
ಬೆಂಗಳೂರು (ಜುಲೈ 06): ಮಂಗಳೂರಿನ (Mangaluru) ಖಾಸಗಿ ಶಾಲೆಯಲ್ಲಿ 6 ವರ್ಷದ ಬಾಲಕಿಗೆ ಹೊಡೆದ ಶಿಕ್ಷಕಿ (Teacher) ಮೇಲೆ ಪ್ರಕರಣ ದಾಖಲಾಗಿದ್ದು, ಇದೀಗ ಈ ಪ್ರಕರಣಕ್ಕೆ ತಡೆ ಕೋರಿ ಶಿಕ್ಷಕಿ, ಹೈಕೋರ್ಟ್ಗೆ (Karnataka High Court) ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಹೌದು…ಮಂಗಳೂರಿನ ಖಾಸಗಿ ಶಾಲೆಯಲ್ಲಿ UKG ಓದುತ್ತಿದ್ದ ಬಾಲಕಿಗೆ ಶಿಕ್ಷಕಿ ಹೊಡೆದ ಪ್ರಕರಣಕ್ಕೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ. ಅಲ್ಲದೇ ಯಾವುದೇ ಶಿಕ್ಷಕರು ಹೊಡೆದು ಕಲಿಸುವ ಅಗತ್ಯವಿಲ್ಲ ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿದೆ.
ಮಂಗಳೂರಿನ ಖಾಸಗಿ ಶಾಲೆಯಲ್ಲಿ UKG ಓದುತ್ತಿದ್ದ ಬಾಲಕಿಗೆ ಹೊಡೆಯಲಾಗಿದೆ ಎಂದು ಶಿಕ್ಷಕಿ ಆಶಾ ಕ್ರಾಸ್ತಾ ವಿರುದ್ಧ ದೂರು ದಾಖಲಿಸಲಾಗಿದ್ದು, ಎಚ್ಚರಿಕೆ ಹೊರತಾಗಿಯೂ ಕೋಲಿನಿಂದ ಹೊಡೆದಿದ್ದಾರೆಂದು ಬಾಲಕಿ ಪೋಷಕರು ದೂರಿನಲ್ಲಿ ಆರೋಪಿಸಿದ್ದಾರೆ. ಇನ್ನು ಶಿಕ್ಷಕಿ ಆಶಾ ಕ್ರಾಸ್ತಾ ಹೈಕೋರ್ಟ್ ಮೆಟ್ಟಿಲೇರಿದ್ದು, ಪ್ರಕರಣಕ್ಕೆ ತಡೆ ಕೋರಿ ಮನವಿ ಮಾಡಿದ್ದಾರೆ. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ.ಎಂ.ನಾಗಪ್ರಸನ್ನರಿದ್ದ ಹೈಕೋರ್ಟ್ ಪೀಠ, ಯಾವುದೇ ಶಿಕ್ಷಕರು ಹೊಡೆದು ಕಲಿಸುವ ಅಗತ್ಯವಿಲ್ಲ ಅಭಿಪ್ರಾಯಪಟ್ಟು, ದ ಕೇಸ್ಗೆ ತಡೆ ನೀಡಲು ನಿರಾಕರಿಸಿದೆ. ಇದರಿಂದ ಶಿಕ್ಷಕಿಗೆ ಹಿನ್ನಡೆಯಾಗಿದೆ.
ಸ್ನೇಹಿತೆ ಮನೆಗೆ ಭೇಟಿ ನೀಡಿದಾಗ ನಾಯಿ ಕಚ್ಚಿದ್ದ ಪ್ರಕರಣವನ್ನು ರದ್ದು ಮಾಡಲು ಹೈಕೋರ್ಟ್ ನಿರಾಕರಿಸಿದೆ. ಸಾಕು ನಾಯಿಯನ್ನು ಕಟ್ಟಿಹಾಕದೇ ಬಿಟ್ಟಿದ್ದು ಸಾಕಿದವರ ಬೇಜವಾಬ್ದಾರಿ. ಬೇಜವಾಬ್ದಾರಿಯಿಂದಾದ ಘಟನೆಗೆ ಅವರೇ ಹೊಣೆ ಹೊರಬೇಕು ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯ ಪಟ್ಟಿದ್ದು, ನಾಯಿ ಮಾಲೀಕರ ವಿರುದ್ಧದ ಕೇಸ್ ರದ್ದಿಗೆ ಹೈಕೋರ್ಟ್ ನಿರಾಕರಿಸಿದೆ.
ಸಾಕು ನಾಯಿ ಮಿಕ್ಕಿ, ಎಲಾಮ್ ರೇಜಾ ಎಂಬುವರ ಮುಖಕ್ಕೆ ಕಚ್ಚಿತ್ತು. ಈ ಸಂಬಂಧ ಕಾರ್ತಿಕ್, ಲಲಿತಾ ವಿರುದ್ಧ ರೇಜಾ ಎಫ್ಐಆರ್ ದಾಖಲಿಸಿದ್ದರು. ಈ ಪ್ರಕರಣ ರದ್ದು ಕೋರಿ ನಾಯಿ ಮಾಲೀಕ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.