ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್: ಮತ್ತೆರೆಡು ಬೇಸಿಗೆ ವಿಶೇಷ ರೈಲುಗಳ ಘೋಷಣೆ, ಇಲ್ಲಿದೆ ವಿವರ

ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು ರೈಲ್ವೆ ಇಲಾಖೆ ಮೈಸೂರು-ಅಜ್ಮೀರ್ ಮತ್ತು ಬೆಂಗಳೂರು-ಭಗತ್ ಕಿ ಕೋಥಿ ನಡುವೆ ವಿಶೇಷ ಬೇಸಿಗೆ ರೈಲು ಸಂಚಾರಕ್ಕೆ ಮುಂದಾಗಿದೆ. ಈ ವಿಶೇಷ ರೈಲುಗಳು ಹೊರಡುವ ಮತ್ತು ತಲುಪುವ ಸಮಯ, ನಿಲುಗಡೆ ಸ್ಥಳಗಳು ಮತ್ತು ಬೋಗಿಗಳ ವಿವರಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.

ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್: ಮತ್ತೆರೆಡು ಬೇಸಿಗೆ ವಿಶೇಷ ರೈಲುಗಳ ಘೋಷಣೆ, ಇಲ್ಲಿದೆ ವಿವರ
ಪ್ರಾನಿಧಿಕ ಚಿತ್ರ

Updated on: Apr 03, 2025 | 10:26 AM

ಬೆಂಗಳೂರು, ಏಪ್ರಿಲ್​ 03: ಕರ್ನಾಟದಲ್ಲಿ ಬೇಸಿಗೆ (Summer) ಆರಂಭಕ್ಕೂ ಮುನ್ನವೇ ಬಿಸಿಲು ಜನರು ತಲೆ ಸುಡುತ್ತಿದೆ. ಹೆಚ್ಚುತ್ತಿರುವ ಬಿಸಿಲಿಗೆ ಜನರು ಹೈರಾಣಾಗಿದ್ದಾರೆ. ಈ ಮಧ್ಯೆ ಬೇಸಿಗೆ ರಜೆ ಕೂಡ ಆರಂಭವಾಗಿದೆ. ಹೀಗಾಗಿ ಫ್ಯಾಮಿಲಿ ಸಮೇತ ಬೇಸಿಗೆ ರಜೆ ಕಳೆಯಲು ಜನರು ಬೇರೆ ಬೇರೆ ಸ್ಥಳಗಳಿಗೆ ತೆರಳುತ್ತಾರೆ. ಈ ಹಿನ್ನೆಲೆ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸಲು, ರೈಲ್ವೆ ಮಂಡಳಿ ಬೇಸಿಗೆ ಅವಧಿಯಲ್ಲಿ ವಿಶೇಷ ರೈಲುಗಳ (Special Trains) ಓಡಾಟಕ್ಕೆ ಅನುಮೋದನೆ ನೀಡಿದೆ.

ಮೈಸೂರು-ಅಜ್ಮೀರ್ ಎಕ್ಸ್‌ಪ್ರೆಸ್

  • ಬೇಸಿಗೆ ವಿಶೇಷವಾಗಿ ರೈಲು ಸಂಖ್ಯೆ 06281/06282 ಮೈಸೂರು-ಅಜ್ಮೀರ್ ಎಕ್ಸ್‌ಪ್ರೆಸ್​ (ಒಟ್ಟು 11 ಟ್ರಿಪ್​ಗಳು). ರೈಲು ಸಂಖ್ಯೆ 06281: ಮೈಸೂರಿನಿಂದ ಪ್ರತಿ ಶನಿವಾರ ಏಪ್ರಿಲ್​​ (5,12,19, 26), ಮೇ (3,10,17,24,31) ಮತ್ತು 2 ಜೂನ್ (7,14) ರಂದು ಬೆಳಿಗ್ಗೆ 8:00 ಕ್ಕೆ ಹೊರಟು, ಸೋಮವಾರ ಬೆಳಿಗ್ಗೆ 06:55 ಕ್ಕೆ ಅಜ್ಮೀರ್​ ತಲುಪುತ್ತದೆ.
  • ರೈಲು ಸಂಖ್ಯೆ 06282: ಅಜ್ಮೀರ್​ನಿಂದ ಪ್ರತಿ ಸೋಮವಾರ ಏಪ್ರಿಲ್​ (7,14,21,28), ಮೇ (5,12,19,26) ಮತ್ತು ಜೂನ್ (2,9,16) ರಂದು ಸಂಜೆ 06:50 ಕ್ಕೆ ಹೊರಟು ಬುಧವಾರ ಸಂಜೆ 5:30 ಕ್ಕೆ ಮೈಸೂರು ತಲುಪುತ್ತದೆ.

