟ್

Published On - 10:22 pm, Wed, 25 August 21