ಚಿಲಿಪಿಲಿ ಹಕ್ಕಿಗಳಿಗೆ ಕುಡಿಯುವ ನೀರು – ಸೆಲ್ಫಿ ವಿಡಿಯೋ ಸಂದೇಶದ ಮೂಲಕ ಯುವಕರಿಂದ ವಿನೂತನ ಅಭಿಯಾನ
Summer 2024: ಅತ್ತ ಕಾಡುಗಳ ನಾಶ, ಅರಣ್ಯಕ್ಕೆ ಬೆಂಕಿಬಿಳೋದ್ರಿಂದ ಆಹಾರ ಸಿಗದೆ ಪ್ರಾಣಿಪಕ್ಷಿಗಳು ನಾಡಿನತ್ತ ಬರುತ್ತಿವೆ. ಅದೇ ಇತ್ತ ಸೆಲ್ಫೀ, ರೀಲ್ಸ್ ಎಂದು ರೀಲು ಬಿಡುತ್ತಾ ಅಂತರ್ಜಾಲದಲ್ಲಿ ಸಿಲುಕಿರುವ ಇಂದಿನ ಜನತೆಗೆ ನಾವು ಪ್ರತಿಷ್ಠಾನದ ಸೆಲ್ಫಿ ವಿಡಿಯೋ ಸಂದೇಶ ಅಭಿಯಾನ ಬಡಿದೆಬ್ಬಿಸುವಂತಿದೆ.
ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು, ನದಿ ತೊರೆ ಹಳ್ಳ ಕೊಳ್ಳಗಳು ಬತ್ತುತ್ತಿವೆ. ಇದರಿಂದ ನೀರಿಗಾಗಿ (Drinking water) ಹಾಹಾಕಾರ ಎದುರಾಗಿದೆ. ಮನುಷ್ಯ ಜೀವಿ ದಣಿವಾದ್ರೆ ನೀರನ್ನ ಕುಡಿದು ದಣಿವಾರಿಸಿಕೊಳ್ಳುತ್ತಾನೆ. ಆದ್ರೆ ಮೂಕ ಜೀವಿಗಳು ಏನು ಮಾಡಬೇಕು ಹೇಳಿ. ಈ ಚಿಲಿಪಿಲಿ ಹಕ್ಕಿಗಳ (animals, birds) ಸಮಸ್ಯೆ ಅರಿತ ಕೊಡಗಿನ ತಂಡವೊಂದು ಪಕ್ಷಿಗಳ ದಣಿವಾರಿಸುವ ಪ್ರಯತ್ನಕ್ಕೆ ಕೈ ಹಾಕಿದೆ. ಹಾಗಾದ್ರೆ ಯಾವುದು ಆ ತಂಡ? ಆ ತಂಡದ ವಿನೂತನ ಪ್ರಯತ್ನ ಏನು? ಅಂತ್ತೀರಾ ಇಲ್ಲಿದೆ ಸ್ಪೇಷಲ್ ರಿಪೋರ್ಟ್. ಹೌದು ಹಿಗೊಂದು ಚಿತ್ರಣ (selfie video message) ಕಂಡುಬಂದಿದ್ದು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕಿರಗಂದೂರು ಎಂಬ ಒಂದು ಗ್ರಾಮದಲ್ಲಿ.
ತಮ್ಮದೆ ಆದ ನಾವು ಮತ್ತು ಪ್ರತಿಷ್ಠಾನ ಎಂಬ ತಂಡವನ್ನ ಕಟ್ಟಿಕೊಂಡ ಕಿರಗಂದೂರಿನ ಗೌತಮ್ ಈ ಬೇಸಿಗೆಗಾಲದಲ್ಲಿ ಪಕ್ಷಿಗಳಿಗೆ ನೀರಿಡುವ ಒಂದು ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಒಂದಿಲ್ಲೊಂದು ಸಮಾಜಮುಖಿ ಕೆಲಸಗಳನ್ನ ಮಾಡಿಕೊಂಡು ಬರುತ್ತಿರುವ ಗೌತಮ್ ಆ ಊರಿನಲ್ಲಿ ಫೇಮಸ್. ಕಳೆ ಮೂರು ವರ್ಷಗಳ ಹಿಂದೆ ಹಕ್ಕಿಗೊಂದು ಗುಟುಕು ಅಭಿಯಾನ ಎಂಬ ಒಂದು ಕಾರ್ಯಕ್ರಮವನ್ನ ಆರಂಭಿಸಿದ ಇವರು ವರ್ಷದಿಂದ ವರ್ಷಕ್ಕೆ ವಿನೂತನವಾಗಿ ಪಕ್ಷಿಗಳಿಗೆ ನೀರು ಮತ್ತು ಆಹಾರವನ್ನ ಇಡುವ ಕೆಲಸಕ್ಕೆ ಮುಂದಾಗಿದ್ದಾರೆ.
