AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಡಗಿನಲ್ಲೀಗ ಕೌಟುಂಬಿಕ ಕ್ರೀಡಾಕೂಟದ ಸುಗ್ಗಿ; ಕೊರೊನಾ ಮರೆತು ಸಂಭ್ರಮಿಸುತ್ತಿರುವ ಕ್ರೀಡಾಪಟುಗಳು

ಕೊಡಗು ಜಿಲ್ಲೆಯ ಐರಿ ಸಮುದಾಯಗಳ ಮಧ್ಯೆ ಮಡಿಕೇರಿ ತಾಲೂಕಿನ ಮೂರ್ನಾಡು ಗ್ರಾಮದಲ್ಲಿ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿ ಆರಂಭವಾಗಿದೆ. ವಿರಾಜಪೇಟೆ ಶಾಸಕ ಶಾಸಕ ಕೆ.ಜಿ. ಬೋಪಯ್ಯ ಗಾಳಿಯಲ್ಲಿ ಗುಂಡು ಹಾರಿಸಿ ಕ್ರೀಡಾಕೂಟ ಉದ್ಘಾಟಿಸಿದರು.

ಕೊಡಗಿನಲ್ಲೀಗ ಕೌಟುಂಬಿಕ ಕ್ರೀಡಾಕೂಟದ ಸುಗ್ಗಿ; ಕೊರೊನಾ ಮರೆತು ಸಂಭ್ರಮಿಸುತ್ತಿರುವ ಕ್ರೀಡಾಪಟುಗಳು
ಕೌಟುಂಬಿಕ ಕ್ರೀಡಾಕೂಟ
TV9 Web
| Edited By: |

Updated on: Nov 13, 2021 | 3:31 PM

Share

ಕೊಡಗು: ಕೌಟುಂಬಿಕ ಕ್ರೀಡಾ ಚಟುವಟಿಕೆಗಳು ಮತ್ತೆ ಗರಿಗೆದರಿವೆ. ಪ್ರಾಕೃತಿಕ ವಿಕೋಪ ಮತ್ತು ಕೊರೊನಾ (Coronavirus) ಕಾರಣದಿಂದಾಗಿ ಕಳೆದ ಮೂರು ವರ್ಷಗಳಿಂದ ಕ್ರೀಡಾಕೂಟಗಳಿಗೆ ನಿಷೇಧ ಹೇರಲಾಗಿತ್ತು. ಅಲ್ಲದೇ ಯಾವುದೇ ಕಾರಣಕ್ಕೂ ಗುಂಪು ಸೇರುವ ಆಚರಣೆಗಳಿಗೆ ಅಥವಾ ಕಾರ್ಯಕ್ರಮಗಳಿಗೆ ಅವಕಾಶ ಇರಲಿಲ್ಲ. ಇದೀಗ ಕೊರೊನಾ ಇಳಿಮುಖವಾಗಿರುವುದರಿಂದ ಕ್ರೀಡಾ ಚಟುವಟಿಕೆಗಳೂ ಬಿರುಸು ಪಡೆದಿವೆ.

ಕೊಡಗು ಜಿಲ್ಲೆಯ ಐರಿ ಸಮುದಾಯಗಳ ಮಧ್ಯೆ ಮಡಿಕೇರಿ ತಾಲೂಕಿನ ಮೂರ್ನಾಡು ಗ್ರಾಮದಲ್ಲಿ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿ ಆರಂಭವಾಗಿದೆ. ವಿರಾಜಪೇಟೆ ಶಾಸಕ ಶಾಸಕ ಕೆ.ಜಿ. ಬೋಪಯ್ಯ ಗಾಳಿಯಲ್ಲಿ ಗುಂಡು ಹಾರಿಸಿ ಕ್ರೀಡಾಕೂಟ ಉದ್ಘಾಟಿಸಿದರು. ಜಿಟಿಪಿಟಿ ಮಳೆಯ ಮಧ್ಯೆಯೂ ಕ್ರೀಡಾಪಟುಗಳು ಬಹಳ ಉತ್ಸಾಹದಿಂದ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದಾರೆ.

ಕೊಡಗಿನ‌ ಮೂಲ ನಿವಾಸಿಗಳು ತಮ್ಮ ಸಾಂಪ್ರದಾಯಿಕ ಉಡುಪಿನಲ್ಲಿ ಕ್ರೀಡಾ ಕಾರ್ಯಕ್ರಮಕ್ಕೆ ಆಗಮಿಸಿ ವಿಶೇಷ ಮೆರುಗು ನೀಡಿದರು. ಇನ್ನೊಂದೆಡೆ ಕೊಡಗು ಗೌಡ ಸಮುದಾಯಗಳ‌ ಮಧ್ಯೆಯೂ ಕೌಟುಂಬಿಕ ಕ್ರಿಕೆಟ್ ನಡೆದು ಪರ್ಲಕೋಟಿ ಕುಟುಂಬ ಐದನೇ ಬಾರಿಗೆ ಟ್ರೋಫಿ ಎತ್ತಿ ಹಿಡಿದಿದೆ. ಇದೇ ವೇಳೆ ಕೊಡವ ಕುಟುಂಬಗಳ ಮಧ್ಯೆ ಚೌರೀರ ಕಪ್, ಹಾಕಿ ಮತ್ತು ಫುಟ್ಬಾಲ್ ಪಂದ್ಯಾವಳಿ ಏರ್ಪಡಿಸಲಾಗಿದ್ದು ಸೋಮವಾರದಿಂದ ಹಣಾಹಣಿ ಶುರುವಾಗಲಿದೆ.

ಇದನ್ನೂ ಓದಿ: ಕೊಡಗು ಜಿಲ್ಲೆಯಲ್ಲಿ ಕೈಲ್ ಮುಹೂರ್ತ ಹಬ್ಬದ ಸಂಭ್ರಮ; ಕೃಷಿ ಸಂಸ್ಕೃತಿ ಸಾರುವ ಉತ್ಸವಕ್ಕೆ ಕೊರೊನಾ ತಣ್ಣೀರು

ಬೆಂಗಳೂರು ಜೈನ್ ವಿವಿಯಲ್ಲಿ ಖೇಲೋ ಇಂಡಿಯಾ ಯುನಿವರ್ಸಿಟಿ-2022 ಕ್ರೀಡಾಕೂಟ; ಯಡಿಯೂರಪ್ಪ ಘೋಷಣೆ