Kolar News: ಕೋಲಾರದ ರೈತ ಕುಟುಂಬಕ್ಕೆ ಭರ್ಜರಿ ಜಾಕ್​ಪಾಟ್; ಟೊಮೆಟೊ ಮಾರಾಟದಿಂದ ಸಿಕ್ತು 38 ಲಕ್ಷ ರೂ

ಕೋಲಾರ ಎಪಿಎಂಸಿ ಮಾರುಕಟ್ಟೆಯು ದೇಶದಲ್ಲಿ ಟೊಮೇಟೊಗೆ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ಮಂಗಳವಾರದಂದು 15 ಕೆಜಿ ಟೊಮೆಟೊ ಬಾಕ್ಸ್‌ಗೆ ಗರಿಷ್ಠ 2,200 ರೂ. ದೊರೆತಿತ್ತು.

Kolar News: ಕೋಲಾರದ ರೈತ ಕುಟುಂಬಕ್ಕೆ ಭರ್ಜರಿ ಜಾಕ್​ಪಾಟ್; ಟೊಮೆಟೊ ಮಾರಾಟದಿಂದ ಸಿಕ್ತು 38 ಲಕ್ಷ ರೂ
ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ಹರಾಜು
Follow us
| Updated By: ಗಣಪತಿ ಶರ್ಮ

Updated on: Jul 12, 2023 | 9:35 PM

ಕೋಲಾರ: ಕೋಲಾರದ ರೈತ ಕುಟುಂಬವೊಂದು ಎಪಿಎಂಸಿ ಮಾರುಕಟ್ಟೆಯಲ್ಲಿ ಮಂಗಳವಾರ 38 ಲಕ್ಷ ರೂ.ಗೆ 2 ಸಾವಿರ ಬಾಕ್ಸ್ ಟೊಮೆಟೊ (Tomato Price) ಮಾರಾಟ ಮಾಡಿದೆ. ಪ್ರಭಾಕರ್ ಗುಪ್ತಾ ಮತ್ತು ಅವರ ಸಹೋದರರು ತಮ್ಮ ಉತ್ಪನ್ನಗಳನ್ನು ಬಾಕ್ಸ್‌ಗೆ 1,900 ರೂ.ನಂತೆ ಮಂಗಳವಾರದಂದು ಮಾರಾಟ ಮಾಡಿದ್ದಾರೆ. 15 ಕೆಜಿಯ ಟೊಮೆಟೊ ಬಾಕ್ಸ್‌ ಗರಿಷ್ಠ 2,200 ರೂ.ನಂತೆ ಮಾರಾಟವಾಗಿತ್ತು. ಬುಧವಾರ ಅದೇ ಬಾಕ್ಸ್‌ನ ಗರಿಷ್ಠ ಬೆಲೆ 1,800 ರೂ. ಇತ್ತು.

ಕೋಲಾರ ಜಿಲ್ಲೆಯ ಬೇತಮಂಗಲದ 40 ಎಕರೆ ಜಮೀನಿನಲ್ಲಿ ಗುಪ್ತಾ ಮತ್ತು ಅವರ ಸಹೋದರರು ಕಳೆದ 40 ವರ್ಷಗಳಿಂದ ತರಕಾರಿ ಕೃಷಿ ಮಾಡುತ್ತಿದ್ದಾರೆ. ರಸಗೊಬ್ಬರ ಮತ್ತು ಕೀಟನಾಶಕಗಳ ಬಗ್ಗೆ ಉತ್ತಮ ಜ್ಞಾನವನ್ನು ಹೊಂದಿದ್ದರಿಂದ ಕುಟುಂಬವು ಉತ್ತಮ ಗುಣಮಟ್ಟದ ತರಕಾರಿಗಳನ್ನು ಬೆಳೆದಿದೆ ಎಂದು ಪ್ರಭಾಕರ್ ಅವರ ಸಹೋದರ ಸುರೇಶ್ ಹೇಳಿರುವುದಾಗಿ ‘ನ್ಯೂಸ್ 9’ ವರದಿ ಮಾಡಿದೆ.

