ಆಟೋ, ಟ್ಯಾಕ್ಸಿ ದರ ಹೆಚ್ಚಳವಾಗುತ್ತಾ? ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಿಷ್ಟು

| Updated By: ಗಂಗಾಧರ​ ಬ. ಸಾಬೋಜಿ

Updated on: Jun 26, 2024 | 4:58 PM

ಕರ್ನಾಟಕದಲ್ಲಿ ಸಾಲು ಸಾಲು ದರ ಏರಿಕೆ ಮಾಡಲಾಗುತ್ತಿದೆ. ಇತ್ತೀಚೆಗೆ ಪೆಟ್ರೋಲ್​, ಡೀಸೆಲ್​ ಬಳಿಕ ಹಾಲಿನ ದರ ಕೂಡ ಏರಿಕೆ ಮಾಡಲಾಗಿದೆ. ಹೀಗಾಗಿ ಪ್ರಯಾಣಿಕರ ದರ ಹೆಚ್ಚಿಸುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಗೆ ಆಟೋ, ಟ್ಯಾಕ್ಸ ಸಂಘಟನೆಗಳಿಂದ ಮನವಿ ಮಾಡಲಾಗಿದೆ. ಹಾಗಾಗಿ ರಾಜ್ಯದಲ್ಲಿ ಆಟೋ ಟ್ಯಾಕ್ಸಿ ದರ ಹೆಚ್ಚಳವಾಗುತ್ತಾ ಎಂಬ ಪ್ರಶ್ನೆಗೆ ಸಚಿವರು ಹೇಳಿದ್ದಿಷ್ಟು.

ಆಟೋ, ಟ್ಯಾಕ್ಸಿ ದರ ಹೆಚ್ಚಳವಾಗುತ್ತಾ? ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಿಷ್ಟು
ಆಟೋ, ಟ್ಯಾಕ್ಸಿ ದರ ಹೆಚ್ಚಳವಾಗುತ್ತಾ? ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಿಷ್ಟು
Follow us on

ರಾಮನಗರ, ಜೂನ್​ 26: ತೈಲ ಬೆಲೆ ಹೆಚ್ಚಳ (price hike) ಹಿನ್ನೆಲೆ ದರ ಹೆಚ್ಚಿಸುವಂತೆ ಕರ್ನಾಟಕದಲ್ಲಿ ಆಟೋ, ಟ್ಯಾಕ್ಸಿ ದರ ಹೆಚ್ಚಳಕ್ಕೆ ಸಂಘಟನೆಗಳು ಮನವಿ ಮಾಡಿದ್ದಾರೆ. ಅವರು ಹೇಳಿದಂತೆ ದರ ಹೆಚ್ಚಿಸಲ್ಲ, ಆದರೆ ಈ ಬಗ್ಗೆ ಒಂದು ನಿರ್ಣಯ ಮಾಡುತ್ತಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಹೇಳಿದ್ದಾರೆ. ಜಿಲ್ಲೆಯ ಚನ್ನಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರಿ ನೌಕರರಿಗೆ ಸಂಬಳ ನೀಡಬೇಕೆಂದರೆ ತೆರಿಗೆ ಅನಿವಾರ್ಯ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರ‌ ಮೂರು ರೂ. ಹೆಚ್ಚಿಸಿದ್ದು ನಿಜ. ಏಕೆಂದರೆ ಸರ್ಕಾರಿ ಕೆಲಸಗಳು ನಡೆಯಬೇಕು. ಸರ್ಕಾರಿ ನೌಕರರಿಗೆ ವೇತನ ಕೊಡಬೇಕು ಅಂದರೆ ತೆರಿಗೆ ಅನಿವಾರ್ಯ. ಆದರೆ ಕೇಂದ್ರ ಸರ್ಕಾರದಂತೆ ತೈಲ, ಅಡುಗೆ ಅನಿಲ ಸಿಲಿಂಡರ್ ಬೆಲೆ ಹೆಚ್ಚಿಸಿಲ್ಲ. ಕೇಂದ್ರ 400 ರೂ. ಗ್ಯಾಸ್​ನ್ನು ಒಂದು ಸಾವಿರ ರೂ. ಮಾಡಿದೆ ಎಂದು ಕಿಡಕಾರಿದ್ದಾರೆ.