ಎಲ್ಲಿಲ್ಲಿ ನಿಲುಗಡೆ?

ಈ ರೈಲುಗಳು ಹಾಸನ, ಅರಸೀಕೆರೆ, ಬೀರೂರು, ಚಿಕ್ಕಜಾಜೂರು, ಚಿತ್ರದುರ್ಗ, ರಾಯದುರ್ಗ, ಬಳ್ಳಾರಿ ಕಂಟೋನ್ಮೆಂಟ್, ಹೊಸಪೇಟೆ ಜಂಕ್ಷನ್, ಕೊಪ್ಪಳ, ಗದಗ, ಎಸ್‌ಎಸ್‌ಎಸ್ ಹುಬಳ್ಳಿ, ಧಾರವಾಡ, ಲೋಂಡಾ, ಬೆಳಗಾವಿ, ಗೋಕಾಕ್ ರಸ್ತೆ, ಘಟಪ್ರಭಾ, ರಾಯಬಾಗ, ಕುಡಚಿ, ಮಿರಜ್, ಸಾಂಗಲಿ, ಪುಣೆ, ಲೋನಾವಾಲಾ, ಕಲ್ಯಾಣ್, ವಸಾಯಿ ರೋಡ್, ಸೂರತ್, ವಡೋದರಾ, ರತ್ಲಾಂ, ಮಂದಸೋರ್, ನಿಮಾಚ್, ಚಿತ್ತೌರ್ಗಢ್, ಭಿಲ್ವಾರಾ, ಬಿಜೈನಗರ, ನಾಸಿರಾಬಾದ್ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.

ಯಾವ ಯಾವ ಬೋಗಿಗಳು?

  • ಈ ರೈಲು 14 ಎಸಿ 3 ಟೈರ್ ಬೋಗಿಗಳು, 4 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಗಾರ್ಡ್ ಕೋಚ್ ಸೇರಿದಂತೆ 20 ಬೋಗಿಗಳನ್ನು ಒಳಗೊಂಡಿರುತ್ತದೆ.

ಬೆಂಗಳೂರು – ಭಗತ್ ಕಿ ಕೋಥಿ ವಿಶೇಷ ರೈಲು

  • ರೈಲು ಸಂಖ್ಯೆ 06557/06558 ಎಸ್‌ಎಂವಿಟಿ ಬೆಂಗಳೂರು – ಭಗತ್ ಕಿ ಕೋಥಿ – ಎಸ್‌ಎಂವಿಟಿ ಬೆಂಗಳೂರು ಬೇಸಿಗೆ ವಿಶೇಷ ರೈಲು ಸೇವೆ ಆರಂಭಿಸಲಾಗಿದೆ. (ಒಟ್ಟು 8 ಟ್ರಿಪ್ ಗಳು)
  • ರೈಲು ಸಂಖ್ಯೆ 06557: ಎಸ್​ಎಂವಿಟಿ ಬೆಂಗಳೂರಿನಿಂದ ಏಪ್ರಿಲ್​ (5, 12, 19, 26) ಹಾಗೂ ಮೇ (3, 10, 17, 24) ರಂದು ಸಂಜೆ 7:00 ಗಂಟೆಗೆ ಹೊರಟು, ಸೋಮವಾರ ಮಧ್ಯಾಹ್ನ 1:40 ಕ್ಕೆ ಭಗತ್ ಕಿ ಕೋಥಿಯನ್ನು ತಲುಪಲಿದೆ.
  • ರೈಲು ಸಂಖ್ಯೆ 06558: ಭಗತ್​ ಕಿ ಕೋಥಿಯಿಂದ ಏಪ್ರಿಲ್​ (7, 14, 21, 28) ಹಾಗೂ ಮೇ (5, 12, 19, 26) ರಂದು ರಾತ್ರಿ 11:10 ಕ್ಕೆ ಹೊರಟು, ಬುಧವಾರ ಮಧ್ಯಾಹ್ನ 3:30 ಕ್ಕೆ ಎಸ್‌ಎಂವಿಟಿ ಬೆಂಗಳೂರು ತಲುಪಲಿದೆ.

