Karnataka Breaking Kannada News Highlights: ನನ್ನನ್ನು ಎರಡನೇ ದೇವರಾಜ ಅರಸು ಅಂತಾರೆ: ಸಿಎಂ ಸಿದ್ದರಾಮಯ್ಯ
Breaking News Today highlights: ವಂಚನೆ ಪ್ರಕರಣ ಸಂಬಂಧ ಚೈತ್ರಾ ಕುಂದಾಪುರ ಮತ್ತು ಗ್ಯಾಂಗ್ ವಿಚಾರಣೆ ಮುಂದುವರಿದಿದೆ. ಇತ್ತ ಲೋಕಸಭೆ ಚುನಾವಣೆಗೆ ಕರ್ನಾಟಕದ ರಾಜಕೀಯ ಪಕ್ಷಗಳು ಸಿದ್ಧತೆ ಮತ್ತು ರಣತಂತ್ರಗಳನ್ನು ರೂಪಿಸುತ್ತಿವೆ. ಈ ಎಲ್ಲದರ ಜೊತೆಗೆ ರಾಜ್ಯದ ಜನರು ಗಣೇಶ ಚತುರ್ಥಿ, ನವರಾತ್ರಿ ಹಬ್ಬ, ಮೈಸೂರು ದಸಾರ ಉತ್ಸವಕ್ಕೆ ಸಜ್ಜಾಗುತ್ತಿದ್ದಾರೆ. ಇಂತಹ ಅನೇಕ ಮಾಹಿತಿಗಳನ್ನು ಟಿವಿ9 ಡಿಜಿಟಲ್ ಲೈವ್ನಲ್ಲಿ ವೀಕ್ಷಿಸಿ.
Karnataka Breaking News highlights: ವಂಚನೆ ಪ್ರಕರಣ ಸಂಬಂಧ ಚೈತ್ರಾ ಕುಂದಾಪುರ (Chaitra Kundapur) ಮತ್ತು ಗ್ಯಾಂಗ್ ವಿಚಾರಣೆ ಮುಂದುವರಿದಿದೆ. ಇತ್ತ ಲೋಕಸಭೆ ಚುನಾವಣೆಗೆ ಕರ್ನಾಟಕದ ರಾಜಕೀಯ ಪಕ್ಷಗಳು ಸಿದ್ಧತೆ ಮತ್ತು ರಣತಂತ್ರಗಳನ್ನು ರೂಪಿಸುತ್ತಿವೆ. ಈ ನಡುವೆ ಲೋಕಸಭೆ ಚುನಾವಣೆಗೆ (Lok Sabha Elections) ಕರ್ನಾಟಕದಲ್ಲಿ ಯಾರ ನಾಯಕತ್ವದಲ್ಲಿ ಬಿಜೆಪಿ ಮುನ್ನಡೆಯಲಿದೆ ಎಂಬುದು ಕುತೂಹಲವೂ ಮೂಡಿಸಿದೆ. ಹೊಸ ನಾಯಕನನ್ನು ಆಯ್ಕೆ ಮಾಡಲಾಗುತ್ತಾ ಅಥವಾ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲಿದ್ದಾರಾ? ವಿಪಕ್ಷ ನಾಯಕನ ಆಯ್ಕೆಯಾಗಲಿದೆಯಾ ಕಾದುನೋಡಬೇಕಿದೆ. ಅಲ್ಲದೆ, ಲೋಕ ಸಮರಕ್ಕೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ನಡುವೆ ಮೈತ್ರಿ ಮಾತುಕತೆ ನಡೆಯುತ್ತಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿಪಕ್ಷಗಳ ಟೀಕೆಗಳಿಗೆ ತಿರುಗೇಟು ನೀಡುತ್ತಾ ಗ್ಯಾರಂಟಿ ಯೋಜನೆಗಳ ಜಾರಿ, ಪ್ರಚಾರ ಇತ್ಯಾದಿಗಳಲ್ಲಿ ತೊಡಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಜನರು ಗಣೇಶ ಚತುರ್ಥಿ, ನವರಾತ್ರಿ ಹಬ್ಬ, ಮೈಸೂರು ದಸಾರ ಉತ್ಸವಕ್ಕೆ ಸಜ್ಜಾಗುತ್ತಿದ್ದಾರೆ. ಇಂತಹ ಮತ್ತಷ್ಟು ಕ್ಷಣಕ್ಷಣದ ಮಾಹಿತಿಗಳನ್ನು ಟಿವಿ9 ಡಿಜಿಟಲ್ ಲೈವ್ನಲ್ಲಿ ವೀಕ್ಷಿಸಿ.
LIVE NEWS & UPDATES
-
Karnataka Breaking Kannada News Live:ಎಲ್ಲರೂ ಸಮಾನರೆಂದು ಸಂವಿಧಾನದಲ್ಲಿ ಹೇಳಿದ್ದಾರೆ, ಸಮಾನತೆ ಇದೆಯಾ?
