ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಭಾರೀ ಎಡವಟ್ಟು; ಆಪರೇಷನ್ ವೇಳೆ ಹೊಟ್ಟೆಯಲ್ಲೇ 3 ಅಡಿ ಉದ್ದದ ಬಟ್ಟೆ ಬಿಟ್ಟಿದ್ದ ವೈದ್ಯರು

ಕೋಲಾರದ ಜಿಲ್ಲಾಸ್ಪತ್ರೆಗೆ ಹೆರಿಗೆಗೆ ಬಂದಿದ್ದ ಮಹಿಳೆಗೆ ಶಸ್ತ್ರ ಚಿಕಿತ್ಸೆ ಮಾಡಿದ್ದ ವೈದ್ಯರು ಹೊಟ್ಟೆಯಲ್ಲಿ 3 ಅಡಿ ಉದ್ದದ ಬಟ್ಟೆ ಬಿಟ್ಟಿದ್ದರು. ಆರೋಗ್ಯ ಸಮಸ್ಯೆ ಕಾಡಿದ ಹಿನ್ನೆಲೆ ಮಹಿಳೆ ಖಾಸಗಿ ಆಸ್ಪತ್ರೆಗೆ ಹೋಗಿದ್ದು ಸರ್ಕಾರಿ ಆಸ್ಪತ್ರೆ ವೈದ್ಯರ ಎಡವಟ್ಟು ಬಯಲಾಗಿದೆ. ವೈದ್ಯರ ವಿರುದ್ಧ ದೂರು ಸಲ್ಲಿಸಲಾಗಿದೆ.

ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಭಾರೀ ಎಡವಟ್ಟು; ಆಪರೇಷನ್ ವೇಳೆ ಹೊಟ್ಟೆಯಲ್ಲೇ 3 ಅಡಿ ಉದ್ದದ ಬಟ್ಟೆ ಬಿಟ್ಟಿದ್ದ ವೈದ್ಯರು
ಸಾಂದರ್ಭಿಕ ಚಿತ್ರ
Edited By: ಆಯೇಷಾ ಬಾನು

Updated on: May 16, 2024 | 11:06 AM

ಕೋಲಾರ, ಮೇ.16: ಕೋಲಾರ ಜಿಲ್ಲಾಸ್ಪತ್ರೆಯಲ್ಲಿ (Kolar District Hospital) ಆಪರೇಷನ್ ವೇಳೆ ವೈದ್ಯರು ಭಾರೀ ಎಡವಟ್ಟು ಮಾಡಿದ್ದಾರೆ (Doctors Negligence). ಹೆರಿಗೆಗೆ ಬಂದಿದ್ದ ಮಹಿಳೆಗೆ ಹೆರಿಗೆ ವೇಳೆ ಶಸ್ತ್ರ ಚಿಕಿತ್ಸೆ ಮಾಡಿದ್ದು ವೈದ್ಯರು ಹೊಟ್ಟೆಯಲ್ಲಿ 3 ಅಡಿ ಉದ್ದದ ಬಟ್ಟೆ ಬಿಟ್ಟಿದ್ದಾರೆ. ಮೇ 5 ರಂದು ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಈ ದುರ್ಘಟನೆ ನಡೆದಿದೆ.

