ಬಿಳಿ ಸ್ವಿಫ್ಟ್​​ ಕಾರಿನಲ್ಲಿ ಬಂದು, ಸಮ್ಮೋಹನಗೊಳಿಸಿ ಗೂಗಲ್ ಪೇ ಮೂಲಕ ಹಣ ದೋಚುತ್ತಿದ್ದಾರೆ ಸ್ವಾಮೀಜಿ ವೇಷಧಾರಿಗಳು!

ಕೆಎ 02 ಎಹೆಚ್ 3717 ನೋಂದಣಿಯ ಬಿಳಿ ಸ್ವಿಫ್ಟ್​​ ಕಾರಿನಲ್ಲಿ ಬಂದಿರುವ ವಂಚಕರು ಸಮ್ಮೋಹನಗೊಳಿಸಿ ಹಣ ಪಡೆಯುತ್ತಿದ್ದಾರೆ. ಜನ ಎಚ್ಚರದಿಂದ ಇರುವಂತೆ ಕೋರಲಾಗಿದೆ. ಕಾರು ಮತ್ತು ಗೂಗಲ್ ಪೇ ನಂಬರ್​ ಜಾಡು ಹಿಡಿದು ತನಿಖೆ ನಡೆಸುವಂತೆ ಜನ ಪೊಲೀಸರನ್ನು ಒತ್ತಾಯಿಸಿದ್ದಾರೆ.

ಬಿಳಿ ಸ್ವಿಫ್ಟ್​​ ಕಾರಿನಲ್ಲಿ ಬಂದು, ಸಮ್ಮೋಹನಗೊಳಿಸಿ ಗೂಗಲ್ ಪೇ ಮೂಲಕ ಹಣ ದೋಚುತ್ತಿದ್ದಾರೆ ಸ್ವಾಮೀಜಿ ವೇಷಧಾರಿಗಳು!
ಜನರಿಗೆ ಸಮ್ಮೋಹನಗೊಳಿಸಿ ಹಣ ಪಡೆದ ಸ್ವಾಮೀಜಿ -ಕೊಡಗು ಜಿಲ್ಲೆಯಲ್ಲಿ ವಂಚನೆ
Follow us
Gopal AS
| Updated By: ಸಾಧು ಶ್ರೀನಾಥ್​

Updated on: Jan 10, 2024 | 11:44 AM

ಮಡಿಕೇರಿ: ಸ್ವಾಮೀಜಿ ವೇಷಧಾರಿಯಾಗಿ ಬಂದ ಇಬ್ಬರು ಸಮ್ಮೋಹನಗೊಳಿಸಿ ಹಲವರಿಂದ ಹಣ ದೋಚಿರುವ ಆರೋಪ ಕೊಡಗು ಜಿಲ್ಲೆಯಲ್ಲಿ ಕೇಳಿ ಬಂದಿದೆ. ಕುಶಾಲನಗರ ತಾಲ್ಲೂಕಿನ ವಾಲ್ನೂರು ಗ್ರಾಮನದ ಮನೆಯೊಂದಕ್ಕೆ ಬಂದ ಸ್ವಾಮೀಜಿ ಮತ್ತು ಕಾರು ಚಾಲಕ ಆ ಮನೆಯಲ್ಲಿ ಹಲವು ಸಮಸ್ಯೆಗಳಿದ್ದು ಅದನ್ನು ಪರಿಹರಿಸುವುದಾಗಿಯೂ ಮತ್ತು ಅದಕ್ಕೆ ಹಣ ನೀಡುವಂತೆ ಕೇಳಿದ್ದಾರೆ. ಮನೆಯವರು ಪರಿಹಾರ ಏನೂ ಬೇಡ ಈ ಹಣ ತೆಗೆದುಕೊಂಡು ಹೋಗಿ ಎಂದು ನೂರು ರೂಪಾಯಿ ಕೊಡಲು ಮುಂದಾಗಿದ್ದಾರೆ. ಆದ್ರೆ ಅದಕ್ಕೆ ಒಪ್ಪದ ಆಗಂತುಕರು ಮತ್ತಷ್ಟು ಹಣ ಕೇಳಿದ್ದಾರೆ. ಈ ಸಂದರ್ಭ ಮನೆ ಮಾಲೀಕ ಒಂದು ಸಾವಿರ ರೂ ಕೊಟ್ಟು ಕಳುಹಿಸಿದ್ದಾರೆ. ಆದ್ರೆ ದಾರಿಯಲ್ಲಿ ಮನೆ ಮಾಲೀಕನ ಪುತ್ರ ಎದುರಾಗಿದ್ದು ಆತನಿಗೆ ಸ್ವಾಮೀಜಿ ಆಶೀರ್ವಾದ ಮಾಡುವಂತೆ ಹೂವೊಂದನ್ನು ನೀಡಿದ್ದಾರೆ ಅಷ್ಟೆ. ಹೂ ಪಡೆದ ವ್ಯಕ್ತಿ ಮಂತ್ರ ಮುಗ್ದರಾದಂತೆ ತಮ್ಮ ಮೊಬೈಲ್​ ಮೂಲಕ 4 ಸಾವಿರ ರೂ ಗೂಗಲ್ ಪೇ ಮಾಡಿದ್ದಾರೆ!