ಎರಡು ವರ್ಷಗಳ ಹಿಂದೆ ಕೂಡ ಗುಪ್ತಾ ಕುಟುಂಬಕ್ಕೆ ಟೊಮೆಟೊಗೆ ಉತ್ತಮ ಬೆಲೆ ಸಿಕ್ಕಿತ್ತು. ಆಗ 15 ಕೆಜಿ ಟೊಮೆಟೊ ಬಾಕ್ಸ್‌ಗೆ 800 ರೂ.ನಂತೆ ಕುಟುಂಬವು ಮಾರಾಟ ಮಾಡಿತ್ತು ಎಂದು ವರದಿ ಉಲ್ಲೇಖಿಸಿದೆ.

‘2.5 ಎಕರೆಯಲ್ಲಿ ಟೊಮೇಟೊ ಬೆಳೆದಿದ್ದೇನೆ. ಒಂದು ಎಕರೆಯಲ್ಲಿ ಟೊಮೆಟೊ ಬೆಳೆಯಲು ಸುಮಾರು 2.5 ಲಕ್ಷ ರೂ. ಖರ್ಚಾಗಿದೆ. ನಾನು 2.5 ಎಕರೆಯಲ್ಲಿ 300 ಬಾಕ್ಸ್ ಟೊಮೆಟೊ ಬೆಳೆಯುತ್ತಿದ್ದೆ. ಈಗ ಕೇವಲ 90 ಬಾಕ್ಸ್ ಟೊಮೆಟೊ ಸಿಕ್ಕಿದೆ ಎಂದು ರೈತ ಎಸ್​​ಬಿ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: ಮತ್ತಷ್ಟು ದುಬಾರಿಯಾದ ಟೊಮ್ಯಾಟೋ; ಕೋಲಾರದಲ್ಲಿ 15 ಕೆಜಿ ಬಾಕ್ಸ್ 2200 ರೂ.

ಕೋಲಾರ ಎಪಿಎಂಸಿ ಮಾರುಕಟ್ಟೆಯು ದೇಶದಲ್ಲಿ ಟೊಮೇಟೊಗೆ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ಮಂಗಳವಾರದಂದು 15 ಕೆಜಿ ಟೊಮೆಟೊ ಬಾಕ್ಸ್‌ಗೆ ಗರಿಷ್ಠ 2,200 ರೂ. ದೊರೆತಿತ್ತು. ಕೋಲಾರದಿಂದ ದಿನಕ್ಕೆ 8,000 ಮೆಟ್ರಿಕ್ ಟನ್ ಟೊಮೆಟೊ ಪೂರೈಕೆಯಾಗುತ್ತಿತ್ತು. ಈಗ ಕೇವಲ 1,000 ಮೆಟ್ರಿಕ್ ಟೊಮೆಟೊ ಪೂರೈಕೆ ಮಾಡುತ್ತಿದ್ದೇವೆ ಎಂದು ಎಪಿಎಂಸಿ ಮಾರುಕಟ್ಟೆಯ ವ್ಯಾಪಾರಿ ಸುಧಾಕರ್ ತಿಳಿಸಿದ್ದಾರೆ.

ಕೋಲಾರದಲ್ಲಿ ಟೊನೆಟೊ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೋಲಾರದಲ್ಲಿ ಟೊಮೆಟೊ ಬೆಳೆಯುವ ರೈತರು ಹಗಲಿರುಳು ಜಮೀನಿನಲ್ಲಿ ಕಾವಲು ಕಾಯುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಾವಿನ ನಂತರದ ಕಥೆ; ಸ್ಮಶಾನದಲ್ಲಿ ಭೈರಾದೇವಿ ಶೂಟಿಂಗ್; ರಮೇಶ್ ಹೇಳಿದ್ದಿಷ್ಟು
ಸಾವಿನ ನಂತರದ ಕಥೆ; ಸ್ಮಶಾನದಲ್ಲಿ ಭೈರಾದೇವಿ ಶೂಟಿಂಗ್; ರಮೇಶ್ ಹೇಳಿದ್ದಿಷ್ಟು
ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್