AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಡಿಕೇರಿ ರಾಜಾಸೀಟು ಕಾಮಗಾರಿಯಲ್ಲಿ ಕೋಟ್ಯಂತರ ರೂ. ಅಕ್ರಮ ಆರೋಪ: ತನಿಖೆಗೆ ಮುಂದಾದ ಲೋಕಾಯುಕ್ತ

ಮಡಿಕೇರಿ ಪ್ರವಾಸ ಹಮ್ಮಿಕೊಳ್ಳುವವರಿಗೆ ಇದು ಖುಷಿಯ ಸುದ್ದಿ.‌ ಐತಿಹಾಸಿಕ ರಾಜಾಸೀಟ್ ಪ್ರವಾಸಿಗರಿಗಾಗಿ ನಳನಳಿಸುತ್ತಾ ಇದೆ. ಐದು ಕೋಟಿ ರೂಪಾಯಿ ವೆಚ್ಚದ ಕಾಮಗಾರಿ‌ ಸಂಪೂರ್ಣವಾಗಿದ್ದು ಪ್ರವಾಸಿಗರನ್ನು ಮಂಜಿನ ನಗರಿ ಕೈ ಬೀಸಿ ಕರೆಯುತ್ತಿದೆ. ಆದರೆ ಕಾಮಗಾರಿಯಲ್ಲಿ ಒಂದೂವರೆ ಕೋಟಿ ರೂಪಾಯಿಯಷ್ಟು ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಲೋಕಾಯುಕ್ತ ತನಿಖೆ ಶುರುವಾಗಿದೆ.

ಮಡಿಕೇರಿ ರಾಜಾಸೀಟು ಕಾಮಗಾರಿಯಲ್ಲಿ ಕೋಟ್ಯಂತರ ರೂ. ಅಕ್ರಮ ಆರೋಪ: ತನಿಖೆಗೆ ಮುಂದಾದ ಲೋಕಾಯುಕ್ತ
ಮಡಿಕೇರಿ ರಾಜಾಸೀಟು ಕಾಮಗಾರಿಯಲ್ಲಿ ಕೋಟ್ಯಂತರ ರೂ. ಅಕ್ರಮ ಆರೋಪ: ತನಿಖೆಗೆ ಮುಂದಾದ ಲೋಕಾಯುಕ್ತ
Gopal AS
| Edited By: |

Updated on: Nov 04, 2024 | 7:53 AM

Share

ಮಡಿಕೇರಿ, ನವೆಂಬರ್ 4: ಮಡಿಕೇರಿ ರಾಜಾಸೀಟು ಪ್ರವಾಸಿಗರ ನೆಚ್ಚಿನ ತಾಣ. ಮಡಿಕೇರಿಗೆ ಬಂದಮೇಲೆ‌ ಒಂದು ಬಾರಿಯಾದರೂ ರಾಜಾಸೀಟ್​ಗೆ ಭೇಟಿ ನೀಡಿ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಾ, ಸುಂದರ ಸೂರ್ಯಾಸ್ತವನ್ನು ವೀಕ್ಷಣೆ ಮಾಡುವುದು ಅಂದರೆ ಖುಷಿ. ಈ ಸಂಭ್ರಮವನ್ನು ಹೆಚ್ಚು ಮಾಡಲೆಂದೇ ಕೊಡಗು ಜಿಲ್ಲಾಡಳಿತ, ಪ್ರವಾಸೋದ್ಯಮ‌ ಇಲಾಖೆ ಮತ್ತು ತೋಟಗಾರಿಕಾ ಇಲಾಖೆ ಜತೆಗೂಡಿ ‘ಗ್ರೇಟರ್ ರಾಜಾಸೀಟ್’ ಅಭಿವೃದ್ಧಿ ಪಡಿಸಿವೆ. ಐದು ಕೋಟಿ ರೂ. ವೆಚ್ಚದ ಈ ಕಾಮಗಾರಿ ಬಹುತೇಕ ಸಂಪೂರ್ಣವಾಗಿದ್ದು ಈಗಾಗಲೇ ಲೋಕಾರ್ಪಣೆಗೊಂಡಿದೆ. ಆದರೆ, ಕಾಮಗಾರಿಯಲ್ಲಿ ಸುಮಾರು ಒಂದೂವರೆ ಕೋಟಿ ರೂಪಾಯಿಯಷ್ಟು ಅಕ್ರಮ ನಡೆದಿದೆ ಎಂದು ಅಂತ ಸಾಮಾಜಿಕ ಕಾರ್ಯಕರ್ತರೊಬ್ಬರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.

