ಮದ್ಯ ಬೆಲೆ ಏರಿಕೆ ಬೆನ್ನಲ್ಲೇ ಎಣ್ಣೆ ಮಾರಾಟಗಾರರಿಗೂ ಶಾಕ್​ ನೀಡಿದ ಸರ್ಕಾರ: ಲೈಸೆನ್ಸ್ ಶುಲ್ಕ ಹೆಚ್ಚಳ

ಕರ್ನಾಟಕ ಸರ್ಕಾರವು ಮದ್ಯ ಮಾರಾಟ ಮಳಿಗೆಗಳ ಲೈಸೆನ್ಸ್ ಶುಲ್ಕವನ್ನು ದ್ವಿಗುಣಗೊಳಿಸಿದೆ. ಸರ್ಕಾರದ ಈ ನಿರ್ಧಾರ ಅವೈಜ್ಞಾನಿಕವಾಗಿದೆ. ಇದರಿಂದ ನಮಗೆ ಸಾಕಷ್ಟು ಹೊರೆಯಾಗಲಿದೆ. ಶುಲ್ಕ ಹೆಚ್ಚಳದಿಂದ ನಾವು ಮಳಿಗೆಗಳನ್ನು ನಡೆಸವುದು ಕಷ್ಟವಾಗುತ್ತದೆ ಎಂದು ಮದ್ಯ ಮಾರಾಟ ಮಳಿಗೆಗಳ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗಿದ್ದರೆ ಸರ್ಕಾರ ಎಷ್ಟು ಹೆಚ್ಚಳ ಮಾಡಿದೆ? ಇಲ್ಲಿದೆ ಮಾಹಿತಿ

ಮದ್ಯ ಬೆಲೆ ಏರಿಕೆ ಬೆನ್ನಲ್ಲೇ ಎಣ್ಣೆ ಮಾರಾಟಗಾರರಿಗೂ ಶಾಕ್​ ನೀಡಿದ ಸರ್ಕಾರ: ಲೈಸೆನ್ಸ್ ಶುಲ್ಕ ಹೆಚ್ಚಳ
ಮದ್ಯ ಮಾರಾಟ ಮಳಿಗೆ
Updated By: ವಿವೇಕ ಬಿರಾದಾರ

Updated on: May 17, 2025 | 2:37 PM

ಬೆಂಗಳೂರು, ಮೇ 17: ರಾಜ್ಯ ಕಾಂಗ್ರೆಸ್​ ಸರ್ಕಾರ (Karnataka Government) ಮೇಲಿಂದ ಮೇಲೆ ಬೆಲೆಗಳನ್ನು ಏರಿಕೆ ಮಾಡುತ್ತಲೇ ಇದೆ. ಸತತ ದರ ಏರಿಕೆಯಿಂದ ಸಾರ್ವಜನಿಕರು ಹೈರಾಣಾಗಿದ್ದಾರೆ. ರಾಜ್ಯ ಸರ್ಕಾರ ಇತ್ತೀಚಿಗೆ ಬಿಯರ್, ಐಎಂಎಲ್ ಬೆಲೆ ಏರಿಕೆ ಮಾಡಿತ್ತು. ಇದರ ಬೆನ್ನಲ್ಲೆ ರಾಜ್ಯ ಸರ್ಕಾರ ಮದ್ಯ ಮಾರಾಟಗಾರರಿಗೂ ಶಾಕ್ ನೀಡಿದೆ. ಮದ್ಯ ಮಾರಾಟ ಮಳಿಗೆಗಳ ಲೈಸೆನ್ಸ್ ಶುಲ್ಕ (Liquor Shops License Fee) ದುಪ್ಪಟ್ಟು ಮಾಡಿದೆ. ಬಾರ್ ಆ್ಯಂಡ್ ರೆಸ್ಟೋರೆಂಟ್​ಗಳ ವಾರ್ಷಿಕ ಲೈಸೆನ್ಸ್ ಶುಲ್ಕ ದಿಢೀರ್ ಏರಿಕೆ ಮಾಡಿದೆ. ಲೈಸೆನ್ಸ್ ಶುಲ್ಕ ದುಪ್ಪಟ್ಟು ಹೆಚ್ಚಳ ಮಾಡಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಶುಲ್ಕ, ಸೆಸ್ ಸೇರಿ ಬರೋಬ್ಬರಿ ಲೈಸೆನ್ಸ್ ಶುಲ್ಕ ಶೇ. 100 ರಷ್ಟು ಆಗಿದೆ.

ಹಾಗಿದ್ದರೆ ಯಾವುದರ ಲೈಸೆನ್ಸ್ ದರ ಎಷ್ಟಿದೆ? ಎಷ್ಟಾಗಲಿದೆ?

