AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಡಗು: ಚೆಂಬು ಗ್ರಾಮಕ್ಕೆ ಸಚಿವ ಆರ್​. ಅಶೋಕ್​ ಭೇಟಿ; ಭೂಕುಸಿತದಿಂದ‌ ಹಾನಿಗೊಳಗಾದ ಕುಟುಂಬಗಳಿಗೆ 3 ಲಕ್ಷ ಪರಿಹಾರ ನೀಡುವ ಭರವಸೆ

ಮಡಿಕೇರಿ ತಾಲೂಕಿನ ಚೆಂಬು ಗ್ರಾಮದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಭೂಕುಸಿತ ಸಂಭವಿಸಿದ್ದು,  ಭೂಕುಸಿತದಿಂದ‌ ಹಾನಿಗೊಳಗಾದ ಮನೆಗಳಿಗೆ ಸಚಿವ ಆರ್​.ಅಶೋಕ್ ಭೇಟಿ ನೀಡಿದ್ದಾರೆ.

ಕೊಡಗು: ಚೆಂಬು ಗ್ರಾಮಕ್ಕೆ ಸಚಿವ ಆರ್​. ಅಶೋಕ್​ ಭೇಟಿ; ಭೂಕುಸಿತದಿಂದ‌ ಹಾನಿಗೊಳಗಾದ ಕುಟುಂಬಗಳಿಗೆ 3 ಲಕ್ಷ ಪರಿಹಾರ ನೀಡುವ ಭರವಸೆ
ಕಂದಾಯ ಸಚಿವ ಆರ್.ಅಶೋಕ
TV9 Web
| Edited By: |

Updated on:Jul 07, 2022 | 5:30 PM

Share

ಕೊಡಗು: ಮಡಿಕೇರಿ (Madikeri) ತಾಲೂಕಿನ ಚೆಂಬು (Chembu Village) ಗ್ರಾಮದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಭೂಕುಸಿತ (Land Slide) ಸಂಭವಿಸಿದ್ದು,  ಭೂಕುಸಿತದಿಂದ‌ ಹಾನಿಗೊಳಗಾದ ಮನೆಗಳಿಗೆ ಸಚಿವ ಆರ್​. ಅಶೋಕ್ (R Ashok) ಭೇಟಿ ನೀಡಿದ್ದಾರೆ. ಈ ವೇಳೆ ಸಂತ್ರಸ್ತ ಕುಟುಂಬಕ್ಕೆ 3 ಲಕ್ಷ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಸಂತ್ರಸ್ತೆ ಅಕ್ಕಮ್ಮ ಎಂಬುವರಿಗೆ ಆರ್​.ಅಶೋಕ್ ಸ್ಥಳದಲ್ಲೇ 24 ಸಾವಿರ ರೂ. ಪರಿಹಾರ ನೀಡಿದ್ದಾರೆ. ಉಳಿದ‌ 2.76 ಲಕ್ಷ ಮುಂದಿನ ದಿನಗಳಲ್ಲಿ ನೀಡುವ ಭರವಸೆ ನೀಡಿದ್ದಾರೆ.

ಮಂಗಳೂರಿನ ಕಡಲ್ಕೊರೆತ ಪ್ರದೇಶಗಳಿಗೆ ಸಚಿವರ ಭೇಟಿ

ದಕ್ಷಿಣ ಕನ್ನಡ: ಮಂಗಳೂರಿನ ಉಚ್ಚಿಲ ಬಟ್ಟಪಾಡಿ ಕಡಲ ತೀರಕ್ಕೆ ಕಂದಾಯ ಸಚಿವ ಆರ್.ಅಶೋಕ್, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್, ಬಂದರು ಸಚಿವ ಎಸ್.ಅಂಗಾರ ಭೇಟಿ ನೀಡಿದ್ದಾರೆ.  ಕಡಲ್ಕೊ ರೆತದಿಂದ  ಹಾನಿಗೊಳಗಾದ ಉಚ್ಚಿಲದ ಪ್ರದೇಶಗಳನ್ನು ಸಚಿವರು ವೀಕ್ಷಿಸಿ, ಕಡಲ್ಕೊರೆತ ಸಂತ್ರಸ್ತರ ಜೊತೆ ಮಾತುಕತೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ.