ಮಾಡದೇ ಇರುವ ಕಾಮಗಾರಿಗೆ ಲಕ್ಷ ಲಕ್ಷ ರೂಪಾಯಿ ಬಿಲ್ ಮಾಡಿಸಿರುವುದು, ಕಳಪೆ ದರ್ಜೆಯ ಸಲಕರಣೆಗಳನ್ನು ದುಬಾರಿ ಬಿಲ್ ಪಾವತಿಸಿ ತಂದಿರುವುದು, ಹಿರಿಯ ಅಧಿಕಾರಿಗಳ ಸಹಿಯನ್ನೇ ಮಾಡದೆ ಬಿಲ್ ಮಂಜೂರು ಮಾಡಿಸಿಕೊಂಡಿರುವುದು ಸೇರಿದಂತೆ ಹತ್ತು ಹಲವು ಆರೋಪಗಳನ್ನು ಲೋಕಾಯುಕ್ತಕ್ಕೆ ನೀಡಿದ ದೂರಿನಲ್ಲಿ ಸಾಮಾಜಿಕ ಕಾರ್ಯಕರ್ತರಾದ ತೆನ್ನಿರ ಮಹಿನಾ ಉಲ್ಲೇಖಿಸಿದ್ದಾರೆ.

In Madikeri Greater Raja's Seat project work, crores of Rs Irregularity found, Lokayukta to investigate

ಸದ್ಯ ಮಹಿನಾ ಅವರು ದಾಖಲೆಗಳ ಸಮೇತ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ. ಈ ದೂರನ್ನು ಕೈಗೆತ್ತಿಕೊಂಡಿರುವ ಅಧಿಕಾರಿಗಳು ಈಗಾಲೇ ತನಿಖೆ ಶುರು ಮಾಡಿದ್ದಾರೆ. ಆದರೆ, ಯಾವಾಗ ವಿಚಾರಣೆ ಶುರುವಾಯಿತೋ ಕಾಮಗಾರಿಯ ಉಸ್ತುವಾರಿ ಹೊತ್ತಿದ್ದ ಮುಖ್ಯ ಎಂಜಿನಿಯರ್ ಏಕಾಏಕಿ ಫೈಲ್​ಗಳನ್ನ ಈಗಾಗಲೇ ನಿವೃತ್ತರಾಗಿರುವ ಮುಖ್ಯ ಎಂಜಿನಿಯರ್​ಗಳ ಮನೆಗೆ ಕೊಂಡೊಯ್ದು ಅದಕ್ಕೆ ಬಲವಂತದಿಂದ ಸಹಿ ಮಾಡಿದ್ದಾರೆ ಎಂದೂ ಆರೋಪಿಸಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೊಡಗು ಜಿಲ್ಲಾಧಿಕಾರಿ ಹಾರಿಕೆಯ ಉತ್ತರ ನೀಡಿದ್ದಾರೆ.

ಇದನ್ನೂ ಓದಿ: 4 ಮಕ್ಕಳು ಹೆತ್ತರೆ 1 ಲಕ್ಷ ರೂ ಬಹುಮಾನ: ಕೊಡವ ಜನಾಂಗಕ್ಕೆ ಕೊಡವ ಸಮಾಜದ ವಿಶಿಷ್ಟ ಆಫರ್

ಒಟ್ಟಿನಲ್ಲಿ ಕೊಡಗು ಪ್ರವಾಸೋದ್ಯಮ ದಿನದಿಂದ ದಿನಕ್ಕೆ ಅಭಿವೃದ್ಧಿ ಆಗುತ್ತಿದೆ. ಪ್ರವಾಸಿಗರ ಮನ ತಣಿಸಲು ಹೊಸ ಹೊಸ ಯೋಜನೆಗಳು ಅನುಷ್ಠಾಗೊಳುತ್ತಿವೆ. ಪ್ರವಾಸೋದ್ಯಮದ ಜತೆಗೆ ಕೊಡಗಿನ‌ ಅಭಿವೃದ್ಧಿಯೂ ಆಗುತ್ತಿದೆ. ಆದರೆ, ಇಲ್ಲಿಯೂ ಅಕ್ರಮ, ಭ್ರಷ್ಟಾಚಾರದ ವಾಸನೆ ಬಂದಿರುವುದು ವಿಪರ್ಯಾಸ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು
ನಪುಂಸಕ, ಗಂಡಸೇ ಅಲ್ಲ ಎಂದಿದ್ದಕ್ಕೆ ಮನನೊಂದು ವ್ಯಕ್ತಿ ಸಾವಿಗೆ ಶರಣು