ಇದೇ ರೀತಿ ಗುಹ್ಯ ಗ್ರಾಮದಲ್ಲಿ 50 ಸಾವಿ ರೂ ವಂಚನ:

ಇನ್ನು ಇದೇ ಸ್ವಾಮೀಜಿ ಮತ್ತು ಆತನ ಕಾರು ಚಾಲಕ ವಿರಾಜಪೇಟೆ ತಾಲ್ಲೂಕಿನ ಗುಹ್ಯ ಗ್ರಾಮದ ಮಹಿಳೆಯೊಬ್ಬರ ಮನೆಗೆ ತೆರಳಿದ್ದಾರೆ. ಅಲ್ಲಿಯೂ ಆಶೀರ್ವಾದ ಮಾಡುವಂತೆ ಮಹಿಳೆಯ ಕೈಗೆ ಹೂವೊಂದನ್ನು ನೀಡಿದ್ದಾರೆ… ಅಷ್ಟೆ. ಮಂತ್ರಮುಗ್ದರಾದ ಮಹಿಳೆಯು ತಮಗೇ ಅರಿವಿಲ್ಲದಂತೆ 50 ಸಾವಿರ ರೂ ಗೂಗಲ್ ಪೇ ಮಾಡಿದ್ದಾರೆ. ಹಣ ಪಡೆದ ಸ್ವಾಮೀಜಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಇದನ್ನೂ ಓದಿ: ಹಣಕ್ಕಾಗಿ ವೃದ್ಧ ದೊಡ್ಡಪ್ಪ-ದೊಡ್ಡಮ್ಮನನ್ನೆ ಕೊಂದಿದ್ದವನಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ ಕೋರ್ಟ್, ಸಮಾಧಾನಗೊಂಡ ಕುಟುಂಬಸ್ಥರು 

ಕೆಲ ಸಮಯದ ಬಳಿಕ ತಾವು ಹೇಗೆ ಅಷ್ಟೊಂದು ಹಣ ಸ್ವಾಮೀಜಿಗೆ ನೀಡಿದೆ ಎಂದೇ ಅರಿವಾಗುತ್ತಿಲ್ಲ ಎಂದು ಆ ಮಹಿಳೆ ಕಣ್ಣೀರಿಡುತ್ತಿದ್ದಾರೆ. ಸದ್ಯ ಸಿದ್ದಾಪುರ ಪೊಲೀಸರಿಗೆ ದೂರು ನೀಡಲು ಆ ಮಹಿಳೆ ಮುಂದಾಗಿದ್ದಾರೆ. ಜಿಲ್ಲೆಯ ಇತರ ಕಡೆಗಳಲ್ಲೂ ಸ್ವಾಮೀಜಿ ವೇಷಧಾರಿಗಳು ಹಲವರಿಂದ ಇದೇ ರೀತಿ ಹಣ ಪಡೆದಿರುವ ಸಾಧ್ಯತೆ ಇದೆ. ಆದರೆ ಮರ್ಯಾದೆಗೆ ಅಂಜಿ ಬಹಳಷ್ಟು ಜನ ಮುಂದೆ ಬರುತ್ತಿಲ್ಲ ಎನ್ನಲಾಗಿದೆ.