ಯಾರು ನಿಮ್ಮ ಪರ ಇರುತ್ತಾರೋ ಅವರ ಕೈಯಲ್ಲಿ ಅಧಿಕಾರ ಇರಬೇಕು. ನಾನು ಅಧಿಕಾರದ ಹಿಂದೆ ಹೋಗಲ್ಲ, ಯಾವಾಗಲೂ ನಿಮ್ಮ ಪರ ಇರ್ತೇನೆ. ಬದಲಾವಣೆ ಪರ ಇದ್ದವರು ನಿಮ್ಮವರು, ವಿರೋಧಿಸುವರು ನಿಮ್ಮ ದ್ವೇಷಿಗಳು. ಎಲ್ಲರೂ ಸಮಾನರೆಂದು ಸಂವಿಧಾನದಲ್ಲಿ ಹೇಳಿದ್ದಾರೆ, ಸಮಾನತೆ ಇದೆಯಾ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.
-
Karnataka Breaking Kannada News Live: ನಾನು ಸಿದ್ದರಾಮಯ್ಯನೇ, ಅರಸು ಅರಸುನೇ
ನನ್ನನ್ನು ಎರಡನೇ ದೇವರಾಜ ಅರಸು ಅಂತಾರೆ. ನಾನು ಸಿದ್ದರಾಮಯ್ಯನೇ, ಅರಸು ಅರಸುನೇ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
-
Karnataka Breaking Kannada News Live: ವಿಶ್ವಕರ್ಮ ಸಮಾಜದ ಅಭಿವೃದ್ಧಿ ನಿಗಮ ಗಟ್ಟಿಗೊಳಿಸಬೇಕೆಂದು ಮನವಿ
ವಿಶ್ವಕರ್ಮ ಸಮಾಜದ ಅಭಿವೃದ್ಧಿ ನಿಗಮ ಗಟ್ಟಿಗೊಳಿಸಬೇಕೆಂದು ಮನವಿ ಮಾಡಲಾಗಿದೆ. ನವೆಂಬರ್ 1ಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷ ಪೂರೈಕೆಯಾಗಲಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಲೋಗೋ ಅನಾವರಣ ಮಾಡಲಿದ್ದಾರೆ ಎಂದು ಹೇಳಿದರು.
Karnataka Breaking Kannada News Live: ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಸಚಿವ ತಂಗಡಗಿ ಭಾಗಿ
ವಿಶ್ವಕರ್ಮ ಸಮಾಜಕ್ಕೆ ಹೆಚ್ಚು ಅನುದಾನ ನೀಡಿದ್ದು ಸಿದ್ದರಾಮಯ್ಯ ಸರ್ಕಾರ ಎಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುತ್ತಿರುವ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಸಚಿವ ತಂಗಡಗಿ ಹೇಳಿದ್ದಾರೆ. ಮೊದಲು 15 ಕೋಟಿ, ಬಳಿಕ 25 ಕೋಟಿ ರೂ. ಅನುದಾನ ನೀಡಿದ್ದಾರೆ ಎಂದರು.
Karnataka Breaking Kannada News Live: ತಮಿಳುನಾಡು ರೈತ ಸಂರಕ್ಷಣಾ ಸಂಘದ ವತಿಯಿಂದ ಪ್ರತಿಭಟನೆ
ತಮಿಳುನಾಡಿಗೆ ಕಾವೇರಿ ನೀರು ಬಿಡಲು ನಿರಾಕರಣೆ ಹಿನ್ನೆಲೆ ರಾಜ್ಯ ಗಡಿಭಾಗದಲ್ಲಿ ತಮಿಳುನಾಡು ರೈತ ಸಂರಕ್ಷಣಾ ಸಂಘದ ವತಿಯಿಂದ ರೈತರು ಪ್ರತಿಭಟನೆ ನಡೆಸಿದರು. ಕರ್ನಾಟಕ ಸರ್ಕಾರದ ವಿರುದ್ಧ ತಮಿಳುನಾಡು ರೈತರು ಪ್ರತಿಭಟನೆಗೆ ಇಳಿದಿದ್ದು, ತಮಿಳುನಾಡು ಗಡಿಭಾಗ ಹೊಸೂರಿನ ಸಿಪ್ ಕಾಟ್ ನಲ್ಲಿ ಪ್ರತಿಭಟಿಸಿದರು. ರೈತ ಸಂರಕ್ಷಣಾ ಸಂಘದ ಸಂಸ್ಥಾಪಕ ಈಸನ್ ಮುರುಗಸ್ವಾಮಿ ನೇತೃತ್ವದಲ್ಲಿ ಹೋರಾಟ ನಡೆಸಿದ್ದು, ನೂರಕ್ಕೂ ಅಧಿಕ ಮಂದಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ದಕ್ಷಿಣ ಪಿನಾಕಿನಿ ನದಿಯಿಂದ ಕೊಳಚೆ ಮಿಶ್ರಿತ ನೀರು ಹರಿಸಲಾಗುತ್ತಿದೆ ಅದನ್ನು ಕೂಡಲೇ ನಿಲ್ಲಿಸಬೇಕು. ಜೊತೆಗೆ ಕಾವೇರಿ ನೀರನ್ನ ತಮಿಳುನಾಡಿಗೆ ಹರಿಸುವುದನ್ನ ತಡೆಯಬಾರದು ಎಂದು ರೈತರ ಆಗ್ರಹಿಸಿದರು.
Karnataka Breaking Kannada News Live: ಇದು ರಾಜಕೀಯ ಮೀರಿದ ವಿಶ್ವಾಸ ಎಂದ ಎಂ.ಪಿ.ರೇಣುಕಾಚಾರ್ಯ
ಭದ್ರಾ ನೀರು, ಅಡಕೆಗೆ ರೋಗ ವಿಚಾರವಾಗಿ ಸಚಿವರ ಭೇಟಿ ಮಾಡಿದ್ದೇನೆ. ಇದು ರಾಜಕೀಯ ಮೀರಿದ ವಿಶ್ವಾಸ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ. ಕಾಂಗ್ರೆಸ್ನವರು ನನಗೆ ಆಹ್ವಾನ ನೀಡಿಲ್ಲ ಎಂದು ಹೇಳಿದ್ದಾರೆ.
