ವಿಶ್ವಸಂಸ್ಥೆ ಮಾನವ ಹಕ್ಕು ಸಮಿತಿಗೆ ಚಿನ್ನದ ನಾಡಿನ ಮಹಿಳೆ ಆಯ್ಕೆ! ಅಂಬೇಡ್ಕರ್​ ನಂತರ ವಿಶ್ವಮಟ್ಟದಲ್ಲಿ ದಲಿತರಿಗೆ ಸಿಕ್ಕ ಅವಕಾಶ ಎಂದ ಗಣ್ಯರು

KP Ashwini: ಆಕೆ ಕುಗ್ರಾಮದ ದಲಿತ ಕುಟುಂಬದಲ್ಲಿ ಹುಟ್ಟಿ ಬೆಳೆದ ಮಹಿಳೆ. ಆ ಮಹಿಳೆಯನ್ನುಈಗ ವಿಶ್ವಸಂಸ್ಥೆ ಗುರುತಿಸುವ ಮೂಲಕ ಏಷ್ಯಾದಲ್ಲಿಯೇ ವಿಶ್ವಸಂಸ್ಥೆಗೆ ಆಯ್ಕೆಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಇದೆ ರಾಜ್ಯೋತ್ಸವದ ದಿನದಿಂದ 6 ವರ್ಷಗಳ ಕಾಲ ಕೆ.ಪಿ.ಅಶ್ವಿನಿ ಜಿನಿವಾದಲ್ಲಿ ಕಾರ್ಯಗತರಾಗಲಿದ್ದಾರೆ.

ವಿಶ್ವಸಂಸ್ಥೆ ಮಾನವ ಹಕ್ಕು ಸಮಿತಿಗೆ ಚಿನ್ನದ ನಾಡಿನ ಮಹಿಳೆ ಆಯ್ಕೆ! ಅಂಬೇಡ್ಕರ್​ ನಂತರ ವಿಶ್ವಮಟ್ಟದಲ್ಲಿ ದಲಿತರಿಗೆ ಸಿಕ್ಕ ಅವಕಾಶ ಎಂದ ಗಣ್ಯರು
ವಿಶ್ವಸಂಸ್ಥೆ ಮಾನವ ಹಕ್ಕು ಸಮಿತಿಗೆ ಚಿನ್ನದ ನಾಡಿನ ಮಹಿಳೆ ಆಯ್ಕೆ! ಅಂಬೇಡ್ಕರ್​ ನಂತರ ವಿಶ್ವಮಟ್ಟದಲ್ಲಿ ದಲಿತರಿಗೆ ಸಿಕ್ಕ ಅವಕಾಶ ಎಂದ ಗಣ್ಯರು
Follow us
TV9 Web
| Updated By: ಸಾಧು ಶ್ರೀನಾಥ್​

Updated on: Oct 21, 2022 | 6:56 PM

KP Ashwini: ಆಕೆ ಅದೊಂದು ಕುಗ್ರಾಮದ ದಲಿತ ಕುಟುಂಬದಲ್ಲಿ ಹುಟ್ಟಿ ಬೆಳೆದ ಮಹಿಳೆ, ಹುಟ್ಟುತ್ತಲೇ ದಲಿತಪರ, ಹಿಂದುಳಿದವರ, ಶೋಷಿತರ ಪರವಾದ ಕಾಳಜಿ ಹೊಂದಿದ್ದ ಆ ಮಹಿಳೆಗೆ ಇಂದು ವಿಶ್ವ ಮಟ್ಟದಲ್ಲಿ, ವಿಶ್ವಸಂಸ್ಥೆಯಲ್ಲಿ ಗುರುತಿಸುವ ಮೂಲಕ ಏಷ್ಯಾದಲ್ಲಿಯೇ ವಿಶ್ವಸಂಸ್ಥೆಗೆ (UNHRC special rapporteur) ಆಯ್ಕೆಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ..

