ರೈತರು ಬೆಳೆದ ಬೆಳೆಯನ್ನು ಖರೀದಿಸಿ ಬಡವರಿಗೆ ಹಂಚಿಕೆ; ಕೋಲಾರದ ಸಂಸ್ಥೆಯ ಕಾರ್ಯಕ್ಕೆ ಜನರ ಮೆಚ್ಚುಗೆ

| Updated By: preethi shettigar

Updated on: Jun 06, 2021 | 12:04 PM

ಕೊರೊನಾ ಸಂಕಷ್ಟದ ಕಾಲದಲ್ಲಿ ಗ್ರಾಮೀಣ ಭಾಗದ ಜನರು ನಗರ ಪ್ರದೇಶಗಳಿಗೆ ಬರಲಾಗದೆ ಅಗತ್ಯ ವಸ್ತುಗಳು ಸಿಗದೆ ಪರದಾಡುತ್ತಿದ್ದಾರೆ. ಜತೆಗೆ ಗ್ರಾಮೀಣ ಭಾಗದ ಜನರ ಸಮಸ್ಯೆಗಳಿಗೆ ನೆರವಾಗಬೇಕೆಂಬ ದೃಷ್ಟಿಯಿಂದ ಮೈಕ್ರೋಬಿ ಆಗ್ರೋಟೆಕ್​ ಎನ್ನುವ ಸಂಸ್ಥೆ ಕೂಡಾ, ರೈತರಿಂದ ನೇರವಾಗಿ ಹಲವು ಬಗೆಯ ತರಕಾರಿಗಳನ್ನು ಖರೀದಿ ಮಾಡಿ ಹಲವಾರು ಟನ್​ ತರಕಾರಿಗಳನ್ನು ಹಾಗೂ ಆಹಾರದ ಕಿಟ್​ಗಳನ್ನು ಜನರಿಗೆ ಹಂಚಿಕೆ ಮಾಡುತ್ತಿದ್ದಾರೆ.

ರೈತರು ಬೆಳೆದ ಬೆಳೆಯನ್ನು ಖರೀದಿಸಿ ಬಡವರಿಗೆ ಹಂಚಿಕೆ; ಕೋಲಾರದ ಸಂಸ್ಥೆಯ ಕಾರ್ಯಕ್ಕೆ ಜನರ ಮೆಚ್ಚುಗೆ
ರೈತರು ಬೆಳೆದ ಬೆಳೆಯನ್ನು ಕೊಂಡುಕೊಂಡು ಬಡವರಿಗೆ ಹಂಚಿಕೆ
Follow us on

ಕೋಲಾರ: ಕೊರೊನಾ ಎರಡನೇ ಅಲೆಯ ಹೆಚ್ಚಳವನ್ನು ತಡೆಯಲು ಲಾಕ್​ಡೌನ್ ಘೋಷಿಸಲಾಗಿದೆ. ಈ ಲಾಕ್​ಡೌನ್​ನಿಂದಾಗಿ ಕೊರೊನಾ ಸೋಂಕಿತರ ಸಂಖ್ಯೆ ಏನೋ ಕಡಿಮೆಯಾಗುತ್ತಿದೆ. ಆದರೆ ರೈತರು, ವ್ಯಾಪಾರಸ್ಥರು ಮತ್ತು ಕೂಲಿ ಕಾರ್ಮಿಕರು ಇದರಿಂದಾಗಿ ಸಂಕಷ್ಟ ಎದುರಿಸುವಂತಾಗಿದೆ. ಅದರಲ್ಲೂ ರೈತರು ತಾವು ಬೆಳೆದ ಬೆಳೆಯನ್ನು ಮಾರುಕಟ್ಟೆ ಸಾಗಿಸಲು ಆಗದೆ, ಹೇಗೋ ಮಾರುಕಟ್ಟೆಗೆ ಕೊಂಡೋಯ್ದರು ಕೊಳ್ಳುವವರು ಇಲ್ಲದೆ ನಷ್ಟ ಅನುಭವಿಸುತ್ತಿದ್ದಾರೆ. ಸದ್ಯ ಕೋಲಾರದ ರೈತರ ಪರಿಸ್ಥಿತಿ ಕೂಡ ಇದೆ ಆಗಿದೆ. ಆದರೆ ರೈತರ ಕಷ್ಟವನ್ನು ಅರಿತ ಕೋಲಾರದ ಜನರು ಬೆಳೆದ ಬೆಳೆಯನ್ನು ಕೊಂಡುಕೊಂಡು ನೆರವಿನ ಹಸ್ತ ಚಾಚಿದ್ದಾರೆ.