ಇದನ್ನೂ ಓದಿ: ಮತ್ತಷ್ಟು ಬಿಸಿಯಾಗಲಿದೆ ಟೀ, ಕಾಫಿ: ಬೆಲೆ ಏರಿಕೆಗೆ ಹೋಟೆಲ್ ಮಾಲೀಕರ ಚಿಂತನೆ

ಬೆಲೆ ಏರಿಕೆಯಿಂದ ಜೀವನ ನಡೆಸೋದೇ ಕಷ್ಟ ಅನ್ನೋವಾಗಲೇ ರಾಜ್ಯ ಸರ್ಕಾರ ಜನರ ಗಾಯದ ಮೇಲೆ ಬೆಲೆಯ ಏರಿಕೆ ಬರೆ ಎಳೆದಿತ್ತು. ತೈಲ ಬೆಲೆ ಹೆಚ್ಚಳ ಜನಾಕ್ರೋಶಕ್ಕೂ ಕಾರಣ ಆಗಿತ್ತು. ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆ ಕಿಚ್ಚು ಜೋರಾಗಿತ್ತು. ಬಿಜೆಪಿ ನಾಯಕರು ಜಿಲ್ಲೆ ಜಿಲ್ಲೆಯಲ್ಲೂ ಪ್ರತಿಭಟನೆ ನಡೆಸಿದ್ದರು.

ತೈಲ ಬೆಲೆ ಏರಿಕೆ ಖಂಡಿಸಿ ಬೆಂಗಳೂರಿನ ಫ್ರೀಡಂಪಾರ್ಕ್​ನಲ್ಲಿ ಪ್ರತಿಭಟನೆ ಮಾಡಲಾಗಿತ್ತು. ಕುದುರೆ ಗಾಡಿ, ಸೈಕಲ್​ನಲ್ಲಿ ಸವಾರಿ ಮಾಡಿ ಆಕ್ರೋಶ ಹೊರ ಹಾಕಲಾಗಿತ್ತು.

ಇದನ್ನೂ ಓದಿ: ಬೆಂಗಳೂರು: ಆಟೋ ಪ್ರಯಾಣ ದರ ಏರಿಕೆಗೆ ಚಾಲಕರ ಸಂಘ ಒತ್ತಾಯ, ನಗರ ಜಿಲ್ಲಾಧಿಕಾರಿಗಳಿಗೆ ಚಾಲಕರಿಂದ ಪತ್ರ

ಪೆಟ್ರೋಲ್ ರೀಟೇಲ್ ಮಾರಾಟ ತೆರಿಗೆ ಶೇಕಡಾ 3.9ರಷ್ಟು ಹೆಚ್ಚಳವಾಗಿದೆ. ಅಂದರೆ ಈ ಮೊದಲು ಶೇಕಡಾ 25.92ರಷ್ಟಿದ್ದ ತೆರಿಗೆ ಶೇಕಡಾ 29.84ಕ್ಕೇರಿದೆ. ಇನ್ನು ಡೀಸೆಲ್‌ ಸೇಲ್ಸ್ ಟ್ಯಾಕ್ಸ್ ದರ ಶೇಕಡಾ 4.1ರಷ್ಟು ಏರಿಕೆ ಕಂಡಿದೆ. ಶೇಕಡಾ 14.34ರಿಂದ ಶೇಕಡಾ 18.44ಕ್ಕೆ ಏರಿಕೆಯಾಗಿದೆ. ಸರ್ಕಾರದ ಆದೇಶದ ಪ್ರಕಾರ, ಪೆಟ್ರೋಲ್ ಬೆಲೆ 3 ರೂಪಾಯಿ, ಹಾಗೆಯೇ ಡೀಸೆಲ್ ಬೆಲೆ ಮೂರುವರೆ ರೂಪಾಯಿಯಷ್ಟು ಹೆಚ್ಚಳ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.