ವಿಶ್ವಮಟ್ಟದಲ್ಲಿ ಹೆಸರು ಮಾಡಿರುವ ಕೋಲಾರಕ್ಕೆ ಮತ್ತೊಂದು ಗರಿ..!

ಕೋಲಾರ ಹಲವು ವರ್ಷಗಳಿಂದ ನೂರಾರು ವಿಷಯಗಳಲ್ಲಿ ದೇಶ ಹಾಗೂ ವಿಶ್ವಮಟ್ಟದಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿರುವ ಜಿಲ್ಲೆ, ಹೀಗೆ ಬಹಳಷ್ಟು ಹೆಗ್ಗಳಿಕೆ ಹೊಂದಿರುವ ಕೋಲಾರಕ್ಕೆ ಈಗ ವಿಶ್ವಮಟ್ಟದಲ್ಲಿ ಮತ್ತೊಂದು ಗರಿ ಮೂಡಿದೆ. ಅದು ಕೋಲಾರ ಮೂಲದ ಮಹಿಳೆ ಯೊಬ್ಬರು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಜನಾಂಗಿಯ ಬೇದದ ಕುರಿತ ಸ್ವತಂತ್ರ್ಯ ತಜ್ನರಾಗಿ ಆಯ್ಕೆಯಾಗಿದ್ದಾರೆ, ಈ ಮೂಲಕ ಅಶ್ವಿನಿ ವಿಶ್ವಸಂಸ್ಥೆಗೆ ಏಷ್ಯಾದಿಂದ ಆಯ್ಕೆಯಾದ ಮೊಲದ ಮಹಿಳೆ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದಾರೆ.

ಅಶ್ವಿನಿ ಅವರಿಗೆ ಜನಾಂಗದ ಮುಖಂಡರಿಂದ ಅದ್ದೂರಿ ಅಭಿನಂಧನೆ..! ವಿಶ್ವಸಂಸ್ಥೆಗೆ ಆಯ್ಕೆಯಾಗಿರುವ ಅಶ್ವಿನಿ ಅವರಿಗೆ ಕೋಲಾರ ಜಿಲ್ಲೆಯ ರೇಣುಕಾ ಯಲ್ಲಮ್ಮ ಬಳಗದ ವತಿಯಿಂದ ಕೆ.ಪಿ.ಅಶ್ವಿನಿ ಅವರಿಗೆ ಅದ್ದೂರಿ ಹಾಗೂ ಆತ್ಮೀಯ ಸನ್ಮಾನವನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ವೇಳೆ ಮಾತನಾಡಿದ ರೇಣುಕಾ ಯಲ್ಲಮ್ಮ ಸಂಘದ ಜಿಲ್ಲಾಧ್ಯಕ್ಷ ಬಂಡೂರು ನಾರಾಯಣಸ್ವಾಮಿ, ಮುಖಂಡ ಕೆಎಸ್​ ಗಣೇಶ್​, ಸೇರಿದಂತೆ ಹಲವು ಜಿಲ್ಲೆಯ ಮುಖಂಡರು ಅಶ್ವಿನಿ ಅವರ ಸಾಧನೆಯನ್ನು ಕಂಡು ಮನತುಂಬಿ ಹೊಗಳಿದ್ದಾರೆ, ಶೋಶಿತ ವರ್ಗದಲ್ಲಿ ಹುಟ್ಟು ವಿಶ್ವಮಟ್ಟದಲ್ಲಿ ಹೆಸರು ಮಾಡಿರುವ ನಮ್ಮೂರಿನ ಮಹಿಳೆ ಎಂದು ಎಲ್ಲರೂ ಹಾಡಿ ಕೊಂಡಾಡಿದರು. ಅಷ್ಟೇ ಅಲ್ಲದೆ ಅಂಬೇಡ್ಕರ್​ ನಂತರ ವಿಶ್ವಮಟ್ಟದಲ್ಲಿ ಶೋಷಿತರ ಪರವಾದ ಧ್ವನಿಯಾಗಿರುವ ಮಹಿಳೆ ಎಂದು ಕೊಂಡಾಡಿದ್ದಾರೆ. (ವರದಿ: ರಾಜೇಂದ್ರ ಸಿಂಹ)

ದಲಿತರ  ಧ್ವನಿಯಾಗಿ ವಿಶ್ವಮಟ್ಟದಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತೇನೆ ಎಂದರು ಅಶ್ವಿನಿ!