ಜಿಲ್ಲಾ ಆಸ್ಪತ್ರೆ ವೈದ್ಯೆ ನಾಗವೇಣಿ ಅವರಿಂದ ಈ ಎಡವಟ್ಟು‌ ನಡೆದಿದೆ ಎಂಬ ಆರೋಪ‌ ಕೇಳಿ ಬಂದಿದೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ರಾಮಸಾಗರ ನಿವಾಸಿ ಚಂದ್ರಿಕಾಗೆ ಆರೋಗ್ಯ ಸಮಸ್ಯೆ ಎದುರಾದಾಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ವೇಳೆ ಸರ್ಕಾರಿ ಆಸ್ಪತ್ರೆ ವೈದ್ಯರ ಯಡವಟ್ಟು ಬಯಲಾಗಿದೆ. ಪತಿ ರಾಜೇಶ್ ರಿಂದ ಜಿಲ್ಲಾಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ. ವಿಜಯ್ ಜುಮಾರ್ ಗೆ ದೂರು ಸಲ್ಲಿಸಿದ್ದಾರೆ. ವೈದ್ಯರ ಬೇಜವ್ದಾರಿತನದ ವಿರುದ್ದ ಮಹಿಳೆ ಸಂಬಂಧಿಕರು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಮೈಸೂರು ಬಳಿ ಹೆದ್ದಾರಿ ತಡೆದು ರೈತರಿಂದ ಪ್ರತಿಭಟನೆ, ಬಾಳೆ ಬೆಳೆ ಹಾನಿಗೆ ವಿಶೇಷ ಪ್ಯಾಕೇಜ್ ಘೋಷಿಸಲು ಆಗ್ರಹ

ಇನ್ಸ್​ಪೆಕ್ಟರ್, ಮಹಿಳಾ ಕಾನ್ಸ್​ಟೇಬಲ್ ಸಸ್ಪೆಂಡ್

ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ಯುವತಿ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಡಿಗೇರಿ ಠಾಣೆ ಇನ್ಸ್​ಪೆಕ್ಟರ್, ಮಹಿಳಾ ಕಾನ್ಸ್​ಟೇಬಲ್ ಅಮಾನತು ಮಾಡಲಾಗಿದೆ. ಜೀವ ಬೆದರಿಕೆ ಇದೆ ಎಂದು ಅಂಜಲಿ ಠಾಣೆಗೆ ದೂರು ನೀಡಿದ್ರು. ಆದ್ರೆ ದೂರು ನೀಡಿದ್ರೂ ಪೊಲೀಸರು ನಿರ್ಲಕ್ಷಿಸಿದ್ದ ಆರೋಪ ಕೇಳಿಬಂದಿತ್ತು. ಹೀಗಾಗಿ ಬೆಂಡಿಗೇರಿ ಠಾಣೆ ಇನ್ಸ್​ಪೆಕ್ಟರ್ ಚಂದ್ರಶೇಖರ ಬಿ.ಚಿಕ್ಕೋಡಿ, ಕಾನ್ಸ್​ಟೇಬಲ್ ರೇಖಾರನ್ನ ಅಮಾನತುಗೊಳಿಸಿ ಕಮಿಷನರ್ ರೇಣುಕಾ ಸುಕುಮಾರ ಆದೇಶ ಹೊರಡಿಸಿದ್ದಾರೆ.

MDMA ಸಾಗಾಟ, ನಾಲ್ವರು ಅರೆಸ್ಟ್

ಎಂಡಿಎಂಎ ಡ್ರಗ್​ ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನ ಬಂಧಿಸಲಾಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ಕಾರಿನಲ್ಲಿ ನಿಷೇದಿತ MDMA ಸಾಗಿಸುತ್ತಿದ್ದ ಬಿಜೈ ನಿವಾಸಿ ಮೊಹಮ್ಮದ್ ಅಮೀನ್ ರಾಫಿ, ಅಡ್ಡೂರು ಮೊಹಮ್ಮದ್ ಸಿನಾನ್, ಬಂದರು ನಿವಾಸಿ ಮೊಹಮ್ಮದ್ ನೌಮಾನ್, ಉಳ್ಳಾಲ ಬೋಳಿಯಾರ ನಿವಾಸಿ ಮೊಹಮ್ಮದ್ ಸಫೀಲ್​ನನ್ನ ಬಂಧಿಸಲಾಗಿದೆ. ಬಂಧಿರಿಂದ 6.5 ಲಕ್ಷ ರೂಪಾಯಿ ಮೌಲ್ಯದ MDMA ವಶಕ್ಕೆ ಪಡೆಯಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Loading...
Unable to load recommendations.
Follow Us