ಕೇಸ್ ಗೆಲ್ಲುವ ಬದಲು ತಾಯಿಯ ಹೃದಯ ಗೆಲ್ಲುವಂತೆ ಹೈಕೋರ್ಟ್​ನಿಂದ ಮಗಳಿಗೆ ಬುದ್ದಿಮಾತು

ನನ್ನ ಮಗಳು ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ. ಮೂಲಭೂತ ಅವಶ್ಯಕತೆಗಳನ್ನು ಪೂರೈಸುತ್ತಿಲ್ಲ. ನನಗೆ ಗಂಡು ಮಕ್ಕಳಿಲ್ಲ., ಅವಿದ್ಯಾವಂತೆ, ಇದನ್ನೇ ದುರುಪಯೋಗಪಡಿಸಿಕೊಂಡು ಮಗಳು ನನ್ನ ಆಸ್ತಿಯನ್ನು ಮೋಸದಿಂದ ದಾನಪತ್ರದ ಮೂಲಕ ಬರೆಸಿಕೊಂಡಿದ್ದಾಳೆ ಎಂದು ತಾಯಿಯೋರ್ವರು ಅಳಲು ತೋಡಿಕೊಂಡಿದ್ದರು.

ಕೇಸ್ ಗೆಲ್ಲುವ ಬದಲು ತಾಯಿಯ ಹೃದಯ ಗೆಲ್ಲುವಂತೆ ಹೈಕೋರ್ಟ್​ನಿಂದ ಮಗಳಿಗೆ ಬುದ್ದಿಮಾತು
ಕರ್ನಾಟಕ ಹೈಕೋರ್ಟ್
Follow us
TV9 Web
| Updated By: guruganesh bhat

Updated on: Aug 24, 2021 | 5:22 PM

‘ಮಕ್ಕಳು ತಾಯಿಯನ್ನು ಕೆಲವು ಕಾರಣಗಳಿಗೆ ವಿರೋಧಿಸಬಹುದು. ಆದರೆ ಯಾವ ತಾಯಿಯೂ ಮಕ್ಕಳನ್ನು ವಿರೋಧಿಸುವುದಿಲ್ಲ. ಮೊದಲು ತಾಯಿಯ ಪಾದಕ್ಕೆ ನಮಸ್ಕರಿಸಿ ಆಕೆಯ ಮುಖ ನೋಡು. ತಾಯಿಯೇ ನಿವೇಶನವನ್ನು ಮತ್ತೆ ನಿನಗೆ ದಾನ ನೀಡಲು ಮನಸ್ಸು ಮಾಡಬಹುದು’ ಈ ಬುದ್ಧಿವಾದವನ್ನು ಬೇರೆ ಯಾರೋ ಹೇಳಿದರೆ ಸುದ್ದಿಯಾಗುತ್ತಿರಲಿಲ್ಲ. ಆದರೆ ಈ ಬುದ್ಧಿವಾದ ಹೇಳಿದ್ದು ಕರ್ನಾಟಕ ಹೈಕೋರ್ಟ್. ಆಸ್ತಿಗಾಗಿ 70 ವರ್ಷದ ತಾಯಿ ವಿರುದ್ಧ ಕಾನೂನು ಹೋರಾಟ ನಡೆಸಿದ್ದ ಮಗಳಿಗೆ ಹೈಕೋರ್ಟ್ ಹೀಗೆ ಬುದ್ದಿವಾದ ಹೇಳಿದೆ. ಮೊದಲು ತಾಯಿ ಹೃದಯ ಗೆಲ್ಲು, ನೀವು ದೇವರನ್ನು ನೋಡಿಲ್ಲ. ನಿನಗೆ ಜನ್ಮ ನೀಡಿರುವ ತಾಯಿಯೇ ನಿನಗೆ ದೇವರು. ಈ ವಿಚಾರದಲ್ಲಿ ನಿನ್ನ ಪರವಾಗಿ ನಿಲ್ಲಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