ಕೋಲಾರದ ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಹಾಗೂ ಮನ್ವಂತರ ಸೇವಾ ಟ್ರಸ್ಟ್​ನ ಅಧ್ಯಕ್ಷರಾಗಿರುವ ಗೋವಿಂದಗೌಡ ಹಾಗೂ ಅವರ ಒಂದಷ್ಟು ಸ್ನೇಹಿತರು ಸೇರಿ ರೈತರ ಬಳಿ ಹಣ ಕೊಟ್ಟು ತರಕಾರಿಗಳನ್ನು ಖರೀದಿ ಮಾಡಿ ನಗರದಲ್ಲಿನ ಬಡವರು ಹಾಗೂ ಹಸಿದವರಿಗೆ ತರಕಾರಿಗಳನ್ನು ಹಂಚುವ ಕೆಲಸ ಮಾಡುತ್ತಿದ್ದಾರೆ. ಕಳೆದೊಂದು ತಿಂಗಳಿಂದ ನಿರಂತರವಾಗಿ ಇಂಥ ಕಾರ್ಯ ಮಾಡುತ್ತಿರುವ ಮನ್ವಂತರ ಸೇವಾ ಟ್ರಸ್ಟ್​, ಕೋಲಾರದ ಗಾಂಧಿನಗರ, ವಿನೋಭ ನಗರ, ಕೋಗಿಲಹಳ್ಳಿ, ಸೇರಿದಂತೆ ಹಲವೆಡೆಗಳಲ್ಲಿ ಹತ್ತಾರು ಟನ್​ ತರಕಾರಿಗಳನ್ನು ಜನರಿಗೆ ಹಂಚಿಕೆ ಮಾಡಿದ್ದಾರೆ. ಆ ಮೂಲಕ ಕೊರೊನಾ ಸಂಕಷ್ಟದ ಕಾಲದಲ್ಲಿ ಬಡವರಿಗೆ ಆಹಾರ ನೀಡಿ, ಹಲವು ರೀತಿಯ ಬೆಳೆ ಬೆಳೆದು ನಷ್ಟ ಅನುಭವಿಸುತ್ತಿದ್ದ ರೈತರಿಗೂ ನೆರವಾಗಿದ್ದಾರೆ.

ಸಂಕಷ್ಟಕ್ಕೆ ನಿಂತ ರೈತರ ತರಕಾರಿಗಳನ್ನು ಕೊಂಡುಕೊಂಡು, ನಿಜವಾಗಿ ಯಾರಿಗೆ ಅಗತ್ಯವಿದೆ ಅಂತವರಿಗೆ ನಮ್ಮ ಕೈಲಾದಷ್ಟು ನೆರವು ನೀಡಲಾಗುತ್ತಿದೆ. ಆ ಮೂಲಕ ರೈತರಲ್ಲಿ ಹುಮ್ಮಸ್ಸು ತುಂಬುವ ಕಾರ್ಯ ಮಾಡುತ್ತಿದ್ದೇವೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಗೋವಿಂದಗೌಡ ತಿಳಿಸಿದ್ದಾರೆ.

ಇನ್ನು ಕೊರೊನಾ ಸಂಕಷ್ಟದ ಕಾಲದಲ್ಲಿ ಗ್ರಾಮೀಣ ಭಾಗದ ಜನರು ನಗರ ಪ್ರದೇಶಗಳಿಗೆ ಬರಲಾಗದೆ ಅಗತ್ಯ ವಸ್ತುಗಳು ಸಿಗದೆ ಪರದಾಡುತ್ತಿದ್ದಾರೆ. ಜತೆಗೆ ಗ್ರಾಮೀಣ ಭಾಗದ ಜನರ ಸಮಸ್ಯೆಗಳಿಗೆ ನೆರವಾಗಬೇಕೆಂಬ ದೃಷ್ಟಿಯಿಂದ ಮೈಕ್ರೋಬಿ ಆಗ್ರೋಟೆಕ್​ ಎನ್ನುವ ಸಂಸ್ಥೆ ಕೂಡಾ, ರೈತರಿಂದ ನೇರವಾಗಿ ಹಲವು ಬಗೆಯ ತರಕಾರಿಗಳನ್ನು ಖರೀದಿ ಮಾಡಿ ಹಲವಾರು ಟನ್​ ತರಕಾರಿಗಳನ್ನು ಹಾಗೂ ಆಹಾರದ ಕಿಟ್​ಗಳನ್ನು ಜನರಿಗೆ ಹಂಚಿಕೆ ಮಾಡುತ್ತಿದ್ದಾರೆ. ಕೋಲಾರ ತಾಲ್ಲೂಕು ಮದ್ದೇರಿ, ದಳಸನೂರು, ತಲಗುಂದ ಸೇರಿದಂತೆ ಹಲವು ಗ್ರಾಮಗಳಲ್ಲಿ ಜನರಿಗೆ ತರಕಾರಿಗಳನ್ನು ಹಂಚಿಕೆ ಮಾಡಿದ್ದಾರೆ.

ಒಟ್ಟಾರೆ ಕೊರೊನಾ ಸಂಕಷ್ಟದ ಕಾಲದಲ್ಲಿ ರೈತರು ಬೆಳೆದ ಬೆಳೆಗಳಿಗೆ ಬೆಲೆ ಇಲ್ಲದೆ ಬೆಳೆಗಳು ಹೊಲದಲ್ಲೇ ಕೊಳೆಯುವ ಸ್ಥಿತಿ ಇದೆ. ಹೀಗಿರುವಾಗ ಹಸಿದವರಿಗೆ ಆಹಾರ ನೀಡಿ, ಬೆಳೆ ಬೆಳೆದ ರೈತನಿಗೂ ಬದುಕುವ ಭರವಸೆ ತುಂಬುವ ಮೂಲಕ ತಮ್ಮ ಕೈಲಾದಷ್ಟು ನೆರವು ನೀಡಲು ಮುಂದಾಗಿರುವ ಇವರ ಕಾರ್ಯ ನಿಜಕ್ಕೂ ಶ್ಲಾಘನೀಯ.

ಇದನ್ನೂ ಓದಿ:

ಬಡವರಿಗೆ ಪ್ರತಿ ತಿಂಗಳೂ 6 ಸಾವಿರ ಸಹಾಯಧನ ನೀಡಿ; ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಒತ್ತಾಯ

ಬಡವರಿಗೆ ಫುಡ್ ಕಿಟ್ ವಿತರಣೆ; ಮಾನವೀಯತೆ ಮೆರೆದ ಹೋಂ ಪ್ರಾಡಕ್ಟ್ ಮಾರಾಟ ಮಾಡುವ ಉತ್ತರ ಕನ್ನಡದ ಮಹಿಳೆ