ನಿಮ್ಮ ಮಕ್ಕಳಿಗೆ ಓದು ಬಿಡಿಸಿ, ರಿಯಾಲಿಟಿ ಶೋಗಳಿಗೆ ಕಳಿಸ್ತಿದ್ದೀರಾ? ಹಾಗಾದ್ರೆ ತಪ್ಪದೇ ಈ ಸುದ್ದಿ ಓದಿ

ಮಕ್ಕಳು ಟಿವಿಯಲ್ಲಿ ಕಾಣಿಸಿಕೊಳ್ಳಬೇಕು, ಪ್ರಶಸ್ತಿ ಗಳಿಸಬೇಕು ಅನ್ನೋ ಆಸೆ ಹೆತ್ತವರದು. ಹೀಗಾಗಿ, ಓದನ್ನು ಪಕ್ಕಕ್ಕೆ ಇಟ್ಟು, ಶಾಲಾ ಮಕ್ಕಳನ್ನ ಮನರಂಜನೆಗೆ ಬೇಕಾ ಬಿಟ್ಟಿಯಾಗಿ ಆ್ಯಕ್ಟಿಂಗ್ ಕ್ಲಾಸ್ ಗೆ ಬಳಸಿಕೊಳ್ಳುವ ಮುನ್ನ ಹುಷಾರ್. ಇನ್ಮುಂದೆ ಹೀಗೆ ಮಾಡಿದ್ರೆ ಬೀಳುತ್ತೆ ಕೇಸ್.

ನಿಮ್ಮ ಮಕ್ಕಳಿಗೆ ಓದು ಬಿಡಿಸಿ, ರಿಯಾಲಿಟಿ ಶೋಗಳಿಗೆ ಕಳಿಸ್ತಿದ್ದೀರಾ? ಹಾಗಾದ್ರೆ ತಪ್ಪದೇ ಈ ಸುದ್ದಿ ಓದಿ
ಸಾಂದರ್ಭಿಕ ಚಿತ್ರ
Follow us
| Updated By: ಆಯೇಷಾ ಬಾನು

Updated on: Jun 05, 2024 | 7:20 AM

ಬೆಂಗಳೂರು, ಜೂನ್.05: ಮಗು ಒಳ್ಳೆಯ ಡ್ಯಾನ್ಸ್ ಮಾಡುತ್ತಾ, ಡ್ರಾಮಾ, ನಟನೆ ಮಾಡುತ್ತೆ ಎಂದು ಪೋಷಕರು ತಮ್ಮ ಮಕ್ಕಳನ್ನು ಶಾಲೆ ಕಳಿಸದೆ ನಟನೆ ಕ್ಲಾಸ್​ಗೆ ಸೇರಿಸಿಬಿಡುತ್ತಾರೆ. ತಮ್ಮ ಮಕ್ಕಳು (Children) ಕೂಡ ಫೇಮಸ್ ಆಗಬೇಕೆಂದು ಓದನ್ನೇ (Education) ನಿಲ್ಲಿಸಿರುವ ಮಕ್ಕಳ ಪೋಷಕರು ನೂರಾರು. ಆದರೆ ಮಕ್ಕಳನ್ನು ಶಾಲೆಗೆ ಕಳಸದೆ ನಟನೆ ಡ್ಯಾನ್ಸ್ ನಲ್ಲಿಯೇ ಟೈಮ್ ಕಳೆಯಲು ಬಿಟ್ರೆ ಪೋಷಕರ ಮೇಲೆ ಕೇಸ್ ಬೀಳುತ್ತೆ.

ಅಪ್ರಾಪ್ತ ಮಕ್ಕಳು 14 ವರ್ಷಕ್ಕಿಂತ ಕೆಳಗಿನ ಮಕ್ಕಳು ಶಾಲೆಯಿಂದ 7 ದಿನಕ್ಕಿಂತ ಹೆಚ್ಚು ಗೈರು ಹಾಜರಾಗಿದ್ರೆ ಪೋಷಕರ ಮೇಲೆ ಕೇಸ್ ಬೀಳುತ್ತೆ. ಇತ್ತೀಚಿನ ದಿನಗಳಲ್ಲಿ ರಿಯಾಲಿಟಿ ಶೋಗಳು ಹೆಚ್ಚಾಗಿದ್ದು ಮಕ್ಕಳನ್ನ ಪೋಷಕರು ಹೆಚ್ಚಾಗಿ ರಿಯಾಲಿಟಿ ಶೋಗಳ ದಾಸರನ್ನಾಗಿ ಮಾಡ್ತಾ ಇದ್ದಾರೆ. ಶಾಲೆ ಬಿಡಿಸಿ ಈ ಶೋಗಳಲ್ಲಿ ಭಾಗವಹಿಸಲು ಬಿಡುತ್ತಿದ್ದಾರೆ. ಇದರಿಂದ ಮಕ್ಕಳ ಕಲಿಕೆ ನಷ್ಟವಾಗುತ್ತಿದೆ ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಹೀಗಾಗಿ ಮಕ್ಕಳ ಹಕ್ಕುಗಳ ಆಯೋಗ ಪೋಷಕರು ಹಾಗೂ ಇತರದ ಚಾನಲ್ ಗಳಿಗೆ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಕಸದಿಂದ ರಸ: ಎಲೆಕ್ಟ್ರಿಕ್ ಇ ವಸ್ತುಗಳಿಂದ ತಯಾರಾದ ಸುಂದರ ಚಿತ್ರ, ಸಿಲಿಕಾನ್ ಸಿಟಿ ಮಂದಿ ಫಿದಾ