ಇನ್ನು ದಲಿತ ಹೋರಾಟದ ಹಿನ್ನೆಲೆ ಹೊಂದಿರುವ ಕುಟುಂಬದಿಂದ ಬಂದಿರುವ ಅಶ್ವಿನಿ ದಲಿತರ ಹಾಗೂ ಶೋಷಿತರ ಪರವಾಗಿ ಹೋರಾಟಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಇದೆ, ಅಲ್ಲದೆ ಹಿಂದುಳಿದ ಹಾಗೂ ಶೋಷಿತರ ಪರವಾಗಿ ಸಾಕಷ್ಟು ಅಧ್ಯಯನ ಮಾಡಿರುವ ಅಶ್ವಿನಿ ಅವರಿಗೆ ಅದಕ್ಕೆ ಪೂರಕ ಎಂಬಂತೆ ಶೋಷಿತರ ಪರವಾಗಿ ದ್ವನಿ ಎತ್ತಲು ವಿಶ್ವಮಟ್ಟದಲ್ಲಿ ನನಗೆ ಅವಕಾಶ ಸಿಕ್ಕಿದೆ. ಅದರಂತೆ ತಾನು ಲಿಂಗ ತಾರತಮ್ಮ, ವರ್ಣಬೇದ, ಕುರಿತು ವಿಶ್ವಮಟ್ಟದಲ್ಲಿ ಇರುವ ಶೋಷಣೆಯ ವಿರುದ್ದ ಧ್ವನಿ ಎತ್ತುವುದಾಗಿ ತಿಳಿಸಿದ್ರು.

ಕೆ.ಪಿ.ಅಶ್ವಿನಿ ಈ ಸ್ಥಾನಕ್ಕೆ ಬಂದಿದ್ದಾದ್ರು ಹೇಗೆ ಅವರ ಹಿನ್ನೆಲೆ ಏನು..! ಅಶ್ವಿನಿ ಇಂಥಾದೊಂದು ಉನ್ನತ ಸ್ಥಾನಕ್ಕೆ ಆಯ್ಕೆಯಾಗಿದ್ದಾದರೂ ಹೇಗೆ ಅನ್ನೋದನ್ನ ನೋಡೋದಾದ್ರೆ, ಅಶ್ವಿನಿ ಅವರ ತಂದೆ ಪ್ರಸನ್ನಕುಮಾರ್ ಹಾಗೂ ಜಯಮ್ಮ ಮೂಲತ ಕೋಲಾರ ತಾಲ್ಲೂಕು ಕುರುಬರಹಳ್ಳಿಯವರು ತಂದೆ ಪ್ರಸನ್ನಕುಮಾರ್​ 1985 ರಲ್ಲಿ ಕೆಎಎಸ್ ಅಧಿಕಾರಿಯಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅಶ್ವಿನಿ ಅವರು ಕೋಲಾರದಿಂದ ತನ್ನ ಶಿಕ್ಷಣ ಆರಂಭಿಸಿದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಂದರೆ ಕೋಲಾರ, ತುಮಕೂರು, ಗುಲ್ಬರ್ಗ, ಮಂಗಳೂರು, ಹಾಸನ ಸೇರಿ ಹಲವು ಜಿಲ್ಲೆಗಳಲ್ಲಿ ಪ್ರಾಥಮಿಕ ಮತ್ತು ಪೌಢ ಶಿಕ್ಷಣ ಪಡೆದಿದ್ದಾರೆ.

