ಮಡಿಕೇರಿಯಲ್ಲಿ KSRTC ಬಸ್ ಚಾಲಕನ ಮತ್ತೊಂದು ಎಡವಟ್ಟು: ಯೋಧನ ಪ್ರತಿಮೆಗೆ ಸಾರಿಗೆ ಬಸ್ ಡಿಕ್ಕಿ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 25, 2023 | 9:43 PM

ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಪ್ರತಿಮೆಗೆ ಬಸ್ ಡಿಕ್ಕಿ ಹೊಡೆದಿದ್ದು, ಆ ಮೂಲಕ KSRTC ಚಾಲಕನ ಮತ್ತೊಂದು ಎಡವಟ್ಟು ಸಂಭವಿಸಿದೆ. ಮಡಿಕೇರಿಯ ಹಳೇ ಬಸ್ ನಿಲ್ದಾಣದ  ಬಳಿ ಘಟನೆ ನಡೆದಿದೆ. KSRTC ಬಸ್ ಡಿಕ್ಕಿಯಿಂದ ಪ್ರತಿಮೆ ಅಡಿಗಲ್ಲಿಗೆ ಭಾಗಶಃ ಹಾನಿ ಉಂಟಾಗಿದೆ.

ಮಡಿಕೇರಿಯಲ್ಲಿ KSRTC ಬಸ್ ಚಾಲಕನ ಮತ್ತೊಂದು ಎಡವಟ್ಟು: ಯೋಧನ ಪ್ರತಿಮೆಗೆ ಸಾರಿಗೆ ಬಸ್ ಡಿಕ್ಕಿ
ಪ್ರತಿಮೆ ಅಡಿಗಲ್ಲಿಗೆ ಭಾಗಶಃ ಹಾನಿ
Follow us on

ಮಡಿಕೇರಿ, ಆಗಸ್ಟ್​ 25: ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಪ್ರತಿಮೆಗೆ (statue) ಬಸ್ ಡಿಕ್ಕಿ ಹೊಡೆದಿದ್ದು, ಆ ಮೂಲಕ KSRTC ಚಾಲಕನ ಮತ್ತೊಂದು ಎಡವಟ್ಟು ಸಂಭವಿಸಿದೆ. ಮಡಿಕೇರಿಯ ಹಳೇ ಬಸ್ ನಿಲ್ದಾಣದ  ಬಳಿ ಘಟನೆ ನಡೆದಿದೆ. KSRTC ಬಸ್ ಡಿಕ್ಕಿಯಿಂದ ಪ್ರತಿಮೆ ಅಡಿಗಲ್ಲಿಗೆ ಭಾಗಶಃ ಹಾನಿ ಉಂಟಾಗಿದ್ದು, ಕೆಎಸ್​​ಆರ್​ಟಿಸಿ ಬಸ್ ಚಾಲಕನ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಖಂಡಿಸಿ ಸ್ಥಳೀಯರಿಂದ ಪ್ರತಿಭಟನೆ ಮಾಡಲಾಗಿದ್ದು, ಕೆಲಕಾಲ ಟ್ರಾಫಿಕ್ ಜಾಮ್​ ಸಹ ಉಂಟಾಗಿತ್ತು.​

ಸದ್ಯ ಸರ್ಕಾರಿ ಬಸ್ ಚಾಲಕನ ವಿರುದ್ಧ ನಗರ ಸಂಚಾರಿ ಠಾಣೆಗೆ ದೂರು ನೀಡಲಾಗಿದೆ. 4 ದಿನದ ಹಿಂದೆ ಜನರಲ್ ತಿಮ್ಮಯ್ಯ ಪ್ರತಿಮೆಗೆ KSRTC ಬಸ್ ಡಿಕ್ಕಿಯಾಗಿ ಉರುಳಿಬಿದ್ದಿತ್ತು.

