ಕೊಡಗು: ಪ್ರವಾಸಿಗರಿಗೆ ಖುಷಿಯ ಸುದ್ದಿ; ಮಡಿಕೇರಿಯ ರಾಜಾಸೀಟ್ ಅಪ್​ಗ್ರೇಡ್​ ಆಗಿದೆ ಒಮ್ಮೆ ಭೇಟಿ ನೀಡಿ

ಬೆಟ್ಟದ ತುತ್ತ ತುದಿಯ ವೀವ್​ ಪಾಯಿಂಟ್​ನಲ್ಲಿ ನಿಂತು ಸನ್​ ಸೆಟ್​ ನೋಡುವುದಕ್ಕೆ ಅಂತಾನೇ ಅದೆಷ್ಟೋ  ಪ್ರವಾಸಿಗರು ಸಂಜೆ ವೇಳೆಗೆ ಇಲ್ಲಿಗೆ ಆಗಮಿಸ್ತಾರೆ. ಆ ಮೂಲಕ ಸುಂದರ ನೆನಪುಗಳೊಂದಿಗೆ ಮರಳುತ್ತಾರೆ. ಇದೀಗ ಇವರ ಸವಿ ನೆನಪುಗಳನ್ನು ಮತ್ತಷ್ಟು ಸಿಹಿಯಾಗಿಸಲು ತೊಟಗಾರಿಕಾ ಇಲಾಖೆ ಹೊಸ ಯೋಜನೆ ಜಾರಿಗೊಳಿಸಿದೆ.

ಕೊಡಗು: ಪ್ರವಾಸಿಗರಿಗೆ ಖುಷಿಯ ಸುದ್ದಿ; ಮಡಿಕೇರಿಯ ರಾಜಾಸೀಟ್ ಅಪ್​ಗ್ರೇಡ್​ ಆಗಿದೆ ಒಮ್ಮೆ ಭೇಟಿ ನೀಡಿ
ಸಂಗೀತ ಕಾರಂಜಿ

ಕೊಡಗು: ವೀಕೆಂಡ್​ನಲ್ಲಿ ಪ್ರವಾಸ ಹೋಗುವವರಿಗೆ ಖುಷಿಯ ವಿಚಾರವೊಂದು ಸಿಕ್ಕಂತಾಗಿದೆ. ಕೊಡಗು ಜಿಲ್ಲೆಯ ಮಡಿಕೇರಿಯ ರಾಜಾಸೀಟ್ ಅಪ್​ಗ್ರೇಡ್​ ಆಗಿದೆ. ಮಡಿಕೇರಿ ರಾಜಾಸೀಟ್ (Raja seat) ಸದ್ಯ ಮಂಜಿನ ನಗರಿಗೆ ಬರುವ ಪ್ರವಾಸಿಗಳ ನೆಚ್ಚಿನ ತಾಣವಾಗಿದೆ​. ಸಂಜೆಯ ವೇಳೆ ಇಲ್ಲಿ ಬಂದು ಆಕರ್ಷಕ ಉದ್ಯಾನವನದಲ್ಲಿ ಕಾಲ ಕಳೆಯುವುದು ಬೇರೆಯೇ ಅನುಭವ ನೀಡುತ್ತದೆ. ಇದೀಗ ಇಲ್ಲಿನ ಬೆಟ್ಟದ ಮೇಲಿನ ವೀವ್​ ಪಾಯಿಂಟ್ (view point)​ ಬಳಿ  ಸಂಗೀತದ ಅಲೆಗಳಿಗೆ ತಕ್ಕಂತೆ ಬಳುಕುತ್ತಾ ಲಾಸ್ಯವಾಡುವ ನೀರಿನ ಕಾರಂಜಿ ಮತ್ತಷ್ಟು ಪ್ರವಾಸಿಗರನ್ನು ಸೆಳೆಯುತ್ತಿದೆ. 

ಬೆಟ್ಟದ ತುತ್ತ ತುದಿಯ ವೀವ್​ ಪಾಯಿಂಟ್​ನಲ್ಲಿ ನಿಂತು ಸನ್​ ಸೆಟ್​ ನೋಡುವುದಕ್ಕೆ ಅಂತಾನೇ ಅದೆಷ್ಟೋ  ಪ್ರವಾಸಿಗರು ಸಂಜೆ ವೇಳೆಗೆ ಇಲ್ಲಿಗೆ ಆಗಮಿಸ್ತಾರೆ. ಆ ಮೂಲಕ ಸುಂದರ ನೆನಪುಗಳೊಂದಿಗೆ ಮರಳುತ್ತಾರೆ. ಇದೀಗ ಇವರ ಸವಿ ನೆನಪುಗಳನ್ನು ಮತ್ತಷ್ಟು ಸಿಹಿಯಾಗಿಸಲು ತೊಟಗಾರಿಕಾ ಇಲಾಖೆ ಹೊಸ ಯೋಜನೆ ಜಾರಿಗೊಳಿಸಿದೆ.

