AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ನಿಯಂತ್ರಣಕ್ಕೆ ಮತ್ತೆ ಲಾಕ್​ಡೌನ್ ಆಗುತ್ತಾ ಕರ್ನಾಟಕ?

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ನಾಗಾಲೋಟ ಮುಂದುವರೆದಿದೆ. ಕೊವಿಡ್ ಕಡಿಮೆ ಮಾಡಲು ಮಾಡಿದ್ದ ಲಾಕ್​ಡೌನ್ ಹಂತ ಹಂತವಾಗಿ ಅನ್​ಲಾಕ್ ಆಗಿದೆ. ಆದರೆ ಈಗ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಹೀಗಾಗಿ ಮತ್ತೆ ರಾಜ್ಯವನ್ನ ಲಾಕ್​ಡೌನ್ ಮಾಡ್ತಾರಾ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ. ಲಾಕ್​ಡೌನ್ ಆದಾಗ ಜನರು ತುತ್ತು ಅನ್ನಕ್ಕೂ ಬರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೆಲಸವಿಲ್ಲದೆ. ಎಲ್ಲಿಯೂ ಹೋಗಲಾಗದ ಪರಿಸ್ಥಿತಿಯಲ್ಲಿ ನರಕ ಅನುಭವಿಸಿದ್ದರು. ಸದ್ಯ ಈಗ ಕೊಂಚ ಮಟ್ಟಿಗೆ ಸಡಲಿಕೆ ನೀಡಲಾಗಿದ್ದು, ಕೊರೊನಾ ನಿಯಂತ್ರಣಕ್ಕೆ ಮತ್ತೆ ಲಾಕ್​ಡೌನ್ […]

ಕೊರೊನಾ ನಿಯಂತ್ರಣಕ್ಕೆ ಮತ್ತೆ ಲಾಕ್​ಡೌನ್ ಆಗುತ್ತಾ ಕರ್ನಾಟಕ?
ಆಯೇಷಾ ಬಾನು
ಆಯೇಷಾ ಬಾನು|

Updated on:Jun 30, 2020 | 10:54 AM

Share

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ನಾಗಾಲೋಟ ಮುಂದುವರೆದಿದೆ. ಕೊವಿಡ್ ಕಡಿಮೆ ಮಾಡಲು ಮಾಡಿದ್ದ ಲಾಕ್​ಡೌನ್ ಹಂತ ಹಂತವಾಗಿ ಅನ್​ಲಾಕ್ ಆಗಿದೆ. ಆದರೆ ಈಗ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಹೀಗಾಗಿ ಮತ್ತೆ ರಾಜ್ಯವನ್ನ ಲಾಕ್​ಡೌನ್ ಮಾಡ್ತಾರಾ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ. ಲಾಕ್​ಡೌನ್ ಆದಾಗ ಜನರು ತುತ್ತು ಅನ್ನಕ್ಕೂ ಬರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೆಲಸವಿಲ್ಲದೆ. ಎಲ್ಲಿಯೂ ಹೋಗಲಾಗದ ಪರಿಸ್ಥಿತಿಯಲ್ಲಿ ನರಕ ಅನುಭವಿಸಿದ್ದರು. ಸದ್ಯ ಈಗ ಕೊಂಚ ಮಟ್ಟಿಗೆ ಸಡಲಿಕೆ ನೀಡಲಾಗಿದ್ದು, ಕೊರೊನಾ ನಿಯಂತ್ರಣಕ್ಕೆ ಮತ್ತೆ ಲಾಕ್​ಡೌನ್ ಆಗುತ್ತಾ? ಇಲ್ವಾ? ಎಂಬ ಪ್ರಶ್ನೆ ಎದ್ದಿದೆ.

