AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಯ್ಯೋ ವಿಧಿಯೇ! ಸೆಲ್ಫಿ ತೆಗೆಯುವಾಗ ಕೆರೆಗೆಬಿದ್ದ ಮಗಳು, ರಕ್ಷಣೆಗೆ ಹೋಗಿ ತಂದೆಯೂ ಸಾವು

ಕೋಲಾರ ಜಿಲ್ಲೆಯ ಬಂಗಾರಪೇಟೆ(Bangarapet) ತಾಲ್ಲೂಕು ಕಾಮಸಮುದ್ರ ಗ್ರಾಮದ ವೃಷಬಾವತಿ ಕೆರೆ(Vrishabhavathi Lake )ಯಲ್ಲಿ ಸೆಲ್ಫಿ ತೆಗೆಯುವಾಗ ಕೆರೆಗೆಬಿದ್ದ ಮಗಳ ರಕ್ಷಣೆಗೆ ಹೋಗಿ ತಂದೆಯೂ ಸಾವನ್ನಪ್ಪಿದ ಧಾರುಣ ಘಟನೆ ನಡೆದಿದೆ. ಈ ಕುರಿತು ಕಾಮಸಮುದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಅಯ್ಯೋ ವಿಧಿಯೇ! ಸೆಲ್ಫಿ ತೆಗೆಯುವಾಗ ಕೆರೆಗೆಬಿದ್ದ ಮಗಳು, ರಕ್ಷಣೆಗೆ ಹೋಗಿ ತಂದೆಯೂ ಸಾವು
ಕೆರೆಗೆಬಿದ್ದ ಮಗಳ ರಕ್ಷಣೆಗೆ ಹೋಗಿ ತಂದೆಯೂ ಸಾವು
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Edited By: |

Updated on:Apr 28, 2024 | 8:28 PM

Share

ಕೋಲಾರ, ಏ.28: ಸೆಲ್ಫಿ ತೆಗೆಯುವಾಗ ಕೆರೆಗೆಬಿದ್ದ ಮಗಳ ರಕ್ಷಣೆಗೆ ಹೋಗಿ ತಂದೆಯೂ ಸಾವನ್ನಪ್ಪಿದ ಧಾರುಣ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ(Bangarapet) ತಾಲ್ಲೂಕು ಕಾಮಸಮುದ್ರ ಗ್ರಾಮದ ವೃಷಬಾವತಿ ಕೆರೆ(Vrishabhavathi Lake )ಯಲ್ಲಿ ನಡೆದಿದೆ. ಬೆಂಗಳೂರು ಮೂಲದ ಸೈಯದ್ ಅಯೂಬ್(35), ಫಾತಿಮಾ(10) ಸಾವು ಮೃತ ರ್ದುದೈವಿಗಳು. ಮಜರಾಗೊಲ್ಲಹಳ್ಳಿಗೆ ಮದುವೆ ಕಾರ್ಯಕ್ರಮಕ್ಕೆ ಬಂದಿದ್ದ ತಂದೆ ಮತ್ತು ಮಗಳು, ಕೆರೆ ನೋಡಲು ಹೋಗಿ ಸೆಲ್ಫಿ ತೆಗೆದುಕೊಳ್ಳುವಾಗ ಮಗಳು ಕಾಲುಜಾರಿಬಿದ್ದಿದ್ದಾಳೆ. ಈ ವೇಳೆ ಮಗಳು ಫಾತಿಮಾ ರಕ್ಷಿಸಲು ಕೆರೆಗೆ ಇಳಿದ ತಂದೆ ಅಯೂಬ್ ಕೂಡ ಕೊನೆಯುಸಿರೆಳೆದಿದ್ದಾರೆ. ಈ ಕುರಿತು ಕಾಮಸಮುದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ನಾಯಿಯೊಂದನ್ನ ಹೊತ್ತೊಯ್ದು ತಿಂದು ಹಾಕಿದ ಚಿರತೆ

ಮಂಡ್ಯ: ಜಿಲ್ಲೆ ಪಾಂಡವಪುರ ತಾಲೂಕಿನ ಕನಗನಹಳ್ಳಿ ಗ್ರಾಮದಲ್ಲಿ ಚಿರತೆಯು ನಾಯಿಯೊಂದನ್ನ ಹೊತ್ತೊಯ್ದು ತಿಂದು ಹಾಕಿದ ಘಟನೆ ಇಂದು(ಏ.28) ಮುಂಜಾನೆ 3.30 ಗಂಟೆ ಸುಮಾರಿಗೆ ನಡೆದಿದೆ. ಬಳಿಕ ಜಮೀನಿನ ಬಳಿ ರೈತರಿಗೆ ಚಿರತೆ ಕಾಣಿಸಿಕೊಂಡು‌‌ ಆತಂಕ ಹುಟ್ಟಿಸಿದೆ. ಕಳೆದ ಒಂದು ತಿಂಗಳಿನಿಂದ ಗ್ರಾಮದ ಅಸುಪಾಸಿನಲ್ಲಿ‌ ಕಾಣಿಸಿಕೊಳ್ಳುತ್ತಿದೆ. ಕೂಡಲೇ ಬೋನು ಇರಿಸಿ ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರ ಮನವಿ ಮಾಡಿದ್ದಾರೆ. ಇನ್ನು ನಾಯಿ ಮೇಲೆ ಚಿರತೆ ದಾಳಿ ಮಾಡಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ:ಬಳ್ಳಾರಿ: ಮದುವೆ ದಿಬ್ಬಣದ ಲಾರಿ ಪಲ್ಟಿ; ಇಬ್ಬರು ಸ್ಥಳದಲ್ಲೇ ಸಾವು, 50ಕ್ಕೂ ಹೆಚ್ಚು ಜನರಿಗೆ ಗಾಯ

ಬೈಕ್ ವ್ಹೀಲಿಂಗ್ ಆಯ್ತು ಇದೀಗ ಆಟೋದಲ್ಲಿ ಡೆಡ್ಲಿ ವ್ಹೀಲಿಂಗ್

ಬೆಂಗಳೂರು: ಬೈಕ್ ವ್ಹೀಲಿಂಗ್ ಆಯ್ತು ಇದೀಗ ಆಟೋದಲ್ಲಿ ಡೆಡ್ಲಿ ವ್ಹೀಲಿಂಗ್ ಶುರುವಾಗಿದೆ. ಹೌದು ಎರಡು ಚಕ್ರದಲ್ಲಿ ಆಟೊ ಚಲಾಯಿಸಿ ಪುಂಡಾಟ ಮೆರೆದ ಘಟನೆ ನಿನ್ನೆ(ಏ.27) ತಡರಾತ್ರಿ ದೇವೇಗೌಡ ಪೆಟ್ರೋಲ್ ಬಂಕ್ ಫ್ಲೈಓವರ್ ನಲ್ಲಿ ನಡೆದಿದೆ. ಘಟನೆಯ ಡೆಡ್ಲಿ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದ್ದು, ನಂಬರ್ ಪ್ಲೇಟ್ ಇಲ್ಲದ ಆಟೋದಲ್ಲಿ ಸ್ಟಂಟ್ ಮಾಡಲಾಗಿದೆ. ಈ ಘಟನೆ ಬನಶಂಕರಿ ಸಂಚಾರ ಪೊಲೀಸ್ ಠಾಣೆ ವ್ತಾಪ್ತಿಯಲ್ಲಿ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:21 pm, Sun, 28 April 24