  • CL9 ಬಾರ್ ಅಂಡ್‌ ರೆಸ್ಟೋರೆಂಟ್

ಮೊದಲು ಲೈಸೆನ್ಸ್ ಶುಲ್ಕ 8,62,000 ರೂ.

ಈಗ ಶುಲ್ಕ 15,00,000 ರೂ. ಆಗಿದೆ.

ಇದನ್ನೂ ಓದಿ
ವಿದ್ಯುತ್ ಸಮಸ್ಯೆ ಬಗ್ಗೆ ಬೆಸ್ಕಾಂಗೆ ವಾಟ್ಸ್​ಆ್ಯಪ್​ನಲ್ಲೇ ದೂರು ನೀಡಿ!
ಮದ್ಯಪ್ರಿಯರಿಗೆ ಬಿಗ್ ಶಾಕ್: ಬಜೆಟ್​ಗೂ ಮೊದಲೇ ಬಿಯರ್ ದರ ಏರಿಕೆ..!
Beer Price Hike: ಬಿಯರ್ ಪ್ರಿಯರಿಗೆ ಕಹಿ ಸುದ್ದಿ: ಜ. 20ರಿಂದಲೇ ದರ ಏರಿಕೆ
ಇಳಿಕೆಯಾಗಲಿದೆ ಪ್ರೀಮಿಯಂ ಸ್ಕಾಚ್ ದರ, ದುಬಾರಿಯಾಗಲಿದೆ ಬಡವರ ಮದ್ಯ

ಇದರಲ್ಲಿ ಸೆಸ್ 2,25,000 ರೂ. ಇದೆ

ಒಟ್ಟು 17,25,000 ರೂ. ಆಗಿದೆ

  • CL 6 A (ಸ್ಟಾರ್​ ಹೊಟೇಲ್​ಗಳಲ್ಲಿ ಮದ್ಯ ಮಾರಟಕ್ಕಾಗಿ​)

ಮೊದಲು ಲೈಸೆನ್ಸ್ ಶುಲ್ಕ 9,75,000 ರೂ.

ಈಗಿನ ಲೈಸೆನ್ಸ್ ಶುಲ್ಕ – 20 ಲಕ್ಷ ರೂ.

ಸೆಸ್- 3 ಲಕ್ಷ ರೂ.

ಒಟ್ಟು-23 ಲಕ್ಷ ರೂ.

  • CL 7 (ಹೋಟೆಲ್​ ಮತ್ತು ವಸತಿ ನಿಲಯಗಳಲ್ಲಿ ಮದ್ಯ ಮಾರಟಕ್ಕಾಗಿ)

ಮೊದಲು ಲೈಸೆನ್ಸ್ ಶುಲ್ಕ- 9,75,000 ರೂ.

ಈಗಿನ ಶುಲ್ಕ- 17,00,000 ರೂ.

ಸೆಸ್- 2,55,000 ರೂ.

ಒಟ್ಟು – 19,550,00 ರೂ.

ಇದನ್ನೂ ಓದಿ: ಮದ್ಯಪ್ರಿಯರಿಗೆ 3ನೇ ಬಾರಿ ದರ ಏರಿಕೆ ಶಾಕ್: ಯಾವ ಎಣ್ಣೆ ಎಷ್ಟು ಹೆಚ್ಚಳ?

“ಸರ್ಕಾರ ಈಗಾಗಲೇ ನೀರು, ವಿದ್ಯುತ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ. ಇದೀಗ ಬಾರ್ ಆ್ಯಂಡ್ ರೆಸ್ಟೋರೆಂಟ್ ಲೈಸನ್ಸ್ ಶುಲ್ಕ ಸರ್ಕಾರ ಏರಿಕೆ ಮಾಡಿದೆ. ದಿನಕ್ಕೆ 110 ಕೋಟಿ ರೂ. ವಾರ್ಷಿಕವಾಗಿ 40 ಸಾವಿರ ಕೋಟಿ ರೂ. ಸುಂಕ ಅಬಕಾರಿ ಇಲಾಖೆಗೆ ನೀಡುತ್ತಿದ್ದೇವೆ. ಇದರ ನಡುವೆ ಲೈಸನ್ಸ್ ದರ ಏರಿಕೆ ಮಾಡಿರುವುದು ಅವೈಜ್ಞಾನಿಕ ಎಂದು ಬೆಂಗಳೂರು ಹೊಟೇಲ್ ಮಾಲೀಕರ” ಸಂಘದ ಗೌರವಾಧ್ಯಕ್ಷ ಪಿ.ಸಿ ರಾವ್ ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕದ ಇನ್ನಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