ಆದ್ರೆ ಇಲ್ಲಿ ಗಮನಿಸುವ ವಿಷಯ ಎಂದ್ರೆ ಸಿಎಂ ಬಿ.ಎಸ್. ಯಡಿಯೂರಪ್ಪ ಲಾಕ್​ಡೌನ್ ಆಗಲ್ಲ ಅಂತಿದ್ದಾರೆ. ಆದ್ರೆ ಆರ್. ಅಶೋಕ್ ಜುಲೈ 7ರಿಂದ ಕಠಿಣ ರೂಲ್ಸ್ ಅಂತಾರೆ. ಎಸ್ಎಸ್ಎಲ್​ಸಿ ಎಕ್ಸಾಂ ಬಳಿಕ ಗಟ್ಟಿ ನಿರ್ಧಾರ ತೆಗೆದುಕೊಳ್ತೀವಿ ಎಂದು ಹೇಳುತ್ತಿದ್ದಾರೆ. ಇನ್ನು ಗೃಹ ಸಚಿವ ಬೊಮ್ಮಾಯಿ ಲಾಕ್​ಡೌನ್ ಪ್ರಶ್ನೆಯೇ ಇಲ್ಲ ಅಂತಾರೆ. ಲಾಕ್​ಡೌನ್ ಬಗ್ಗೆ ಪ್ರಮುಖ ಸಚಿವರಲ್ಲೇ ಗೊಂದಲ ಉಂಟಾಗಿದೆ.

ಲಾಕ್​ಡೌನ್ ಜಾರಿಗೆ ನಿರ್ಧರಿಸಿದ್ರೆ ಹೇಗಿರುತ್ತೆ ಹೊಸ ನಿಯಮ? ರಾಜ್ಯದಲ್ಲಿ ಜಾರಿಯಾಗೋ ಲಾಕ್​ಡೌನ್ ಹೇಗಿರಬಹುದು? ಕರ್ನಾಟಕ ಕಂಪ್ಲೀಟ್ ಲಾಕ್​​ಡೌನ್ ಆಗುತ್ತಾ? ಜನದಟ್ಟಣೆ ಪ್ರದೇಶಗಳು ಮಾತ್ರ ಲಾಕ್​​ಡೌನ್ ಆಗುತ್ತಾ? ಜನ ಹೆಚ್ಚಿರುವ ಪಾರ್ಕ್, ಮಾರ್ಕೆಟ್ ಮತ್ತೆ ಬಂದ್ ಮಾಡ್ತಾರಾ?ಇಲ್ಲಾ ಷರತ್ತುಬದ್ಧ ಲಾಕ್​​ಡೌನ್ ಜಾರಿಗೊಳಿಸ್ತಾರಾ? ಹೀಗೆ ಹತ್ತು ಹಲವು ಪ್ರಶ್ನೆಗಳು ತಲೆಯಲ್ಲಿ ಓಡಾಡುತ್ತಿವೆ. ಆದರೆ ರಾಜಕಾರಣಿಗಳು ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಈಗ ಕೊರೊನಾ ಸಂಖ್ಯೆಗಳನ್ನು ನೋಡಿದ್ರೆ ಲಾಕ್​ಡೌನ್ ಅನಿವಾರ್ಯ ಇಲ್ಲದಿದ್ದರೆ ಸಾವಿನ ಸಂಖ್ಯೆ ಹೆಚ್ಚಾಗುತ್ತೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ರಾಜ್ಯದಲ್ಲಿ ಲಾಕ್​ಡೌನ್ ಆದ್ರೆ ಜನ ಸಂದಣಿ ಪ್ರದೇಶಗಳಲ್ಲಿನ ಮಾರ್ಕೆಟ್​ಗಳ ಸ್ಥಳಾಂತರಿಸುವ ಸಾಧ್ಯತೆ ಇದೆ. ಜನದಟ್ಟಣೆ ಕಡಿಮೆ ಮಾಡುವ ಯತ್ನ ನಡೆಯುತ್ತೆ. ಪಾರ್ಕ್​ ಬೆಂಚ್​ಗಳಲ್ಲಿ ಕುಳಿತು ಜನ ಕೊರೊನಾ ಅಂಟಿಸಿಕೊಳ್ತಿದ್ದಾರೆ. ಹೀಗಾಗಿ ಪಾರ್ಕ್​ಗಳನ್ನ ಮತ್ತೆ ಬಂದ್ ಮಾಡೋ ಸಾಧ್ಯತೆ ಇದೆ. ಅಥವಾ ಪಾರ್ಕ್​​​ಗಳ ಅವಧಿ ಕಡಿತಗೊಳಿಸೋ ಸಾಧ್ಯತೆ ಇದೆ.