ರಾಜಸೀಟ್​ ಉದ್ಯಾನವನದಲ್ಲಿ ನೂತನ ಸಂಗೀತ ಕಾರಂಜಿ ಅಳವಡಿಸಲಾಗಿದೆ. ಸುಮಾರು 20 ಲಕ್ಷ ರೂಪಾಯಿ ವೆಚ್ಚದಲ್ಲಿ ಆಧುನಿಕ ಸಾಫ್ಟ್​ವೇರ್​ಗಳನ್ನು ಅಳವಡಿಸಿ ಈ ಕಾರಂಜಿ ಸಿದ್ಧಗೊಳಿಸಲಾಗಿದೆ. ಬಣ್ಣ ಬಣ್ಣದ ಬೆಳಕಿನಡಿಯಲ್ಲಿ ಸಂಗೀತಕ್ಕೆ ತಕ್ಕಂತೆ ಮುಗಿಲೆತ್ತರಕ್ಕೆ ಚಿಮ್ಮುವ ಕಾರಂಜಿ ಇದೀಗ ರಾಜಾಸೀಟ್​ನ ವಿಶೇಷ ಆಕರ್ಷಣೆ ಎನಿಸಿದೆ ಎಂದು ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಪ್ರಮೋದ್ ಹೇಳಿದ್ದಾರೆ.

ಸದ್ಯ ಪ್ರಯೋಗಾತ್ಮಕವಾಗಿ ಈ ಕಾರಂಜಿಯನ್ನು ಹಾರಿಸಲಾಗುತ್ತಿದೆ. ಪ್ರತಿದಿನ ಸಂಜೆ 7 ಗಂಟೆಗೆ ಆರಂಭವಾಗುವ ಇದು 20 ನಿಮಿಷಗಳ ಕಾಲ ಪ್ರವಾಸಿಗರ ಮನ ತಣಿಸಲಿದೆ. ವೀವ್ ಪಾಯಿಂಟ್​ನಲ್ಲಿ ಸೂರ್ಯಾಸ್ತವಾಗುತ್ತಿದ್ದಂತೆಯೇ ಇತ್ತ ಮೇಲ್ಭಾಗದ ಉದ್ಯಾನವನದಲ್ಲಿ ನೀರಿನ ವೈಯಾರ ಆರಂಭವಾಗುತ್ತದೆ. ವಿಶೇಷ ಅಂದರೆ ಈ ಕಾರಂಜಿಗೆ ಕೊಡಗಿನ ವಿಶೇಷ ವಾಲಗದ ಸಂಗೀತವನ್ನು ಅಳವಡಿಸಲಾಗಿದ್ದು, ಪ್ರವಾಸಿಗರಿಗೆ ವಿಶೇಷ ಮುದ ನೀಡುತ್ತಿದೆ.

ಈ ಕಾರಂಜಿಗೆ ಅತ್ಯಾಧುನಿಕ ಸಾಫ್ಟ್​ವೇರ್​ ಅಳವಡಿಸಲಾಗಿದೆ. ಕೇವಲ ಮೊಬೈಲ್​ನಲ್ಲೇ ಇದನ್ನು ನಿರ್ವಹಣೆ ಮಾಡಬಹುದಾಗಿದೆ. ಇನ್ನು ಕೆಲವು ದಿನಗಳ ಪ್ರಯೋಗದ ಬಳಿಕ ಶಾಶ್ವತವಾಗಿ ಇದನ್ನು ಜಾರಿಗೆ ತರಲಾಗುತ್ತದೆ. ಹಾಗಾಗಿ ಕೊಡಗು ಜಿಲ್ಲೆಗೆ ಅದರಲ್ಲೂ ಮಡಿಕೇರಿಗೆ ಪ್ರವಾಸ ಅಂತ ಬರುವವರಿಗೆ ಇನ್ನು ರಾಜಾಸೀಟ್​ನ ಸೂರ್ಯಾಸ್ತದ ಜೊತೆ ಸಂಗೀತ ಕಾರಂಜಿ ಮತ್ತಷ್ಟು​ ಖುಷಿ ನೀಡಲಿದೆ.

ವರದಿ: ಗೋಪಾಲ್ ಸೋಮಯ್ಯ

ಇದನ್ನೂ ಓದಿ: ಮಂಗಳೂರು: ಪಿಲಿಕುಳ ಉದ್ಯಾನವನದಲ್ಲಿ 9 ವರ್ಷದ ಒಲಿವರ್ ಹೆಸರಿನ ಹುಲಿ ಏಕಾಏಕಿ ಸಾವು

ಪ್ರವಾಸಕ್ಕೆ ಹೋಗಿ ಹಿಮಪಾತಕ್ಕೆ ಬಲಿಯಾದ 16ಕ್ಕೂ ಹೆಚ್ಚು ಮಂದಿ; ಹಿಮದಡಿ ಸಿಲುಕಿದ ಕಾರಿನಲ್ಲಿ ಶವಗಳು, ಸೇನೆಯಿಂದ ರಕ್ಷಣಾ ಕಾರ್ಯಾಚರಣೆ

Published On - 1:03 pm, Wed, 12 January 22

Click on your DTH Provider to Add TV9 Kannada