ಮೊದಲ ವರ್ಷ ಪಕ್ಷಿಗಳಿಗೆ ನೀರಿಟ್ಟು ಅದನ್ನ ಸೆಲ್ಫಿ ಕಳುಹಿಸುವ ಅಭಿಯಾನ, ಎರಡನೇ ವರ್ಷ ಶಾಲಾ ಮಕ್ಕಳಿಗೆ ಪಕ್ಷಿತಜ್ಞರಿಂದ ಪಕ್ಷಿಗಳ ಬಗ್ಗೆ ಮಾಹಿತಿ ಹಾಗೂ ಪ್ರಬಂಧ ಸ್ಪರ್ಧೆಯನ್ನ ಏರ್ಪಡಿಸಿದ್ರು. ಮೂರನೇ ವರ್ಷ ಅಂದ್ರೆ ಈ ಬಾರಿ ಮನೆಯ ಮುಂದೆ, ತಾರಸಿಯ ಮೇಲೆ ಹಾಗೂ ತೋಟದಲ್ಲಿ ಪಕ್ಷಿಗಳಿಗೆ ನೀರು ಹಾಗೂ ಆಹಾರ ಧಾನ್ಯಗಳನ್ನ ಇಡಬೇಕು ಹಾಗೂ ಹಾಗೆ ಇಟ್ಟ ಒಂದು ವಿಡಿಯೋ ಅಥವ ಛಾಯಾಚಿತ್ರವನ್ನ ಇವರಿಗೆ ಕಳುಹಿಸಿಕೊಟ್ಟರೆ ಅದರಲ್ಲಿ ಉತ್ತಮ ಛಾಯಾಚಿತ್ರಕ್ಕೆ ಬಹುಮಾನವನ್ನ ನೀಡುವ ಕೆಲಸಕ್ಕೆ ಗೌತಮ್ ಕಿರಗಂದ್ದೂರು ಮತ್ತವರ ತಂಡ ಮುಂದಾಗಿದೆ.
ಇದನ್ನೂ ಓದಿ: ಇನ್ನು ಒಂದೇ ದೂರುವಾಣಿ: ರೈಲ್ವೆ ದೂರುಗಳಿಗಾಗಿ ಒಂದೇ ಟೋಲ್ ಫ್ರೀ ಹೆಲ್ಪ್ಲೈನ್ ದೂರವಾಣಿ ಲಭ್ಯ
ಇದರ ಒಂದು ಮುಖ್ಯ ಉದ್ದೇಶ ಅಂದ್ರೆ ಬೇಸಗೆಯ ಮೂರು ತಿಂಗಳು ಪಕ್ಷಿಗಳಿಗೆ ನೀರಿನ ಸಮಸ್ಯೆ ಎದುರಾಗುತ್ತೆ ಇದನ್ನ ಹೊಗಲಾಡಿಸುವ ನಿಟ್ಟಿನಲ್ಲಿ ಈ ರೀತಿಯ ಕೆಲಸಕ್ಕೆ ಮುಂದಾಗಿರೋದು. ಬೇಸಿಗೆ ಶುರುವಾದ್ರೆ ಸಾಕು ರಾಜ್ಯದಲ್ಲಿ ನೀರಿಗಾಗಿ ಆಹಾಕಾರ ಶುರುವಾಗುತ್ತೆ. ಮನುಷ್ಯರು ಹಾಗೊ ಹೀಗೊ ಧಣಿವನ್ನ ಆರಿಸಿಕೊಳ್ತಾನೆ. ಆದ್ರೆ ಮೂಕ ಜೀವಿಗಳ ಪಾಡು ಯಾರಿಗೂ ಬೇಡ. ಗುಬ್ಬಿ, ಕೋಗಿಲೆ, ಕಾಡು ಪಾರಿವಾಳ (Nilgiri wood pigeon), ಮರಕುಟುಕ, ಹೀಗೆ ವಿವಿಧ ಜಾತಿಯ ಪಕ್ಷಿಗಳು ಮಳೆಗಾಲ ಚಳಿಗಾಲದಲ್ಲಿ ಹೇಗೋ ಬದುಕಿಬಿಡ್ತವೆ. ಆದ್ರೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಆದಾಗ ಅವುಗಳ ಪರಿಸ್ಥಿತಿ ಹೇಳತೀರದು.
ಕಾಡುಗಳ ನಾಶ, ಅರಣ್ಯಕ್ಕೆ ಬೆಂಕಿಬಿಳೋದ್ರಿಂದ ಆಹಾರ ಸಿಗದೆ ನಾಡಿನತ್ತ ಬರುತ್ವೆ. ಈ ಪಕ್ಷಿಗಳ ದಣಿವಾರಿಸಲು ಮನೆಯ ಸುತ್ತಾ ತೋಟಗಳಲ್ಲಿ, ಮನೆಯ ತಾರಾಸಿಯ ಮೇಲೆ ತೆಂಗಿನ ಚಿಪ್ಪುಗಳಲ್ಲಿ, ಹಳೆಯ ಬಾಟಲ್ ಗಳಲ್ಲಿ, ಅಡಿಕೆ ಹಾಳೆಗಳಲ್ಲಿ ನೀರು ಹಾಗೂ ಆಹಾರ ಇಡೊದ್ರಿಂದ ಅವು ಅಲ್ಲಿಯೇ ಬಂದು ದಣಿವಾರಿಸಿಕೊಂಡು ಹೋಗುತ್ವೆ. ಹಾಗೂ ಮುಂಜಾನೆ ಎದ್ದಾಗಲೂ ಕೂಡ ಹಕ್ಕಿಗಳ ಚಿಲಿಪಿಲಿ ಶಬ್ದದಿಂದ ಒಂದಷ್ಟು ಮನಸಿಗೂ ಕೂಡ ಮುದ ನೀಡುತ್ತದೆ. ನಾವು ಮತ್ತು ಪ್ರತಿಷ್ಠಾನವು ಅಭಿಯಾನವನ್ನ ವಿನೂತನವಾಗಿ ನಾಡಿನ ಜನತೆಗೆ ಮುಟ್ಟಿಸುತ್ತಿರೋದ್ರಿಂದ ಜಿಲ್ಲೆಯ ವಿವಿಧ ಭಾಗಗಳಿಂದ ಅವರ ಕಾರ್ಯಕ್ಕೆ ಉತ್ತಮ ರೆಸ್ಪಾನ್ಸ್ ಕೂಡ ಸಿಕ್ಕಿದೆ ಎನ್ನುತ್ತಾರೆ ಸವಿತಾ, ಪಕ್ಷಿ ಪ್ರೇಮಿ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