Karnataka Breaking Kannada News Live: ಮತ್ತೆ ಸಚಿವ S.S.ಮಲ್ಲಿಕಾರ್ಜುನ್ ಭೇಟಿಯಾದ ರೇಣುಕಾಚಾರ್ಯ
ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ S.S.ಮಲ್ಲಿಕಾರ್ಜುನ್ರನ್ನು ಇಂದು ಮತ್ತೆ ಮಾಜಿ ಸಚಿವ ರೇಣುಕಾಚಾರ್ಯ ಭೇಟಿಯಾಗಿ ಮಾತುಕತೆ ಮಾಡಿದ್ದಾರೆ. ಜೊತೆಗೆ ಶಾಮನೂರು ಶಿವಶಂಕರಪ್ಪರನ್ನೂ ಭೇಟಿಯಾಗಿದ್ದಾರೆ.
Karnataka Breaking Kannada News Live: ವಿಪಕ್ಷ ನಾಯಕ ಆಗ್ತೀರಾ ಎಂದಿದ್ದಕ್ಕೆ ಯತ್ನಾಳ್ ಏನಂದ್ರು ನೋಡಿ
Karnataka Breaking Kannada News Live: ನಾಳೆ ಕೇಂದ್ರ ಜಲಶಕ್ತಿ ಸಚಿವರ ಭೇಟಿಯಾಗುವ ಸಂಸದರ ನಿಯೋಗ
ಕಾವೇರಿ ನದಿ ನೀರಿಗಾಗಿ ತಮಿಳುನಾಡು ಕ್ಯಾತೆ ಮುಂದುವರೆದಿದೆ. ನಾಳೆ ಕೇಂದ್ರ ಜಲಶಕ್ತಿ ಸಚಿವರನ್ನು ಸಂಸದರ ನಿಯೋಗ ಭೇಟಿಯಾಗಲಿದೆ. ತಮಿಳುನಾಡು ಸಂಸದರ ನಿಯೋಗದಿಂದ ಸಂಸತ್ ಭವನದಲ್ಲಿ ಭೇಟಿ ನೀಡಲಿದ್ದಾರೆ. ಹೆಚ್ಚುವರಿ ನೀರಿಗಾಗಿ ತಮಿಳುನಾಡು ಸಂಸದರು ಮನವಿ ಸಲ್ಲಿಸಲಿದ್ದಾರೆ.
Karnataka Breaking Kannada News Live: ನಮ್ಮ ಸಂಪರ್ಕದಲ್ಲಿಯೂ 45 ಜನ ಶಾಸಕರಿದ್ದಾರೆ ಎಂದ ಯತ್ನಾಳ್
MLC ಬಿ.ಕೆ.ಹರಿಪ್ರಸಾದ್ರನ್ನು ಕೇವಲ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ. ಇದನ್ನೆಲ್ಲ ಗಮನಿಸಿದರೆ ಜನವರಿ ಬಳಿಕ ಕಾಂಗ್ರೆಸ್ ಸರ್ಕಾರ ಪತನ ಖಚಿತ. ನಮ್ಮ ಸಂಪರ್ಕದಲ್ಲಿಯೂ 45 ಜನ ಶಾಸಕರಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
Karnataka Breaking Kannada News Live: ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆಯಾಗಲಿ, ಇದಕ್ಕೆ ನಮ್ಮ ಬೆಂಬಲ ಇಲ್ಲ
ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆಯಾಗಲಿ, ಇದಕ್ಕೆ ನಮ್ಮ ಬೆಂಬಲ ಇಲ್ಲ. ಇಂತಹ ದಲ್ಲಾಳಿಗಳು ಎಲ್ಲ ಪಕ್ಷಗಳಲ್ಲೂ ಇದ್ದಾರೆ. ದೆಹಲಿಯಲ್ಲೂ ಇದ್ದಾರೆ, ಕರ್ನಾಟಕದಲ್ಲೂ ಇಂತಹ ವಂಚಕರು ಇದ್ದಾರೆ. ಕಳ್ಳರಿಗಿಂತ ಊರ ಕಳ್ಳರು ಕಾಂಗ್ರೆಸ್ನಲ್ಲಿದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
Karnataka Breaking Kannada News Live: ಯಡಿಯೂರಪ್ಪ ಯಾವ ನೈತಿಕತೆ ಹೊಂದಿದ್ದಾರೆ?
