Karnataka SSLC 2nd PUC Exam 2021: ಎಸ್ಎಸ್ಎಲ್ಸಿ, ಪಿಯುಸಿ ರಿಪೀಟರ್ಸ್ಗೆ ಟೆನ್ಷನ್ ಶುರು, ಶಿಕ್ಷಣ ಇಲಾಖೆಯಿಂದ ಮತ್ತೊಂದು ನಿರ್ಧಾರ

ದ್ವಿತೀಯ ಪಿಯುಸಿ ಫ್ರೆಶರ್ಸ್ಗೊಂದು ನ್ಯಾಯ, ರಿಪೀಟರ್ಸ್ಗೆ ಒಂದು ನ್ಯಾಯವಾಗಿದೆ. ಸರ್ಕಾರದ ನಿರ್ಧಾರದಿಂದ ದ್ವಿತೀಯ ಪಿಯುಸಿ ರಿಪೀಟರ್ಸ್ಗೆ ಟೆನ್ಷನ್ ಶುರುವಾಗಿದೆ. ದ್ವಿತೀಯ ಪಿಯುಸಿ ಫ್ರೆಶರ್ಸ್ಗೆ ಪರೀಕ್ಷೆ ರದ್ದಾದ್ರೆ ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆಯೋಕೆ ರೆಡಿಯಾಗಬೇಕಿದೆ. ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯು ರಿಪೀಟರ್ಸ್ಗೆ ಜುಲೈ ಕೊನೆಯ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಪುನರಾವರ್ತಿತ ಪರೀಕ್ಷೆ ನಡೆಯಲಿದೆ.

Karnataka SSLC 2nd PUC Exam 2021: ಎಸ್ಎಸ್ಎಲ್ಸಿ, ಪಿಯುಸಿ ರಿಪೀಟರ್ಸ್ಗೆ ಟೆನ್ಷನ್ ಶುರು, ಶಿಕ್ಷಣ ಇಲಾಖೆಯಿಂದ ಮತ್ತೊಂದು ನಿರ್ಧಾರ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Jun 06, 2021 | 9:13 AM

ಬೆಂಗಳೂರು: ಮಹಾಮಾರಿ ಕೊರೊನಾ ಸೋಂಕು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಭಾರಿ ಪರಿಣಾಮ ಬೀರಿದೆ. ಮಹಾಮಾರಿಯಿಂದಾಗಿ ದ್ವಿತೀಯ ಪಿಯುಸಿ ಮಕ್ಕಳು ಪರೀಕ್ಷೆ ಇಲ್ಲದೆ ಪಾಸ್ ಮಾಡಲು ಆದೇಶಿಸಲಾಗಿದೆ. ಹಾಗೂ ಎಸ್ಎಸ್ಎಲ್ಸಿ ಮಕ್ಕಳಿಗೆ ಪರೀಕ್ಷೆ ಇದ್ದರೂ ಫೇಲ್ ಮಾಡಲ್ಲ ಎಂಬ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಆದರೆ ಶಿಕ್ಷಣ ಇಲಾಖೆ ಮತ್ತೊಂದು ಎಡವಟ್ಟಿನ ನಿರ್ಧಾರಕ್ಕೆ ಮುಂದಾಗಿದೆ.