2015 ರಲ್ಲಿ ಜಯಮ್ಮ ಎಂಬ ಮಹಿಳೆ ತನ್ನ ಮಗಳಾದ ಶಾಂತಮ್ಮ ಎಂಬುವವರಿಗೆ ಕುಮಾರಸ್ವಾಮಿ ಬಡಾವಣೆಯ 600 ಅಡಿ ಚದರಡಿ ನಿವೇಶನವನ್ನು ದಾನಪತ್ರದ ಮೂಲಕ ನೀಡಿದ್ದರು. ಆದರೆ ನಿವೇಶನ ಪಡೆದುಕೊಂಡ ನಂತರ ನನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಈಮುನ್ನ ಚೆನ್ನಾಗಿ ನೋಡಿಕೊಳ್ಳುವುದಾಗಿ ನೀಡಿದ್ದ ಭರವಸೆಯನ್ನು ಹುಸಿಗೊಳಿಸಿದ್ದಾಳೆ ಎಂದು ಜಯಮ್ಮ ದೂರಿದ್ದರು. ತಮ್ಮ ನೋವಿಗೆ ಪರಿಹಾರ ಒದಗಿಸುವಂತೆ ಬೆಂಗಳೂರು ದಕ್ಷಿಣ ಸಹಾಯಕ ಆಯುಕ್ತರು ಅಧ್ಯಕ್ಷರಾಗಿರುವ ಹಿರಿಯ ನಾಗರೀಕರ ಕಲ್ಯಾಣ ನ್ಯಾಯಮಂಡಳಿ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾಯಮಂಡಳಿ ನವೆಂಬರ್ 28, 2018 ರಂದು ತಾಯಿ ಮಗಳಿಗೆ ನೀಡಿದ್ದ ದಾನಪತ್ರವನ್ನು ರದ್ದುಪಡಿಸಿತ್ತು. ಇದನ್ನು ಪ್ರಶ್ನಿಸಿ ಮಗಳು ಹೈಕೋರ್ಟ್ ಮೆಟ್ಟಿಲೇರಿದ್ದಾರು.

ತಾಯಿಗೆ ಪ್ರತಿ ತಿಂಗಳು 30 ಸಾವಿರಕ್ಕೂ ಹೆಚ್ಚು ಬಾಡಿಗೆ ಬರುತ್ತಿದೆ. ಅರಿಶಿನ ಕುಂಕುಮಕ್ಕೆಂದು ಈ ಆಸ್ತಿಯನ್ನು ದಾನಪತ್ರವಾಗಿ ತಾಯಿ ನನಗೆ ನೀಡಿದ್ದಾರೆ. ದಾನಕ್ಕೆ ಪ್ರತಿಯಾಗಿ ಆಕೆಗೆ ಸೌಕರ್ಯ ಕಲ್ಪಿಸಬೇಕೆಂದು ದಾನಪತ್ರದಲ್ಲಿ ಷರತ್ತು ವಿಧಿಸಿಲ್ಲ. ಈ ಬಗ್ಗೆ ವಿವರವಾಗಿ ಆಕ್ಷೇಪಣೆ ಸಲ್ಲಿಸಿದ್ದರೂ ಹಿರಿಯ ನಾಗರಿಕರ ಕಲ್ಯಾಣ ನ್ಯಾಯಮಂಡಳಿ ಪರಿಗಣಿಸಿಲ್ಲ. ಹೀಗಾಗಿ ನ್ಯಾಯಮಂಡಳಿ ಆದೇಶ ರದ್ದುಪಡಿಸಬೇಕು. ದಾನಪತ್ರವನ್ನು ಊರ್ಜಿತಗೊಳಿಸಬೇಕು ಎಂದು ಮನವಿ ಮಾಡುತ್ತೇನೆ ಎಂದು ಮಗಳು ಶಾಂತಮ್ಮ ಮೇಲ್ಮನವಿಯಲ್ಲಿ ತಿಳಿಸಿದ್ದರು.