ಐದು ಗ್ಯಾರಂಟಿ ಯೋಜನೆ ಅಭಿವೃದ್ಧಿ ಅಲ್ಲವಾ. ಯಡಿಯೂರಪ್ಪ ಏಳು ಕಿಲೋ ಅಕ್ಕಿಯನ್ನು ಐದು ಕಿಲೋ ಮಾಡಿದ್ದು ಇದೇ ಯಡಿಯೂರಪ್ಪ. ಯಡಿಯೂರಪ್ಪ ಯಾವ ನೈತಿಕತೆ ಹೊಂದಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
Karnataka Breaking Kannada News Live: ಇಂಡಿಯಾ ಒಕ್ಕೂಟ ಯಾವ ಧರ್ಮದ ವಿರುದ್ಧ ಇಲ್ಲಾ
ಇಂಡಿಯಾ ಒಕ್ಕೂಟ ಯಾವ ಧರ್ಮದ ವಿರುದ್ಧ ಇಲ್ಲಾ. ಎಲ್ಲಾ ಧರ್ಮಗಳನ್ನು ಸಮಾನನಾಗಿ ಕಾಣಲಾಗುತ್ತದೆ. ಧರ್ಮ ಮನುಷ್ಯನ ಒಳತಿಗಾಗಿ ಇರುವುದು. ಧರ್ಮದಲ್ಲಿ ಕರುಣೆ, ದಯೆ, ಮನುಷ್ಯತ್ವ ಇರಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
Karnataka Breaking Kannada News Live: ಗರಂ ಆದ ಸಿಎಂ ಸಿದ್ದರಾಮಯ್ಯ
Karnataka Breaking Kannada News Live: ತಮಿಳುನಾಡಿಗೆ ನೀರು ಬಿಡಲು ನಮ್ಮಲ್ಲಿ ನೀರು ಇಲ್ಲಾ
ಸಾಮಾನ್ಯ ವರ್ಷದಲ್ಲಿ 177.25 ಟಿಎಂಸಿ ನೀರು ಕೊಡಬೇಕು. ಈವರೆಗೆ ತಮಿಳುನಾಡಿಗೆ 37.07 ಟಿಎಂಸಿ ನೀರು ಬಿಡಲಾಗಿದೆ. ಬಾಕಿ ತಮಿಳುನಾಡಿಗೆ ಬಿಡಲು ನಮ್ಮ ಬಳಿ ನೀರು ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
Karnataka Breaking News Live: ಎಲ್ಲಾ ಸಮುದಾಯದವರು ಡಿಸಿಎಂ ಕೇಳುವುದರಲ್ಲಿ ತಪ್ಪೇನಿದೆ: ಶರಣಬಸಪ್ಪ
ಯಾದಗಿರಿ: ಮೂರು ಡಿಸಿಎಂ ಸ್ಥಾನಕ್ಕೆ ಸಚಿವ ಕೆ.ಎನ್.ರಾಜಣ್ಣ ಬೇಡಿಕೆ ವಿಚಾರವಾಗಿ ಮಾತನಾಡಿದ ಸಚಿವ ಶರಣಬಸಪ್ಪ ದರ್ಶನಾಪುರ, ಎಲ್ಲಾ ಸಮುದಾಯದವರು ಡಿಸಿಎಂ ಕೇಳುವುದರಲ್ಲಿ ತಪ್ಪೇನಿದೆ? ಇನ್ನೂ ಮೂರು ಯಾಕೆ ಐವತ್ತು ಉಪಮುಖ್ಯಮಂತ್ರಿ ಮಾಡಲಿ. ಅಂತಿಮವಾಗಿ ನಮ್ಮ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು. ಕಲ್ಯಾಣ ಕರ್ನಾಟಕ ಭಾಗಕ್ಕೆ ಡಿಸಿಎಂ ಸ್ಥಾನ ಕೊಡಬೇಕೆಂಬ ವಿಚಾರವಾಗಿ ಮಾತನಾಡಿದ ಅವರು, ಯಾಕೆ ಉಪಮುಖ್ಯಮಂತ್ರಿ, ಸಿಎಂ ಸ್ಥಾನವನ್ನು ಕೊಡಬಾರದಾ? ಹಿಂದೆ ನಮ್ಮ ಭಾಗದವರೆ ಕಾಂಗ್ರೆಸ್ನಿಂದ ಇಬ್ಬರು ಸಿಎಂ ಆಗಿದ್ದಾರೆ ಎಂದರು.
Karnataka Breaking News Live: ಸಿದ್ದರಾಮಯ್ಯ ಬಂದು ಟೀ ಕುಡಿದು ಹೋದರು: ಬಿಆರ್ ಪಾಟೀಲ್
ಕಲಬುರಗಿ: ತಮ್ಮ ನಿವಾಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಆಳಂದ ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್, ಅಸಮಾಧಾನ ವಿಚಾರಕ್ಕಾಗಿ ಬಂದಿಲ್ಲ, ಯಾವುದೇ ಮಾತುಕತೆ ಆಗಿಲ್ಲ. ಸಿದ್ದರಾಮಯ್ಯ ನನ್ನ ನಡುವೆ ಆತ್ಮೀಯ ಸ್ನೇಹ ಇದೆ, ಹೀಗಾಗಿ ಭೇಟಿ ನೀಡಿ ಟೀ ಕುಡಿದು ಹೋದರು ಎಂದರು.
