AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Rain: ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಇಂದು ಮಿಂಚು ಸಹಿತ ಮಳೆ; ಬೆಂಗಳೂರು ಸೇರಿ ಹಲವೆಡೆ ಹಳದಿ ಅಲರ್ಟ್​ ಘೋಷಣೆ

Bengaluru Rains: ರಾಜ್ಯದಲ್ಲಿ ಹಿಂಗಾರು ಮಳೆ ಮತ್ತೆ ಚುರುಕುಗೊಳ್ಳುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಆಗಲಿದ್ದು, ಒಟ್ಟು 8 ಜಿಲ್ಲೆಗಳಿಗೆ ಹಳದಿ ಅಲರ್ಟ್ ನೀಡಲಾಗಿದೆ.

Karnataka Rain: ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಇಂದು ಮಿಂಚು ಸಹಿತ ಮಳೆ; ಬೆಂಗಳೂರು ಸೇರಿ ಹಲವೆಡೆ ಹಳದಿ ಅಲರ್ಟ್​ ಘೋಷಣೆ
ಬೆಂಗಳೂರು ಮಳೆ
TV9 Web
| Edited By: |

Updated on: Nov 11, 2022 | 6:20 AM

Share

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ (Bangalore Rains) ಕೆಲವು ದಿನಗಳಿಂದ ಕಡಿಮೆಯಾಗಿದ್ದ ಮಳೆ ಮತ್ತೆ ಆರ್ಭಟಿಸಲಾರಂಭಿಸಿದೆ. ಗುರುವಾರ ಸಂಜೆಯಿಂದಲೇ ಬೆಂಗಳೂರಿನ ಹಲವೆಡೆ ಮಳೆ ಶುರುವಾಗಿದೆ. ಬೆಂಗಳೂರು ಹಲವು ಜಿಲ್ಲೆಗಳಲ್ಲಿ ಇಂದು ಕೂಡ ಭಾರೀ ಮಳೆಯಾಗಲಿದೆ. ರಾಜ್ಯದಲ್ಲಿ ಹಿಂಗಾರು ಮಳೆ ಮತ್ತೆ ಚುರುಕುಗೊಳ್ಳುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಆಗಲಿದ್ದು, ಒಟ್ಟು 8 ಜಿಲ್ಲೆಗಳಿಗೆ ಹಳದಿ ಅಲರ್ಟ್ (Yellow Alert) ನೀಡಲಾಗಿದೆ. ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಇಂದು ಮಿಂಚು ಸಹಿತ ಭಾರೀ ಮಳೆಯಾಗುವ ನಿರೀಕ್ಷೆಯಿದೆ.

ಕರ್ನಾಟಕದ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ನವೆಂಬರ್‌ 13 ಮತ್ತು 14ರಂದು ಮಳೆಯಾಗಲಿದೆ. ಬೆಂಗಳೂರು ಸೇರಿದಂತೆ ಚಾಮರಾಜನಗರ, ಕೊಡಗು, ಮಂಡ್ಯ, ಮೈಸೂರು, ಹಾಸನ, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಬೀಳಲಿದೆ. ಹಾಗೇ, ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲೂ ನವೆಂಬರ್ 14ರಂದು ಭಾರೀ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತರ ಒಳನಾಡಿನಾದ್ಯಂತ ಒಣ ಹವೆ ಮುಂದುವರಿಯಲಿದೆ. ಈ ಭಾಗದಲ್ಲಿ ಮಳೆ ಮುನ್ಸೂಚನೆ ಇಲ್ಲ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ

ಇದನ್ನೂ ಓದಿ:Karnataka Rain: ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಇಂದು ಮಳೆಯ ಅಬ್ಬರ ಸಾಧ್ಯತೆ