ಮಗಳ ವಿರುದ್ಧ ತಾಯಿಯ ವಾದ ನನ್ನ ಮಗಳು ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ. ಮೂಲಭೂತ ಅವಶ್ಯಕತೆಗಳನ್ನು ಪೂರೈಸುತ್ತಿಲ್ಲ. ನನಗೆ ಗಂಡು ಮಕ್ಕಳಿಲ್ಲ., ಅವಿದ್ಯಾವಂತೆ, ಇದನ್ನೇ ದುರುಪಯೋಗಪಡಿಸಿಕೊಂಡು ಮಗಳು ನನ್ನ ಆಸ್ತಿಯನ್ನು ಮೋಸದಿಂದ ದಾನಪತ್ರದ ಮೂಲಕ ಬರೆಸಿಕೊಂಡಿದ್ದಾಳೆ. ಮಗಳು ನಿವೇಶನದಲ್ಲಿರುವ ಮನೆಯಲ್ಲಿ ವಾಸವಿಲ್ಲ, ಬಾಡಿಗೆ ನೀಡಿ ಅದನ್ನು ಬಳಸಿಕೊಳ್ಳುತ್ತಿದ್ದಾಳೆ. ಮೋಸದಿಂದ ದಾನಪತ್ರ ಬರೆಸಿಕೊಂಡು ನಂತರ ನನ್ನನ್ನು ನಿರ್ಲಕ್ಷಿಸಿರೋದ್ರಿಂದ ದಾನಪತ್ರ ರದ್ದುಪಡಿಸಬೇಕು ಎಂದು ತಾಯಿ ಜಯಮ್ಮ ಮನವಿ ಮಾಡಿದ್ದರು. ತಾಯಿ ವಾದಕ್ಕೆ ಹೈಕೋರ್ಟ್ ಏಕಸದಸ್ಯ ಪೀಠ ಮನ್ನಣೆ ನೀಡಿತ್ತು. ಹೈಕೋರ್ಟ್ ಏಕಸದಸ್ಯ ಪೀಠ ಮಗಳ ವಾದ ತಳ್ಳಿಹಾಕಿದ್ದಲ್ಲದೇ ದಾನಪತ್ರ ರದ್ದುಪಡಿಸಿದ ನ್ಯಾಯಮಂಡಳಿ ಆದೇಶವನ್ನು ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಮಗಳು ಹೈಕೋರ್ಟ್ ವಿಭಾಗೀಯ ಪೀಠದ ಮೆಟ್ಟಿಲೇರಿದ್ದಳು. ಆಗ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಹಾಗೂ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ರವರಿದ್ದ ವಿಭಾಗೀಯ ಪೀಠ ತಾಯಿಯೇ ಪ್ರತ್ಯಕ್ಷ ದೇವರು, ಆಸ್ತಿಗಾಗಿ ಹೋರಾಟ ಮಾಡುವ ಬದಲು ತಾಯಿಯ ಹೃದಯ ಗೆಲ್ಲುವಂತೆ ಮಗಳಿಗೆ ಬುದ್ದಿವಾದ ಹೇಳಿದೆ.

ಇದನ್ನೂ ಓದಿ: 

TV9 Kannada Exclusive: ಅಫ್ಘಾನಿಸ್ತಾನದಲ್ಲಿಯೂ ಕೊವಿಡ್ ಇದೆ, ನಿಮಗೆ ನೆನಪಿದೆಯೇ?

Protect Afghan Women : ಅಫ್ಘಾನಿಸ್ತಾನದ ಪುರುಷರನ್ನು ಆ ನೆಲದ ಮಹಿಳೆಯರು ಏನೆಂದು ನೆನಪಿಟ್ಟುಕೊಳ್ಳುವರು?

(Karnataka High Court says to a daughter Instead of winning the case you have to win mothers heart)

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