ಈ ವೇಳೆ ಸಚಿವ ಸುನೀಲ್ ಕುಮಾರ್ ಅವರಿಗೆ ಸಮುದ್ರಕ್ಕೆ ಕಲ್ಲು ಹಾಕಿ ಕಡಲ್ಕೊರೆತ ನಿಯಂತ್ರಿಸಲು ಮೀನುಗಾರರು ಮನವಿ ಮಾಡಿದ್ದಾರೆ. ಆದರೆ ಕೇವಲ ರೆಸಾರ್ಟ್​​ಗಳನ್ನು ರಕ್ಷಿಸಲು ಕಲ್ಲು ಹಾಕಿತ್ತಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದರು. ಅತೀ ಹೆಚ್ಚು ಕಡಲ್ಕೊರೆತ ಪೀಡಿತ ಜಾಗಗಳಲ್ಲಿ ತಡೆಗೋಡೆ ಕಾಮಗಾರಿ ನಡೆಸಿಲ್ಲ ಎಂದು ಸಚಿವ ಸುನೀಲ್ ಕುಮಾರ್ ಮತ್ತು ಅಂಗಾರ ಬಳಿ ಮೀನುಗಾರರು ಅಳಲು ತೋಡಿಕೊಂಡರು.

Published On - 4:58 pm, Thu, 7 July 22

24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?
ಹೊರಗೆ ಗಿಲ್ಲಿ ಫ್ಯಾನ್​ ಬೇಸ್ ನೋಡಿ ಶಾಕ್ ಆದ ರಾಶಿಕಾ ಶೆಟ್ಟಿ
ಹೊರಗೆ ಗಿಲ್ಲಿ ಫ್ಯಾನ್​ ಬೇಸ್ ನೋಡಿ ಶಾಕ್ ಆದ ರಾಶಿಕಾ ಶೆಟ್ಟಿ
ಗಂಟೆಗಟ್ಟಲೆ ಟೈಂ ವೇಸ್ಟ್​ ಮಾಡಿಸಿ ಹೊರಟ ಮಹಿಳೆಯ ಕಾಲಿಗೆ ಬಿದ್ದ ವ್ಯಾಪಾರಿ
ಗಂಟೆಗಟ್ಟಲೆ ಟೈಂ ವೇಸ್ಟ್​ ಮಾಡಿಸಿ ಹೊರಟ ಮಹಿಳೆಯ ಕಾಲಿಗೆ ಬಿದ್ದ ವ್ಯಾಪಾರಿ
ಲಕ್ಕುಂಡಿ ಗ್ರಾಮದಲ್ಲಿ ಮತ್ತೆ ಪುರಾತನ ವಸ್ತುಗಳು, ನಿಧಿ ಪತ್ತೆ!
ಲಕ್ಕುಂಡಿ ಗ್ರಾಮದಲ್ಲಿ ಮತ್ತೆ ಪುರಾತನ ವಸ್ತುಗಳು, ನಿಧಿ ಪತ್ತೆ!
ಕಿಚ್ಚನ ಎದುರೇ ಗಿಲ್ಲಿ ಗಿಲ್ಲಿ ಎಂದು ಕೂಗಿದ ಫ್ಯಾನ್ಸ್
ಕಿಚ್ಚನ ಎದುರೇ ಗಿಲ್ಲಿ ಗಿಲ್ಲಿ ಎಂದು ಕೂಗಿದ ಫ್ಯಾನ್ಸ್
ಗೋವಾದಲ್ಲಿ ಗೂಗಲ್ ಮ್ಯಾಪ್ ನಂಬಿ ದಾರಿ ತಪ್ಪಿದ ವಿದೇಶಿ ಮಹಿಳೆ
ಗೋವಾದಲ್ಲಿ ಗೂಗಲ್ ಮ್ಯಾಪ್ ನಂಬಿ ದಾರಿ ತಪ್ಪಿದ ವಿದೇಶಿ ಮಹಿಳೆ