ಜನರಲ್ ಕೆ.ಎಸ್ ತಿಮ್ಮಯ್ಯ ಪ್ರತಿಮೆಗೂ ಹಾನಿ

ಇತ್ತೀಚೆಗೆ KSRTC ಬಸ್​ ಒಂದು ಎದುರಿಗೆ ಬರುತ್ತಿದ್ದ ಪಿಕಪ್ ವಾಹನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸುವ ಪ್ರಯತ್ನದಲ್ಲಿ ನಿಯಂತ್ರಣ ತಪ್ಪಿ ತಿಮ್ಮಯ್ಯ ವೃತ್ತದಲ್ಲಿದ್ದ ಜನರಲ್ ಕೆ.ಎಸ್ ತಿಮ್ಮಯ್ಯ ಅವರ ಪ್ರತಿಮೆಗೆ ಗುದ್ದಲ್ಲಾಗಿತ್ತು.

ಇದನ್ನೂ ಓದಿ: Video: ಮಗು ಹೊತ್ತುಕೊಂಡು ಬಸ್​ ಬಾಗಿಲಲ್ಲೇ ಕುಳಿತು ಮಹಿಳೆ ಪ್ರಯಾಣ: ಕೆಎಸ್​ಆರ್​ಟಿಸಿ ಸಿಬ್ಬಂದಿ ನಿರ್ಲಕ್ಷ್ಯ

KSRTC ಬಸ್​ ಡಿಕ್ಕಿಯಾದ ರಭಸಕ್ಕೆ ಪ್ರತಿಮೆಯೇ ಉರುಳಿ ಬಿದ್ದಿದೆ. ಅದೃಷ್ಟವಶಾತ್, ಚಾಲಕನಿಗೆ ಮತ್ತು ಬಸಲ್ಲಿದ್ದ ಪ್ರಯಾಣಿಕರಿಗೆ ಯಾವುದು ಗಾಯಗಳಾಗಿಲ್ಲ. ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲು ಮಾಡಲಾಗಿತ್ತು.

ಚಾಲಕ ನಿಯಂತ್ರಣ ತಪ್ಪಿ ಚರಂಡಿಯ ಹಳ್ಳಕ್ಕೆ ಬಿದ್ದ ಕೆಎಸ್​ಆರ್​ಟಿಸಿ ಬಸ್

ಮಂಡ್ಯ: ಚಾಲಕ ನಿಯಂತ್ರಣ ತಪ್ಪಿ ಕೆಎಸ್​ಆರ್​ಟಿಸಿ ಬಸ್ ಒಂದು ರಸ್ತೆ ಮಧ್ಯೆದಲ್ಲಿ ನಿರ್ಮಾಣವಾಗುತ್ತಿದ್ದ ಚರಂಡಿಯ ಹಳ್ಳಕ್ಕೆ ಬಿದ್ದಿರುವಂತಹ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಮಾರೇಹಳ್ಳಿ ಗ್ರಾಮದ ಬಳಿಯ ಕೊಳ್ಳೆಗಾಲ ಮಳವಳ್ಳಿ ಹೆದ್ದಾರಿಯಲ್ಲಿ ನಡೆದಿತ್ತು. ತಲಕಾಡಿನಿಂದ ಮಳವಳ್ಳಿಗೆ ಬರುತ್ತಿದ್ದ ಬಸ್ ಏಕಾಏಕಿ ಹಳ್ಳಕ್ಕೆ ಬಿದ್ದಿದೆ. ಅದೃಷ್ಠವಶತ್ ಬಸ್​ನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದು, ಚಾಲಕ ಸೇರಿದಂತೆ ಬಸ್​ನಲ್ಲಿ ಇದ್ದ ಹಲವು ಪ್ರಾಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳು ಆಗಿದ್ದವು.

ಇದನ್ನೂ ಓದಿ: ಮಡಿಕೇರಿ: ಚಾಲಕನ ನಿಯಂತ್ರಣ ತಪ್ಪಿ ನಗರದ ಜನರಲ್ ತಿಮ್ಮಯ್ಯ ಪ್ರತಿಮೆಗೆ ಕೆಎಸ್ ಆರ್ ಟಿಸಿ ಬಸ್, ನೆಲಕ್ಕುರುಳಿದ ಸೇನಾನಿ ಪ್ರತಿಮೆ

ಇನ್ನು ಗಾಯಾಳುಗಳನ್ನ ಮಳವಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇನ್ನು ಹೆದ್ದಾರಿಯಲ್ಲಿ ಯಾವುದೇ ನಾಮಫಲಕ ಹಾಕದೇ ಕಾಮಗಾರಿ ಮಾಡುತ್ತಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:37 pm, Fri, 25 August 23