Karnataka Breaking News Live: ಬ್ರಷ್ಟಾಚಾರದ ಸರ್ಕಾರದ ವಿರುದ್ದ ಹೋರಾಟಕ್ಕೆ ಪ್ರಾರಂಭ: ಕಟೀಲ್
ಕೋಲಾರದಲ್ಲಿ ಮಾತನಾಡಿದ ನಳೀನ್ ಕುಮಾರ್ ಕಟೀಲ್, ಬ್ರಷ್ಟಾಚಾರದ ಸರ್ಕಾರದ ವಿರುದ್ದ ಹೋರಾಟಕ್ಕೆ ಪ್ರಾರಂಭ ಮಾಡಲಾಗಿದೆ. ರೈತರ ಪರ ಯೋಜನೆಗಳನ್ನ ವಾಪಸ್ ತೆಗೆದುಕೊಳ್ಳುವಂತಹ ಕೆಲಸ ಕಾಂಗ್ರೇಸ್ ಸರ್ಕಾರ ಮಾಡಿದೆ. ಉಚಿತ ವಿದ್ಯುತ್ ಕೊಡುತ್ತೇವೆ ಎಂದು ನಿರಂತರ ವಿದ್ಯುತ್ ಕಡಿತ ಮಾಡುತ್ತಿದೆ. ರೈತರ ಹೊಟ್ಟೆಗೆ ಹೊಡೆಯುವಂತಹ ಕೆಲಸ ಮಾಡುತ್ತಿದೆ. ಕಾವೇರಿ ನೀರು ತಮಿಳುನಾಡಿಗೆ ಕಳಿಸುವ ಮೂಲಕ, ನೀವು ಕರ್ನಾಟಕದ ಮುಖ್ಯಮಂತ್ರಿಯಾ? ಅಥವಾ ತಮಿಳುನಾಡಿನ ಮುಖ್ಯಮಂತ್ರಿನಾ? ಕದ್ದು ಮುಚ್ಚಿ ನೀರನ್ನ ಬಿಡುವ ಮೂಲಕ ಕಾಂಗ್ರೇಸ್ ನ ಬುದ್ದಿ ತೋರಿಸಿದೆ. ಇಬ್ಬರು ಮಂತ್ರಿಗಳ ಮೇಲೆ ಕೇಸ್ ದಾಖಲಾಗಿದ್ದರೂ ಅವರ ರಾನಿಜಾಮೆ ತೆಗೆದುಕೊಳ್ಳುವ ಕೆಲಸ ಮಾಡುತ್ತಿಲ್ಲ. ದೂರು ನೀಡಿದವರ ಮೇಲೆ ಪ್ರಕರಣ ದಾಖಲು ಮಾಡುತ್ತಿದ್ದಾರೆ ಎಂದರು. ಮುಂದಿನ ಲೋಕಸಭೆ ಚುನಾವಣೆಯಲ್ಲಿ 28 ಕ್ಕೆ 28 ಗೆಲ್ಲುವಂತಹ ಕೆಲಸ ಮಾಡುತ್ತೇವೆ. ಮತ್ತೆ ಯಡಿಯೂರಪ್ಪ ನೇತೃತ್ವದಲ್ಲಿ ಪ್ರವಾಸ ಮಾಡಿ ಯಶಸ್ವಿಯಾಗುತ್ತೇವೆ ಎಂದರು.
Karnataka Breaking News Live: ಬರದ ಬಗ್ಗೆ ಸರ್ವೇ ನಡೆಯುತ್ತೆ: ಸಿದ್ದರಾಮಯ್ಯ
ಕಲಬುರಗಿ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬರದ ಬಗ್ಗೆ ಸರ್ವೇ ನಡೆಯುತ್ತೆ. ಸರ್ವೇ ನಂತರ ಎಷ್ಟು ಹಾನಿಯಾಗಿದೆ ಅಂತ ಗೊತ್ತಾಗುತ್ತದೆ ಎಂದರು. ಕಾವೇರಿ ನೀರು ವಿಚಾರವಾಗಿ ಮಾತನಾಡಿದ ಅವರು, ಯಡಿಯೂರಪ್ಪ ಕಾಲದಲ್ಲಿ ಕೂಡಾ ನೀರು ಬಿಟ್ಟಿದ್ದಾರೆ. ಸಾಮಾನ್ಯ ವರ್ಷದಲ್ಲಿ 177.25 ನೀರು ಕೊಡಬೇಕು. ಇಲ್ಲಿವರಗೆ 37.07 ಟಿಎಂ ಸಿ ನೀರು ಬಿಡಲಾಗಿದೆ. ನಾವು 99 ಟಿಎಂಸಿ ಬಿಡಬೇಕಿತ್ತು. ನೀರು ಬಿಡಲು ನಮ್ಮ ಹತ್ತಿರ ನೀರು ಇಲ್ಲ. ರೆಗೂಲೇಟರಿ ಕಮಿಟಿ ಆದೇಶ ಪ್ರಶ್ನಿಸಿ ನಾವು ಸುಪ್ರಿಂಕೋರ್ಟ್ಗೆ ಹೋಗುತ್ತಿದ್ದೇವೆ ಎಂದರು.
Karnataka Breaking News Live: ದೇವಾಲಯದ ಹುಂಡಿಗೆ ಒಂದು ಲಕ್ಷ ರೂಪಾಯಿ ಹಣ ಹಾಕಿದ ಬಿಎಸ್ ಯಡಿಯೂರಪ್ಪ
ಕೋಲಾರ: ಪ್ರಧಾನಿ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕು ಕುರುಡುಮಲೆ ವಿನಾಯಕ ದೇವಾಲಯಕ್ಕೆ ಭೇಟಿ ನೀಡಿದ ಬಿಎಸ್ ಯಡಿಯೂರಪ್ಪ ಅವರು ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆ, ಪೂಜೆ ಸಲ್ಲಿಸಲು ಹೋಗುವ ಮೊದಲು ಹುಂಡಿಗೆ ಒಂದು ಲಕ್ಷ ರೂಪಾಯಿ ಕಾಣಿಕೆ ಹಾಕಿದರು.
