ಬಳ್ಳಾರಿ ಬೆನ್ನಲ್ಲೆ ಕೋಲಾರದಲ್ಲೂ ಬ್ಯಾನರ್ ಗಲಾಟೆ: ಬಿಜೆಪಿಗರ ನಡೆಗೆ ಕಾಂಗ್ರೆಸ್ ಕೆಂಡ
ಮಾಜಿ ಶಾಸಕರ ಹುಟ್ಟುಹಬ್ಬದ ನಿಮಿತ್ತ ಹಾಕಲಾಗಿದ್ದ ಬ್ಯಾನರ್ನಲ್ಲಿ ನಮ್ಮ ಶಾಸಕ ಎಂದು ಸಂಬೋಧಿಸಿರೋದು ಕೋಲಾರದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ. ಇದೇ ವಿಚಾರವಾಗಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಟಾಕ್ವಾರ್ ಕೂಡ ನಡೆದಿದೆ. ಈ ನಡುವೆ ವಿವಾದಿತ ಬ್ಯಾನರ್ನ ನಗರಸಭೆ ತೆರವುಗೊಳಿಸಿದೆ.
ಕೋಲಾರ, ಜನವರಿ 07: ಬಳ್ಳಾರಿ ಬ್ಯಾನರ್ ಗಲಾಟೆ ವಿಚಾರ ಮಅಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ಘಟನೆ ಸದ್ದುಮಾಡಿದೆ. ಕೋಲಾರದ ಮಾಲೂರು ತಾಲೂಕಿನ ಕಾಂಗ್ರೆಸ್ ಹಾಗೂ BJP ಕಾರ್ಯಕರ್ತರ ನಡುವೆ ಬ್ಯಾನರ್ ಗಲಾಟೆ ನಡೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹಾಲಿ ಹಾಗೂ ಮಾಜಿ ಶಾಸಕರ ಬೆಂಬಲಿಗರ ನಡುವೆ ಟಾಕ್ ಫೈಟ್ ನಡೆದಿದೆ. ಮಾಜಿ ಶಾಸಕ ಮಂಜುನಾಥ್ ಗೌಡ ಹುಟ್ಟುಹಬ್ಬದ ಹಿನ್ನೆಲೆ ಬೆಂಬಲಿಗರು ಪಟ್ಟಣದಲ್ಲಿ ಬ್ಯಾನರ್ ಅಳವಡಿಸಿದ್ದು, ನಮ್ಮ ಶಾಸಕರು ಎಂದು ಸಂಬೋಧಿಸಿ ಅದರಲ್ಲಿ ಶುಭಾಶಯ ಕೋರಿದ್ದಾರೆ. ಇದಕ್ಕೆ ಹಾಲಿ ಶಾಸಕ ನಂಜೇಗೌಡ ಬೆಂಬಲಿಗರು ಕೆಂಡಾಮಂಡಲರಾಗಿದ್ದು, BJP ಕಾರ್ಯಕರ್ತರು ಹಾಕಿದ್ದ ಬ್ಯಾನರ್ನ ಮಾಲೂರು ನಗರಸಭೆ ತೆರವುಗೊಳಿಸಿದೆ. ಇದಾದ ಬಳಿಕ ನಗರಸಭೆ ಪೌರಾಯುಕ್ತ ಪ್ರದೀಪ್ ಎದುರು ಕಚೇರಿಯಲ್ಲಿ ಹೈಡ್ರಾಮ ನಡೆದಿದ್ದು, ಪೌರಾಯುಕ್ತರನ್ನು ಬಿಜೆಪಿ ಮುಖಂಡರು ಏಕವಚನದ್ದಲಿ ತರಾಟೆಗೆ ಪಡೆದ ಪ್ರಸಂಗ ಕೂಡ ನಡೆದಿದೆ. ಬಳ್ಳಾರಿ ರೀತಿ ಅವಘಡ ಆಗದಿರಲಿ ಎಂಬ ಕಾರಣಕ್ಕೆ ಬ್ಯಾನರ್ ತೆರವು ಮಾಡಿದ್ದೇವೆ ಎಂದು ಪೌರಾಯುಕ್ತರು ಕೂಡ ಈ ವೇಳೆ ತಿರುಗೇಟು ನೀಡಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

