ಧಾರವಾಡ ಜಿಲ್ಲೆಯಲ್ಲಿ ಒಂದೇ ದಿನ ಎರಡು ಪ್ರತ್ಯೇಕ ಅಪಘಾತ: 4 ಸಾವು

| Updated By: ವಿವೇಕ ಬಿರಾದಾರ

Updated on: Apr 16, 2024 | 11:16 AM

ಪ್ರತ್ಯೇಕ ಘಟನೆ: ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಅಂಚಟಗೇರಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿ ಮೂವರು ಮೃತಪಟ್ಟಿದ್ದರೇ, ಕಲಘಟಗಿ ತಾಲೂಕಿನ ಚಳಮಟ್ಟಿ ಗ್ರಾಮದ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟಿದ್ದಾನೆ.

ಧಾರವಾಡ ಜಿಲ್ಲೆಯಲ್ಲಿ ಒಂದೇ ದಿನ ಎರಡು ಪ್ರತ್ಯೇಕ ಅಪಘಾತ: 4 ಸಾವು
ಅಪಘಾತದಲ್ಲಿ ಜಖಂಗೊಂಡ ಕಾರು
Follow us on

ಹುಬ್ಬಳ್ಳಿ, ಏಪ್ರಿಲ್​​ 16: ಹುಬ್ಬಳ್ಳಿ (Hubballi) ತಾಲೂಕಿನ ಅಂಚಟಗೇರಿ (Anchatgeri) ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಮೃತರ ಆಂಧ್ರದ (Andhra Pradesh) ಕರ್ನೂಲ ಜಿಲ್ಲೆಯ ನಿವಾಸಿಗಳಾಗಿದ್ದಾರೆ. ಕಾರು ಖಾಸಗಿ ಬಸ್​ಗೆ ಡಿಕ್ಕಿಯಾಗಿದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರೇ, ಓರ್ವ ಗಂಭೀರ ಸ್ಥಿತಿಯಲ್ಲಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತವಾದ ಕಾರಿನಲ್ಲಿ ಮದ್ಯದ ಬಾಟಲ್​ಗಳು ಪತ್ತೆಯಾಗಿವೆ. ಹುಬ್ಬಳ್ಳಿ ಗ್ರಾಮಾಂತರ​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್​ ಸವಾರ ಸಾವು

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಚಳಮಟ್ಟಿ ಗ್ರಾಮದ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್​ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೆಹಬೂಬ್​ಸಾಬ್ ಮುಲ್ಲಾ (49) ಮೃತ ದುರ್ದೈವಿ. ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ​​ ದಾಖಲಾಗಿದೆ.

ಇದನ್ನೂ ಓದಿ: ಮೈಸೂರು ಮೂಲದ ಮಹಿಳೆ ಸುಡಾನ್​ನಲ್ಲಿ ಅನುಮಾನಾಸ್ಪದವಾಗಿ ಸಾವು

ನಿವೃತ್ತ ಬ್ರಿಗೇಡಿಯರ್​​ ಮೇಲೆ ಹಲ್ಲೆ

ಬೆಂಗಳೂರು: ನಗರದ ಬಿಇಎಲ್ ರಸ್ತೆಯಲ್ಲಿ ನಿವೃತ್ತ ಬ್ರಿಗೇಡಿಯರ್ ರವಿ ಮುನಿಸ್ವಾಮಿ ಎಂಬುವರ ಮೇಲೆ ಕಿಡಿಗೇಡಿಗಳು ಹಲ್ಲೆ ಮಾಡಿದ್ದಾರೆ. ನಿವೃತ್ತ ಬ್ರಿಗೇಡಿಯರ್ ರವಿ ಮುನಿಸ್ವಾಮಿ ಅವರು ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ಮೂವರು ಕಿಡಿಗೇಡಿಗಳು ರವಿ ಮುನಿಸ್ವಾಮಿ ಅವರ ಕಾರು ಅಡ್ಡ ಹಾಕಿದ್ದಾರೆ. ಆಗ ರವಿ ಮುನಿಸ್ವಾಮಿ ಅವರು ಕಾರಿನ ಗಾಜು ಇಳಿಸಿ, ವಿಚಾರಿಸಲು ಮುಂದಾದರು. ಆಗ ಕಿಡಿಗೇಡಿಗಳು ಕಾರಿನ ಕೀ ಕಿತ್ತುಕೊಂಡು ಹಲ್ಲೆ ಮಾಡಿದ್ದಾರೆ.

ರವಿ ಮುನಿಸ್ವಾಮಿ ನಿವೃತ್ತ ಬ್ರಿಗೇಡಿಯರ್​ ಆಗಿದ್ದು, ಕಳೆದ ಬಾರಿ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಸದ್ಯ ಸದಾಶಿವನಗರ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:15 am, Tue, 16 April 24