ಕೋಲಾರ: ಮಸೀದಿ ಎದುರು ಡಿಜೆ ಸೌಂಡ್ ಹಾಕಿದ್ದಕ್ಕೆ ಕೆಂಪೇಗೌಡರ ಪಲ್ಲಕ್ಕಿ ತಡೆದು ಗಲಾಟೆ

ಕರ್ನಾಟಕದೆಲ್ಲೆಡೆ ಇಂದು (ಜೂನ್ 27) ನಾಡಪ್ರಭು ಕೆಂಪೇಗೌಡರ 515 ನೇ ಜನ್ಮದಿನೋತ್ಸವವನ್ನು ಸರ್ಕಾರ ರಾಜ್ಯಾದ್ಯಂತ ಆಚರಣೆ ಮಾಡಿದೆ. ಅದರಂತೆ ಕೋಲಾರದಲ್ಲಿ ಜಯಂತಿ ನಿಮಿತ್ತ ಕೆಂಪೇಗೌಡರ ಭಾವಚಿತ್ರ ವೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಗಲಾಟೆಯಾಗಿರುವ ಘಟನೆ ನಡೆದಿದೆ, ಇನ್ನು ಗಲಾಟೆ ಆಗಿದ್ದೇಕೆ ಎನ್ನುವ ವಿವರ ಇಲ್ಲಿದೆ

ಕೋಲಾರ, (ಜೂನ್ 27): ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ನಿಮಿತ್ತ ಇಂದು (ಜೂನ್ 27) ಕೋಲಾರದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ. ವಿವಿಧ ವಾದ್ಯಗಳೊಂದಿಗೆ ಕೆಂಪೇಗೌಡರ ಪಲ್ಲಕ್ಕಿಯನ್ನು ಕೋಲಾರ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಗಿದೆ. ಈ ವೇಳೆ ಕೋಲಾರ ನಗರದ ಅರಹಳ್ಳಿ ಗೇಟಿ ಬಳಿ ಎರಡು ಗುಂಪುಗಳ ನಡುವೆ ಗಲಾಟೆಯಾಗಿದೆ. ಮಸೀದಿ ಎದುರು ಡಿಜೆ ಸೌಂಡ್ ಹಾಕಿಕೊಂಡು ಹೋಗಿದ್ದಕ್ಕೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಕೂಡಲೇ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಕೋಲಾರ ನಗರದ ಅರಹಳ್ಳಿ ಗೇಟಿ ಬಳಿಯ ಮಸೀದಿ ಮುಂದೆ ಡಿಜೆ ಸೌಂಡ್​ ಹಾಕಿದ್ದಕ್ಕೆ ಕೆಂಪೇಗೌಡರ ಪಲ್ಲಕ್ಕಿ ಮತ್ತು ಡಿಜೆ ತಡೆದು ಗಲಾಟೆ ಮಾಡಲಾಗಿದೆ. ಇದರಿಂದ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ಶುರುವಾಗಿದೆ. ಇದು ಕೈ ಮೀರಿ ಹೋಗುವ ಮೊದಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಎರಡು ಗುಂಪುಗಳ ಜನರನ್ನು ಮನವೊಲಿಸಿದ್ದಾರೆ. ಈ ಗಲಾಟೆಯಿಂದಾಗಿ ಸ್ಥಳದಲ್ಲಿ ಕೆಲಕಾಲ‌ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಸರಿಯಾದ ಸಮಯಕ್ಕೆ ಪೊಲೀಸರು ಆಗಮಿಸಿದ್ದರಿಂದ ಎಲ್ಲವೂ ಬಗೆಹರಿದಿದೆ.

ಇದನ್ನೂ ಓದಿ: ಕೆಂಪೇಗೌಡ ಜಯಂತಿಗೆ ಕುಮಾರಸ್ವಾಮಿ, ದೇವೇಗೌಡ ಆಹ್ವಾನಿಸದ ವಿಚಾರ: ಡಿಕೆ ಶಿವಕುಮಾರ್​​ ಹೇಳಿದ್ದಿಷ್ಟು

ಕೆಂಪೇಗೌಡ ಜಯಂತಿಯಲ್ಲಿ ಅಸಭ್ಯ ನೃತ್ಯ

ಇನ್ನು ಇದೇ ಕೋಲಾರದಲ್ಲಿ ನಡೆದ ಕೆಂಪೇಗೌಡ ಜಯಂತಿ ಮೆರವಣಿಗೆಯಲ್ಲಿ ಮಂಗಳಮುಖಿಯರು ಅಸಭ್ಯ ನೃತ್ಯ ಮಾಡಿದ್ದಾರೆ. ಸಾರ್ವಜನಿಕವಾಗಿ ಅರ್ಧಂಬರ್ಧ, ತುಂಡು ಬಟ್ಟೆ ತೊಟ್ಟು ಯುವಕರೊಂದಿಗೆ ಆಶ್ಲೀಲ ನೃತ್ಯ ಮಾಡಿದ್ದಾರೆ. ಇದರಿಂದ ಮಹಿಳೆಯರು, ಮಕ್ಕಳು, ಹಿರಿಯರಿಗೆ ಮುಜುಗರ ಉಂಟಾಗಿದ್ದು, ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 4:06 pm, Thu, 27 June 24

ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ

18 ವರ್ಷಗಳ ಹಿಂದೆ ಉತ್ತಮ ಸಮಾಜಕ್ಕಾಗಿ ಟಿವಿ9 ಚಾನೆಲ್​​ ಆರಂಭವಾದಾಗಿನಿಂದ ನನ್ನ ಮಾಧ್ಯಮ ಕಾಯಕವೂ ಆರಂಭ ಪಡೆಯಿತು. ಸ್ನಾತಕೋತ್ತರ ಪದವಿ ಮುಗಿಸಿದ್ದ ನಾನು ಚಿನ್ನದ ನಾಡು, ಕೃಷಿಕರ ಬೀಡು ಕೋಲಾರ ಜಿಲ್ಲೆಯ ಹಿರಿಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಟಿವಿ9 ಸಂಸ್ಥೆಯ ಆಶೋತ್ತರಗಳಿಗೆ ತಕ್ಕಂತೆ ಕೋಲಾರ ಜನತೆಯ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡಿದ್ದೇನೆ. ನನ್ನದು ಸಾಮಾಜಿಕ ಕಳಕಳಿ ಇರುವ ಟಿವಿ9 ಸಂಸ್ಥೆಯಲ್ಲಿ ಕೆಲಸ ಅನ್ನೋದಕ್ಕಿಂತ ಉತ್ತಮ ಸಮಾಜಕ್ಕಾಗಿ ನನ್ನ ಸೇವೆ ಅನ್ನುವ ಭಾವನೆಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ.

Read More
Loading...
Unable to load recommendations.
Follow Us