ಪ್ರತ್ಯೇಕ ಘಟನೆ: ಚಿತ್ರದುರ್ಗ, ಮಡಿಕೇರಿಯಲ್ಲಿ ಈಜಲು ತೆರಳಿದ್ದ ಯುವಕರು ಸಾವು
ಈಜಲು ತೆರಳಿದ್ದ ಯುವಕನೋರ್ವ ಚಳ್ಳಕೆರೆ(Challakere) ತಾಲೂಕಿನ ಗೊರ್ಲತ್ತು ಗ್ರಾಮದ ಬಳಿಯಿರುವ ಚೆಕ್‌ಡ್ಯಾಂನಲ್ಲಿ ನೀರುಪಾಲಾಗಿದ್ದರೆ, ಇತ್ತ ಕುಶಾಲನಗರ ತಾಲೂಕಿನ ಹೆರೂರು ಬಳಿ ಇರುವ ಹಾರಂಗಿ ಹಿನ್ನೀರಿನಲ್ಲಿ ಈಜಲು ತೆರಳಿದ್ದಾಗ ಕಾಲಿಗೆ ಮೀನಿನ ಬಲೆ ಸಿಲುಕಿ ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾನೆ.
ಚಿತ್ರದುರ್ಗ, ಏ.06: ಚಳ್ಳಕೆರೆ(Challakere) ತಾಲೂಕಿನ ಗೊರ್ಲತ್ತು ಗ್ರಾಮದ ಬಳಿಯಿರುವ ಚೆಕ್‌ಡ್ಯಾಂನಲ್ಲಿ ಈಜಲು ತೆರಳಿದ್ದ ಯುವಕನೋರ್ವ ನೀರುಪಾಲಾಗಿದ್ದಾನೆ. ಹುಲಿಕುಂಟೆ ಗ್ರಾಮದ ಪ್ರಹ್ಲಾದ್(28) ಮೃತವ್ಯಕ್ತಿ. ಇದೀಗ ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ ಸೇರಿ ಮೃತದೇಹವನ್ನು ಹೊರತೆಗೆದಿದ್ದಾರೆ. ಈ ಕುರಿತು ಪರಶುರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಹಾರಂಗಿ ಹಿನ್ನೀರಿನಲ್ಲಿ ಈಜಲು ತೆರಳಿದ ವ್ಯಕ್ತಿ ನೀರು ಪಾಲು
ಕೊಡಗು: ಜಿಲ್ಲೆಯ ಕುಶಾಲನಗರ ತಾಲೂಕಿನ ಹೆರೂರು ಬಳಿ ಇರುವ ಹಾರಂಗಿ ಹಿನ್ನೀರಿನಲ್ಲಿ ಈಜಲು ತೆರಳಿದ್ದಾಗ ಕಾಲಿಗೆ ಮೀನಿನ ಬಲೆ ಸಿಲುಕಿ ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾನೆ. ಬಾಲು(40) ಮೃತ ವ್ಯಕ್ತಿ. ಬಿಸಿಲ ಬೇಗೆಯ ಹಿನ್ನಲೆ ಈಜಲು ತೆರಳಿದಾಗ ಈ ದುರ್ಘಟನೆ ನಡೆದಿದೆ. ಇದೀಗ ಸ್ಥಳೀಯರು ಮೃತದೇಹವನ್ನು ಹೊರತೆಗೆದಿದ್ದಾರೆ. ಈ ಕುರಿತು ಶುಂಠಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮೂತನೂರಿನಲ್ಲಿ ಆನೆ ದಾಳಿಗೆ ತಮಿಳುನಾಡು ವ್ಯಕ್ತಿ ಸಾವು
ಕೋಲಾರ: ಆನೆ ದಾಳಿಗೆ ತಮಿಳುನಾಡು ವ್ಯಕ್ತಿಯೂರ್ವ ಕೊನೆಯುಸಿರೆಳೆದ ಧಾರುಣ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಮೂತನೂರು ಗ್ರಾಮದಲ್ಲಿ ನಡೆದಿದೆ. ತಮಿಳುನಾಡು ಮೂಲದ ಚಿಕ್ಕಬೀರಪ್ಪ(60) ಮೃತ ದುರ್ದೈವಿ. ಮೂತನೂರು ಅರಣ್ಯ ಪ್ರದೇಶದಲ್ಲಿರುವ ಮಲ್ಲೇಶ್ವರ ಸ್ವಾಮಿ ದೇವಾಲಯಕ್ಕೆ ಬಂದಿದ್ದ ವೇಳೆ ಆನೆ ದಾಳಿ ಮಾಡಿದ್ದು, ಗುರುತು ಸಿಗದ ರೀತಿಯಲ್ಲಿ ದೇಹ ಮಾಂಸದ ಮುದ್ದೆಯಂತಾಗಿದೆ. ಈ ಕುರಿತು ಕಾಮಸಮುದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