Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಎಸ್​ಐ ನೇಮಕಾತಿ ಹಗರಣ: ಮರುಪರೀಕ್ಷೆ ಕುರಿತು ಇಂದು ತೀರ್ಪು, ಅಭ್ಯರ್ಥಿಗಳ ಚಿತ್ತ ಹೈಕೋರ್ಟ್​ನತ್ತ

PSI recruitment scam verdict: ಪಿಎಸ್ಐ ನೇಮಕಕ್ಕೆ‌ ಮರುಪರೀಕ್ಷೆ ಸಂಬಂಧ ಇಂದು(ನವೆಂಬರ್ 10) ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಕಟಿಸಲಿದೆ. ಹೀಗಾಗಿ ಪಿಎಸ್​ಐ ಆಗಿ ಆಯ್ಕೆಯಾಗಿದ್ದ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ಪಿಎಸ್​ಐ ನೇಮಕಾತಿ ಹಗರಣ: ಮರುಪರೀಕ್ಷೆ ಕುರಿತು ಇಂದು ತೀರ್ಪು, ಅಭ್ಯರ್ಥಿಗಳ ಚಿತ್ತ ಹೈಕೋರ್ಟ್​ನತ್ತ
ಕರ್ನಾಟಕ ಹೈಕೋರ್ಟ್
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Nov 10, 2023 | 8:13 AM

ಬೆಂಗಳೂರು, (ನವೆಂಬರ್ 10): ಪೊಲೀಸ್ ಸಬ್ ಇನ್ಸ್​ಪೆಕ್ಟರ್ ಆಯ್ಕೆಯಲ್ಲಿ ಅಕ್ರಮ ಪ್ರಕರಣ(PSI recruitment scam )ಸಾಕಷ್ಟು ಸದ್ದು ಮಾಡಿತ್ತು. ಪಿಎಸ್ಐ ನೇಮಕಕ್ಕೆ‌ ಮರುಪರೀಕ್ಷೆ ಸಂಬಂಧ ಇಂದು(ನವೆಂಬರ್ 10) ಕರ್ನಾಟಕ ಹೈಕೋರ್ಟ್ (Karnataka high Court) ತೀರ್ಪು ಪ್ರಕಟಿಸಲಿದೆ. ಆಯ್ಕೆಪಟ್ಟಿ ರದ್ದುಪಡಿಸಿ ಹೊಸ ಪರೀಕ್ಷೆಗೆ ಸರ್ಕಾರ ನಿರ್ಧರಿಸಿತ್ತು. ವಿಚಾರಣೆಯನ್ನು ಪೂರ್ಣಗೊಳಿಸಿರುವ ಹೈಕೋರ್ಟ್​ ಇಂದು ತೀರ್ಪು ಪ್ರಕಟಿಸಲಿದ್ದು, ಪಿಎಸ್​ಐ ಆಗಿ ಆಯ್ಕೆಯಾಗಿದ್ದ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಚಿತ್ತ ಹೈಕೋರ್ಟ್​ನತ್ತ ನೆಟ್ಟಿದೆ.

ಸರ್ಕಾರದ ಆದೇಶ ರದ್ದು ಕೋರಿ ಎನ್ ವಿ ಚಂದನ್ ಸೇರಿದಂತೆ ಪಿಎಎಸ್​ಐ ಆಯ್ಕೆ ಪಟ್ಟಿಯಲ್ಲಿ ಹೆಸರುದ್ದ 100ಕ್ಕೂ ಅಧಿಕ ಅಭ್ಯರ್ಥಿಗಳು ಸಲ್ಲಿಸಿರುವ ತಕರಾರು ಅರ್ಜಿಗಳ ವಿಚಾರಣೆಯನ್ನು 2023ರ ಅ.26ರಂದು ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಲಾಗಿದೆ. ನ್ಯಾಯಮೂರ್ತಿಗಳಾದ ಪಿಎಸ್ ದಿನೇಶ್ ಕುಮಾರ್ ಅವರ ನೇತೃತ್ವದ ವಿಭಾಗೀಯ ಪೀಠ ಇಂದು ಮಧ್ಯಾಹ್ನ ತೀರ್ಪು ನೀಡಲಿದೆ.

ಪಿಎಸ್​ಐ ನೇಮಕಾತಿಯಲ್ಲಿ ಅಕ್ರಮ ನಡೆದ ಹಿನ್ನೆಲೆಯಲ್ಲಿ ಲಿಖಿತ ಪರೀಕ್ಷೆ ರದ್ದುಪಡಿಸಿ ಮರುಪರೀಕ್ಷೆ ನಡೆಸುವುದಾಗಿ 2022 ಏ.29ರಂದು ಅಂದಿನ ಬಿಜೆಪಿ ಸರ್ಕಾರ ಆದೇಶಸಿತ್ತು. ಇದಕ್ಕೆ ಪಿಎಸ್​ಐ ಆಗಿ ಆಯ್ಕೆಯಾಗಿದ್ದ ಅಭ್ಯರ್ಥಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಕಳಂಕಿತ ಮತ್ತು ಕಳಂಕಿತರಹಿತ ಅಭ್ಯರ್ಥಿಗಳನ್ನು ಪ್ರತ್ಯೇಕಿಸಿ ನೇಮಕಾತಿ ಆದೇಶ ಹೊರಡಿಸುವಂತೆ ಆಗ್ರಹಿಸಿದ್ದರು. ಬಳಿಕ ಸರ್ಕಾರ ಆದೇಶ ರದ್ದು ಕೋರಿ ಆಯ್ಕೆಯಾಗಿದ್ದ ಅಭ್ಯರ್ಥಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಗೆ(ಕೆಎಟಿ) ಅರ್ಜಿ ಸಲ್ಲಿಸಿದ್ದರು. ಆದ್ರ, ಅರ್ಜಿಯನ್ನು 2022ರ ಜುಲೈ 19ರಂದು ಕೆಎಟಿ ವಜಾ ಮಾಡಿತ್ತು. ಇದರಿಂದ ಅಭ್ಯರ್ಥಿಗಳು ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಪಿಎಸ್​ಐ ನೇಮಕಾತಿಗೆ ಹೊಸದಾಗಿ ಲಿಖಿತ ಪರೀಕ್ಷೆ ನಡೆಸುವ ಸರ್ಕಾರದ ಆದೇಶಕ್ಕೆ 2022, ಸೆಪ್ಟೆಂಬರ್ 27ರಂದು ತಡೆ ನೀಡಿತ್ತು. ಬಳಿಕ ಹೈಕೋರ್ಟ್ ತಡೆಯಾಜ್ಞೆ ವಿಸ್ತರಣೆ ಮಾಡುತ್ತಾ ಬಂದಿದ್ದು, 2023, ಅ.26ರಂದು ಹೈಕೋರ್ಟ್ ವಿಭಾಗೀಯ ಪೀಠವಯ ವಿಚಾರನೆ ಪೂರ್ಣಗೊಳಿಸಿ ಇಂದಿಗೆ ಅಂದರೆ ನವೆಂಬರ್ 10ಕ್ಕೆ ತೀರ್ಪು ಕಾಯ್ದಿರಿಸಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್  ಮಾಡಿ