AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲಾರ: ಮಸೀದಿ ಮೇಲೆ ಕಲ್ಲು ಎಸೆದಿದ್ದ ಆರೋಪಿ ಬಂಧಿಸಿದ ಪೊಲೀಸರು

ಇತ್ತೀಚೆಗೆ ಧರ್ಮ ಧಂಗಲ್​ ವಿಚಾರ ಹೆಚ್ಚಾಗಿ ಬೆಳಕಿಗೆ ಬರುತ್ತಿದೆ. ಅದರಂತೆ ಕಳೆದ ಮಾರ್ಚ್ 26ರಂದು ಕೋಲಾರದ ಸೊನ್ನವಾಡಿ ಮಸೀದಿ ಮೇಲೆ ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡುವ ಉದ್ದೇಶದಿಂದ ಕಲ್ಲೆಸೆದಿದ್ದ ಆರೋಪಿಯನ್ನು ಮುಳಬಾಗಿಲು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಕೋಲಾರ: ಮಸೀದಿ ಮೇಲೆ ಕಲ್ಲು ಎಸೆದಿದ್ದ ಆರೋಪಿ ಬಂಧಿಸಿದ ಪೊಲೀಸರು
ಪ್ರಾತಿನಿಧಿಕ ಚಿತ್ರ
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Edited By: |

Updated on:Jun 29, 2024 | 6:14 PM

Share

ಕೋಲಾರ, ಜೂ.29: ಮಸೀದಿ ಮೇಲೆ ಕಲ್ಲು ಎಸೆದಿದ್ದ ಆರೋಪಿಯನ್ನು ಕೋಲಾರ(Kolar) ಜಿಲ್ಲೆಯ ಮುಳಬಾಗಿಲು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಸುಬ್ರಮಣಿ ಬಂಧಿತ ಆರೋಪಿ. ಮಾರ್ಚ್ 26ರಂದು ಸೊನ್ನವಾಡಿ ಮಸೀದಿ ಮೇಲೆ ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡುವ ಉದ್ದೇಶದಿಂದ ಕಲ್ಲೆಸೆದಿದ್ದ. ಈ ಹಿನ್ನಲೆ ಠಾಣೆಯಲ್ಲಿ ಕೇಸ್​ ದಾಖಲಾಗಿದ್ದು, ಇದೀಗ ಕಲ್ಲು ತೂರಿದ್ದ ಆರೋಪಿಯನ್ನು ಅರೆಸ್ಟ್​ ಮಾಡಿದ್ದಾರೆ.

ಮಠದ ಬಾಗಿಲಿನ ಬೀಗ ಮುರಿದು ಕಳ್ಳತನ..

ಗದಗ: ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಗ್ರಾಮದ ಹೇಮಗಿರಿ ಮಠದ ಬಾಗಿಲಿನ ಬೀಗ ಮುರಿದು ಸುಮಾರು 2 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನ ಖದೀಮರು ಕದ್ದಿದ್ದಾರೆ. ಮಠದ ಗದ್ದುಗೆ ಮೇಲಿದ್ದ‌ ಅಕ್ಕಮಹಾದೇವಿ ಬೆಳ್ಳಿ ಮೂರ್ತಿ, ಎರಡು ಚೆನ್ನಬಸವೇಶ್ವರ ಬೆಳ್ಳಿ ಮೂರ್ತಿ‌, ಒಂದು ಬೆಳ್ಳಿಯ ಬೆತ್ತ, ಪಾದ, ನಾಗಸರ್ಪ ಹಾಗೂ ಬಂಗಾರದ ಮಾಂಗಲ್ಯ ಸರವನ್ನ ಎಗರಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸ್ ಸಿಬ್ಬಂದಿ, ಬೆರಳಚ್ಚು ತಜ್ಞರು, ಶ್ವಾನದಳ ಸಿಬ್ಬಂದಿ ಪರೀಶಿಲಿಸಿದ್ದಾರೆ.

ಇದನ್ನೂ ಓದಿ:ಗರ್ಭಗುಡಿಯಲ್ಲಿ ದೇವರ ಮೂರ್ತಿ ಕುರಿಸುವ ವಿಚಾರವಾಗಿ ಎರಡು ಸಮುದಾಯದ ನಡುವೆ ಕಲ್ಲು ತೂರಾಟ, ಪಿಎಸ್​ಐಗೆ ಗಾಯ

ಶಾಲಾ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿನಿಯರಿಗೆ ಪುಂಡರ ಕಾಟ

ಚಿತ್ರದುರ್ಗ: ಮೊಳಕಾಲ್ಮೂರು ಪಟ್ಟಣದಲ್ಲಿ ಪುಂಡ ಪೋಕರಿಗಳ ಹಾವಳಿ ಮೀತಿ ಮಿರಿದ್ದು, ಹಾಸ್ಟೆಲ್‌ನಿಂದ ಶಾಲಾ, ಕಾಲೇಜುಗಳಿಗೆ ತೆರಳುವ ವೇಳೆ ವಿದ್ಯಾರ್ಥಿನಿಯರ ಬೆನ್ನುಬಿದ್ದು ಪುಂಡರು ಕಾಟ ಕೊಡುತ್ತಿದ್ದಾರೆ. ಬೈಕ್ ನಲ್ಲಿ ವಿದ್ಯಾರ್ಥಿನಿಯರ ಬೆನ್ನು ಬಿದ್ದು ಕಾಟ ಕೊಡುವ ಪುಂಡನ ವಿಡಿಯೋ ವೈರಲ್ ಆಗಿದೆ. ಯುವಕನ ಪುಂಡಾಟ ಕಂಡು ಓಡುವ ವಿದ್ಯಾರ್ಥಿನಿಯರು ಭಯಭೀತರಾಗಿದ್ದು, ಪುಂಡರ ಹಾವಳಿಗೆ ಬ್ರೇಕ್ ಹಾಕಲು ಸ್ಥಳೀಯರು ಸೇರಿದಂತೆ ಮಹಿಳಾಪರ ಹೋರಾಟಗಾರರು  ಪೊಲೀಸ್ ಇಲಾಖೆ, ಜಿಲ್ಲಾಡಳಿತಕ್ಕೆ  ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:09 pm, Sat, 29 June 24