ಗ್ರಾಮಸ್ಥರ ನಡುವೆ ಮಾರಾಮಾರಿ: ರಸ್ತೆಯಲ್ಲಿ ನಿಲ್ಲಿಸಿದ್ದ ಕಾರು ತೆಗೆಯಲು ಹೇಳಿದಕ್ಕೆ ಜೆಸಿಬಿ ಡ್ರೈವರ್ ಮೇಲೆ ಹಲ್ಲೆ, ಮನೆ ಮೇಲೆ ಕಲ್ಲು ತೂರಾಟ
ಕಾರಂಗಿ ಗ್ರಾಮದ ಕಾರು ಮಾಲೀಕ ರಮೇಶ್ ಹಾಗೂ ಆತನ ಸಂಗಡಿಗರು ಕನ್ನಂಪಲ್ಲಿ ಗ್ರಾಮಕ್ಕೆ ತೆರಳಿ ಜೆಸಿಬಿ ಮಾಲೀಕ ಶ್ರೀನಿವಾಸ್ ಹಾಗೂ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕೋಲಾರ: ಕ್ಷುಲ್ಲಕ ಕಾರಣಕ್ಕೆ ಎರಡು ಗ್ರಾಮಗಳ ಗ್ರಾಮಸ್ಥರ ನಡುವೆ ಮಾರಾಮಾರಿಯಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ. ರಸ್ತೆಯಲ್ಲಿ ನಿಲ್ಲಿಸಿದ್ದ ಕಾರು ತೆಗೆಯುವ ವಿಚಾರಕ್ಕೆ ಶ್ರೀನಿವಾಸಪುರ ತಾಲೂಕಿನ ಕನ್ನಂಪಲ್ಲಿ ಹಾಗೂ ಕಾರಂಗಿ ಗ್ರಾಮಸ್ಥರ ನಡುವೆ ಮಾರಾಮಾರಿಯಾಗಿದೆ.
ಕಾರಂಗಿಯಿಂದ ಕನ್ನಂಪಲ್ಲಿಗೆ ಹೋಗುವ ರಸ್ತೆಯಲ್ಲಿ ಕಾರು ನಿಲ್ಲಿಸಲಾಗಿತ್ತು. ಈ ಮಾರ್ಗದಲ್ಲೇ ಜೆಸಿಬಿ ಹೋಗುವಾಗ ಕಾರು ರಸ್ತೆಯಲ್ಲಿ ಅಡ್ಡಲಾಗಿದೆ. ಹೀಗಾಗಿ ಕಾರನ್ನು ತೆಗೆಯಲು ಡ್ರೈವರ್ ಹೇಳಿದ್ದು ಮಾತಿಗೆ ಮಾತು ಬೆಳೆದು ಅದು ವಿಕೋಪಕ್ಕೆ ಹೋಗಿ ಗಲಾಟೆಯಾಗಿದೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಕನ್ನಂಪಲ್ಲಿ ಹಾಗೂ ಕಾರಂಗಿ ಗ್ರಾಮಸ್ಥರ ನಡುವೆ ಮಾರಾಮಾರಿಯಾಗಿದೆ.
ಕಾರಂಗಿ ಗ್ರಾಮದ ಕಾರು ಮಾಲೀಕ ರಮೇಶ್ ಹಾಗೂ ಆತನ ಸಂಗಡಿಗರು ಕನ್ನಂಪಲ್ಲಿ ಗ್ರಾಮಕ್ಕೆ ತೆರಳಿ ಜೆಸಿಬಿ ಮಾಲೀಕ ಶ್ರೀನಿವಾಸ್ ಹಾಗೂ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಗಾಯಗೊಂಡವರನ್ನು ಶ್ರೀನಿವಾಸಪುರ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ಘಟನೆಯಲ್ಲಿ ಜೆಸಿಬಿ ಹಾಗೂ ಮನೆಯ ಮೇಲೆ ಕಲ್ಲು ತೂರಾಟವಾಗಿದ್ದು ಜೆಸಿಬಿ ಗಾಜುಗಳು ಪುಡಿ ಪುಡಿಯಾಗಿವೆ. ಸುಮಾರು 20ಕ್ಕೂ ಹೆಚ್ಚು ಜನರ ಗುಂಪು ಹೊಡೆದಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ ಸಂಬಂಧ ಶ್ರೀನಿವಾಸಪುರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರಡು ಬೈಕ್‌ಗಳ ನಡುವೆ ಡಿಕ್ಕಿ, ಓರ್ವ ಸಾವು
ಧಾರವಾಡ: ಮುಮ್ಮಿಗಟ್ಟಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ 2 ಬೈಕ್‌ಗಳ ನಡುವೆ ಡಿಕ್ಕಿಯಾಗಿದ್ದು ಓರ್ವ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ. ಗಾಯಾಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತಿದೆ. ಧಾರವಾಡ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 3:48 pm, Sun, 31 July 22