ಇಂದು ಯಾವ ರಾಜ್ಯಗಳಲ್ಲಿ ಮಳೆ?: ತಮಿಳುನಾಡು, ಪುದುಚೇರಿ, ಕಾರೈಕಲ್, ರಾಯಲಸೀಮಾ ಮತ್ತು ಕರಾವಳಿ ಆಂಧ್ರಪ್ರದೇಶದಲ್ಲಿ ಶನಿವಾರ ಮತ್ತು ಭಾನುವಾರ ಭಾರೀ ಮಳೆಯಾಗಲಿದೆ. ತಮಿಳುನಾಡು, ಪುದುಚೇರಿ, ಕೇರಳ, ಆಂಧ್ರಪ್ರದೇಶ ಮತ್ತು ರಾಯಲಸೀಮಾದಲ್ಲಿ ಇಂದಿನಿಂದ ನವೆಂಬರ್ 13ರವರೆಗೆ ಆರೆಂಜ್ ಅಲರ್ಟ್‌ ನೀಡಲಾಗಿದೆ. ತಮಿಳುನಾಡಿನ ತಿರುಪಟ್ಟೂರು, ವೆಲ್ಲೂರು, ರಾಣಿಪೆಟ್ಟೈ, ತಿರುವಳ್ಳೂರು, ಚೆನ್ನೈ, ಕಾಂಚೀಪುರಂ, ವಿಲ್ಲುಪುರಂ, ಚೆಂಗಲ್ಪಟ್ಟು, ಕಡಲೂರು, ನಾಗಪಟ್ಟಿಣಂ, ತಂಜಾವೂರು, ತಿರುವವೂರು, ಪುದುಕ್ಕೊಟ್ಟೈ, ಶಿವಗಂಗೈ ಮತ್ತು ರಾಮನಾಥಪುರಂ ಜಿಲ್ಲೆಗಳಲ್ಲಿ ಇಂದು ಆರೆಂಜ್ ಅಲರ್ಟ್ ಇರಲಿದೆ.

ಭಾನುವಾರ ಆಂಧ್ರಪ್ರದೇಶದ ಎಸ್‌ಪಿಎಸ್‌ಆರ್ ನೆಲ್ಲೂರು ಮತ್ತು ಚಿತ್ತೂರು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್‌ ನೀಡಲಾಗಿದೆ. ಇಂದು ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ವ್ಯಾಪಕ ಮಳೆ ಮತ್ತು ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಆಂಧ್ರಪ್ರದೇಶದ ಅಂಡಮಾನ್ ಮತ್ತು ನಿಕೋಬಾರ್, ಕೇರಳ, ಮಾಹೆ ಮತ್ತು ಲಕ್ಷದ್ವೀಪಗಳಲ್ಲಿ ಗುಡುಗು ಸಹಿತ ಚದುರಿದ ಮಳೆ ಸಾಧ್ಯತೆಯಿದೆ. ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ಉಪ-ಹಿಮಾಲಯ ಪಶ್ಚಿಮ ಬಂಗಾಳ, ಸಿಕ್ಕಿಂನಲ್ಲೂ ಭಾರೀ ಮಳೆಯಾಗಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ
ಮಾನವೀಯತೆ ಮರೆತ್ರಾ ವೈದ್ಯರು?: ರೋಗಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಆರೋಪ
ಮಾನವೀಯತೆ ಮರೆತ್ರಾ ವೈದ್ಯರು?: ರೋಗಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಆರೋಪ
ದೇವಿಯರಿಗೆ ಉಡಿ ತುಂಬಿ, ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದ ಮುಸ್ಲಿಮರು
ದೇವಿಯರಿಗೆ ಉಡಿ ತುಂಬಿ, ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದ ಮುಸ್ಲಿಮರು
ಹುಲಿ ಕಾರ್ತಿಕ್​​ಗೆ ಚಾಲೆಂಜ್ ಮಾಡಿದ ಅನುಶ್ರೀ; ಗೆದ್ದಿದ್ದು ಯಾರು?
ಹುಲಿ ಕಾರ್ತಿಕ್​​ಗೆ ಚಾಲೆಂಜ್ ಮಾಡಿದ ಅನುಶ್ರೀ; ಗೆದ್ದಿದ್ದು ಯಾರು?
ಪೆನ್ ಕ್ಯಾಪ್ ನುಂಗಿದ ಬಾಲಕನ ಜೀವ ಉಳಿಸಿದ ವೈದ್ಯರು
ಪೆನ್ ಕ್ಯಾಪ್ ನುಂಗಿದ ಬಾಲಕನ ಜೀವ ಉಳಿಸಿದ ವೈದ್ಯರು