ಮೊದಲ ಬಾರಿಗೆ ವಿಧಿಸಿದ್ದ ಲಾಕ್​ಡೌನ್ ಮಾದರಿಯಲ್ಲೇ ಈ ಲಾಕ್​ಡೌನ್ ಕೂಡ ಮುಂದುವರೆಯಬಹುದು. ಸದ್ಯ SSLC ಪರೀಕ್ಷೆಗಳು ನಡೆಯುತ್ತಿರುವುದರಿಂದ ಲಾಕ್​ಡೌನ್ ಕುರಿತು ಗೊಂದಲ ಉಂಟಾಗಿದೆ. ಆದ್ರೆ ಎಕ್ಸಾಂ ಬಳಿಕ ಈ ಬಗ್ಗೆ ನಿರ್ಧರಿಸಲಾಗುತ್ತೆ ಎಂದು ಸಿಎಂ ಬಿಎಸ್​ವೈ, ಆರ್. ಅಶೋಕ್ ಸುಳಿವು ಕೊಟ್ಟಿದ್ದಾರೆ. ಜುಲೈ 4ಕ್ಕೆ ಎಸ್​ಎಸ್​ಎಲ್​ಸಿ ಪರೀಕ್ಷೆಗಳು ಮುಗಿಯಲಿವೆ. ಜುಲೈ 5ರಂದು ಮೊದಲ ‘ಸಂಡೇ ಕರ್ಫ್ಯೂ’ ಜಾರಿಯಾಗಲಿದೆ. ಹೀಗಾಗಿ ಜುಲೈ 6ರಿಂದ 12 ದಿನಗಳ ಕಾಲ ಲಾಕ್​ಡೌನ್ ಮಾಡೋ ಸಾಧ್ಯತೆ ಇದೆ.

Published On - 10:46 am, Tue, 30 June 20

Follow Us
ಆಯೇಷಾ ಬಾನು
ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ
ಹಾಸನದವರಿಗೆ ವಿಶೇಷ ಶಕ್ತಿ ಎಂದ ನಟ ರಂಗಾಯಣ ರಘು: ವಿಡಿಯೋ ನೋಡಿ
ಹಾಸನದವರಿಗೆ ವಿಶೇಷ ಶಕ್ತಿ ಎಂದ ನಟ ರಂಗಾಯಣ ರಘು: ವಿಡಿಯೋ ನೋಡಿ
ರಚಿತಾರಾಮ್ ಹುಟ್ಟುಹಬ್ಬ: ಕೊರಗಜ್ಜನ ಹರಕೆ ಬಗ್ಗೆ ರಚಿತಾರಾಮ್ ಏನಂದ್ರು ನೋಡಿ
ರಚಿತಾರಾಮ್ ಹುಟ್ಟುಹಬ್ಬ: ಕೊರಗಜ್ಜನ ಹರಕೆ ಬಗ್ಗೆ ರಚಿತಾರಾಮ್ ಏನಂದ್ರು ನೋಡಿ
ಬಿಗ್​​ಬಾಸ್: ಸ್ಪರ್ಧಿಗಳ ವರ್ತನೆಗೆ ಬೇಸತ್ತು ಸ್ಟೇಜ್ ಬಿಟ್ಟು ತೆರಳಿದ ಕಿಚ್ಚ
ಬಿಗ್​​ಬಾಸ್: ಸ್ಪರ್ಧಿಗಳ ವರ್ತನೆಗೆ ಬೇಸತ್ತು ಸ್ಟೇಜ್ ಬಿಟ್ಟು ತೆರಳಿದ ಕಿಚ್ಚ