Karnataka Breaking News Live: ಬಿಜೆಪಿ ಟಿಕೆಟ್ ಡೀಲ್ ಬಗ್ಗೆ ಜಗದೀಶ್ ಶೆಟ್ಟರ್ ಹೇಳಿದ್ದೇನು?
ಕೆಲವು ಕಡೆ ಹಣ ತಗೆದುಕೊಂಡು ಟಿಕೆಟ್ ಕೊಟ್ಟಿದ್ದಾರೆ ಅನ್ನೋ ರೂಮರ್ ಇದೆ. ಇದಕ್ಕೆ ಬಿಜೆಪಿಯವರು ಉತ್ತರ ಕೊಡಬೇಕು ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಮ್ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಕೆಲವು ಕಡೆ ಸುದ್ದಿ ಹೊರಗೆ ಬರ್ತಿವೆ, ಕೆಲವು ಕಡೆ ಹೊರಗೆ ಬರ್ತಿಲ್ಲ. ಟಿಕೆಟ್ ಕೊಡಿಸೋ ಸಲುವಾಗಿ ಇಂತಹದ್ದೊಂದು ಟೀಮ್ ರೆಡಿಯಾಯ್ತು, ಅಂದರೆ ಇದನ್ನು ಗಂಭೀರವಾಗಿ ವಿಚಾರ ಮಾಡಬೇಕು ಎಂದರು. ಎಲ್ಲೋ ಒಂದು ಕಡೆ ಹಣದ ವ್ಯವಹಾರ ನಡಿದಿದೆ ಅಂದ್ರೆ ಅದು ಬಿಜೆಪಿ ಪಕ್ಷಕ್ಕೆ ಬಂದು ನಿಲ್ಲತ್ತೆ. ಇದಕ್ಕೆ ಬಿಜೆಪಿ ನಾಯಕರು ಅಂತಹ ಪದ್ದತಿ ಇಲ್ಲ ಅಂತಾರೆ. ಆದ್ರೆ ಮಾಹಿತಿ ಪ್ರಕಾರ ಹಿಂದೂ ಕಾರ್ಯಕರ್ತರೇ ಡೀಲ್ನಲ್ಲಿ ಭಾಗಿಯಾಗಿದ್ದಾರೆ. ಇದು ಬಹಳ ಗಂಭೀರ ವಿಷಯ. ಇದನ್ನು ಬಿಜೆಪಿ ಗಂಭೀರವಾಗಿ ತಗೆದುಕೊಳ್ಳಬೇಕು. ಕನಕಗಿರಿಯಲ್ಲಿ ಟಿಕೆಟ್ ಡೀಲ್ ವಿಷಯಕ್ಕೆ ಕಂಪ್ಲೇಟ್ ಆಗಿದೆ. ಯಾವ ಹಿನ್ನಲೆಯಲ್ಲಿ ಇವೆಲ್ಲ ಹೊರಗೆ ಬರುತ್ತಿವೆ. ಇನ್ನು ಹಲವಾರು ಕಡೆ ಕಂಪ್ಲೇಟ್ ಆಗಬಹುದು ಎಂದರು.
Karnataka Breaking News Live: ನೀರು ಬಿಡದೇ ನಾವು ‘ಸುಪ್ರೀಂ’ ಕೆಂಗಣ್ಣಿಗೆ ಗುರಿಯಾಗಬೇಕಾ: ಚಲುವರಾಯಸ್ವಾಮಿ
ನಾಳೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಲಿದೆ ಎಂದು ಮಂಡ್ಯ ತಾಲೂಕಿನ ಕೀಲಾರದಲ್ಲಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ಮೊನ್ನೆ ಸರ್ವಪಕ್ಷ ಸಭೆ ನಡೆಸಿ ನೀರು ಬಿಡೋಕೆ ಆಗಲ್ಲ ಎಂದಿದ್ದೇವೆ. ಸೆಪ್ಟೆಂಬರ್ 21ರಂದು ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ಇದೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗೆ ಒಂದು ಆತಂಕ ಇದೆ. ಪ್ರಾಧಿಕಾರದ ಸಭೆಯಲ್ಲಿ ನೀರು ಕಡಿಮೆ ಮಾಡುವಂತೆ ಹೇಳಿದರೆ ಖುಷಿ. ಒಂದು ವೇಳೆ ಪ್ರಾಧಿಕಾರ ನೀರು ಬಿಡಿ ಅಂದರೇ ಏನ್ ಮಾಡೋದು? ನೀರು ಬಿಡದೇ ನಾವು ‘ಸುಪ್ರೀಂ’ ಕೆಂಗಣ್ಣಿಗೆ ಗುರಿಯಾಗಬೇಕಾ? ಎರಡು ದಿನ ನೀರು ಬಿಟ್ಟು ‘ಸುಪ್ರೀಂ’ ಮುಂದೆ ಕೈ ಮುಗಿದು ನಿಲ್ಬೇಕಾ? ಆ ಆತಂಕದ ಬಗ್ಗೆ ಚರ್ಚೆ ಮಾಡಿದ್ದೇವೆ. ಅದರ ಹೊರತು ನೀರು ಬಿಡುವ ತೀರ್ಮಾನ ನಾವು ಇನ್ನೂ ಮಾಡಿಲ್ಲ. ಕಾವೇರಿ ವಿಚಾರದಲ್ಲಿ ವಿರೋಧ ಪಕ್ಷದವರು ವೀರಾವೇಷದಿಂದ ಮಾತನಾಡಬಹುದು ಎಂದರು.
