ಕೊಡಗು ದಸರಾ ಉತ್ಸವದಲ್ಲಿ ಆಕರ್ಷಣೆಯ ಕೇಂದ್ರವಾದ ಕಾಫಿ
ಕೊಡಗಿನಲ್ಲಿ ಈ ಬಾರಿ ವಿಶಿಷ್ಟವಾಗಿ ದಸರಾ ಉತ್ಸವ ಆಯೋಜಿಸಲಾಗಿದೆ. ಮಡಿಕೇರಿ ನಗರ ದಸರಾ ಸಮಿತಿವತಿಯಿಂದ ಈ ಬಾರಿ ಮಡಿಕೇರಿ ನಗರದ ಗಾಂಧಿ ಮೈದಾನದಲ್ಲಿ ಕಾಫಿ ದಸರಾ ಆಯೋಜಿಸಲಾಗಿದೆ. ಈ ಕಾಫಿ ದಸರಾಗೆ ಸಾಕಷ್ಟು ಜನರು ಬಂದಿದ್ದರು. ಕಾಫಿ ದಸರಾದ ವಿಶೇಷತೆ ಏನು? ಇಲ್ಲಿದೆ ಮಾಹಿತಿ
ಕೊಡಗು, ಅಕ್ಟೋಬರ್ 7: ಕಾಫಿ (Coffee) ಕೊಡಗು (Kodagu) ಜಿಲ್ಲೆಯ ಪ್ರಮುಖ ಬೆಳೆಯಾಗಿದೆ. ಮಡಿಕೇರಿ ನಗರ ದಸರಾ ಸಮಿತಿವತಿಯಿಂದ ಈ ಬಾರಿ ಮಡಿಕೇರಿ ನಗರದ ಗಾಂಧಿ ಮೈದಾನದಲ್ಲಿ ಕಾಫಿ ದಸರಾ ಆಯೋಜಿಸಲಾಗಿದೆ. ಕಾಫಿ ದಸರಾದಲ್ಲಿ 20ಕ್ಕೂ ಅಧಿಕ ಬಗೆಯ ಕಾಫಿ ಪುಡಿಗಳು, ಕಾಫಿಯಿಂದ ತಯಾರಿಸಲಾಗಿರುವ ಚಾಕಲೇಟ್ಗಳು, ಕಾಫಿ ಹಣ್ಣಿನ ವೈನ್, ಐಸ್ಕ್ರೀಂ ಹೀಗೆ ಹತ್ತು ಹಲವು ಬಗೆಯ ವೆರೈಟಿ ಉತ್ಪನ್ನಗಳು ಪ್ರದರ್ಶನಕ್ಕಿದ್ದವು.
ಇವುಗಳನ್ನು ಕಂಡ ಜನರು ಕಾಫಿಯಿಂದ ಇಷ್ಟೆಲ್ಲ ಪದಾರ್ಥ ತಯಾರಿಸಬಹುದಾ ಎಂದು ಅಚ್ಚರಿಪಟ್ಟರು. ಕಾಫಿ ಮೇಳ ಉದ್ಘಾಟಿಸಿ, ಬಳಿಕ ಮಾತನಾಡಿದ ಕೃಷಿ ಸಚಿವ ಚಲುವರಾಯಸ್ವಾಮಿ, ಜಿಲ್ಲೆಯ ಕಾಫಿ ಉತ್ಪನ್ನಕ್ಕೆ ಉತ್ತಮ ಬೆಲೆ ಇದ್ದು ಕಾಫಿಯನ್ನು ವೈಜ್ಞಾನಿಕವಾಗಿ ಬೆಳೆಸಲು ತರೆಬೇತಿ ನಿಡಲಾಗುತ್ತದೆ ಎಂದರು.
ಇದನ್ನೂ ಓದಿ: ತಲೆ ಎತ್ತಿರುವ ಗ್ಲಾಸ್ ಬ್ರಿಡ್ಜ್ಗಳನ್ನು ಮುಚ್ಚುವಂತೆ ಆಗ್ರಹ, ಮಾಲೀಕರಿಗೆ ಸಂಕಷ್ಟ
ಕಾಫಿ ದಸರಾದಲ್ಲಿ ಜಿಲ್ಲೆಯ ನೂರಾರು ಕಾಫಿ ಬೆಳೆಗಾರರು ಭಾಗಿಯಾಗಿದ್ದರು. ತಮ್ಮ ವೈವಿಧ್ಯಮಯ ಕಾಫಿ ಉತ್ಪ್ಪನಗಳನ್ನು ಪ್ರದರ್ಶಿಸಿ ಮಾರಾಟ ಮಾಡಿದರು. ಮಹಿಳಾ ಕಾಫಿ ಉದ್ಯಮಿಗಳು ಕಾಫಿ ಬೀಜದಿಂದ ಉತ್ಪಾದಿಸಬಹುದಾದ ಹೊಸ ಹೊಸ ಉತ್ಪನ್ನಗಳನ್ನು ಪ್ರದರ್ಶಿಸಿದರು. ಕಾಫಿ ಐಸ್ಕ್ರೀಂಗಳು ಪ್ರಮುಖ ಆಕರ್ಷೆಯಾಗಿದ್ದವು.
ಜೊತೆಗೆ ಕಾಫಿ ತೋಟದಲ್ಲಿ ಬಳಸುವ ಹತ್ತು ಹಲವು ಪರಿಕರಗಳನ್ನೂ ಕೂಡ ಪ್ರದರ್ಶನಕ್ಕೆ ಇಡಲಾಗಿತ್ತು. ಕಾಫಿಗಿಡದ ಕಾಂಡದಿಂದ ತಯಾರಿಸಲಾಗಿದ್ದ ವಿವಿಧ ಬಗೆಯ ಪಕ್ಷಿಗಳ ಕಲಾಕೃತಿಗಳು ಗಮನ ಸೆಳೆದವು. ಅಲ್ಲದೆ ಕಾಫಿ ಮೇಳಕ್ಕೆ ಆಗಮಿಸಿದವರಿಗೆ ದಿನವಿಡೀ ಬಿಸಿ ಬಿಸಿ ಕಾಫಿಯನ್ನು ಉಚಿತವಾಗಿ ವಿತರಿಸಲಾಯಿತು. ಸಂಜೆ ವೇಳೆಗೆ ಗಾಂಧಿ ಮೈದಾನದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