10ಕ್ಕಿಂತ ಹೆಚ್ಚು ಹಸು ಸಾಕುತ್ತಿದ್ದೀರಾ.. ಜಾರಿಗೆ ಬರಲಿದೆ ಹೊಸ ಮಹತ್ವದ ಆದೇಶ
ಬೆಂಗಳೂರು: ಡೈರಿ ಫಾರ್ಮ್ಗಳು ಮತ್ತು ಗೋಶಾಲೆಗಳಿಗೆ ಎನ್.ಜಿ.ಟಿ. ಹೊಸ ಆದೇಶ ಹೊರಡಿಸಲಿದೆ. ಹತ್ತಕ್ಕಿಂತ ಹೆಚ್ಚು ಹಸುಗಳನ್ನ ಸಾಕುವವರಿಗೆ ಈ ಆದೇಶ ಅನ್ವಯವಾಗಲಿದೆ. ನೀವು ಜೀವನೋಪಾಯಕ್ಕಾಗಿ ಹಸು ಸಾಕೋದಾದರೆ 9 ರವರೆಗೆ ಮಾತ್ರ ಸಾಕಿ. 10 ಕ್ಕಿಂತ ಹೆಚ್ಚು ಸಾಕಿದ್ರೆ ನೋಂದಣಿ ಮಾಡಿಸಲೇ ಬೇಕು ಇಲ್ಲವಾದ್ರೆ ಕ್ರಮ ಕೈಗೊಳ್ಳಲಾಗುತ್ತೆ. ಹತ್ತಕ್ಕಿಂತ ಹೆಚ್ಚು ಹಸು ಸಾಕ್ಬೇಕು ಅಂದ್ರೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯಬೇಕು ಮತ್ತು ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ. ಹಸು ಸಾಕುವವರು ಸ್ವಚ್ಛತೆ ಕಾಪಾಡಬೇಕು. ಪ್ರತಿದಿನ ಸ್ಯಾನಿಟೈಸಿಂಗ್, […]
ಬೆಂಗಳೂರು: ಡೈರಿ ಫಾರ್ಮ್ಗಳು ಮತ್ತು ಗೋಶಾಲೆಗಳಿಗೆ ಎನ್.ಜಿ.ಟಿ. ಹೊಸ ಆದೇಶ ಹೊರಡಿಸಲಿದೆ. ಹತ್ತಕ್ಕಿಂತ ಹೆಚ್ಚು ಹಸುಗಳನ್ನ ಸಾಕುವವರಿಗೆ ಈ ಆದೇಶ ಅನ್ವಯವಾಗಲಿದೆ. ನೀವು ಜೀವನೋಪಾಯಕ್ಕಾಗಿ ಹಸು ಸಾಕೋದಾದರೆ 9 ರವರೆಗೆ ಮಾತ್ರ ಸಾಕಿ. 10 ಕ್ಕಿಂತ ಹೆಚ್ಚು ಸಾಕಿದ್ರೆ ನೋಂದಣಿ ಮಾಡಿಸಲೇ ಬೇಕು ಇಲ್ಲವಾದ್ರೆ ಕ್ರಮ ಕೈಗೊಳ್ಳಲಾಗುತ್ತೆ.
ಹತ್ತಕ್ಕಿಂತ ಹೆಚ್ಚು ಹಸು ಸಾಕ್ಬೇಕು ಅಂದ್ರೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯಬೇಕು ಮತ್ತು ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ. ಹಸು ಸಾಕುವವರು ಸ್ವಚ್ಛತೆ ಕಾಪಾಡಬೇಕು. ಪ್ರತಿದಿನ ಸ್ಯಾನಿಟೈಸಿಂಗ್, ಡಿಸಿನ್ಫೆಕ್ಟ್ ಮಾಡೋದು ಕಡ್ಡಾಯ.
ಬಯೋಮೆಡಿಕಲ್ ವೇಸ್ಟ್ ಮ್ಯಾನೇಜ್ಮೆಂಟ್ ರೂಲ್ಸ್ 2016 ಪ್ರಕಾರ ಹಸುಗಳ ತ್ಯಾಜ್ಯ ವಿಲೇವಾರಿ ಮಾಡಬೇಕು. ಹಸುಗಳಿಗೆ ಕುಡಿಯಲು, ತೊಳೆಯಲು ಹಾಗೂ ಫ್ಲೋರ್ ಕ್ಲೀನ್ ಮಾಡಲು ದಿನಕ್ಕೆ 150 ಲೀಟರ್ ನೀರನ್ನ ಮಾತ್ರ ಬಳಕೆ ಮಾಡಬೇಕು. ಗೋಶಾಲೆ ನಡೆಸುವವರು ಹೆಚ್ಚು ಮರ ಗಿಡ ಬೆಳೆಸಬೇಕು. ಗೋಶಾಲೆಗಳು ವಿಶಾಲವಾಗಿರಬೇಕು. ಗೋಶಾಲೆಗಳು ಸಿಟಿಯಿಂದ ಹಾಗೂ ಶಾಲಾ-ಕಾಲೇಜುಗಳಿಂದ, ಆಸ್ಪತ್ರೆಗಳಿಂದ ದೂರ ಇರಬೇಕು ಹೇಗೆ ಕೆಲವೊಂದು ನಿಯಮಗಳನ್ನು ಹೊರಡಿಸಲು ಎನ್.ಜಿ.ಟಿ. ಚಿಂತನೆ ನಡೆಸಿದೆ.
ಜೊತೆಗೆ ಗೋಶಾಲೆಗಳು ಕಾಲುವೆಯಿಂದ 200 ಮೀಟರ್ ದೂರ ಹಾಗೂ ನದಿ-ಸರೋವರದಿಂದ 500 ಮೀಟರ್ ದೂರ ಇರಬೇಕು. ಅಲ್ಲದೆ ಶುದ್ಧ ಕುಡಿಯುವ ನೀರಿನ ಘಟಕಗಳಿಂದ 500 ಮೀಟರ್ ಹಾಗೂ ರಾಜ್ಯ ಹೆದ್ದಾರಿಯಿಂದ 100, ರಾಷ್ಟೀಯ ಹೆದ್ದಾರಿಯಿಂದ 200 ಮೀಟರ್ ದೂರದಲ್ಲಿರಬೇಕು. ಎನ್.ಜಿ.ಟಿ. ಆದೇಶದನ್ವಯ ನಿಯಮಗಳನ್ನ ಜಾರಿ ಮಾಡೋ ಬಗ್ಗೆ ಪಿ.ಸಿ.ಬಿ. ಚರ್ಚೆ ನಡೆಸುತ್ತಿದೆ. ಆದಷ್ಟು ಬೇಗ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅಧಿಕೃತ ಆದೇಶ ಹೊರಬೀಳಲಿದೆ.
Published On - 2:55 pm, Tue, 20 October 20