Karnataka Breaking News Live: ಚೈತ್ರಾ ಕುಂದಾಪುರ ಕಾರ್ಡಿಯೋಲಾಜಿಗೆ ಶಿಫ್ಟ್
ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚೈತ್ರಾ ಕುಂದಾಪುರ ಅವರನ್ನು ಕಾರ್ಡಿಯೋಲಾಜಿಗೆ ಶಿಫ್ಟ್ ಮಾಡಲಾಗಿದೆ. ಕಾರ್ಡಿಯೋಲಜಿ ಹೃದಯಕ್ಕೆ ಸಂಬಂಧಿಸಿದಂತಹ ಚಿಕಿತ್ಸೆಯಾಗಿದೆ. ಹೀಗಾಗಿ ಇನ್ನು 24 ಘಂಟೆಗಳ ಕಾಲ ಚೈತ್ರಾ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯಲಿದ್ದಾರೆ.
Karnataka Breaking News Live: ಸರ್ಕಾರ ಕುಂಬಕರಣ ರೀತಿಯಲ್ಲಿದೆ, ಎಚ್ಚರಿಸಬೇಕಾಗಿದೆ: ಯಡಿಯೂರಪ್ಪ
ಕೋಲಾರ: ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದೆ. ಆದರೆ ಸರ್ಕಾರ ಕುಂಬಕರಣ ರೀತಿಯಲ್ಲಿದೆ, ಎಚ್ಚರಿಸಬೇಕಾಗಿದೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಕೋಲಾರದಲ್ಲಿ ಮಾತನಾಡಿದ ಅವರು, ಹಬ್ಬದ ಬಳಿಕ ರಾಜ್ಯದ ಎಲ್ಲಾ ಮುಖಂಡರ ಜೊತೆ ಪ್ರತಿ ಜಿಲ್ಲೆಗೆ ಪ್ರವಾಸ ಮಾಡುತ್ತೇನೆ. ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸುತ್ತೇವೆ, ಮೋದಿ ಮತ್ತೆ ಪ್ರಧಾನಿ ಆಗಬೇಕು. ಜನರಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯ ತಿಳಿಸಿ ಪಕ್ಷ ಬಲಪಡಿಸುತ್ತೇವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬದುಕಿದ್ದು ಸತ್ತಂತಾಗಿದೆ. ಭೀಕರ ಬರ,ನೀರಿಗೆ ಹಾಹಾಕಾರ ಇದ್ರು ಸರ್ಕಾರ ಮಾತ್ರ ಕುಂಭಕರ್ಣ ರೀತಿಯಲ್ಲಿದೆ. ಕಳೆದ ಬಾರಿಯಂತೆ ಬಿಜೆಪಿ 25 ಕ್ಕೂ ಹೆಚ್ಚು ಸೀಟು ಗೆಲ್ಲೇಬೇಕು. ಮೋದಿಯವರಿಗೆ ನಮ್ಮದೇ ಆದ ಕೊಡುಗೆ ನೀಡಿ ಬಲಪಡಿಸಬೇಕು ಎಂದರು. ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಒಂದು ಕಿಮೀ ಸಹ ರಸ್ತೆ ಆಗಿಲ್ಲ, ಅಭಿವೃದ್ಧಿ ಸ್ಥಗಿತವಾಗಿದೆ. ಗ್ಯಾರಂಟಿ ಯೋಜನೆಗಳನ್ನು ಜನರು ಮರೆತಿದ್ದಾರೆ ಎಂದರು.
Karnataka Breaking News Live: ಇಂದಿನಿಂದ ಲೋಕಸಭಾ ಚುನಾವಣೆಗೆ ರಣಕಹಳೆ
ಕೋಲಾರ: ದೆಹಲಿ ನಾಯಕರ ಬೇಟಿ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಇಂದಿನಿಂದ ಲೋಕಸಭಾ ಚುನಾವಣೆಗೆ ರಣಕಹಳೆ ಊದಲಿದ್ದಾರೆ. ರಾಜಕೀಯ ನಾಯಕರ ಶಕ್ತಿಕೇಂದ್ರ ಕುರುಡುಮಲೆಯಿಂದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳು, ಬರಪರಿಸ್ಥಿತಿ, ಕಾವೇರಿ ನೀರುಹಂಚಿಕೆ ವಿಚಾರ, ಸೇರಿ ಹಲವು ವಿಚಾರಗಳೊಂದಿಗೆ ರಾಜ್ಯ ಪ್ರವಾಸಕ್ಕೆ ಪ್ಲಾನ್ ಮಾಡಲಾಗಿದೆ. ನಾಯಕರು ತಂಡ ತಂಡವಾಗಿ ರಾಜ್ಯ ಪ್ರವಾಸ ಮಾಡಲಿದ್ದಾರೆ. ರಾಜ್ಯ ಪ್ರವಾಸಕ್ಕೂ ಮೊದಲು ಕುರುಡುಮಲೆ ವಿನಾಯಕನಿಗೆ ಪೂಜೆ ಸಲ್ಲಿಸಿದ ನಂತರ ಯಡಿಯೂರಪ್ಪ ಅವರು ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ. ಇಂದು ಮಾಜಿ ಸಿಎಂ ಯಡಿಯೂರಪ್ಪ, ಸದಾನಂದಗೌಡ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಈಶ್ವರಪ್ಪ, ಸೇರಿದಂತೆ ಹಲವು ಬಿಜೆಪಿ ನಾಯಕರ ದಂಡು ಕುರುಡುಮಲೆಗೆ ಆಗಮಿಸಲಿದೆ.
