
ಕೊಡಗು, ಫೆಬ್ರವರಿ 06: ಸಂಸ್ಕೃತಿ ರಕ್ಷಣೆ ಹೆಸರಲ್ಲಿ ನಡೆಯುತ್ತಿರೋ ಕೊಡವ ಹಾಗೂ ಕೊಡವ ಭಾಷಿಕರ ಬೃಹತ್ ಪಾದಯಾತ್ರೆ (Padayatra) ಶುರುವಾಗಿ ಇಂದಿಗೆ ನಾಲ್ಕನೇ ದಿನ. ಈ ದಿನವೂ ಪಾದಯಾತ್ರೆಯಲ್ಲಿ ಜನಸಾಗರ ಕಂಡುಬಂತು. ಇನ್ನು ಮಡಿಕೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ನಾಳೆ ಬೃಹತ್ ಸಮಾವೇಶ ಕೂಡ ನಡೆಯಲಿದ್ದು, ಹೀಗಾಗಿ ಜಿಲ್ಲೆಯ ಮಡಿಕೇರಿ ನಗರದಲ್ಲಿ ನಾಳೆ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆವರೆಗೆ ನಿಷೇಧಿಸಲಾಗಿದೆ. ಜೊತೆಗೆ ನಗರದಲ್ಲಿ ವಾಹನಗಳ ಪಾರ್ಕಿಂಗ್‌ಗೆ ನಿರ್ಬಂಧಿಸಲಾಗಿದೆ.
ಸಂಸ್ಕೃತಿ ರಕ್ಷಣೆಗಾಗಿ ಕೊಡವಾಮೆ ಬಾಳೋ ಪಾದಯಾತ್ರೆ ನಡೆಯುತ್ತಿದೆ. ನಾಲ್ಕನೇ ದಿನವೂ ಪಾದಯಾತ್ರೆಯಲ್ಲಿ ಸಾಕಷ್ಟು ಜನರು ಭಾಗವಹಿಸಿದ್ದರು. ಕುಟ್ಟದಿಂದ ಮಡಿಕೇರಿವರೆಗೆ ಮೆರವಣಿಗೆ ಸಾಗುತ್ತಿದೆ. ಕೊಡವ ಸಂಸ್ಕೃತಿ ಉಳಿಸಲು ಪಾದಯಾತ್ರೆ ನಡೆಯುತ್ತಿದೆ. ನಾಳೆಯ ಬೃಹತ್ ಸಮಾವೇಶದಲ್ಲಿ 30 ಸಾವಿರ ಮಂದಿ ಸೇರುವ ನಿರೀಕ್ಷೆ ಇದೆ.
ಇದನ್ನೂ ಓದಿ: ಕೊಡಗಿನಲ್ಲಿ ಮತ್ತೆ ತಾರಕಕ್ಕೇರಿದ ಕೊಡವ, ಗೌಡ ಸಮುದಾಯಗಳ ಸಂಘರ್ಷ: ಅರ್ಚಕನ ಮೇಲೆ ದಾಳಿ
ಕೊಡಗು ಜಿಲ್ಲೆಯಲ್ಲಿ ಕೊಡವ ಹಾಗೂ ಕೊಡವ ಸಂಸ್ಕೃತಿ ಆಚರಿಸುವ 18 ಮೂಲ ನಿವಾಸಿಗಳಿವೆ. ಕಳೆದ ಕೆಲವು ವರ್ಷಗಳಿಂದ ಈ ಜನಾಂಗಗಳ ಮೇಲೆ ದಬ್ಬಾಳಿಕೆ ಜಾಸ್ತಿಯಾಗಿದ್ದೂ ಮಾತ್ರವಲ್ಲದೆ ಜಿಲ್ಲೆಯ ಅತಿವಿಶಿಷ್ಟ ಸಂಸ್ಕೃತಿ ನಾಶದ ಅಂಚಿಗೆ ತೆರಳುತ್ತಿದೆ ಅನ್ನೋದು ಜನವಲಯದಲ್ಲಿ ಕೇಳಿ ಬರ್ತಾ ಇರೋ ಮಾತು.
ಇದನ್ನೂ ಓದಿ: ಧಾರ್ಮಿಕ ಉಡುಪು ವಿಚಾರಕ್ಕೆ ಕೊಡಗಿನಲ್ಲಿ ತಾರಕಕ್ಕೇರಿದ ಜನಾಂಗೀಯ ಸಂಘರ್ಷ: ನಿಷೇಧಾಜ್ಞೆ ಜಾರಿ
ಹಾಗಾಗಿ ಜಿಲ್ಲೆಯ ಅತಿವಿಶಿಷ್ಟ ಸಂಸ್ಕೃತಿ ರಕ್ಷಣೆಗಾಗಿ ಜಿಲ್ಲೆಯ ಕೊಡವ ಜನಾಂಗ ಹಾಗೂ ಕೊಡವ ಭಾಷಿಕ ಜನಾಂಗದ 10 ಸಾವಿರಕ್ಕೂ ಅಧಿಕ ಮಂದಿ ಕಳೆದ ಮೂರು ದಿನಗಳಿಂದ ಸಾಂಸ್ಕೃತಿಕ ಉಡುಪಿನಲ್ಲಿ ಪಾದಯಾತ್ರೆ ನಡೆಸುತ್ತಿದ್ದಾರೆ. ಸದ್ಯ ಪಾದಯಾತ್ರೆ ನಡೆದಿದ್ದು, ಮಹಿಳೆಯರು, ಮಕ್ಕಳು, ಪುರುಷರು, ವೃದ್ಧರು ಮತ್ತು ಕ್ರಿಡಾಪಟುಗಳು ಸೇರಿದಂತೆ ಹತ್ತು ಹಲವು ವರ್ಗದ ಜನರು ಪಾಲ್ಗೊಂಡು ಶಕ್ತಿ ತುಂಬುತ್ತಿದ್ದಾರೆ.
ಕರ್ನಾಟಕ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.