ಕೋಲಾರ: ‘ಸಲಗ’ ಚಿತ್ರ ಯಶಸ್ವಿಯಾದ ಹಿನ್ನೆಲೆ; ಮಂಡಿಯೂರಿ ಮೆಟ್ಟಿಲು ಹತ್ತಿ ಹರಕೆ ತೀರಿಸಿದ ಅಭಿಮಾನಿಗಳು

Duniya Vijay: ಸಲಗ ಸಿನಿಮಾ ಯಶಸ್ವಿಯಾದ ಬೆನ್ನಲ್ಲೇ ಕೋಲಾರದಲ್ಲಿ ದುನಿಯಾ ವಿಜಯ್ ಅಭಿಮಾನಿಗಳು ತಾವು ಹೇಳಿಕೊಂಡಿದ್ದ ಹರಕೆಯನ್ನು ಪೂರೈಸಿದ್ದಾರೆ. ಈ ಕುರಿತು ಕುತೂಹಲಕರ ಸುದ್ದಿ ಇಲ್ಲಿದೆ.

ಕೋಲಾರ: ‘ಸಲಗ’ ಚಿತ್ರ ಯಶಸ್ವಿಯಾದ ಹಿನ್ನೆಲೆ; ಮಂಡಿಯೂರಿ ಮೆಟ್ಟಿಲು ಹತ್ತಿ ಹರಕೆ ತೀರಿಸಿದ ಅಭಿಮಾನಿಗಳು
‘ಸಲಗ’ ಚಿತ್ರದಲ್ಲಿ ದುನಿಯಾ ವಿಜಯ್

ಕೋಲಾರ: ಸಲಗ ಸಿನಿಮಾ ಯಶಸ್ವಿಯಾದ ಹಿನ್ನೆಲೆಯಲ್ಲಿ ದುನಿಯಾ ವಿಜಯ್ ಅಭಿಮಾನಿಗಳು ವಿಶೇಷ ರೀತಿಯಲ್ಲಿ ಹರಕೆ ತೀರಿಸಿದ್ದಾರೆ. ಕೋಲಾರ ಜಿಲ್ಲೆಯ ಅಂತರಗಂಗೆ ಬೆಟ್ಟದಲ್ಲಿ ಮಂಡಿಯೂರಿ ಮೆಟ್ಟಿಲು ಹತ್ತಿ, ಅಭಿಮಾನಿಗಳು ಹರಕೆ ತೀರಿಸಿದ್ದಾರೆ. ಈ ಹಿಂದೆ ಅಭಿಮಾನಿಗಳು ಸಲಗ ಚಿತ್ರವು ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣಲಿ ಎಂದು ಹರಕೆ ಹೊತ್ತಿದ್ದರು. ಅದರಂತೆ ದುನಿಯಾ ವಿಜಯ್ ಅಭಿಮಾನಿಗಳಾದ ಮಂಜುನಾಥ್ ಹಾಗೂ ಅವರ ಸ್ನೇಹಿತರು ಮಂಡಿಯೂರಿ ಮೆಟ್ಟಿಲು ಹತ್ತಿ ಹರಕೆ ತೀರಿಸಿದ್ದಾರೆ.

ಸಲಗ ಚಿತ್ರ ದುನಿಯಾ ವಿಜಯ್ ನಿರ್ದೇಶನದ ಮೊದಲ ಚಿತ್ರವಾಗಿದ್ದು, ಅವರು ಮುಖ್ಯಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಯಶಸ್ಸು ಅವರ ವೃತ್ತಿ ಜೀವನಕ್ಕೆ ಬಹಳ ಮುಖ್ಯವಾಗಿತ್ತು. ಬಿಡುಗಡೆಗೂ ಮೊದಲೇ ಹಾಡುಗಳು ಹಾಗೂ ಟ್ರೈಲರ್ ಮುಖಾಂತರ ಚಿತ್ರವು ನಿರೀಕ್ಷೆ ಹುಟ್ಟುಹಾಕಿತ್ತು. ಆ ನಿರೀಕ್ಷೆಯಂತೆಯೇ ಸಲಗವೂ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಮಾಸ್ ಸಿನಿಮಾ ಇಷ್ಟಪಡುವ ವೀಕ್ಷಕರಿಗೆ ಸಲಗ ಬಹಳ ಹಿಡಿಸಿತ್ತು. ಇತ್ತೀಚೆಗೆ ಚಿತ್ರತಂಡ ಸುದ್ದಿಗೋಷ್ಠಿ ಕರೆದು ಚಿತ್ರದ ಯಶಸ್ಸಿನ ಕುರಿತು ಸಂತಸ ಹಂಚಿಕೊಂಡಿತ್ತು.

‘ಸಲಗ’ ಚಿತ್ರದಲ್ಲಿ ಖ್ಯಾತ ಕಲಾವಿದರ ದಂಡೇ ಇದ್ದು, ಡಾಲಿ ಧನಂಜಯ್, ಶ್ರೀಧರ್ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದಾರೆ. ನಾಯಕಿಯಾಗಿ ಸಂಜನಾ ಆನಂದ್ ಕಾಣಿಸಿಕೊಂಡಿದ್ದಾರೆ. ಚರ್ಣ್ ರಾಜ್ ಸಂಗೀತ ನೀಡಿದ್ದು, ಶಿವ ಸೇನಾ ಛಾಯಾಗ್ರಹಣ ಮಾಡಿದ್ದಾರೆ.

ಇದನ್ನೂ ಓದಿ:

Salaga: ನಿರೀಕ್ಷೆಗೂ ಮೀರಿ ‘ಸಲಗ’ ಸಕ್ಸಸ್​; ಹಾಗಾದ್ರೆ ಈವರೆಗಿನ ಕಲೆಕ್ಷನ್​ ಲೆಕ್ಕ ಹೇಳೋರು ಯಾರು?

Salaga Movie Review: ‘ಸಲಗ’ ತುಂಬಾ ರಗಡ್​ ಆಗಿದೆ ಎಚ್ಚರಿಕೆ! ದುನಿಯಾ ವಿಜಯ್​ಗೆ ಮಾಸ್​ ಪ್ರೇಕ್ಷಕರೇ ಟಾರ್ಗೆಟ್​

Click on your DTH Provider to Add TV9 Kannada