ಚೈತ್ರಾ ಕುಂದಾಪುರ ಗ್ಯಾಂಗ್ ವಂಚನೆ: ಎ3 ಅಭಿನವ ಹಾಲಶ್ರೀ ಸ್ವಾಮೀಜಿಯಿಂದ ಸಂಧಾನಕ್ಕೆ ಯತ್ನ
ನೀನು ಕೊಟ್ಟಿರುವ 1.5 ಕೋಟಿ ರೂ. ಹಣವನ್ನು ಒಂದೂವರೆ ತಿಂಗಳಲ್ಲಿ ವಾಪಸ್ಸು ನೀಡುತ್ತೇನೆ ಪ್ರಕರಣದಲ್ಲಿ ಸಿಲುಕಿಸಿದಂತೆ" ಗೋವಿಂದಬಾಬು ಅವರಿಗೆ ಅಭಿನವ ಹಾಲಶ್ರೀ ಮನವಿ ಮಾಡಿದ್ದರು. ಆದರೆ ಹಣ ನೀಡದೆ ಸ್ವಾಮೀಜಿ ತಲೆಮರೆಸಿಕೊಂಡಿದ್ದಾರೆ.
ಬೆಂಗಳೂರು ಸೆ.17: ಬಿಜೆಪಿ (BJP) ಟಿಕೆಟ್ ಕೊಡಿಸುವುದಾಗಿ ಐದು ಕೋಟಿ ರೂ. ಪಡೆದು ಉದ್ಯಮಿ ಗೋವಿಂದಬಾಬು ಅವರಿಗೆ ಹಿಂದೂಪರ ಸಂಘಟನೆಯ ವಾಗ್ಮಿ ಚೈತ್ರಾ ಕುಂದಾಪುರ (Chaitra Kundapur) ವಂಚಿಸಿದ ಪ್ರಕರಣದ ಎ3 ಅಭಿನವ ಹಾಲಶ್ರೀ (Abhinava Halashree) ತಲೆಮರೆಸಿಕೊಂಡಿದ್ದಾರೆ. ಸ್ವಾಮೀಜಿ ಈ ಹಿಂದೆಯೇ ಗೋವಿಂದಬಾಬು ಅವರೊಂದಿಗೆ ರಾಜಿ ಸಂಧಾನಕ್ಕೆ ಯತ್ನಿಸಿದ್ದರು ಎಂಬ ಅಂಶ ಬಹಿರಂಗವಾಗಿದೆ. ಹೌದು ಸ್ವಾಮೀಜಿಗೆ ಗೋವಿಂದಬಾಬು ಅವರು 1.5 ಕೋಟಿ ರೂ. ನೀಡಿದ್ದರು.
ಯಾವಾಗ ಗೋವಿಂದಬಾಬು ಅವರಿಗೆ ತಾನು ವಂಚನೆಗೆ ಒಳಗಾಗಿದ್ದೇನೆ ಎಂದು ತಿಳಿಯಿತು, ಆಗ ಆರೋಪಿಗಳ ವಿರುದ್ಧ ದೂರು ಕೊಡಲು ಮುಂದಾದರು. ಈ ವೇಳೆ ಹಾಲಶ್ರೀ ಸ್ವಾಮೀಜಿ “ನೀನು ಕೊಟ್ಟಿರುವ 1.5 ಕೋಟಿ ರೂ. ಹಣವನ್ನು ಒಂದೂವರೆ ತಿಂಗಳಲ್ಲಿ ವಾಪಸ್ಸು ನೀಡುತ್ತೇನೆ ಪ್ರಕರಣದಲ್ಲಿ ಸಿಲುಕಿಸಿದಂತೆ” ಗೋವಿಂದಬಾಬು ಅವರಿಗೆ ಮನವಿ ಮಾಡಿದ್ದರು.
ಇದನ್ನೂ ಓದಿ: ಚೈತ್ರಾ ಕುಂದಾಪುರ ಆಡಿಯೋದಲ್ಲಿ ಸುನೀಲ್ ಕುಮಾರ್ ಹೆಸರು; ಅವರ್ಯಾರು ನಂಗೆ ಗೊತ್ತಿಲ್ಲ ಎಂದ ಮಾಜಿ ಸಚಿವ, ಇಲ್ಲಿದೆ ವಿಡಿಯೋ
ಅಂದರಂತೆ ಸ್ವಾಮೀಜಿ, ಗೋವಿಂದಬಾಬು ಅವರಿಗೆ 50 ಲಕ್ಷ ರೂ. ಅನ್ನು ಉಳಿದ ಹಣ ಮಠಕ್ಕೆ ದೇಣಿಗೆ ನೀಡಿದ್ದೇನೆ ಎಂದುಕೊಂಡು ಬಿಟ್ಟು ಎಂದು ಹೇಳಿದ್ದಾರೆ. ಆದರೆ ಇದಕ್ಕೆ ಗೋವಿಂದಬಾಬು ಒಪ್ಪಿರಲಿಲ್ಲ. ಉಳಿದ 1 ಕೋಟಿ ರೂ. ಹಣವನ್ನು ವಾಪಸ್ಸು ನೀಡುವಂತೆ ಪಟ್ಟು ಹಿಡಿದ್ದಾರೆ. ಯಾವಾಗ ಸ್ವಾಮೀಜಿ ಹಣ ಕೊಡಲಿಲ್ಲ ಆಗ ಗೋವಿಂದಬಾಬು ಪ್ರಕರಣದ ದಾಖಲಿಸಿದ್ದಾರೆ.
3 ಕೋಟಿ ರೂ. ಹಣದ ಕುರಿತು ತನಿಖೆ
ವಂಚನೆ ಆಗಿದ್ದ ಐದು ಕೋಟಿ ರೂ. ಪೈಕಿ ಇನ್ನೂ ಮೂರು ಕೋಟಿ ರೂಪಾಯಿಗಾಗಿ ಸಿಸಿಬಿ ಪೊಲೀಸರು ತನಿಖೆ ನಡೆಸಿದ್ದಾರೆ. ತನಿಖೆ ವೇಳೆ ಇದುವರೆಗೆ 1.8 ಲಕ್ಷ ಮೌಲ್ಯದ ಜಮೀನು ಪತ್ರ ದೊರೆತಿದೆ. ಚೈತ್ರಾ ಕುಂದಾಪುರ ಮನೆಯಲ್ಲಿದ್ದ ಸುಮಾರು 65 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ತನ್ನ ಬಾವ ಮ್ಯಾನೇಜರ್ ಆಗಿದ್ದ ಬ್ಯಾಂಕ್ನಲ್ಲಿಟ್ಟಿದ್ದ 40 ಲಕ್ಷ ರೂ. ಹಣ, ಚೈತ್ರಾ ಗೆಳೆಯ ಶ್ರೀಕಾಂತ್ ಬ್ಯಾಂಕ್ ಖಾತೆಯಲ್ಲಿದ್ದ 45 ಲಕ್ಷ ಹಣವನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.
ಹಾಲಶ್ರೀ ಕಾರು ಚಾಲಕ ವಶ
ಇನ್ನು ಸ್ವಾಮೀಜಿ ಬಳಕೆ ಮಾಡುತ್ತಿದ್ದ ಕಾರ್ ಅನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ವಾಮೀಜಿಯನ್ನ ಕೊನೆಯದಾಗಿ ಎಲ್ಲಿ ಡ್ರಾಪ್ ಮಾಡಲಾಯಿತು. ಯಾವ ಕಾರ್ ನಲ್ಲಿ ಹೋದರು ಎಂಬ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:01 am, Sun, 17 September 23