ದ್ವಿತೀಯ ಪಿಯುಸಿ ಫ್ರೆಶರ್ಸ್ಗೊಂದು ನ್ಯಾಯ, ರಿಪೀಟರ್ಸ್ಗೆ ಒಂದು ನ್ಯಾಯವಾಗಿದೆ. ಸರ್ಕಾರದ ನಿರ್ಧಾರದಿಂದ ದ್ವಿತೀಯ ಪಿಯುಸಿ ರಿಪೀಟರ್ಸ್ಗೆ ಟೆನ್ಷನ್ ಶುರುವಾಗಿದೆ. ದ್ವಿತೀಯ ಪಿಯುಸಿ ಫ್ರೆಶರ್ಸ್ಗೆ ಪರೀಕ್ಷೆ ರದ್ದಾದ್ರೆ ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆಯೋಕೆ ರೆಡಿಯಾಗಬೇಕಿದೆ. ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯು ರಿಪೀಟರ್ಸ್ಗೆ ಜುಲೈ ಕೊನೆಯ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಪುನರಾವರ್ತಿತ ಪರೀಕ್ಷೆ ನಡೆಯಲಿದೆ. ಕೊರೊನಾ 3ನೇ ಅಲೆ ಆಗಸ್ಟ್, ಸೆಪ್ಟೆಂಬರ್ನಲ್ಲಿ ಬರುವ ಸಾಧ್ಯತೆ ಇದ್ರೂ ಸರ್ಕಾರ ಈ ರೀತಿಯ ನಿರ್ಧಾರಕ್ಕೆ ಮುಂದಾಗಿದೆ. 93 ಸಾವಿರ ವಿದ್ಯಾರ್ಥಿಗಳ ಜೀವದ ಜೊತೆ ಪಿಯು ಬೋರ್ಡ್ ಚೆಲ್ಲಾಟವಾಡುತ್ತಿದೆ. ಈ ವರ್ಷ 76,387 ಪುನರಾವರ್ತಿತ ಹಾಗೂ 17,477 ಖಾಸಗಿ ವಿದ್ಯಾರ್ಥಿಗಳಿಂದ ದ್ವಿತೀಯ ಪಿಯು ಪರೀಕ್ಷೆಗೆ ನೊಂದಣಿ ಮಾಡಲಾಗಿದೆ. ಸೋಂಕು ಹೆಚ್ಚಾದ್ರೆ ಪರೀಕ್ಷೆ ಹೇಗೆ ನಡೆಸಬೇಕು ಎಂಬ ಬಗ್ಗೆ ಪಿಯು ಬೋರ್ಡ್ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ.

ಪಿಯು ರಿಪೀಟರ್ಸ್ ಪರೀಕ್ಷೆಗೆ ಬೋರ್ಡ್ ಮಾಡಿಕೊಂಡಿರುವ ಪ್ಲ್ಯಾನ್ ಏನು? -ಒಂದು ವೇಳೆ ಸೋಂಕು ಹೆಚ್ಚಾದ್ರೆ ಪ್ರಶ್ನೆಗಳ ಸಂಖ್ಯೆಯಲ್ಲಿ ಇಳಿಕೆ -100 ಗರಿಷ್ಠ ಅಂಕವನ್ನ 50 ಅಂಕಗಳ ಇಳಿಕೆಗೆ ಪ್ಲ್ಯಾನ್ -50 ಅಂಕಗಳಿಗೆ ಮಾತ್ರ ಪರೀಕ್ಷೆ ನಡೆಸಲು ನಿರ್ಧಾರ -ಆ 50 ಅಂಕಗಳನ್ನ ಡಬಲ್ ಮಾಡಿ ಫಲಿತಾಂಶ -ಸಾಧ್ಯವಾದ್ರೆ 5 ಅಂಕ ಗ್ರೇಸ್ ಮಾರ್ಕ್ಸ್ ನೀಡಲು ಪಿಯು ಬೋರ್ಡ್ ಚಿಂತನೆ -ಈಗಿರುವ 3 ಗಂಟೆಯ ಪರೀಕ್ಷೆಯ ಅವಧಿಯಲ್ಲಿ ಕಡಿತ -1 ಗಂಟೆ 30 ನಿಮಿಷಕ್ಕೆ ಇಳಿಸಲು ಪ್ಲ್ಯಾನ್ -ಒಂದು ಬೇಂಚಿಗೆ ಒಬ್ಬರಂತೆ, ಒಂದು ಕೊಠಡಿಯಲ್ಲಿ 8-10 ವಿದ್ಯಾರ್ಥಿಗಳ ವ್ಯವಸ್ಥೆ

ಇದನ್ನೂ ಓದಿ: ಎಸ್ಎಸ್ಎಲ್​ಸಿ, ಪ್ರಥಮ ಪಿಯು ಅಂಕ ಪರಿಗಣಿಸಿ ದ್ವಿತೀಯ ಪಿಯುಸಿ ಫಲಿತಾಂಶ ನೀಡಿ: ಸಚಿವ ಎಸ್.ಸುರೇಶ್ ಕುಮಾರ್ ಸೂಚನೆ