ಕರ್ನಾಟಕ ಸುವರ್ಣ ಸಂಭ್ರಮ 50: 100 ಜನ ಸಾಧಕರಿಗೆ ವಿಶೇಷ ಪ್ರಶಸ್ತಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 31, 2024 | 2:58 PM

ರಾಜ್ಯ ಸರ್ಕಾರ ಈ ವರ್ಷ ಕರ್ನಾಟಕ ನಾಮಕರಣ ಸುವರ್ಣ ಮಹೋತ್ಸವ ಆಚರಿಸುತ್ತಿದೆ. ಹೀಗಾಗಿ ಸರ್ಕಾರ 100 ಜನ ಸಾಧಕರಿಗೆ ವಿಶೇಷ ಪ್ರಶಸ್ತಿ ನೀಡಲು ನಿರ್ಧರಿಸಿದೆ. 50 ಜನ ಮಹಿಳಾ ಸಾಧಕಿಯರು ಮತ್ತು 50 ಜನ ಪುರುಷ ಸಾಧಕರು ವಿಶೇಷ ಪ್ರಶಸ್ತಿಗೆ ಭಾಜನರಾಗಲಿದ್ದಾರೆ.

ಕರ್ನಾಟಕ ಸುವರ್ಣ ಸಂಭ್ರಮ 50: 100 ಜನ ಸಾಧಕರಿಗೆ ವಿಶೇಷ ಪ್ರಶಸ್ತಿ
ಸುವರ್ಣ ಸಂಭ್ರಮ ಪ್ರಶಸ್ತಿ
Follow us on

ಬೆಂಗಳೂರು, ಅಕ್ಟೋಬರ್​ 30: ಕರ್ನಾಟಕ ಸುವರ್ಣ ಸಂಭ್ರಮ -50ರ (Karnataka Suvarna Sambrama-50) ಸಂಭ್ರಮದಲ್ಲಿ 100 ಜನ ಸಾಧರಿಗೆ ಸುವರ್ಣ ಸಂಭ್ರಮ (Suvarna Sambrama) ಎಂಬ ವಿಶೇಷ ಪ್ರಶಸ್ತಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. 50 ಸಾಧಕ ಪುರುಷರಿಗೆ ಮತ್ತು 50 ಸಾಧಕ ಮಹಿಳೆಯರಿಗೆ ಸುವರ್ಣ ಸಂಭ್ರಮ ಪ್ರಶಸ್ತಿ ನೀಡಲಾಗುತ್ತದೆ.

ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷ ಆಗಿರುವುದರಿಂದ ವಿಶೇಷ ವರ್ಷ ಎಂದು ಪರಿಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸುವರ್ಣ ಸಂಭ್ರಮ-50ರ ಸಂಭ್ರಮದಲ್ಲಿ ಸುವರ್ಣ ಮಹೋತ್ಸವ ಎಂಬ ವಿಶೇಷ ಪ್ರಶಸ್ತಿಯನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ: 69 ಜನರ ಪಟ್ಟಿ ಇಲ್ಲಿದೆ

ಅಭಿನಂದನೆ ತಿಳಿಸಿದ ಸಿದ್ದರಾಮಯ್ಯ

ಸುವರ್ಣ ಸಂಭ್ರಮ ಪ್ರಶಸ್ತಿಗೆ ಭಾಜನರಾಗಿರುವ ಸಾಧಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದನೆ ತಿಳಿಸಿದ್ದಾರೆ. “ಕರ್ನಾಟಕ ಸಂಭ್ರಮ -೫೦ರ ಸವಿನೆನಪಿನಲ್ಲಿ ಕೊಡಮಾಡುತ್ತಿರುವ 2024ನೇ ಸಾಲಿನ ಸುವರ್ಣ ಮಹೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಎಲ್ಲಾ ಸಾಧಕರಿಗೆ ಅಭಿನಂದನೆಗಳು. ಪ್ರಶಸ್ತಿ ವಿಜೇತ ಗಣ್ಯರ ಸೇವೆ – ಸಾಧನೆ ಸಮಾಜಕ್ಕೆ ಸ್ಪೂರ್ತಿಯಾಗಲಿ ಎಂದು ಆಶಿಸುತ್ತೇನೆ.” ಎಂದು ಟ್ವೀಟ್​ ಮಾಡಿದ್ದಾರೆ.

ಕರ್ನಾಟಕ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 6:51 pm, Wed, 30 October 24