ಬಿಳಿ ಬಣ್ಣ ಸ್ವಿಫ್ಟ್​​ ಕಾರಿನಲ್ಲಿ ಬಂದಿರುವ ಇವರ ದೃಶ್ಯ ಎರಡು ಮನೆಗಳ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೆಎ 02 ಎಹೆಚ್ 3717 ನೋಂದಣಿ ಸಂಖ್ಯೆಯ ಕಾರಿನಲ್ಲಿ ಇವರು ಆಗಮಿಸಿದ್ದು ಜನರು ಎಚ್ಚರದಿಂದ ಇರುವಂತೆ ಕೋರಲಾಗಿದೆ. ಈ ಕಾರು ಮತ್ತು ಗೂಗಲ್ ಪೇ ನಂಬರ್​ನ ಜಾಡು ಹಿಡಿದು ತನಿಖೆ ನಡೆಸುವಂತೆ ಜನರು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಏಕದಿನ ಸರಣಿಗಾಗಿ ಕಾಂಗರೂಗಳ ನಾಡಿಗೆ ಕಾಲಿಟ್ಟ ಟೀಂ ಇಂಡಿಯಾ
ಏಕದಿನ ಸರಣಿಗಾಗಿ ಕಾಂಗರೂಗಳ ನಾಡಿಗೆ ಕಾಲಿಟ್ಟ ಟೀಂ ಇಂಡಿಯಾ
ಅಣ್ಣ 10 ವರ್ಷಗಳಿಂದ ಕಾಯುತ್ತಿದ್ದೇನೆ ಎಂದ ಫ್ಯಾನ್​ಗೆ ನಿರಾಸೆ ಮಾಡದ ರೋಹಿತ್
ಅಣ್ಣ 10 ವರ್ಷಗಳಿಂದ ಕಾಯುತ್ತಿದ್ದೇನೆ ಎಂದ ಫ್ಯಾನ್​ಗೆ ನಿರಾಸೆ ಮಾಡದ ರೋಹಿತ್
ಡಿಪೋದಲ್ಲಿ ಯುವಕನಿಗೆ ಬಸ್ ಡಿಕ್ಕಿ; ಕೂದಲೆಳೆ ಅಂತರದಲ್ಲಿ ಬಚಾವ್
ಡಿಪೋದಲ್ಲಿ ಯುವಕನಿಗೆ ಬಸ್ ಡಿಕ್ಕಿ; ಕೂದಲೆಳೆ ಅಂತರದಲ್ಲಿ ಬಚಾವ್
ರಾಜಕಾರಣಿಗಳ ನಡುವೆ ಇದ್ದರೊಬ್ಬ ರೀಯಲ್ ಕ್ರಿಕೆಟರ್-ಪ್ರಕಾಶ್ ರಾಠೋಡ್!
ರಾಜಕಾರಣಿಗಳ ನಡುವೆ ಇದ್ದರೊಬ್ಬ ರೀಯಲ್ ಕ್ರಿಕೆಟರ್-ಪ್ರಕಾಶ್ ರಾಠೋಡ್!
ಅಧಿಕಾರಿಗಳಿಗೂ ತಟ್ಟಿದ ಫೆಂಗಲ್ ಚಂಡಮಾರುತ ಎಫೆಕ್ಟ್: ಒಳ ನುಗ್ಗಿದ ಮಳೆ ನೀರು
ಅಧಿಕಾರಿಗಳಿಗೂ ತಟ್ಟಿದ ಫೆಂಗಲ್ ಚಂಡಮಾರುತ ಎಫೆಕ್ಟ್: ಒಳ ನುಗ್ಗಿದ ಮಳೆ ನೀರು
ಹೃದ್ರೋಗಿ ಪತಿ, ಮಕ್ಕಳೊಂದಿಗೆ 40 ವರ್ಷಗಳಿಂದ ಬಾಡಿಗೆ ಮನೆಯಲ್ಲಿರುವ ಮಹಿಳೆ
ಹೃದ್ರೋಗಿ ಪತಿ, ಮಕ್ಕಳೊಂದಿಗೆ 40 ವರ್ಷಗಳಿಂದ ಬಾಡಿಗೆ ಮನೆಯಲ್ಲಿರುವ ಮಹಿಳೆ
ನೀರು ಸೇದುವಾಗ ಏಕಾಏಕಿ ಬಾವಿಗೆ ಬಿದ್ದ 94ರ ವೃದ್ಧೆ: ಮುಂದೇನಾಯ್ತು?
ನೀರು ಸೇದುವಾಗ ಏಕಾಏಕಿ ಬಾವಿಗೆ ಬಿದ್ದ 94ರ ವೃದ್ಧೆ: ಮುಂದೇನಾಯ್ತು?
ಒಂದು ವಾರದೊಳಗೆ ಎಲ್ಲವೂ ಸುಖಾಂತ್ಯವಾಗುತ್ತದೆ ಅಂತ ಅಶೋಕ ಹೇಳಿದ್ಯಾಕೆ?
ಒಂದು ವಾರದೊಳಗೆ ಎಲ್ಲವೂ ಸುಖಾಂತ್ಯವಾಗುತ್ತದೆ ಅಂತ ಅಶೋಕ ಹೇಳಿದ್ಯಾಕೆ?
ವಾರ್ನರ್​ ಬಿಡುಗಡೆ ಬೆನ್ನಲ್ಲೇ ‘ಯುಐ’ ಸಿನಿಮಾ ಸುದ್ದಿಗೋಷ್ಠಿ; ಲೈವ್ ನೋಡಿ..
ವಾರ್ನರ್​ ಬಿಡುಗಡೆ ಬೆನ್ನಲ್ಲೇ ‘ಯುಐ’ ಸಿನಿಮಾ ಸುದ್ದಿಗೋಷ್ಠಿ; ಲೈವ್ ನೋಡಿ..
ಬ್ರೇಕಿಂಗ್ ನ್ಯೂಸ್​ ಮೂಲಕವೂ ಕಳಚಿತು ಗೌತಮಿ ಜಾದವ್ ಪಾಸಿಟಿವ್ ಮುಖವಾಡ
ಬ್ರೇಕಿಂಗ್ ನ್ಯೂಸ್​ ಮೂಲಕವೂ ಕಳಚಿತು ಗೌತಮಿ ಜಾದವ್ ಪಾಸಿಟಿವ್ ಮುಖವಾಡ