ನಂತರ, ಬೆಂಗಳೂರಿನ ಮೌಂಟ್​ ಕಾರ್ಮಲ್​ ಕಾಲೇಜಿನಲ್ಲಿ ಬಿ.ಎ ಪದವಿ ಮುಗಿಸಿ, ನಂತರ ರಾಜ್ಯಶಾಸ್ತ್ರ ವಿಭಾಗದಲ್ಲಿ ಸೆ​.ಜೋಸೆಫ್​ ಕಾಲೇಜಿನಲ್ಲಿ ಎಂಎ ಪದವಿ ಮಾಡಿದ ಅಶ್ವಿನಿ ಅವರು, ದೆಹಲಿಯ ಜವಹಾರ್​ ಲಾಲ್​ ನೆಹರು ಕಾಲೇಜಿನಲ್ಲಿ ಪಿ.ಹೆಚ್.​ಡಿ ಮಾಡಿ ನಂತರ ಸೆಂಟ್​ ಜೋಸೆಫ್​ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಸಹಾಯಕ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಅವರು ಪಿಹೆಚ್​ಡಿಯಲ್ಲಿ ದಲಿತರ ಮಾನವೀಯ ಹಕ್ಕುಗಳ ಕುರಿತು ನಡೆಸಿದ ಸಂಶೋಧನೆ ಹಾಗೂ ಚತ್ತೀಸ್​ಘಡ, ಜಾರ್ಕಂಡ್​, ಮತ್ತು ಓರಿಸ್ಸಾ ರಾಜ್ಯಗಳಲ್ಲಿ ಆದಿವಾಸಿಗಳ ಭೂಮಿಯನ್ನು ಸರ್ಕಾರಗಳು ವಶಪಡಿಸಿಕೊಂಡು ಆದಿವಾಸಿಗಳಿಗೆ ಆದಂತ ಸಮಸ್ಯೆ ಕುರಿತು ಎರಡುವರೆ ವರ್ಷಗಳ ಕಾಲ ಅಧ್ಯಯನ ಇಂಥಾದೊಂದು ಸ್ಥಾನಕ್ಕೇರಲು ಸಹಾಕಾರಿ ಅನ್ನೋದು ಅವರ ತಂದೆ ಪ್ರಸನ್ನಕುಮಾರ್ ಅವರ ಮಾತು.

ಒಟ್ಟಾರೆ ದಲಿತರ ಹಾಗೂ ಶೋಷಿತರ ನೋವುಗಳನ್ನು ಅರಿತಿರುವ, ದಲಿತರ ಹೋರಾಟಕ್ಕೆ ನಾಂದಿ ಹಾಡಿದ್ದ ಕೋಲಾರದಂತ ಜಿಲ್ಲೆಯಿಂದ ಅಶ್ವಿನಿ ಅವರು ವಿಶ್ವಸಂಸ್ಥೆಯ ಮಾನವೀಯ ಹಕ್ಕುಳ ಸಮಿತಿಗೆ ಆಯ್ಕೆಯಾಗಿರುವುದು ನಿಜಕ್ಕೂ ರಾಜ್ಯ ಮತ್ತು ಚಿನ್ನದ ನಾಡಿಗೆ ಸಿಕ್ಕಂತೆ ಹಿರಿಮೆ ಹಾಗೂ ಗರಿಮೆ ಈ ಮೂಲಕ ಚಿನ್ನದ ನಾಡು ಕೋಲಾರ ವಿಶ್ವಮಟ್ಟದಲ್ಲಿ ಮತ್ತೊಂದು ಗರಿಯನ್ನು ಅಲಂಕರಿಸಿದೆ ಅಂದ್ರೆ ತಪ್ಪಾಗೋದಿಲ್ಲ.

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್