Karnataka Breaking News Live: ಬೀದರ್ನಲ್ಲಿ ಅದ್ಧೂರಿ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ
ಬೀದರ್ನಲ್ಲಿ ಅದ್ಧೂರಿಯಾಗಿ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ ನಡೆಸಲಾಗುತ್ತಿದೆ. ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಪೌರಾಢಳಿತ ಸಚಿವ ರಹೀಂ ಖಾನ್ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಎಸ್ಪಿ ಚೆನ್ನಬಸವಣ್ಣ ಎಲ್. ಎಸ್. ಜಿಲ್ಲಾ ಪಂಚಾಯತ್ ಸಿಇಓ ಶಿಲ್ಪಾ ಭಾಗಿಯಾದರು.
Karnataka Breaking News Live: ಕೊಪ್ಪಳದಲ್ಲಿ ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಚಾಲನೆ
76 ನೇ ಕಲ್ಯಾಣ ಕರ್ನಾಟಕ ಉತ್ಸವ ಹಿನ್ನಲೆ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಚಾಲನೆ ನೀಡಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಚಾಲನೆ ನೀಡಿದರು. ರಾಷ್ಟ್ರಧ್ವಜಾರೋಹಣ ನೆರವೆರಿಸುವ ಮೂಲಕ ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಚಾಲನೆ ನೀಡಲಾಯಿತು. ಉತ್ಸವದಲ್ಲಿ ಸಂಸದ ಕರಡಿ ಸಂಗಣ್ಣ,ಶಾಸಕ ರಾಘವೇಂದ್ರ ಹಿಟ್ನಾಳ್, ಎಂ ಎಲ್ ಸಿ ಹೇಮಲತಾ ನಾಯಕ್ ಭಾಗಿಯಾಗಿದ್ದಾರೆ.
Karnataka Breaking News Live: ಪಟೇಲ್ ಭಾವಷಿತ್ರಕ್ಕೆ ಸಿದ್ದರಾಮಯ್ಯ ಪುಷ್ಪನಮನ
ಇಂದು ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ದಿನ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ದಾರ್ ವಲ್ಲಭಭಾಯ್ ಪಟೇಲ್ ಭಾವಚಿತ್ರಕ್ಕೆ ಸಿಎಂ ಪುಷ್ಪನಮನ ಸಲ್ಲಿಸಿದರು. ಇದೇ ವೇಳೆ ಕಲಬುರಗಿ ನಗರದ ಡಿ.ಆರ್.ಮೈದಾನದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ನಂತರ ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು.
Karnataka Breaking News Live: ದೆಹಲಿಗೆ ತೆರಳಿದ ಮಾಜಿ ಪ್ರಧಾನಿ ದೇವೇಗೌಡ
ನಾಳೆಯಿಂದ ನಡೆಯುವ ವಿಶೇಷ ಅಧಿವೇಶನದಲ್ಲಿ ಪಾಲ್ಗೊಳ್ಳಲು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಅವರು ದೆಹಲಿಗೆ ತೆರಳಿದ್ದಾರೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣ ಕೈಗೊಂಡಿದ್ದಾರೆ. ಇದಕ್ಕೂ ಮುನ್ನ ಪದ್ಮನಾಭನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿದ ದೇವೇಗೌಡ, ನಾಲ್ಕು ದಿನಗಳ ಕಾಲ ಸಂಸತ್ ಅಧಿವೇಶನ ನಡೆಯುತ್ತಿದೆ. ಅಧಿವೇಶನದಲ್ಲಿ ಭಾಗಿಯಾಗಲು ದೆಹಲಿಗೆ ಹೋಗುತ್ತಿದ್ದೇನೆ ಎಂದರು.
Karnataka Breaking News Live: ಪ್ರಧಾನಿ ಮೋದಿ ಜನ್ಮದಿನಕ್ಕೆ ಮಾಜಿ ಪ್ರಧಾನಿ ದೇವೇಗೌಡ ಶುಭಾಶಯ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ 73 ನೇ ಹುಟ್ಟುಹಬ್ಬಕ್ಕೆ ನನ್ನ ಕಡೆಯಿಂದ ಜನ್ಮದಿನದ ಹಾರ್ದಿಕ ಶುಭಾಶಯಗಳು. ಸರ್ವಶಕ್ತನಾದ ದೇವರು ರಾಷ್ಟ್ರದ ಸೇವೆ ಮಾಡಲು ಅವರಿಗೆ ಉತ್ತಮ ಆರೋಗ್ಯವನ್ನು ನೀಡಲಿ ಎಂದು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಅವರು ಟ್ವೀಟ್ ಮಾಡಿದ್ದಾರೆ.
My warm birthday greetings to Prime Minister @narendramodi on his 73rd birthday. May lord almighty give him the best of health to serve the nation. pic.twitter.com/yPaj9IkDEj
— H D Deve Gowda (@H_D_Devegowda) September 17, 2023
Published On - Sep 17,2023 8:18 AM