ಮಕ್ಕಳು ಟಿವಿಯಲ್ಲಿ ಕಾಣಿಸಿಕೊಳ್ಳಬೇಕು, ಪ್ರಶಸ್ತಿ ಗಳಿಸಬೇಕು ಅಂತಾ ಶಾಲೆ ಬಿಡಿಸಿ ದೂರದ ಊರು ಬಿಟ್ಟು ಬೆಂಗಳೂರಿಗೆ ಬಂದು, ಇಲ್ಲಿ ಬಾಡಿಗೆ ಮನೆ ಹಿಡಿದು ಮಕ್ಕಳಿಗೆ ರಿಯಾಲಿಟಿ ಶೋನಲ್ಲಿ ಹಾಡಿಸುತ್ತಾರೆ. ಆದರೆ ಇದರಿಂದ ಮಕ್ಕಳು ಕಡ್ಡಾಯ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಕಲಿಕೆ ಹಳ್ಳ ಹಿಡಿಯುತ್ತಿದೆ. ಹೀಗಾಗಿ ಮಕ್ಕಳನ್ನ ಗರಿಷ್ಠ ಶಾಲೆಯಿಂದ 7 ದಿನಕ್ಕಿಂತ ಹೆಚ್ಚು ಗೈರು ಹಾಜರಾದ್ರೆ ಮಕ್ಕಳು ರಿಯಾಲಿಟಿ ಶೋಗಳಲ್ಲಿಯೇ ಹೆಚ್ಚಾಗಿ ಸಮಯ ಕಳೆಯುತ್ತಿದ್ದರೆ ಪೋಷಕರ ಮೇಲೆ ಕಾನೂನು ರೀತಿಯ ಕ್ರಮಕ್ಕೆ ಮಕ್ಕಳ ಹಕ್ಕು ಆಯೋಗ ಮುಂದಾಗಿದೆ.

ರಿಯಾಲಿಟಿ ಶೋಗಳು ಮಕ್ಕಳಿಗೆ ಒಳ್ಳೆಯ ವೇದಿಕೆ ಒದಗಿಸಿಕೊಡುತ್ತವೆ ಅನ್ನೋದರಲ್ಲಿ ಎರಡು ಮಾತೇ ಇಲ್ಲ. ಪ್ರತಿಭೆಯ ಅನಾವರಣಕ್ಕೆ ಇದಕ್ಕಿಂತ ಒಳ್ಳೆ ಸ್ಥಳ ಸಿಗೋಲ್ಲ. ಹಾಗಂತ ಮಕ್ಕಳನ್ನ ಶಾಲೆಯಿಂದ ವಂಚಿತರಾಗಿ ಮಾಡಿ ಮಕ್ಕಳಿಗೆ ಕಲಿಕೆಯಿಂದ ಹೊರ ಬೀಳುವಂತೆ ಮಾಡುವುದು ಸರಿಯಾದ ಕ್ರಮವಲ್ಲ ಅಂತಿದೆ ಆಯೋಗ.

ಒಟ್ನಲ್ಲಿ ರಿಯಾಲಿಟಿ ಶೋಗಳಲ್ಲಿ ಮಕ್ಕಳು ಭಾಗವಹಿಸುವುದು ಪ್ರತಿಭಾ ಪ್ರದರ್ಶನದ ಜೊತೆಗೆ ಪೋಷಕರು ಮಕ್ಕಳ ಕಲಿಕೆಯ ಬಗ್ಗೆ ನಿಗಾವಹಿಸಬೇಕಿದೆ. ಈಗಿನ ಕ್ರೇಜ್​ಗೆ ಮಕ್ಕಳನ್ನ ಶಾಲೆಯಿಂದ ದೂರ ಉಳಿಯದ್ದಂತೆ ನೋಡಿಕೊಂಡು ಎಚ್ಚರವಹಿಸಬೇಕಿದೆ

