ರಾಜ್ಯದಲ್ಲಿ ಇಂದು 1,374 ಜನರಿಗೆ ಕೊರೊನಾ ಸೋಂಕು ದೃಢ, ಮೂವರು ಬಲಿ

ರಾಜ್ಯದಲ್ಲಿ ಇಂದು (ಜುಲೈ 16) 1,374 ಜನರಿಗೆ ಕೊರೊನಾ ಸೋಂಕು ದೃಢವಾಗಿದ್ದು, ಬೆಂಗಳೂರು ಒಂದರಲ್ಲೇ 1,234 ಜನರಿಗೆ ಕೊರೊನಾ ಪಾಸಿಟಿವ್​​ ಬಂದಿದೆ.

ರಾಜ್ಯದಲ್ಲಿ ಇಂದು 1,374 ಜನರಿಗೆ ಕೊರೊನಾ ಸೋಂಕು ದೃಢ, ಮೂವರು ಬಲಿ
ಸಾಂಧರ್ಬಿಕ ಚಿತ್ರ
Follow us
TV9 Web
| Updated By: ವಿವೇಕ ಬಿರಾದಾರ

Updated on:Jul 16, 2022 | 7:19 PM

ಬೆಂಗಳೂರು: ರಾಜ್ಯದಲ್ಲಿ ಇಂದು (ಜುಲೈ 16) 1,374 ಜನರಿಗೆ ಕೊರೊನಾ (Covid) ಸೋಂಕು ದೃಢವಾಗಿದ್ದು, ಬೆಂಗಳೂರು (Bengaluru) ಒಂದರಲ್ಲೇ 1,234 ಜನರಿಗೆ ಕೊರೊನಾ ಪಾಸಿಟಿವ್​​ ಬಂದಿದೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿಗೆ ಮೂವರು ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಇಬ್ಬರು, ಬಳ್ಳಾರಿ (Ballari) ಜಿಲ್ಲೆಯಲ್ಲಿ ಒಬ್ಬರು ಬಲಿಯಾಗಿದ್ದಾರೆ. ರಾಜ್ಯದಲ್ಲಿ  7,296 ಕೊರೊನಾ ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ​ಶೇಕಡಾ 4.86ರಷ್ಟಿದೆ.

ಇಂದು 777 ಜನ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಒಟ್ಟು 3937950 ಜನ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇಂದು ಒಟ್ಟು 28,270 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು ಈ ಪೈಕಿ 1374 ಜನರಲ್ಲಿ ಸೋಂಕು ಪತ್ತೆಯಾಗಿದೆ. ಒಟ್ಟು 7296 ಸಕ್ರಿಯ ಪ್ರಕರಣಗಳು ದಾಖಲಾಗಿವೆ. ಸೋಂಕಿಗೆ ಒಟ್ಟು 40088 ಮಂದಿ ಪ್ರಾಣ ಬಿಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಭಾರತದಲ್ಲಿ 20,044 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆ,  ಭಾರತದಲ್ಲಿ ಶನಿವಾರ (ಜುಲೈ 16) ಒಟ್ಟು 20,044 ಹೊಸ ಕೊವಿಡ್ ಸೋಂಕು ಪ್ರಕರಣಗಳು ವರದಿಯಾಗಿವೆ. ಒಂದು ದಿನದಲ್ಲಿ ಚೇತರಿಸಿಕೊಂಡವರ ಸಂಖ್ಯೆ 18,301. ದೇಶದಲ್ಲಿ ಪ್ರಸ್ತುತ 1,40,760 ಸಕ್ರಿಯ ಪ್ರಕರಣಗಳಿವೆ. ಈವರೆಗೆ 4,30,63,651 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ದೇಶದ ದೈನಂದಿನ ಪಾಸಿಟಿವಿಟಿ ಸರಾಸರಿಯು ಶೇ 4.80 ಇದ್ದರೆ ವಾರದ ಪಾಸಿಟಿವಿಟಿ ಸರಾಸರಿಯು ಶೇ 4.40 ಇದೆ. ದೇಶದಲ್ಲಿ ಈವರೆಗೆ 199.71 ಕೋಟಿ ಡೋಸ್ ಲಸಿಕೆಗಳನ್ನು ನೀಡಲಾಗಿದೆ.

Published On - 7:06 pm, Sat, 16 July 22