ಎಲ್ಲಿಲ್ಲಿ ನಿಲುಗಡೆ?

ಈ ರೈಲುಗಳು ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹಾವೇರಿ, ಎಸ್‌ಎಸ್‌ಎಸ್ ಹುಬ್ಬಳಿ, ಧಾರವಾಡ, ಬೆಳಗಾವಿ, ಗೋಕಾಕ್ ರಸ್ತೆ, ಘಟಪ್ರಭಾ, ರಾಯಬಾಗ, ಕುಡಚಿ, ಮಿರಜ್, ಸಾಂಗಲಿ, ಕರಡ್, ಸತಾರಾ, ಪುಣೆ, ಲೋನಾವಾಲಾ, ಕಲ್ಯಾಣ್, ವಸಾಯಿ ರೋಡ್, ಸೂರತ್, ವಡೋದರಾ, ಸಬರಮತಿ, ಮಹೇಸಾನಾ, ಭಿಲಿ, ರಾಣಿವಾರ, ಮಾರ್ವಾರ್, ಬಿನ್ಮಲ್ ಮೊದ್ರನ್, ಜಲೋರ್, ಮೊಕಲ್ಪ‌ರ್, ಸಂಧಾರಿ ಜಂಕ್ಷನ್, ಲುನಿ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.

ಇದನ್ನೂ ಓದಿ
ಕೆಲಸಕ್ಕಾಗಿ ಆರೋಗ್ಯ ನಿರ್ಲಕ್ಷ್ಯಿಸಬೇಡಿ; ಐಸಿಯುಗೆ ದಾಖಲಾದ ಬೆಂಗಳೂರು ಸಿಇಒ
ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಿದ ಹೆಚ್​ಎಂ
ಬೆಂಗಳೂರು ವಿಮಾನ ನಿಲ್ದಾಣ ಮಾಹಿತಿ, ವಿಮಾನ ವೇಳಾಪಟ್ಟಿ ಕನ್ನಡದಲ್ಲಿ ಪ್ರಕಟ
ಕರ್ನಾಟಕ ಸರ್ಕಾರದಿಂದ ಜನರಿಗೆ ಮತ್ತೊಂದು ಬರೆ: ಡೀಸೆಲ್​​ ದರ ಏರಿಕೆ

ಯಾವ ಯಾವ ಬೋಗಿಗಳು?

ಈ ರೈಲು ಒಟ್ಟು 21 ಬೋಗಿಗಳನ್ನು ಹೊಂದಿದ್ದು, ಇದರಲ್ಲಿ 19 ಎಸಿ ಕೋಚ್​ಗಳು ಮತ್ತು 2 ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಗಾರ್ಡ್ ಕೋಚ್‌ಗಳು ಒಳಗೊಂಡಿರುತ್ತವೆ.

ಇದನ್ನೂ ಓದಿ: ಆದಾಯದಲ್ಲಿ ಮೈಲಿಗಲ್ಲು ಸಾಧಿಸಿದ ನೈಋತ್ಯ ರೈಲ್ವೆ: ಹುಬ್ಬಳ್ಳಿ, ಮೈಸೂರು ವಿಭಾಗದಿಂದ ಭಾರೀ ಕೊಡುಗೆ

ಪ್ರತಿ ನಿಲ್ದಾಣದಲ್ಲಿ ವಿವರವಾದ ಆಗಮನ ಮತ್ತು ನಿರ್ಗಮನ ಸಮಯಕ್ಕಾಗಿ, ಪ್ರಯಾಣಿಕರು ಅಧಿಕೃತ ರೈಲ್ವೆ ವೆಬ್ಬೆಟ್ www.enquiry.indianrail.gov.in ಪರಿಶೀಲಿಸಿ, NTES ಅಪ್ಲಿಕೇಶನ್ ಬಳಸಿ ಅಥವಾ 139 ಸಹಾಯವಾಣಿಗೆ ಕರೆ ಮಾಡಲು ವಿನಂತಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:25 am, Thu, 3 April 25