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯೂ ಶಾಲೆಗ, ಕಾಲೇಜುಗಳಿಗೆ ರಜೆ ಘೋಷಣೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯೂ ಶಾಲೆಗ, ಕಾಲೇಜುಗಳಿಗೆ ರಜೆ ಘೋಷಣೆ
ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕರೆ ರಾಜಣ್ಣ ಮಂತ್ರಿ ಸ್ಥಾನ ತ್ಯಜಿಸುತ್ತಾರೆ?
ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕರೆ ರಾಜಣ್ಣ ಮಂತ್ರಿ ಸ್ಥಾನ ತ್ಯಜಿಸುತ್ತಾರೆ?
ಆ ಶ್ರೀ ಸ್ಥಾನ ಬಿಟ್ಟುಕೊಡ್ತಾರಾ? ಕೇಳಿ ನಾನೇ ಸ್ವಾಮೀಜಿ ಆಗ್ತೇನೆ: ರಾಜಣ್ಣ
ಆ ಶ್ರೀ ಸ್ಥಾನ ಬಿಟ್ಟುಕೊಡ್ತಾರಾ? ಕೇಳಿ ನಾನೇ ಸ್ವಾಮೀಜಿ ಆಗ್ತೇನೆ: ರಾಜಣ್ಣ
ಕೆಂಪೇಗೌಡರ ಜಯಂತಿಯಲ್ಲಿ ಹಾಸನ ಡಿಸಿ ಕಣ್ಣೀರು, ಕಾರಣವೇನು ಗೊತ್ತಾ?
ಕೆಂಪೇಗೌಡರ ಜಯಂತಿಯಲ್ಲಿ ಹಾಸನ ಡಿಸಿ ಕಣ್ಣೀರು, ಕಾರಣವೇನು ಗೊತ್ತಾ?
ಚಂದ್ರಶೇಖರ ಶ್ರೀಗಳು ನೀಡಿದ ಹೇಳಿಕೆಗೆ ಆರ್ ಅಶೋಕ ತಮ್ಮ ವ್ಯಾಖ್ಯಾನ ನೀಡಿದರು!
ಚಂದ್ರಶೇಖರ ಶ್ರೀಗಳು ನೀಡಿದ ಹೇಳಿಕೆಗೆ ಆರ್ ಅಶೋಕ ತಮ್ಮ ವ್ಯಾಖ್ಯಾನ ನೀಡಿದರು!
ದರ್ಶನ್ ಕಾಣಲು ಬಂದ ವಿಶೇಷ ಚೇತನ ಅಭಿಮಾನಿಯ ಮಾತು
ದರ್ಶನ್ ಕಾಣಲು ಬಂದ ವಿಶೇಷ ಚೇತನ ಅಭಿಮಾನಿಯ ಮಾತು
ಮಳೆಯಿಂದಾಗಿ ಯೂನಿಯನ್ ಬ್ಯಾಂಕ್ ಎಸಿಯೊಳಗೆ ಬಂದು ಅವಿತು ಕುಳಿತ ಮರಿ ಹೆಬ್ಬಾವು
ಮಳೆಯಿಂದಾಗಿ ಯೂನಿಯನ್ ಬ್ಯಾಂಕ್ ಎಸಿಯೊಳಗೆ ಬಂದು ಅವಿತು ಕುಳಿತ ಮರಿ ಹೆಬ್ಬಾವು
ಶ್ರೀಗಳು ಹೇಳಿದ ಮಾತ್ರಕ್ಕೆ ಸಿಎಂ ಬದಲಾವಣೆ ಆಗಲ್ಲ: ಶಾಮನೂರು ಶಿವಶಂಕರಪ್ಪ
ಶ್ರೀಗಳು ಹೇಳಿದ ಮಾತ್ರಕ್ಕೆ ಸಿಎಂ ಬದಲಾವಣೆ ಆಗಲ್ಲ: ಶಾಮನೂರು ಶಿವಶಂಕರಪ್ಪ
‘ಸೂಪರ್​ ಆಗಿದೆ’: ಬೆಂಗಳೂರಲ್ಲಿ ‘ಕಲ್ಕಿ 2898 ಎಡಿ’ ನೋಡಿ ಕನ್ನಡಿಗರು ಖುಷ್
‘ಸೂಪರ್​ ಆಗಿದೆ’: ಬೆಂಗಳೂರಲ್ಲಿ ‘ಕಲ್ಕಿ 2898 ಎಡಿ’ ನೋಡಿ ಕನ್ನಡಿಗರು ಖುಷ್
ಮಂಗಳೂರು: ಜಲದಿಗ್ಭಂದನಕ್ಕೊಳಗಾದ ಮನೆ, ಮನೆಯಲ್ಲಿ ಒಂಟಿ ಮಹಿಳೆ ವಾಸ!
ಮಂಗಳೂರು: ಜಲದಿಗ್ಭಂದನಕ್ಕೊಳಗಾದ ಮನೆ, ಮನೆಯಲ್ಲಿ ಒಂಟಿ ಮಹಿಳೆ ವಾಸ!