ವೋಟ್ ಬ್ಯಾಂಕ್ ಆದ ಉಚಿತ ಲಸಿಕಾ ಅಭಿಯಾನ? ಖಾಸಗಿಯಾಗಿ ಲಸಿಕೆ ಖರೀದಿಸಿ ಜನರಿಗೆ ಉಚಿತ ಲಸಿಕೆ ಕೊಡಿಸುತ್ತಿರುವ ಶಾಸಕರು

ವೋಟ್ ಬ್ಯಾಂಕ್ ಆದ ಉಚಿತ ಲಸಿಕಾ ಅಭಿಯಾನ? ಖಾಸಗಿಯಾಗಿ ಲಸಿಕೆ ಖರೀದಿಸಿ ಜನರಿಗೆ ಉಚಿತ ಲಸಿಕೆ ಕೊಡಿಸುತ್ತಿರುವ ಶಾಸಕರು
ಪ್ರಾತಿನಿಧಿಕ ಚಿತ್ರ

ಖಾಸಗಿಯಾಗಿ ಲಸಿಕೆ ಖರೀದಿಸಿ ಶಾಸಕರು ತಮ್ಮ ತಮ್ಮ ಕ್ಷೇತ್ರದ ಜನರಿಗೆ ಉಚಿತವಾಗಿ ಲಸಿಕೆ ನೀಡುತ್ತಿದ್ದಾರೆ. ಆರಂಭದಲ್ಲಿ ಫುಡ್ ಕಿಟ್, ನಂತರ ದಿನಸಿ ಕಿಟ್ ವಿತರಣೆ ಮಾಡಿದ್ರು. ಈಗ ಮತದಾರರನ್ನು ಗಮನದಲ್ಲಿಟ್ಟುಕೊಂಡು ಲಸಿಕೆ ನೀಡುತ್ತಿದ್ದಾರೆ. ಮೊನ್ನೆ ಶಾಸಕ ಶಾಮನೂರು ಶಿವಶಂಕರಪ್ಪರಿಂದ ದಾವಣಗೆರೆಯಲ್ಲಿ ಉಚಿತವಾಗಿ ಲಸಿಕೆ ನೀಡಲಾಗಿತ್ತು. ನಿನ್ನೆ ಡಿಸಿಎಂ ಡಾ.ಅಶ್ವತ್ಥ್ ನಾರಾಯಣ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ರು.

TV9kannada Web Team

| Edited By: Ayesha Banu

Jun 06, 2021 | 11:27 AM

ಬೆಂಗಳೂರು: ರಾಜ್ಯಾದ್ಯಂತ ಕೊರೊನಾ ಅಬ್ಬರ ಹೆಚ್ಚಿದೆ. ಇದರ ನಡುವೆ ಅನೇಕ ಜಿಲ್ಲೆಗಳಲ್ಲಿ ರಾಜಕೀಯ ನಾಯಕರು ಜನರಿಗೆ ಉಚಿತವಾಗಿ ಲಸಿಕೆ ಹಾಕಿಸುವ ಲಸಿಕಾ ಅಭಿಯಾನಗಳನ್ನು ಕೈಗೊಳ್ಳುತ್ತಿದ್ದಾರೆ. ಒಂದಲ್ಲ ಎರೆಡಲ್ಲಾ ಅನೇಕ ಜಿಲ್ಲೆಗಳಲ್ಲಿ ರಾಜಕೀಯ ನಾಯಕರು ಲಸಿಕಾ ಅಭಿಯಾನಗಳನ್ನು ಮಾಡುತ್ತಿದ್ದಾರೆ. ಹಾಗಾದ್ರೆ ಈ ಅಭಿಯಾನದ ಹಿಂದಿರುವ ಮರ್ಮವೇನು? ಉಚಿತ ಲಸಿಕಾ ಅಭಿಯಾನ ವೋಟ್ ಬ್ಯಾಂಕ್ಗಾಗಿಯಾ? ಎಂಬ ಪ್ರಶ್ನೆ ಎದ್ದಿದೆ.

ಖಾಸಗಿಯಾಗಿ ಲಸಿಕೆ ಖರೀದಿಸಿ ಶಾಸಕರು ತಮ್ಮ ತಮ್ಮ ಕ್ಷೇತ್ರದ ಜನರಿಗೆ ಉಚಿತವಾಗಿ ಲಸಿಕೆ ನೀಡುತ್ತಿದ್ದಾರೆ. ಆರಂಭದಲ್ಲಿ ಫುಡ್ ಕಿಟ್, ನಂತರ ದಿನಸಿ ಕಿಟ್ ವಿತರಣೆ ಮಾಡಿದ್ರು. ಈಗ ಮತದಾರರನ್ನು ಗಮನದಲ್ಲಿಟ್ಟುಕೊಂಡು ಲಸಿಕೆ ನೀಡುತ್ತಿದ್ದಾರೆ. ಮೊನ್ನೆ ಶಾಸಕ ಶಾಮನೂರು ಶಿವಶಂಕರಪ್ಪರಿಂದ ದಾವಣಗೆರೆಯಲ್ಲಿ ಉಚಿತವಾಗಿ ಲಸಿಕೆ ನೀಡಲಾಗಿತ್ತು. ನಿನ್ನೆ ಡಿಸಿಎಂ ಡಾ.ಅಶ್ವತ್ಥ್ ನಾರಾಯಣ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ರು. ಮಲ್ಲೇಶ್ವರಂನಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಲಸಿಕೆ ನೀಡಲಾಯಿತು. ಬಸವನಗುಡಿ ಕ್ಷೇತ್ರದಲ್ಲಿ ರವಿ ಸುಬ್ರಹ್ಮಣ್ಯರಿಂದ ಲಸಿಕೆ ನೀಡಿಕೆ ಕಾರ್ಯಕ್ರಮ ನೆರವೇರಿತು. ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ರಿಂದ ಬೆಂಗಳೂರಿನ ಮಹದೇವಪುರದಲ್ಲಿ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ.

ಮಾಡುವ ಎಲ್ಲಾ ಕಾರ್ಯಕ್ರಮಗಳ ಹಿಂದೆ ಮಾಸ್ಟರ್ ಪ್ಲಾನ್ಗಳನ್ನು ಮಾಡುವ ರಾಜಕಾರಣಿಗಳು ಉಚಿತ ಲಸಿಕೆ ಅಭಿಯಾನವನ್ನು ಮಾಡುತ್ತಿರುವುದು ಕೇವಲ ವೋಟ್ ಬ್ಯಾಂಕ್ಗಾಗಿ ಎಂದು ಕೆಲ ಜನ ಸಾಮಾನ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ದೇಶದಲ್ಲೇ ಅತಿ ಹೆಚ್ಚು ಲಸಿಕೆ ಪಡೆದ ಬೆಂಗಳೂರಿಗರು; ಲಸಿಕೆ ಅಭಿಯಾನದಲ್ಲಿ ದೆಹಲಿ, ಮುಂಬೈ ನಗರಗಳನ್ನು ಹಿಂದಿಕ್ಕಿದ ರಾಜ್ಯ ರಾಜಧಾನಿ

Follow us on

Related Stories

Most Read Stories

Click on your DTH Provider to Add TV9 Kannada